ಈ ಅಧ್ಯಯನವು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದ್ದು, ಆಹಾರದಲ್ಲಿ ಪೊಟ್ಯಾಶಿಯಂ ಸೇರಿಸುವ ಮೂಲಕ ಗಂಭೀರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ತೋರಿಸಿದೆ.
ಹೃದಯ ಸಂಬಂಧಿ ಕಾಯಿಲೆಗಳು ಸಹ ವಿಶ್ವಾದ್ಯಂತ ಸಾವಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ನಿಮ್ಮ ಹೃದಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ. ಆದರೆ ಆಹಾರ ಮತ್ತು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಂಡರೆ ನೀವು ಫೇಲ್ಯೂರ್‌ನಂತಹ ಸಮಸ್ಯೆಯ ಅಪಾಯವನ್ನ ಖಂಡಿತ ಕಡಿಮೆ ಮಾಡಬಹುದು.
27
ಹೃದಯ ಸಂಬಂಧಿ ಕಾಯಿಲೆ ಅಪಾಯ ಕಡಿಮೆ ಮಾಡಲು
ಇತ್ತೀಚೆಗೆ ಈ ನಿಟ್ಟಿನಲ್ಲಿ ಒಂದು ಅಧ್ಯಯನ ನಡೆಸಲಾಯಿತು. ಇದು 'ಪೊಟ್ಯಾಶಿಯಂ' ಹಾರ್ಟ್ ಫೆಲ್ಯೂರ್ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. ಈ ಅಧ್ಯಯನವು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದ್ದು, ಆಹಾರದಲ್ಲಿ ಪೊಟ್ಯಾಶಿಯಂ ಸೇರಿಸುವ ಮೂಲಕ ಗಂಭೀರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡಬಹುದು ಎಂದು ತೋರಿಸಿದೆ.
37
ಪೊಟ್ಯಾಶಿಯಂ ಏಕೆ ಮುಖ್ಯ?
ಈ ಅಧ್ಯಯನವು ನಿಮ್ಮ ಆಹಾರದಲ್ಲಿ ಪೊಟ್ಯಾಶಿಯಂ ಭರಿತ ಆಹಾರಗಳನ್ನು( Potassium-Rich Diet)ಸೇರಿಸಿಕೊಳ್ಳುವುದು ಹೃದಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ನಿಜ ಹೇಳಬೇಕೆಂದರೆ ಪೊಟ್ಯಾಶಿಯಂ ಎಲೆಕ್ಟ್ರೋಲೈಟ್ಸ್, ನರ ಸಂಕೇತಗಳು (Neural signals), ಸ್ನಾಯು ಸಂಕೋಚನ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಬಹಳ ಸಹಾಯಕವಾಗಿದೆ . ಈ ಕಾರಣಗಳಿಗಾಗಿ ಇದು ಹೃದಯಕ್ಕೂ ಪ್ರಯೋಜನಕಾರಿ ಎಂದು ಸಾಬೀತಾಗಿದೆ.
ಬಾಳೆಹಣ್ಣು: ಬಾಳೆಹಣ್ಣು ಪೊಟ್ಯಾಶಿಯಂನ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಮಧ್ಯಮ ಗಾತ್ರದ ಬಾಳೆಹಣ್ಣಿನಲ್ಲಿ ಸುಮಾರು 422 ಮಿಗ್ರಾಂ ಪೊಟ್ಯಾಶಿಯಂ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುವ ಇತರ ಅನೇಕ ಪೋಷಕಾಂಶಗಳನ್ನು ಸಹ ಒಳಗೊಂಡಿದೆ. ಸಿಹಿ ಗೆಣಸು: ಮಧ್ಯಮ ಗಾತ್ರದ ಸಿಹಿ ಗೆಣಸಿನಲ್ಲಿ ಬಾಳೆಹಣ್ಣಿಗಿಂತ ಹೆಚ್ಚಿನ ಪೊಟ್ಯಾಶಿಯಂ ಇರುತ್ತದೆ. ಇದರಲ್ಲಿ ಫೈಬರ್ ಮತ್ತು ವಿಟಮಿನ್ ಎ ಕೂಡ ಸಮೃದ್ಧವಾಗಿದ್ದು, ಇದು ಹೃದಯಕ್ಕೆ ಸೂಪರ್‌ಫುಡ್ ಆಗಿದೆ.
57
ಸುಲಭ ಮತ್ತು ಪ್ರಯೋಜನಕಾರಿ
ಎಳನೀರು- ಇದು ನೈಸರ್ಗಿಕ ಎಲೆಕ್ಟ್ರೋಲೈಟ್‌ಗಳ ನಿಧಿಯಾಗಿದೆ. ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ಪೊಟ್ಯಾಶಿಯಂ ಕೊರತೆಯನ್ನು ನೀಗಿಸಲು ಇದು ಉತ್ತಮ ಮಾರ್ಗವಾಗಿದೆ. ಮೊಸರು- ಮೊಸರು ಪ್ರೋಬಯಾಟಿಕ್‌ಗಳು ಮತ್ತು ಪೊಟ್ಯಾಶಿಯಂ ಎರಡರ ಉತ್ತಮ ಮೂಲವಾಗಿದೆ. ಒಂದು ಕಪ್ ಸಾದಾ ಮೊಸರಿನಲ್ಲಿ ಸುಮಾರು 579 ಮಿಗ್ರಾಂ ಪೊಟ್ಯಾಶಿಯಂ ಇರುತ್ತದೆ. ಇದನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ಸುಲಭ ಮತ್ತು ಪ್ರಯೋಜನಕಾರಿ.
67
ಪೊಟ್ಯಾಶಿಯಂನ ಅತ್ಯುತ್ತಮ ಮೂಲ
ಪಾಲಕ್ ಸೊಪ್ಪು:ಈ ಹಸಿರು ಎಲೆಗಳ ತರಕಾರಿ ಪೊಟ್ಯಾಶಿಯಂನಲ್ಲಿ ಬಹಳ ಸಮೃದ್ಧವಾಗಿದೆ. ಒಂದು ಕಪ್ ಬೇಯಿಸಿದ ಪಾಲಕ್‌ನಲ್ಲಿ ಸುಮಾರು 312 ಮಿಗ್ರಾಂ ಪೊಟ್ಯಾಶಿಯಂ ಇರುತ್ತದೆ. ಇದನ್ನು ತರಕಾರಿಗಳು, ಸೂಪ್ ಅಥವಾ ದಾಲ್‌ನಲ್ಲಿ ಬೆರೆಸಿ ತಿನ್ನಬಹುದು. ಆವಕಾಡೊ:ಆವಕಾಡೊ ಆರೋಗ್ಯಕರ ಕೊಬ್ಬುಗಳು ಮತ್ತು ಪೊಟ್ಯಾಶಿಯಂನ ಅತ್ಯುತ್ತಮ ಮೂಲವಾಗಿದೆ. ಒಂದು ಆವಕಾಡೊ ಸುಮಾರು 1000 ಮಿಗ್ರಾಂ ಪೊಟ್ಯಾಶಿಯಂ ಅನ್ನು ಹೊಂದಿರುತ್ತದೆ.
77
ಮೂತ್ರಪಿಂಡ ಕಾಯಿಲೆ ಇರುವವರಿಗೆ ಹಾನಿಕಾರಕ
ಪೊಟ್ಯಾಶಿಯಂ ಹೃದಯಕ್ಕೆ ಒಳ್ಳೆಯದಾದರೂ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ವಿಶೇಷವಾಗಿ ಮೂತ್ರಪಿಂಡ ಕಾಯಿಲೆ ಇರುವವರಿಗೆ ಹಾನಿಕಾರಕ ಎಂಬುದನ್ನು ನೆನಪಿನಲ್ಲಿಡಿ. ಆದ್ದರಿಂದ ಯಾವುದೇ ಪ್ರಮುಖ ಆಹಾರ ಬದಲಾವಣೆಗಳನ್ನು ಮಾಡುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.