Unhealthy cooking oils: ನೀವು ನಿಮ್ಮ ಅಡುಗೆಮನೆಯಲ್ಲಿ ಆಹಾರ ತಯಾರಿಸಲು ಈ ಕೆಳಗಿನ ಯಾವುದೇ ಎಣ್ಣೆಯನ್ನು ಬಳಸುತ್ತಿದ್ದರೆ, ಅವುಗಳನ್ನು ತಕ್ಷಣವೇ ಬಳಕೆಯಿಂದ ಕೈಬಿಡಿ. ಹಾಗಾದರೆ, ಆ ಎಣ್ಣೆಗಳು ಯಾವುವು ಎಂದು ತಿಳಿಯೋಣ ಬನ್ನಿ.
ಆ ಎಣ್ಣೆಗಳು ಯಾವುವು? ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆಹಾರ ಪದ್ಧತಿಯಿಂದ ಹಿಡಿದು ಫಿಟ್‌ನೆಸ್ ವರೆಗೆ ಎಲ್ಲದರ ಕಡೆಗೂ ಗಮನ ಹರಿಸುತ್ತಾರೆ. ಆದರೆ, ಹೆಚ್ಚಾಗಿ ಜನರು ಎಡವುವುದು ಎಲ್ಲೆಂದರೆ, ಅದು ಅಡುಗೆಗಾಗಿ ಬಳಸುವ ಎಣ್ಣೆಯ ವಿಷಯದಲ್ಲಿ. ಅಡುಗೆ ಎಣ್ಣೆಯ ಬಗ್ಗೆ (ಕುಕಿಂಗ್ ಆಯಿಲ್) ಹೆಚ್ಚಿನವರು ತಲೆಕೆಡಿಸಿಕೊಳ್ಳುವುದಿಲ್ಲ, ಇದರ ಪರಿಣಾಮವಾಗಿ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (Bad Cholesterol) ಮಟ್ಟವು ತಾನಾಗಿಯೇ ಹೆಚ್ಚಾಗತೊಡಗುತ್ತದೆ. ವಾಸ್ತವವಾಗಿ, ಈ ಅಡುಗೆ ಎಣ್ಣೆಗಳಲ್ಲಿ ಟ್ರಾನ್ಸ್ ಫ್ಯಾಟ್ (Trans Fat) ಮತ್ತು ಸ್ಯಾಚುರೇಟೆಡ್ ಫ್ಯಾಟ್ (Saturated Fat) ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವುದರ ಜೊತೆಗೆ ಹೃದ್ರೋಗದ ಅಪಾಯವನ್ನು ಹೆಚ್ಚು ಮಾಡುತ್ತದೆ ಮತ್ತು ಬೊಜ್ಜಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ, ಆರೋಗ್ಯವನ್ನು ಕೆಡಿಸುವ ಆ ಎಣ್ಣೆಗಳು ಯಾವುವು ಎಂದು ತಿಳಿಯೋಣ.
26
ಈ ಎಣ್ಣೆಗಳನ್ನು ಬಳಸಬೇಡಿ
ಈ ಎಣ್ಣೆಗಳನ್ನು ಬಳಸಬೇಡಿ ಪಾಮ್ ಆಯಿಲ್ (ತಾಳೆ ಎಣ್ಣೆ) ಸಿಹಿ ತಿಂಡಿಗಳನ್ನು (ಮಿಠಾಯಿ) ತಯಾರಿಸಲು ಪಾಮ್ ಆಯಿಲ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇದರಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳನ್ನು ಹೊರತೆಗೆಯಲಾಗಿರುತ್ತದೆ ಮತ್ತು ಸಿಹಿ ತಿಂಡಿಗಳ ಹೊರತಾಗಿ ಜಂಕ್ ಫುಡ್ ತಯಾರಿಸಲು ಸಹ ಇದೇ ಎಣ್ಣೆಯನ್ನು ಬಳಸಲಾಗುತ್ತದೆ. ಪಾಮ್ ಆಯಿಲ್‌ನಲ್ಲಿ ಸ್ಯಾಚುರೇಟೆಡ್ ಫ್ಯಾಟ್ ಅತ್ಯಧಿಕವಾಗಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ವೇಗವಾಗಿ ಹೆಚ್ಚಿಸುತ್ತದೆ ಹಾಗೂ ಹೃದಯದ ಕಾಯಿಲೆಗಳ ಅಪಾಯವನ್ನು ಹಲವು ಪಟ್ಟು ಹೆಚ್ಚು ಮಾಡುತ್ತದೆ.
36
ಸೂರ್ಯಕಾಂತಿ ಎಣ್ಣೆ (ಸನ್‌ಫ್ಲವರ್ ಆಯಿಲ್)
ಸೂರ್ಯಕಾಂತಿ ಎಣ್ಣೆ (ಸನ್‌ಫ್ಲವರ್ ಆಯಿಲ್) ರಿಫೈನ್ಡ್ ಸೂರ್ಯಕಾಂತಿ ಎಣ್ಣೆಯಲ್ಲಿ ಒಮೆಗಾ-6 ಫ್ಯಾಟಿ ಆಸಿಡ್ ಪ್ರಮಾಣ ಹೆಚ್ಚಿರುತ್ತದೆ, ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಉರಿಯೂತ (Inflammation) ಉಂಟಾಗಬಹುದು. ಹೆಚ್ಚಿನ ತಾಪಮಾನದಲ್ಲಿ ಇದನ್ನು ಸಂಸ್ಕರಿಸುವುದರಿಂದ (Process), ಇದರ ಅತ್ಯಗತ್ಯ ಪೋಷಕಾಂಶಗಳು ನಾಶವಾಗುತ್ತವೆ. ಇದನ್ನು ನಿಯಮಿತವಾಗಿ ಬಳಸುವುದರಿಂದ ಹೃದ್ರೋಗ ಮತ್ತು ಬೊಜ್ಜು ಬೆಳೆಯುವ ಅಪಾಯ ಹೆಚ್ಚುತ್ತದೆ.
ರೈಸ್ ಬ್ರಾನ್ ಆಯಿಲ್ (ಅಕ್ಕಿ ತವಡಿನ ಎಣ್ಣೆ) ರೈಸ್ ಬ್ರಾನ್ ಆಯಿಲ್ ಅನ್ನು ಅತಿಯಾಗಿ ರಿಫೈನ್ಡ್ ಮತ್ತು ಪ್ರೊಸೆಸ್ ಮಾಡಲಾಗಿರುತ್ತದೆ. ಇದನ್ನು ತಯಾರಿಸಲು 'ಹೆಕ್ಸೇನ್' (Hexane) ಅನ್ನು ಬಳಸಲಾಗುತ್ತದೆ, ಇದು ಆರೋಗ್ಯಕ್ಕೆ ತುಂಬಾ ಅಪಾಯಕಾರಿಯಾಗಬಹುದು.
56
ವೆಜಿಟೇಬಲ್ ಆಯಿಲ್ (ಸಸ್ಯಜನ್ಯ ಎಣ್ಣೆ)
ವೆಜಿಟೇಬಲ್ ಆಯಿಲ್ (ಸಸ್ಯಜನ್ಯ ಎಣ್ಣೆ) ವೆಜಿಟೇಬಲ್ ಆಯಿಲ್ ಎಂದರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಬೇರೆ ಬೇರೆ ಸಸ್ಯಗಳಿಂದ ಪಡೆದ ಎಣ್ಣೆಗಳ ಮಿಶ್ರಣವಾಗಿದೆ. ಇವುಗಳಲ್ಲಿ ಹೆಚ್ಚಾಗಿ ಮೆಕ್ಕೆಜೋಳ (Corn), ಕ್ಯಾನೋಲಾ (Canola) ಮತ್ತು ಪಾಮ್ ಆಯಿಲ್‌ಗಳ ಬ್ಲೆಂಡ್ಸ್ (ಮಿಶ್ರಣ) ಇರುತ್ತವೆ. ಇದನ್ನು ತಯಾರಿಸಲು ಅತಿಯಾಗಿ ರಿಫೈನ್ಡ್ ಮಾಡಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ.
66
ಕಾರ್ನ್ ಆಯಿಲ್ (ಮೆಕ್ಕೆಜೋಳದ ಎಣ್ಣೆ)
ಕಾರ್ನ್ ಆಯಿಲ್ (ಮೆಕ್ಕೆಜೋಳದ ಎಣ್ಣೆ) ಕಾರ್ನ್ ಆಯಿಲ್‌ನಲ್ಲಿ ಪಾಲಿ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್ ಮತ್ತು ಒಮೆಗಾ-6 ಫ್ಯಾಟಿ ಆಸಿಡ್ ಅತ್ಯಂತ ಹೆಚ್ಚಾಗಿರುತ್ತದೆ, ಇದು ದೇಹದಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಇದರಲ್ಲಿ ಒಮೆಗಾ-3 ಫ್ಯಾಟ್ಸ್ ಪ್ರಮಾಣವು ಇಲ್ಲವೇ ಇಲ್ಲ ಎನ್ನುವಷ್ಟಿರುತ್ತದೆ, ಇದು ಹೃದಯದ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.