Ash Gourd Benefits: ಮಕ್ಕಳ ನೆನಪಿನ ಶಕ್ತಿ ಮತ್ತು ಏಕಾಗ್ರತೆ ಹೆಚ್ಚಿಸಲು ಪೋಷಕರು ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ, ಹಿರಿಯರು ಮತ್ತು ಆಯುರ್ವೇದ ಶಾಸ್ತ್ರವು ಸೂಚಿಸಿರುವಂತೆ, ನಮ್ಮ ಅಡುಗೆಮನೆಯಲ್ಲಿಯೇ ಇರುವ ಈ ತರಕಾರಿ ಒಂದು ಅದ್ಭುತ ದಿವ್ಯೌಷಧಿಯಾಗಿದೆ.
ಕೆಲವೇ ದಿನಗಳಲ್ಲಿ ಮಕ್ಕಳ ಪರೀಕ್ಷೆ ಆರಂಭವಾಗಲಿದೆ. ಈ ಸಮಯದಲ್ಲಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ನೋಡಿಕೊಳ್ಳುವುದು ಪೋಷಕರ ಜವಬ್ದಾರಿ. ಆದ್ದರಿಂದ ಇಂತಹ ಸಮಯದಲ್ಲಿ ಆರೋಗ್ಯಕರ ತಿಂಡಿ ತಿನಿಸುಗಳನ್ನು ಕೊಡುವುದು ಬಹಳ ಒಳ್ಳೆಯದು.
29
ವೈದ್ಯರ ಮಾಹಿತಿ
ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಎಂಬ ಆಸೆಯಿರುತ್ತದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಪೂರಕ ಆಹಾರಗಳ ಬೆನ್ನತ್ತಿ ಹೋಗುವ ಮೊದಲು, ನಮ್ಮ ಅಡುಗೆಮನೆಯಲ್ಲೇ ಇರುವ ನೈಸರ್ಗಿಕ ಔಷಧಿಯ ಕಡೆಗೆ ಗಮನಹರಿಸುವುದು ಉತ್ತಮ. ಆಯುರ್ವೇದದ ಪ್ರಕಾರ, ಬುದ್ಧಿಶಕ್ತಿ ಮತ್ತು ನೆನಪಿನ ಶಕ್ತಿಯನ್ನು ವೃದ್ಧಿಸುವ ತರಕಾರಿಗಳಲ್ಲಿ ಬೂದುಗುಂಬಳಕ್ಕೆ ಅಗ್ರಸ್ಥಾನವಿದ್ದು, ಈ ಬಗ್ಗೆ ಆಯುರ್ವೇದ ವೈದ್ಯರಾದ ನಾಗೇಂದ್ರ ಆಚಾರ್ಯ ಅವರು ಮಾಹಿತಿ ನೀಡಿದ್ದಾರೆ.
39
ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಮಹತ್ವ
ತುಪ್ಪ, ಒಂದೆಲಗ, ಬಜೆ ಮತ್ತು ಬೂದುಗುಂಬಳ ಇವು ಮೆದುಳಿನ ಚುರುಕುತನವನ್ನು ಹೆಚ್ಚಿಸುವ ನೈಸರ್ಗಿಕ ಮೂಲಗಳು. ಕರಾವಳಿ ಭಾಗದಲ್ಲಿ ಬೂದುಗುಂಬಳವನ್ನ ದೈನಂದಿನ ಆಹಾರವಾಗಿ ಬಳಸುತ್ತಾರೆ. ಕೇವಲ ಅಡುಗೆಗೆ ಮಾತ್ರವಲ್ಲದೆ, ಗೃಹಪ್ರವೇಶದಲ್ಲಿ ದೃಷ್ಟಿ ತೆಗೆಯಲು, ಹಬ್ಬಗಳಲ್ಲಿ ಹಾಗೂ ಶುಭ ಸಮಾರಂಭಗಳಲ್ಲಿ ಸಿಹಿ ತಯಾರಿಸಲು ಇದನ್ನು ಬಳಸಲಾಗುತ್ತದೆ.
ಬೂದುಗುಂಬಳವು ಕೇವಲ ತರಕಾರಿಯಲ್ಲ, ಅದೊಂದು ಪೋಷಕಾಂಶಗಳ ಕಣಜ. ಇದರಲ್ಲಿರುವ ಪ್ರಮುಖ ಅಂಶಗಳನ್ನು ನೋಡುವುದಾದರೆ.. ಜೀವಸತ್ವಗಳು: ವಿಟಮಿನ್ A, B1, B2, B3, B5, B6, B9 ಮತ್ತು C. ಖನಿಜಾಂಶಗಳು: ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಷಿಯಂ, ಪೊಟಾಶಿಯಂ, ಸೋಡಿಯಂ ಮತ್ತು ಜಿಂಕ್. ಇತರೆ: ಕಾರ್ಬೋಹೈಡ್ರೇಟ್ಸ್, ಫೈಬರ್ (ನಾರಿನಂಶ) ಮತ್ತು ಪ್ರೊಟೀನ್.
59
ಬೂದುಗುಂಬಳದ ಅದ್ಭುತ ಆರೋಗ್ಯ ಪ್ರಯೋಜನಗಳು
1. ಜೀರ್ಣಕ್ರಿಯೆ ಮತ್ತು ಪಿತ್ತ ಶಮನ ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ಬೂದುಗುಂಬಳದ ರಸಕ್ಕೆ ಕೆಂಪು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ಪಿತ್ತದೋಷ ಕಡಿಮೆಯಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ಇದರ ರಸ ಸೇವಿಸುವುದು ಕರುಳಿನ ಹುಣ್ಣು (Ulcer) ನಿವಾರಣೆಗೆ ರಾಮಬಾಣ.
69
2. ಬುದ್ಧಿಶಕ್ತಿ ಮತ್ತು ನರಗಳ ಬಲವರ್ಧನೆ
ಇದರ ಬೀಜಗಳಿಂದ ತಯಾರಿಸಿದ ಎಣ್ಣೆಯು ರಕ್ತನಾಳ ಮತ್ತು ನರಮಂಡಲವನ್ನು ಶಕ್ತಿಗೊಳಿಸುತ್ತದೆ. ಇದು ಏಕಾಗ್ರತೆ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
79
3. ಮೂತ್ರಕೋಶದ ಆರೋಗ್ಯ
ನೀರಿನಂಶ ಸಮೃದ್ಧವಾಗಿರುವ ಈ ತರಕಾರಿ ಮೂತ್ರಕೋಶವನ್ನು ಶುದ್ಧೀಕರಿಸುತ್ತದೆ. ಉರಿಮೂತ್ರ, ಮೂತ್ರಪಿಂಡದಲ್ಲಿ ಕಲ್ಲು ಮತ್ತು ಮೂತ್ರ ತಡೆ ಮುಂತಾದ ಸಮಸ್ಯೆಗಳಿಗೆ ಇದು ಉತ್ತಮ ಪರಿಹಾರವಾಗಿದೆ.
89
4. ತೂಕ ಇಳಿಕೆ ಮತ್ತು ರಕ್ತದೊತ್ತಡ
ದೇಹದ ಅನಗತ್ಯ ಕೊಬ್ಬನ್ನು ಕರಗಿಸಲು ಮತ್ತು ರಕ್ತದೊತ್ತಡವನ್ನು (Blood Pressure) ಸಮತೋಲನದಲ್ಲಿಡಲು ಬೂದುಗುಂಬಳ ಸಹಕಾರಿ.
99
5. ಸೌಂದರ್ಯ ವರ್ಧಕವಾಗಿ
ಸೌಂದರ್ಯ ಆರೈಕೆಯಲ್ಲೂ ಇದು ಹಿಂದೆ ಬಿದ್ದಿಲ್ಲ. ಕೊಬ್ಬರಿ ಎಣ್ಣೆಯಲ್ಲಿ ಬೂದುಗುಂಬಳದ ಸಿಪ್ಪೆಯನ್ನು ಕುದಿಸಿ ತಲೆಗೆ ಹಚ್ಚುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಹಾಗೂ ಒರಟು ಕೂದಲು ಮೃದುವಾಗುತ್ತದೆ.
ನೆನಪಿಡಿ.. ಬೂದುಗುಂಬಳದ ಎಲೆ, ಹೂವು, ಕಾಯಿ ಮತ್ತು ಬೀಜ ಹೀಗೆ ಪ್ರತಿಯೊಂದು ಭಾಗವೂ ಔಷಧೀಯ ಗುಣಗಳಿಂದ ಕೂಡಿದೆ. ಇಂದಿನ ಧಾವಂತದ ಬದುಕಿನಲ್ಲಿ ರಾಸಾಯನಿಕಯುಕ್ತ ಔಷಧಿಗಳಿಗಿಂತ, ಮನೆಯಲ್ಲೇ ಸಿಗುವ ಇಂತಹ ನೈಸರ್ಗಿಕ ಆಹಾರಗಳನ್ನು ಅಳವಡಿಸಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.