ಈ ಉರಿ ಬಿಸಿಲಿಗೆ ಎಸಿ ಬೇಕು ನಿಜ. ಆದರೆ ಬರೋ ರೋಗಗಳ ಬಗ್ಗೆಯೂ ಇರಲಿ ಸ್ವಲ್ಪ ಅರಿವು

First Published Apr 2, 2024, 4:47 PM IST

ಏಪ್ರಿಲ್ ತಿಂಗಳು ಬಂದ ಕೂಡಲೇ ಬೇಸಿಗೆಯ ಧಗೆ ಹೆಚ್ಚತ್ತಿದೆ. ಜನರು ತ್ಉರಿ ಬಿಸಿಲಿನಿಂದ ಮುಕ್ತಿ ಹೊಂದಲು ಕೂಲರ್-ಎಸಿಯನ್ನು ಆಶ್ರಯಿಸುತ್ತಾರೆ. ಈ ಋತುವಿನಲ್ಲಿ, ಹೆಚ್ಚಿನ ಜನರು ನಿರಂತರವಾಗಿ ಎಸಿ ಮುಂದೆ ಕುಳಿತುಕೊಳ್ಳುತ್ತಾರೆ, ಆದರೆ ಎಸಿಯಲ್ಲಿ ದೀರ್ಘಕಾಲ ಉಳಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. 
 

ಬೇಸಿಗೆ ಪ್ರಾರಂಭವಾಗಿದೆ ಮತ್ತು ಹೆಚ್ಚುತ್ತಿರುವ ತಾಪಮಾನವು ಈಗಾಗಲೇ ಜನರನ್ನು ಬೆವರುವಂತೆ ಮಾಡುತ್ತಿದೆ. ಇದರೊಂದಿಗೆ, ಮನೆಗಳಲ್ಲಿ ಕೂಲರ್-ಏರ್ ಕಂಡೀಷನರ್ ಸ್ವಚ್ಛಗೊಳಿಸುವ ಕಾರ್ಯವೂ ಶುರುವಾಗಿದೆ. ಬೇಸಿಗೆಯಲ್ಲಿ, ಜನರು ಶಾಖವನ್ನು ತಪ್ಪಿಸಲು ಮತ್ತು ತಮ್ಮ ಮನೆಗಳು ಮತ್ತು ಆಫೀಸ್‌ಗಳನ್ನು ತಂಪಾಗಿಡಲು ಕೂಲರ್-ಎಸಿಯನ್ನು (Cooler or AC) ಬಳಸುತ್ತಾರೆ. ಇದರಿಂದ ತ್ವರಿತವಾಗಿ ಬಿಸಿಲಿನ ಉರಿಯಿಂದ ರಕ್ಷಣೆ ಪಡೆಯಬಹುದು. 

ಸೆಕೆ ನಿವಾರಿಸಲು ಏರ್ ಕಂಡೀಷನರ್ ಬಳಸೋ ಟ್ರೆಂಡ್ ಹೆಚ್ಛುತ್ತಿದೆ, ಇದರಿಂದ ನಮ್ಮ ಪರಿಸರದ ಮೇಲೆ ಮಾತ್ರವಲ್ಲದೆ ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತೆ. ಎಸಿಯ ಅತಿಯಾದ ಬಳಕೆ ಮಾಲಿನ್ಯವನ್ನು (pollution) ಹೆಚ್ಚಿಸುವುದಲ್ಲದೆ, ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಎಸಿ ಮುಂದೆ ಕುಳಿತುಕೊಳ್ಳುವ ಜನರಲ್ಲಿ ನೀವೂ ಒಬ್ಬರಾಗಿದ್ದರೆ, ಇಂದು ನಾವು ಏರ್ ಕಂಡೀಷನರ್ ಅತಿಯಾದ ಬಳಕೆಯಿಂದ ಉಂಟಾಗುವ ಕೆಲವು ಆರೋಗ್ಯ ಸಮಸ್ಯೆಗಳ ಬಗ್ಗೆ ನಿಮಗೆ ಹೇಳುತ್ತೇವೆ-

ಕಣ್ಣುಗಳು ಒಣಗುತ್ತವೆ (Dry Eyes)
ಎಸಿ ಅಂದರೆ ಏರ್ ಕಂಡೀಷನರ್ ಗಾಳಿಯಲ್ಲಿರುವ ತೇವಾಂಶವನ್ನು ತೆಗೆದುಹಾಕುತ್ತದೆ, ಇದರಿಂದಾಗಿ ಸುತ್ತಮುತ್ತಲಿನ ಗಾಳಿಯು ಒಣಗುತ್ತದೆ, ಇದು ನಿಮ್ಮ ಕಣ್ಣುಗಳನ್ನು ಒಣಗುವಂತೆ ಮಾಡುತ್ತೆ, ಇದರಿಂದ ಕಿರಿಕಿರಿ ಉಂಟುಮಾಡುತ್ತದೆ.

ಸೋಮಾರಿತನ (Laziness)
ಎಸಿಯನ್ನು ಬಳಸುವಾಗ, ಕಿಟಕಿಗಳು ಮತ್ತು ಬಾಗಿಲುಗಳನ್ನು ಸಾಮಾನ್ಯವಾಗಿ ಮುಚ್ಚಲಾಗುತ್ತದೆ, ಇದರಿಂದಾಗಿ ತಾಜಾ ಗಾಳಿ ಸಿಗುವುದಿಲ್ಲ ಮತ್ತು  ದೀರ್ಘಕಾಲದವರೆಗೆ ತಾಜಾ ಗಾಳಿಗೆ ಒಡ್ಡಿಕೊಳ್ಳದಿದ್ದರೆ ಆಲಸ್ಯ ಮತ್ತು ದಣಿವು ಹೆಚ್ಚಾಗಿ ಕಾಡುತ್ತೆ. 

ಅಲರ್ಜಿ ಮತ್ತು ಅಸ್ತಮಾ
ನೀವು ಈಗಾಗಲೇ ಅಲರ್ಜಿ ಅಥವಾ ಅಸ್ತಮಾದಿಂದ (Athma) ಬಳಲುತ್ತಿದ್ದರೆ, ಎಸಿಯಿಂದಾಗಿ ನಿಮ್ಮ ಸಮಸ್ಯೆ ಇನ್ನಷ್ಟು ಹದಗೆಡಬಹುದು. ಕೋಣೆಯಲ್ಲಿ ಏರ್ ಕಂಡೀಷನರ್ ಇದ್ದರೆ, ಸುತ್ತಲೂ ಶುದ್ಧ ಗಾಳಿ ಸಿಗದಿರೋದರಿಂದ ಅಲರ್ಜಿ, ಅಸ್ತಮಾ ಹೆಚ್ಚುವ ಸಾಧ್ಯತೆ ಇದೆ. 

ಒಣ ಅಥವಾ ತುರಿಕೆ ಚರ್ಮ
ನೀವು ಹವಾನಿಯಂತ್ರಿತ ಸ್ಥಳದಲ್ಲಿ ದೀರ್ಘಕಾಲ ಉಳಿದು ನಂತರ ಬಿಸಿಲಿನಲ್ಲಿ ಹೊರಗೆ ಹೋದರೆ, ಅದು ನಿಮ್ಮ ಚರ್ಮವನ್ನು ಬೇಗ ಒಣಗಿಸುತ್ತದೆ, ಇದು ತುರಿಕೆ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸ್ಕಿನ್ ಡ್ರೈ (drry skin) ಆಗುತ್ತೆ. 

ನಿರ್ಜಲೀಕರಣ
ಎಸಿಯನ್ನು ಹೆಚ್ಚು ಬಳಸುವುದರಿಂದ ಗಾಳಿಯಿಂದ ಹೆಚ್ಚಿನ ತೇವಾಂಶವನ್ನು ತೆಗೆದುಹಾಕುತ್ತದೆ, ಇದು ಗಾಳಿಯನ್ನು ತುಂಬಾ ಶುಷ್ಕವಾಗಿಸುತ್ತದೆ. ಇದು ನಿರ್ಜಲೀಕರಣಕ್ಕೆ (dehydration) ಕಾರಣವಾಗಬಹುದು. 

ಉಸಿರಾಟದ ತೊಂದರೆಗಳು
ಹವಾನಿಯಂತ್ರಿತ ಸ್ಥಳದಲ್ಲಿ ದೀರ್ಘಕಾಲ ಉಳಿಯುವುದರಿಂದ ನಿಮಗೆ ಉಸಿರಾಟದ ತೊಂದರೆಗಳೂ (breathing problem) ಉಂಟಾಗಬಹುದು. ವಾಸ್ತವವಾಗಿ, ಎಸಿ ಆನ್ ಮಾಡಿದ್ರೆ, ಅಲ್ಲಿನ ಕಿಟಕಿಗಳು ಮತ್ತು ಬಾಗಿಲುಗಳು ಮುಚ್ಚಲೇಬೇಕಾಗುತ್ತೆ, ಇದರಿಂದಾಗಿ ತಾಜಾ ಗಾಳಿ ಲಭ್ಯವಾಗೋದಿಲ್ಲ. ಇದರಿಂದಾಗಿ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತವೆ. 

click me!