ಭಾರತದಲ್ಲಿ ಯುವಕರು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ಬಲಿಯಾಗುತ್ತಿರೋದು ಯಾಕೆ?

First Published Apr 1, 2024, 5:25 PM IST

ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯನ್ನು ಹಿಂದೆ ವಯಸ್ಸಾದವರ ಕಾಯಿಲೆ ಎಂದು ಕರೆಯಲಾಗುತ್ತಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಆತಂಕಕಾರಿ ಮಾಹಿತಿ ಹೊರಹೊಮ್ಮಿದೆ, ಇದರಲ್ಲಿ ಯುವ ಜನಸಂಖ್ಯೆಯಲ್ಲಿ ಕೊಲೆಸ್ಟ್ರಾಲ್ ಹೆಚ್ಚುತ್ತಿರುವ ಬಗ್ಗೆ ಮಾಹಿತಿ ಹೊರ ಬಂದಿದೆ.
 

ಕಳಪೆ ಜೀವನಶೈಲಿ, ಆಹಾರ, ದೈಹಿಕ ವ್ಯಾಯಾಮದ ಕೊರತೆ (Lack of Exercise) ಮತ್ತು ಕಡಿಮೆ ಪೌಷ್ಟಿಕ ಆಹಾರದಿಂದಾಗಿ ಯುವ ಭಾರತೀಯರಲ್ಲಿ  ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತಿದೆ. ಕೊಲೆಸ್ಟ್ರಾಲ್ ಹೆಚ್ಚೋದರಿಂದ ಹೃದಯರಕ್ತನಾಳದ ಕಾಯಿಲೆಗಳು, ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಗಳು (high cholesterol ) ಸಹ ಹೆಚ್ಚುತ್ತಲಿವೆ.  

ಭಾರತೀಯ ಯುವಕರಲ್ಲಿ ಕೊಲೆಸ್ಟ್ರಾಲ್ ಏಕೆ ಹೆಚ್ಚುತ್ತಿದೆ? 
ಕೊಲೆಸ್ಟ್ರಾಲ್ ದೀರ್ಘಕಾಲದಿಂದ ವಯಸ್ಸಾದವರ ಕಾಯಿಲೆ ಎಂದು ಕರೆಯಲಾಗುತ್ತದೆ, ಆದರೆ ಇತ್ತೀಚಿನ ವರ್ಷಗಳಲ್ಲಿ ಯುವ ಜನಸಂಖ್ಯೆಯಲ್ಲಿ ಕೊಲೆಸ್ಟ್ರಾಲ್ ಹೆಚ್ಚುತ್ತಿರವುದು ಕಂಡುಬಂದಿದೆ. ಅತ್ಯಂತ ಭಯಾನಕ ವಿಷಯವೆಂದರೆ ಈ ಆರೋಗ್ಯ ಸಮಸ್ಯೆಯನ್ನು ಹೆಚ್ಚಾಗಿ ಜನರು ನಿರ್ಲಕ್ಷ್ಯ ಮಾಡ್ತಿದ್ದಾರೆ. ಏಕೆಂದರೆ ಹೆಚ್ಚಿನ ಕೊಲೆಸ್ಟ್ರಾಲ್ ತುಂಬಾ ತಡವಾಗುವವರೆಗೂ ಇದೊಂದು ದೊಡ್ಡ ಸಮಸ್ಯೆ ಎಂದು ಯಾರೂ ಯೋಚನೆ ಮಾಡೋದೆ ಇಲ್ಲ. 

ಎಲ್ಲಕ್ಕಿಂತ ಮುಖ್ಯವಾಗಿ, ಕೊಲೆಸ್ಟ್ರಾಲ್ ಬಹಳ ಚಿಕ್ಕ ವಯಸ್ಸಿನಲ್ಲಿ, ಹದಿಹರೆಯದಲ್ಲಿಯೂ ಪ್ರಾರಂಭವಾಗಬಹುದು, ಆದರೆ ರೋಗಿಗಳು 20 ವರ್ಷ ದಾಟುವವರೆಗೂ ಯಾವುದೇ ಸಮಸ್ಯೆಗಳನ್ನು ಅನುಭವಿಸೋದಿಲ್ಲ. ಹೆಚ್ಚಿನ ಕೊಲೆಸ್ಟ್ರಾಲ್ ಕಾರಣದಿಂದಾಗಿ ಪ್ಲೇಕ್ ನಿಂದಾಗಿ ಅನೇಕ ಯುವಕರು ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ(heart attack) ಬಲಿಯಾಗಲು ಸಹ ಇದು ಕಾರಣವಾಗಿದೆ. 

ಕೊಲೆಸ್ಟ್ರಾಲ್ ಎಂದರೇನು? 
ಕೊಲೆಸ್ಟ್ರಾಲ್ ಪಿತ್ತಜನಕಾಂಗದಲ್ಲಿ ಉತ್ಪತ್ತಿಯಾಗುವ ಮೇಣದಂತಹ ವಸ್ತುವಾಗಿದ್ದು, ಇದು ಜೀರ್ಣಕ್ರಿಯೆಗೆ ಅಗತ್ಯವಾದ ಅನೇಕ ರೀತಿಯ ಹಾರ್ಮೋನುಗಳನ್ನು ಉತ್ಪಾದಿಸುತ್ತದೆ. ಹೆಚ್ಚಿನ-ಸಾಂದ್ರತೆಯ ಲಿಪೊಪ್ರೋಟೀನ್ (HDL) ಮತ್ತು ಕಡಿಮೆ-ಸಾಂದ್ರತೆಯ ಲಿಪೊಪ್ರೋಟೀನ್ (LDL)  ಎಂದು ಕೊಲೆಸ್ಟ್ರಾಲ್ ನಲ್ಲಿ ಎರಡು ವಿಧಗಳಿವೆ. ಎಚ್ಡಿಎಲ್ ಅನ್ನು ಉತ್ತಮ ಕೊಲೆಸ್ಟ್ರಾಲ್ ಎಂದು ಕರೆಯಲಾಗುತ್ತದೆ ಮತ್ತು ಇದು 50 ಮಿಗ್ರಾಂ / ಡಿಎಲ್ ಅಥವಾ ಅದಕ್ಕಿಂತ ಹೆಚ್ಚಿರಬೇಕು. ನಿಮ್ಮ ದೇಹದಲ್ಲಿನ ಎಲ್ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಬೇಕು. ವಿಶೇಷವಾಗಿ ಭಾರತೀಯರಿಗೆ, ಎಲ್ಡಿಎಲ್ ಕೊಲೆಸ್ಟ್ರಾಲ್ 100 ಮಿಗ್ರಾಂ / ಡಿಎಲ್ಗಿಂತ ಕಡಿಮೆ ಇರಬೇಕು, ಆದರೆ ಭಾರತೀಯರಲ್ಲಿ ಇದು ಹೆಚ್ಚಾಗಿದೆ, ಹಾಗಾಗಿ ವಿಶ್ವದ ಉಳಿದ ಜನಸಂಖ್ಯೆಗಿಂತ ಭಾರತೀಯರು ಹೃದ್ರೋಗಕ್ಕೆ ಹೆಚ್ಚು ಗುರಿಯಾಗುತ್ತಾರೆ.

ಕೊಲೆಸ್ಟ್ರಾಲ್ ಲಕ್ಷಣಗಳು
ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ರೋಗಲಕ್ಷಣಗಳನ್ನು (symptoms) ಹೊಂದಿರುವುದಿಲ್ಲ ಆದರೆ ಚಿಕಿತ್ಸೆ ನೀಡದಿದ್ದರೆ, ಅದು ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಇದು ಹೆಚ್ಚಾಗಿ ಗುಪ್ತ ಅಪಾಯದ ಅಂಶವಾಗಿದೆ, ಅಂದರೆ ಇದು ತುಂಬಾ ತಡವಾಗುವವರೆಗೂ ನಮಗೆ ತಿಳಿಯದೆ ಸಂಭವಿಸಬಹುದು, ಆದ್ದರಿಂದ ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸುವುದು ಬಹಳ ಮುಖ್ಯ. 

ಯೌವನದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗಲು ಕಾರಣವೇನು?
ಇದು ಜೀವನಶೈಲಿ (lifestyle) ಮತ್ತು ಆಹಾರ ಪದ್ಧತಿಯಿಂದಲೇ ಉಂಟಾಗುತ್ತದೆ. ನಿಮ್ಮ ಬಾಲ್ಯದ ಚಿಪ್ಸ್ ಪ್ಯಾಕೆಟ್ ನಿಂದಲೇ ಕೊಲೆಸ್ಟ್ರಾಲ್ ಪ್ರಾರಂಭವಾಗುತ್ತದೆ. ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಟ್ರಾನ್ಸ್ ಕೊಬ್ಬುಗಳಿಂದ ಸಮೃದ್ಧವಾಗಿರುವ ಸಂಸ್ಕರಿಸಿದ ಆಹಾರ ಮತ್ತು ಫಾಸ್ಟ್ ಫುಡ್ ಟ್ರೆಂಡ್ ಇತ್ತೀಚಿನ ದಿನಗಳಲ್ಲಿ ತುಂಬಾನೆ ಹೆಚ್ಚಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಕಳಪೆ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯ ಕೊರತೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (bad cholesterol) ಅನ್ನು ಹೆಚ್ಚಿಸುತ್ತದೆ. 

ಆರಂಭಿಕ ರೋಗನಿರ್ಣಯ ಮತ್ತು ತಡೆಗಟ್ಟುವಿಕೆ
ಅಧಿಕ ಕೊಲೆಸ್ಟ್ರಾಲ್ ಹೃದ್ರೋಗಕ್ಕೆ ಕಾರಣವಾಗಬಹುದು, ಕೊಲೆಸ್ಟ್ರಾಲ್ ಹೆಚ್ಚಾಗಿದೆ ಅನ್ನೋದರ ಯಾವುದೇ ಲಕ್ಷಣ ದೇಹದಲ್ಲಿ ಕಂಡು ಬರೋದಿಲ್ಲ, ಆದ್ದರಿಂದ 20 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ತಮ್ಮ ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಬೇಕು (cholesterol test). ಅದಕ್ಕಾಗಿ 20 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಯುವಕರು ಪ್ರತಿ ಐದು ವರ್ಷಗಳಿಗೊಮ್ಮೆ ತಮ್ಮ ಕೊಲೆಸ್ಟ್ರಾಲ್ ಪರೀಕ್ಷಿಸಿಕೊಳ್ಳಬೇಕು. ಯಾವುದೇ ರೋಗಲಕ್ಷಣ ಕಂಡು ಬಂದಲ್ಲಿ ಚಿಕಿತ್ಸೆ ಆರಂಭಿಸಬೇಕು. 

click me!