ಬಾಲಿವುಡ್‌ನ ನಟ-ನಟಿಯರೆಲ್ಲರೂ ತೆಳ್ಳಗೆ-ಬೆಳ್ಳಗೆ ಬಳುಕುವ ಬಳ್ಳಿಯಂತೆ ಸಖತ್ ಫಿಟ್ ಆಂಡ್ ಫೈನ್ ಆಗಿರುತ್ತಾರೆ. ಆದರೆ ಹೀಗೆ ಫಿಗರ್ ಮೈಂಟೇನ್ ಮಾಡೋಕೆ ನಟ-ನಟಿಯರು ಪಡುವ ಪಾಡು ಅಷ್ಟಿಷ್ಟಲ್ಲ. ಸಿಕ್ಕಾಪಟ್ಟೆ ದಪ್ಪ ಇದ್ದು, ನಂತರ ತೂಕ ಇಳಿಸಿಕೊಂಡು ತೆಳ್ಳಗಾದ ಹಲವಾರು ನಟ-ನಟಿಯರಿದ್ದಾರೆ.
ಅದರಲ್ಲೂ ಬರೋಬ್ಬರಿ 96 ಕೆಜಿ ತೂಕವಿದ್ದ ಸಾರಾ ಆಲಿ ಖಾನ್, ಸ್ಲಿಮ್ ಆಗಿ ಸಖತ್ ಬ್ಯೂಟಿಫುಲ್ ಅಗಿದ್ದು ಹಲವರ ಅಚ್ಚರಿಗೆ ಕಾರಣವಾಗಿತ್ತು. ಇತ್ತೀಚಿಗೆ ನಟಿ ಸಾರಾ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫಿಟ್‌ನೆಸ್ ಜರ್ನಿಯ ಫೋಟೋವನ್ನು ಹಂಚಿಕೊಂಡಿದ್ದಾರೆ.
ಮೊದಲನೇ ಚಿತ್ರದಲ್ಲಿ ದಪ್ಪಗಿರುವ ಸಾರಾ ತನ್ನ ಹೊಟ್ಟೆಯನ್ನು ಕೈಯಲ್ಲಿ ಹಿಡಿದು ಯೋಗ ಚಾಪೆಯ ಮೇಲೆ ಕುಳಿತಿರುವುದನ್ನು ಕಾಣಬಹುದು. ತುಂಬಾ ಬೇಸರದಿಂದ ಅವರು ಕ್ಯಾಮರಾಗೆ ಫೋಸ್ ನೀಡುತ್ತಾರೆ. ಆ ನಂತರದ ಫೋಟೋದಲ್ಲಿ ಮಿನುಗುವ ಗೋಲ್ಡನ್ ಕೋ-ಆರ್ಡ್ ಸೆಟ್‌ನಲ್ಲಿ ಸ್ಲಿಮ್ ಸಾರಾರನ್ನು ನೋಡಬಹುದು.
ಫೋಟೋದ ಜೊತೆಯಲ್ಲಿ, 'ಈ ಫೋಟೋವನ್ನು ಅಪ್‌ಲೋಡ್ ಮಾಡಲು ನನಗೆ ನಿಜವಾಗಿಯೂ ತುಂಬಾ ಬೇಸರವಾಗುತ್ತಿದೆ. ಆದರೆ ನಾನು ಆ ತೂಕವನ್ನು ಕೆಲವೇ ತಿಂಗಳುಗಳಲ್ಲಿ ಕಳೆದುಕೊಂಡಿದ್ದೇನೆ ಎಂಬ ಬಗ್ಗೆ ನನಗೆ ನಿಜವಾಗಿಯೂ ಹೆಮ್ಮೆ ಇದೆ. ತೂಕದ ಸಮಸ್ಯೆಗಳು ಯಾವಾಗಲೂ ಹೆಚ್ಚು ಚಿಂತೆಯನ್ನುಂಟು ಮಾಡುತ್ತವೆ' ಎಂದು ಬರೆದುಕೊಂಡಿದ್ದಾರೆ.
ಇತ್ತೀಚಿಗೆ ಮನೀಶ್ ಮಲ್ಹೋತ್ರಾ ಅವರ ಬೃಹತ್ ದೀಪಾವಳಿ ಪಾರ್ಟಿಯಲ್ಲಿ ಸಾರಾ ಆಲಿ ಖಾನ್ ಗ್ರ್ಯಾಂಡ್ ಲುಕ್ ಸಖತ್ ವೈರಲ್ ಆಗಿತ್ತು. ಸಾರಾ ಈ ಪಾರ್ಟಿಗಾಗಿ ಸ್ಟನಿಂಗ್ ಪಿಂಕ್ ಮತ್ತು ಸಿಲ್ವರ್ ಕಲರ್ ಲೆಹಂಗಾ ಧರಿಸಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದರು.
ನವೆಂಬರ್ 2018ರಲ್ಲಿ, ಸಾರಾ ಅಲಿ ಖಾನ್ ಕರಣ್ ಜೋಹರ್ 'ಕಾಫಿ ವಿಥ್ ಕರಣ್' ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಾರಾ ತಮ್ಮ ಗುಂಡಗಿನ ದೇಹದ ಬಗ್ಗೆ ಮಾತನಾಡಿದ್ದರು. ಬಾಲ್ಯದಲ್ಲಿ ಇವರ ಸ್ಥೂಲಕಾಯಕ್ಕೆ ಪಿಸಿಒಡಿ ಕಾಯಿಲೆ ಪ್ರಮುಖ ಕಾರಣವಂತೆ. ಪಿಸಿಒಡಿ (ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್) ಮಹಿಳೆಯರಲ್ಲಿ ಕಂಡುಬರುವ ಹಾರ್ಮೋನುಗಳ ವ್ಯತ್ಯಾಸದಿಂದ ಕಾಡೋ ಸಮಸ್ಯೆ.
ಸಾರಾ ತನ್ನ ಅನಾರೋಗ್ಯದ ಬಗ್ಗೆ ಹೇಳುತ್ತಿರುವಾಗ, ಅವಳ ತಂದೆ ಸೈಫ್ ಮಧ್ಯದಲ್ಲಿ, 'ನೀನು ಪಿಜ್ಜಾ ತುಂಬಾ ತಿನ್ನುತ್ತಿದ್ದೆ' ಎಂದು ಹೇಳಿದ್ದರು. ಹೌದು ತುಂಬಾ ಪಿಜ್ಜಾ ತಿನ್ನುತ್ತಿದ್ದೆ ಎಂದು ಸಾರಾ ತಂದೆ ಸೈಫ್ ಮಾತನ್ನು ಒಪ್ಪಿಕೊಂಡರು. ತೂಕ ವಕಂಟ್ರೋಲ್ ಮಾಡಲು ಪಿಜ್ಜಾ ತಿನ್ನೋದನ್ನೇ ಬಿಟ್ಟು ಬಿಟ್ಟರಂತೆ.
ಫ್ಯಾಟ್‌ನಿಂದ ಫಿಟ್ ಆಗಲು ಸಾರಾ ತುಂಬಾ ಶ್ರಮಿಸಿದ್ದಾರೆ. ಕೇವಲ ತನ್ನ ಆಹಾರವನ್ನು ನಿಯಂತ್ರಿಸಲಿಲ್ಲ. ಬದಲಾಗಿ, ನಿಯಮಿತ ಜೀವನಕ್ರಮ ಮತ್ತು ಕಥಕ್ ನೃತ್ಯದ ಬಗ್ಗೆಯೂ ಗಮನಹರಿಸಿದರು. ತೂಕ ಇಳಿಸಿಕೊಳ್ಳಲು ಹಾಲು, ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ತ್ಯಜಿಸಿದ್ದಾಗಿ ಸಾರಾ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅನುರಾಗ್ ಬಸು ಅವರ 'ಮೆಟ್ರೋ...ಇನ್ ಡಿನೋ' ಚಿತ್ರದಲ್ಲಿ ಸಾರಾ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಆದಿತ್ಯ ರಾಯ್ ಕಪೂರ್, ಕೊಂಕಣ ಸೇನ್ ಶರ್ಮಾ, ಪಂಕಜ್ ತ್ರಿಪಾಠಿ, ಫಾತಿಮಾ ಸನಾ ಶೇಖ್, ಅನುಪಮ್ ಖೇರ್, ಅಲಿ ಫಜಲ್ ಮತ್ತು ನೀನಾ ಗುಪ್ತಾ ಪ್ರಮುಖ ಪಾತ್ರಗಳಲ್ಲಿದ್ದಾರೆ. 'ಏ ವತನ್ ಮೇರೆ ವತನ್' ಸಿನಿಮಾದಲ್ಲೂ ಸಾರಾ ಅಭಿನಯಿಸುತ್ತಿದ್ದಾರೆ.