1. ನೇರವಾಗಿ ತಲೆಗೆ ಹಚ್ಚಿ
-ಸ್ವಚ್ಛವಾದ ಕೈಗಳಿಂದ ಅಥವಾ ಸ್ಪ್ರೇ ಬಾಟಲಿಯಲ್ಲಿ ಹಾಕಿ ತಲೆಗೆ ಸ್ಪ್ರೇ ಮಾಡಿ.
-ಎರಡರಿಂದ ಮೂರು ನಿಮಿಷ ನಿಧಾನವಾಗಿ ಮಸಾಜ್ ಮಾಡಿ.
-ಇದು ರಕ್ತ ಸಂಚಾರವನ್ನು ಹೆಚ್ಚಿಸಿ ಕೂದಲು ಬೆಳವಣಿಗೆಗೆ ಸಹಾಯ ಮಾಡುತ್ತೆ.
2. ತಲೆಕೆಳಗಾಗಿ ಮಸಾಜ್ ಮಾಡಿ
-ತಲೆಯನ್ನು ಕೆಳಕ್ಕೆ ಬಗ್ಗಿಸಿ ಗುಲಾಬಿ ನೀರಿನಿಂದ ತಲೆಬುರುಡೆಗೆ ಮಸಾಜ್ ಮಾಡಿ.
-ಇದು ರಕ್ತ ಸಂಚಾರವನ್ನು ವೇಗವಾಗಿ ಹೆಚ್ಚಿಸುತ್ತೆ.
3. ಹೇರ್ ಮಾಸ್ಕ್ ಆಗಿ ಬಳಸಿ
-ಗುಲಾಬಿ ನೀರು, ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆ ಸೇರಿಸಿ ಹೇರ್ ಮಾಸ್ಕ್ ಆಗಿ ಹಚ್ಚಿ.
-30 ನಿಮಿಷ ಬಿಟ್ಟು, ಶಾಂಪೂ ಹಾಕಿ ತೊಳೆಯಿರಿ.
-ಇದು ಕೂದಲಿಗೆ ಪೋಷಣೆ ನೀಡುತ್ತೆ.