ಇದನ್ನು ಕೇಳಿದ್ರೆ ನೀವು ಶಾಕ್ ಆಗೋದು ಖಂಡಿತಾ… ಏನಪ್ಪಾ ಅಂತೀರಾ… ಇದು ಹೃದ್ರೋಗದ (heart problem) ವಿಷಯ. ಅದೇನೆಂದರೆ… ವಿವಾಹಿತ ರೋಗಿಗಳಿಗೆ ಹೋಲಿಸಿದರೆ ಅವಿವಾಹಿತ ರೋಗಿಗಳಿಗೆ ಹೃದಯಾಘಾತ ಆಗುವ ಸಾಧ್ಯತೆ ಹೆಚ್ಚಾಗಿದೆಯಂತೆ! ಅವಿವಾಹಿತರಲ್ಲಿ ಹೃದಯ ವೈಫಲ್ಯದಿಂದ (Heart Attack) ಉದ್ಭವಿಸುವ ಪರಿಸ್ಥಿತಿಯನ್ನು ನಿಭಾಯಿಸುವ ಆತ್ಮವಿಶ್ವಾಸವೂ (Confidence) ಕಡಿಮೆ ಎಂದು ಕಂಡುಬಂದಿದೆ. ಈ ವ್ಯತ್ಯಾಸದಿಂದಾಗಿ, ಹೃದಯ ವೈಫಲ್ಯದ ನಂತರ ಹೆಚ್ಚು ಕಾಲ ಬದುಕುಳಿಯುವ ಸಾಧ್ಯತೆಗಳು ವಿವಾಹಿತರಿಗೆ ಹೋಲಿಕೆ ಮಾಡಿದರೆ, ಅವಿವಾಹಿತರಲ್ಲಿ ತುಂಬಾನೆ ಕಡಿಮೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ.
ವಿವಾಹ ಕೇವಲ ಒಂದು ಸಾಮಾಜಿಕ ವ್ಯವಸ್ಥೆ ಮಾತ್ರವಲ್ಲ, ಅದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಾಲಜಿಯ (ESC) ಸೈಂಟಿಫಿಕ್ ಕಾಂಗ್ರೆಸ್ ನಡೆಸಿದ ಸಂಶೋಧನೆಯು ಅವಿವಾಹಿತರು ಅಥವಾ ಜೀವನ ಸಂಗಾತಿಯನ್ನು (life partner) ಹೊಂದಿರದವರು ಹೃದಯ ವೈಫಲ್ಯದ ಸಂದರ್ಭದಲ್ಲಿ ಸಾವಿನ ಹೆಚ್ಚಿನ ಅಪಾಯ ಹೊಂದಿದ್ದಾರೆ ಎಂದು ಕಂಡು ಹಿಡಿದಿದೆ.
210
ಈ ಅಧ್ಯಯನದ ಪ್ರಕಾರ, ಹೆಚ್ಚು ಆತ್ಮೀಯ ಜನರ ಸಂಪರ್ಕ ಇರದ ಕಾರಣ ಹೃದಯ ವೈಫಲ್ಯದಿಂದ (Heart Failure) ಬಳಲುತ್ತಿರುವ ಅವಿವಾಹಿತ ಜನರು ವಿವಾಹಿತ ಜನರಿಗಿಂತ ತಮ್ಮ ಸ್ಥಿತಿಯನ್ನು ನಿಭಾಯಿಸಲು ಕಡಿಮೆ ವಿಶ್ವಾಸ ಹೊಂದಿರುತ್ತಾರೆ. ಈ ವ್ಯತ್ಯಾಸದಿಂದಾಗಿ, ಹೃದಯ ವೈಫಲ್ಯದ ನಂತರ ಹೆಚ್ಚು ಕಾಲ ಬದುಕುಳಿಯುವ ಸಾಧ್ಯತೆಗಳು ವಿವಾಹಿತರಿಗಿಂತ, ಅವಿವಾಹಿತರಲ್ಲಿ ತುಲನಾತ್ಮಕವಾಗಿ ಕಡಿಮೆಯಾಗುತ್ತವೆ.
310
ಅಧ್ಯಯನದ ಲೇಖಕ ಮತ್ತು ಜರ್ಮನಿಯ ವುರ್ಜ್ಬರ್ಗ್ ವಿಶ್ವವಿದ್ಯಾಲಯ ಆಸ್ಪತ್ರೆಯ ಸಮಗ್ರ ಹೃದಯ ವೈಫಲ್ಯ ಕೇಂದ್ರದ ಡಾ.ಫ್ಯಾಬಿಯನ್ ಕೆರ್ವಾಗೆನ್ ಅವರು ಹೇಳುವ ಪ್ರಕಾರ, ಯಾರು ಹೆಚ್ಚಿನ ಸಾಮಾಜಿಕ ಬೆಂಬಲವನ್ನು ಹೊಂದಿರುತ್ತಾರೋ , ಅಂದರೆ ಮದುವೆಯಾಗಿ ಸಂಗಾತಿಯ ಬೆಂಬಲವನ್ನು ಪಡೆದಿರುತ್ತಾರೋ ಅವರು ಸುಲಭವಾಗಿ ತಮ್ಮ ಜೀವನದಲ್ಲಿನ ಪರಿಸ್ಥಿಯನ್ನು ನಿಭಾಯಿಸುತ್ತಾರೆ.
410
ಜೀವನ ಸಂಗಾತಿ ಜೊತೆಯಲ್ಲಿದ್ದರೆ ಔಷಧಿಯನ್ನು (Medicine) ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡಬಹುದು ಅಥವಾ ಅವರು ಅದಕ್ಕಾಗಿ ಸಿದ್ಧತೆಯನ್ನು ಸಹ ಮಾಡುತ್ತಾರೆ. ಇದು ರೋಗಿಗಳಿಗೆ ಆರೋಗ್ಯಕರ ಬೆಳವಣಿಗೆ ಹೊಂದಲು ಸಹಾಯ ಮಾಡುತ್ತದೆ. ಇದರಿಂದ ಅವರಲ್ಲಿ ಆತ್ಮವಿಶ್ವಾಸ ಕೂಡ ಹೆಚ್ಚಾಗಿರುತ್ತೆ. ಈ ಎಲ್ಲಾ ಅಂಶಗಳು ದೀರ್ಘಾಯುಷ್ಯಕ್ಕೆ ಸಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ.
510
ಡಾ. ಫ್ಯಾಬಿಯನ್ ಅವರ ಪ್ರಕಾರ, ಅಧ್ಯಯನ ನಡೆಸಲಾದ ಗುಂಪಿನಲ್ಲಿದ್ದ ಅವಿವಾಹಿತ ರೋಗಿಗಳು ವಿವಾಹಿತ ರೋಗಿಗಳಿಗೆ ಹೋಲಿಸಿದರೆ ಸಾಮಾಜಿಕ ಸಂಬಂಧಗಳ (Social Relationship) ಕೊರತೆ ಅನುಭವಿಸಿರುವುದನ್ನು ತೋರಿಸಿದೆ. ಅಂದರೆ ಅವರ ಕೇರ್ ತೆಗೆದುಕೊಳ್ಳುವ ಜನ ಅವರ ಬಳಿ ಇರೋದಿಲ್ಲ.ಇಂತಹ ಸಂದರ್ಭದಲ್ಲಿ ಹೃದಯ ವೈಫಲ್ಯದಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸುವ ಆತ್ಮವಿಶ್ವಾಸವೂ ಅವರಲ್ಲಿ ತುಂಬಾನೆ ಕಡಿಮೆ ಇರುತ್ತೆ.
610
ಅಧ್ಯಯನ ನಡೆಸಿದ್ದು ಹೇಗೆ?
ಈ ಹಿಂದಿನ ಅಧ್ಯಯನಗಳು ಅವಿವಾಹಿತ ಜನರು ರೋಗಗಳ ರೋಗನಿರ್ಣಯದ ಬಗ್ಗೆ ಕಡಿಮೆ ಅರಿವನ್ನು ಹೊಂದಿದ್ದಾರೆ ಎಂದು ತೋರಿಸಿದೆ. ಇದು ಸಾಮಾನ್ಯ ಜನರಾಗಿರಲಿ ಅಥವಾ ಅಪಧಮನಿ ಮತ್ತು ಹೃದ್ರೋಗಿಗಳಾಗಿರಲಿ, ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮನಸ್ಥಿತಿ ಇರೋದಿಲ್ಲ ಎಂದು ತಿಳಿದು ಬಂದಿದೆ.
710
ಮತ್ತೊಂದು ಅಧ್ಯಯನದಲ್ಲಿ ವಿವಾಹಿತರನ್ನು ಒಳಗೊಂಡಿತ್ತು. ಅಧ್ಯಯನವು 2004 ಮತ್ತು 2007 ರ ನಡುವೆ ಹೃದಯ ವೈಫಲ್ಯದಿಂದಾಗಿ (Heart Failure)ಆಸ್ಪತ್ರೆಗೆ ದಾಖಲಾದ 1,022 ರೋಗಿಗಳ ಮೇಲೆ ಅಧ್ಯಯನ ನಡೆಸಲಾಯಿತು. ಇವರಲ್ಲಿ, 1008 ರೋಗಿಗಳ ವೈವಾಹಿಕ ಸ್ಥಿತಿಯನ್ನು ಆಧರಿಸಿ ಅಧ್ಯಯನ ನಡೆಸಲಾಗಿದೆ, ಅವರಲ್ಲಿ 633 ಅಂದರೆ ಸುಮಾರು ಶೇ.67 ವಿವಾಹಿತರಾಗಿದ್ದರು ಮತ್ತು 375 ಅಂದರೆ ಸುಮಾರು 37% ಅವಿವಾಹಿತರಾಗಿದ್ದರು. ಅವಿವಾಹಿತರಲಿ ವಿಧವೆಯರು ಅಥವಾ ವಿಧುರರು (195), ಎಂದಿಗೂ ಮದುವೆಯಾಗದ (96) ಮತ್ತು ವಿಚ್ಛೇದಿತರು (84) ಸೇರಿದ್ದರು.
810
ಹೃದಯ ವೈಫಲ್ಯ ಹೊಂದಿರುವ ರೋಗಿಗಳಿಗಾಗಿ ವಿಶೇಷವಾಗಿ ಪ್ರಶ್ನಾವಳಿಗಳನ್ನು ಕೇಳಲಾಯಿತು. ಇದರಲ್ಲಿ ಅವರ ಜೀವನದ ಗುಣಮಟ್ಟ, ಸಾಮಾಜಿಕ ಸಂಬಂಧಗಳ ವ್ಯಾಪ್ತಿ ಮತ್ತು ಸಾಮರ್ಥ್ಯವನ್ನು ಅಧ್ಯಯನ ನಡೆಸಲಾಯಿತು. ನೆಚ್ಚಿನ ಕೆಲಸ, ಮನರಂಜನಾ ಚಟುವಟಿಕೆ ಮತ್ತು ಸಂಬಂಧಿಕರು ಅಥವಾ ಸ್ನೇಹಿತರ ಜೊತೆಗಿನ ಸಂಬಂಧ ಇವೆಲ್ಲವನ್ನೂ ಹೃದಯಾಘಾತದ ಲಕ್ಷಣದೊಂದಿಗೆ ತುಲನೆ ಮಾಡಲಾಯಿತು. ಈ ಸಂದರ್ಭದಲ್ಲಿ ಹೆಚ್ಚು ಸಾಮಾಜಿಕವಾಗಿರೋವರಿಗೆ ಹೃದಯ ಸಮಸ್ಯೆಗಳು ಕಡಿಮೆ ಆಗಿರೋದು ತಿಳಿದು ಬಂದಿದೆ. ಜೊತೆಗೆ ಸಾಮಾಜಿಕ ಬೆಂಬಲ ಇಲ್ಲದವರು, ಅಂದರೆ ಅವಿವಾಹಿತರಲ್ಲಿ ಈ ಸಮಸ್ಯೆ ಹೆಚ್ಚಾಗಿರುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.
910
ವಿವಾಹಿತ ಮತ್ತು ಅವಿವಾಹಿತ ರೋಗಿಗಳಲ್ಲಿ ಒಟ್ಟಾರೆ ಜೀವನ ಗುಣಮಟ್ಟ ಅಥವಾ ಖಿನ್ನತೆಯ (Depression) ಮನಸ್ಥಿತಿಯಲ್ಲಿ ಯಾವುದೇ ಗಮನಾರ್ಹ ವ್ಯತ್ಯಾಸವಿರಲಿಲ್ಲ ಎಂದು ಸಂಶೋಧನೆಯಲ್ಲಿ ಕಂಡುಕೊಂಡಿದೆ. ಆದರೆ ಸಾಮಾಜಿಕ ಸಂಬಂಧಗಳು ಮತ್ತು ಆರೋಗ್ಯದ ಕಡೆಗೆ ಗಮನ ಹರಿಸುವ ಬಗ್ಗೆ ಅಧ್ಯಯನ ನದೆಸಿದಾಗ ಅವಿವಾಹಿತ ಜನರು, ವಿವಾಹಿತ ಜನರಿಗಿಂತ ಕಡಿಮೆ ಆರೋಗ್ಯವನ್ನು ಹೊಂದಿರುವುದು ತಿಳಿದು ಬಂದಿದೆ.
1010
10-ವರ್ಷಗಳ ಅಧ್ಯಯನವು 679 (67%) ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಕಂಡುಹಿಡಿದಿದೆ. ವಿವಾಹಿತರು ಮತ್ತು ಅವಿವಾಹಿತರ ನಡುವೆ ಹೋಲಿಕೆ ಮಾಡಿದಾಗ ಅವಿವಾಹಿತ ಜನರು (unmarried people) ದುರ್ಬಲರು ಮತ್ತು ಅವರ ಸಾವಿನ ಪ್ರಮಾಣವೂ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಡಾ. ಫ್ಯಾಬಿಯನ್ ಕೆರ್ವೆಗನ್ ಹೇಳುವಂತೆ, ಈ ಅಧ್ಯಯನದ ಫಲಿತಾಂಶಗಳು ಅವಿವಾಹಿತರಿಗೆ ಹೋಲಿಸಿದರೆ ಹೃದಯ ವೈಫಲ್ಯದಿಂದ ಬಳಲುತ್ತಿರುವ ವಿವಾಹಿತ ರೋಗಿಗಳು,ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ ಎಂದು ತೋರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.