ಮುಂಜಾನೆಯ ಈ ಬ್ರೇಕ್ ಫಾಸ್ಟ್ ಸೇವಿಸಿ ಸೂಪರ್ ಪವರ್ ಪಡೆಯಿರಿ !

First Published | Aug 24, 2022, 5:30 PM IST

ಬೆಳಗಿನ ಬ್ರೇಕ್ ಫಾಸ್ಟ್ ಪ್ರತಿಯೊಬ್ಬರಿಗೂ ಎಷ್ಟೊಂದು ಮುಖ್ಯ ಅನ್ನೋದು ನಿಮಗೆ ಗೊತ್ತೆ ಇದೆ.  ಅದರಲ್ಲೂ ಉತ್ತಮ ಉಪಾಹಾರವು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಆದರೆ, ಇಂದಿನ ಫಾಸ್ಟ್ ಜೀವನಶೈಲಿಯಿಂದಾಗಿ, ನಾವು ಏನು ತಿನ್ನಬೇಕು ಮತ್ತು ಬೆಳಿಗ್ಗೆ ಏನು ತಿನ್ನಬಾರದು ಎಂಬುದರ ಬಗ್ಗೆ ಯೋಚಿಸಲು ಜನರಿಗೆ ಸಮಯವಿಲ್ಲ. ಬೆಳಗ್ಗಿನ ಸಮಯದಲ್ಲಿ ನೀವು ಜಂಕ್ ಫುಡ್ ಸೇವಿಸಿದ್ರೆ ನಿಮ್ಮ ಆರೋಗ್ಯ ಉತ್ತಮವಾಗಿರೋದಿಲ್ಲ, ಇದರಿಂದ ಬಾಯಿ ರುಚಿ ಸಿಗಬಹುದೇ ಹೊರತು, ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ. 

ಬೆಳಗ್ಗಿನ ಅವಸರದ ಸಮಯದಲ್ಲಿ ಹೊಟ್ಟೆ ತುಂಬಿಸಲು ಅನೇಕ ಜನರು ಬೆಳಿಗ್ಗೆ ಜಂಕ್ ಫುಡ್(Junk food) ಸೇವಿಸಲು ಪ್ರಾರಂಭಿಸುತ್ತಾರೆ, ಇದು ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತೆ. ಆದ್ದರಿಂದ ದಿನವಿಡೀ ನೀವು ಶಕ್ತಿಯುತವಾಗಿರಲು ಸಹಾಯ ಮಾಡುವ ಕೆಲವು ಪ್ರೋಟೀನ್ ಪ್ಯಾಕ್  ಆಹಾರಗಳ ಬಗ್ಗೆ ಇಲ್ಲಿ ತಿಳಿಯೋಣ.

ಪೀ ನಟ್ ಬಟರ್(Peanut butter)  ಟೋಸ್ಟ್
ನೀವು ಬೆಳಿಗ್ಗೆ ಆರೋಗ್ಯಕರ ಬ್ರೇಕ್ ಫಾಸ್ಟ್ ಬಯಸಿದರೆ, ಆಹಾರದಲ್ಲಿ ಪೀ ನಟ್ ಬಟರ್  ಟೋಸ್ಟ್ ನಿಮಗೆ ಉತ್ತಮ ಆಯ್ಕೆಯಾಗಿದೆ. ಪೀನಟ್ ಬಟರ್ ಅತ್ಯುತ್ತಮ ಆಹಾರವಾಗಿದೆ. ಇದು ತೂಕ ಇಳಿಕೆಗೆ, ಹೃದಯದ ಆರೋಗ್ಯಕ್ಕೆ, ಬಾಡಿ ಬಿಲ್ಡ್ ಮಾಡಲು ಮತ್ತು ಬ್ಲಡ್ ಶುಗರ್ ಲೆವೆಲ್ ನಿಯಂತ್ರಣ ಮಾಡಲು ಅತ್ಯುತ್ತಮ ಆಹಾರವಾಗಿದೆ. 

Tap to resize

ನೀವು ಮುಂಜಾನೆ ಜಂಕ್ ಫುಡ್ ಸೇವಿಸುವ ಬದಲಾಗಿ, ಪೀನಟ್ ಬಟರ್ ಟೋಸ್ಟ್ ಸೇವಿಸಿದ್ರೆ ಹೊಟ್ಟೆ ತುಂಬುವುದರ ಜೊತೆಗೆ, ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತೆ. ಇದನ್ನು ಮಾಡಲು, ಎರಡು ಪೀಸ್ ಬ್ರೆಡ್(Bread) ತೆಗೆದುಕೊಳ್ಳಿ ಮತ್ತು ಅದಕ್ಕೆ ಚಿಯಾ ಸೀಡ್ಸ್, ಕತ್ತರಿಸಿದ ಬಾಳೆಹಣ್ಣು ಮತ್ತು ಪೀ ನಟ್ ಬಟರ್ ಸೇರಿಸಿ. ಇದರ ನಂತರ, ಬ್ರೆಡ್ ಅನ್ನು ಓವನ್ ಅಥವಾ ಬಾಣಲೆಯಲ್ಲಿ ಟೋಸ್ಟ್ ಮಾಡಿ, ಈಗ ನಿಮ್ಮ ಆರೋಗ್ಯಕರ ಉಪಾಹಾರವು ಸಿದ್ಧವಾಗುತ್ತೆ.

ಬೇಸನ್ ಚಿಲಾ 
ಕಡಲೆ ಹಿಟ್ಟು(Besan) ಪ್ರೋಟೀನ್ ನ ಉತ್ತಮ ಮೂಲವಾಗಿದೆ ಮತ್ತು ಆದ್ದರಿಂದ ಬೇಸನ್ ಚಿಲಾವನ್ನು ಆರೋಗ್ಯಕರ ಉಪಾಹಾರವೆಂದು ಪರಿಗಣಿಸಲಾಗುತ್ತೆ. ಇದನ್ನು ತಯಾರಿಸಲು, ಹಸಿಮೆಣಸಿನಕಾಯಿ, ಅರಿಶಿನ, ಕರಿಮೆಣಸಿನ ಪುಡಿ, ಕತ್ತರಿಸಿದ ಈರುಳ್ಳಿ ಮತ್ತು ಕಡಲೆ ಹಿಟ್ಟನ್ನು ತೆಗೆದುಕೊಂಡು ಒಟ್ಟಿಗೆ ಮಿಶ್ರಣ ಮಾಡಿ ದಪ್ಪ ಹಿಟ್ಟನ್ನು ತಯಾರಿಸಿ. 

ಈಗ ಬಾಣಲೆಯನ್ನು ಬಿಸಿ ಮಾಡಿ ಮತ್ತು ಸ್ವಲ್ಪ ತುಪ್ಪ ಅಥವಾ ಆಲಿವ್ ಎಣ್ಣೆಯನ್ನು(Olive oil) ಹಾಕಿ ಮತ್ತು ಈ ಹಿಟ್ಟನ್ನು ಹಾಕಿ ಚೆನ್ನಾಗಿ ಹರಡಿ. ದೋಸೆಯಂತೆ ಕಾದಾಗ ತಿರುಗಿಸಿ ಮತ್ತು ಎರಡೂ ಬದಿ ಬೇಯಿಸಿ ಮತ್ತು ನಿಮ್ಮ ಆರೋಗ್ಯಕರ ಬ್ರೇಕ್ ಫಾಸ್ಟ್ ಸಿದ್ಧವಾಗುತ್ತೆ. ಇದು ದಿನ ಪೂರ್ತಿ ನಿಮಗೆ ಶಕ್ತಿ ನೀಡಲು ಸಹಾಯಕವಾಗಿದೆ.

ಪ್ರೋಟೀನ್ ಶೇಕ್ (Protein shake)
ಪ್ರೋಟೀನ್ ಶೇಕ್ ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತೆ. ಇದನ್ನು ತಯಾರಿಸಲು, ನಿಮಗೆ 1 ಸ್ಕೂಪ್ ಪ್ರೋಟೀನ್ ಪುಡಿ, ಹಾಲು, ಕೆಲವು ಕತ್ತರಿಸಿದ ಹಣ್ಣುಗಳು, ಬಾದಾಮಿ ಮತ್ತು ಪಿಸ್ತಾ ಬೇಕಾಗುತ್ತವೆ. ನೀವು ಬಯಸಿದರೆ, ನೀವು ಅದರಲ್ಲಿ ಲಿನ್ಸೀಡ್ ಅಥವಾ ಚಿಯಾ ಬೀಜ ಸಹ ಬಳಸಬಹುದು. 

ಪ್ರೊಟೀನ್ ಶೇಕ್ ಮಾಡೋದೇನು ಕಷ್ಟ ಇಲ್ಲ. ಇದನ್ನು ತಯಾರಿಸಲು, ಪ್ರೋಟೀನ್ ಪುಡಿ ಮತ್ತು ಹಾಲನ್ನು ಮಿಶ್ರಣ ಮಾಡಿ. ಕತ್ತರಿಸಿದ ತಾಜಾ ಹಣ್ಣುಗಳನ್ನು ಅದರ ಮೇಲೆ ಇರಿಸಿ ಮತ್ತು ನಿಮ್ಮ ಪವರ್ ಬೂಸ್ಟರ್(Power boaster) ಸಿದ್ಧವಾಗುತ್ತೆ. ಇದು ಬಾಡಿ ಬಿಲ್ಡ್ ಮಾಡೋರಿಗೆ ಅತ್ಯುತ್ತಮ ಬ್ರೇಕ್ ಫಾಸ್ಟ್ ಆಗಿದೆ. 
ಇವುಗಳನ್ನು ನಿಮ್ಮ ಬ್ರೇಕ್ ಫಾಸ್ಟ್ ನಲ್ಲಿ ಸೇರಿಸೋದಿಂದ್ರ ನಿಮ್ಮ ಶಕ್ತಿಯನ್ನು ಹೆಚ್ಚು ಮಾಡಬಹುದು. 
 

Latest Videos

click me!