ಒಂದೇ ಶರೀರದಲ್ಲಿ ಹಲವು ಜನ… ಇದು ಭೂತ, ದೆವ್ವ ಅಲ್ಲ ಇದೊಂದು ಮನೋರೋಗ

First Published | Aug 24, 2022, 10:37 AM IST

ಒಂದೇ ವ್ಯಕ್ತಿಯೊಳಗೆ ಅನೇಕ ಜನರು ವಾಸಿಸುವ ಬಗ್ಗೆ ನೀವು ಕೇಳಿರಬಹುದು. ಭಾರತದಲ್ಲಿ, ಇದನ್ನು ಹೆಚ್ಚಾಗಿ ದೆವ್ವ, ಭೂತಗಳ ಉಪಟಳ ಎಂದು ಕರೆಯಲಾಗುತ್ತೆ. ಅದಕ್ಕಾಗಿ ತಂತ್ರ-ಮಂತ್ರದಂತಹ ವಿದ್ಯೆಗಳನ್ನು ಆಶ್ರಯಿಸಲಾಗುತ್ತದೆ. ಆದರೆ ಮಾನಸಿಕ ಕಾಯಿಲೆಯಿಂದಾಗಿ ಇದು ಒಬ್ಬ ವ್ಯಕ್ತಿಗೆ ಸಂಭವಿಸಬಹುದು ಎಂದು ತಿಳಿದರೆ ನೀವು ಆಶ್ಚರ್ಯವಾಗಬಹುದು, ಈ ಸಮಸ್ಯೆಯ ಹೆಸರು ಡಿಸೋಸಿಯೇಟಿವ್ ಐಡೆಂಟಿಟಿ ಡಿಸಾರ್ಡರ್ (ಡಿಐಡಿ). ಈ ಮೊದಲು ಇದನ್ನು ಮಲ್ಟಿಪಲ್ ಪರ್ಸನಾಲಿಟಿ ಡಿಸಾರ್ಡರ್ ಎಂದೂ ಕರೆಯಲಾಗುತ್ತಿತ್ತು.

ಡಿಐಡಿ ಎಂದರೇನು ಮತ್ತು ಅದು ಏಕೆ ಸಂಭವಿಸುತ್ತದೆ?
ಡಿಸೋಸಿಯೇಟಿವ್ ಐಡೆಂಟಿಟಿ ಡಿಸಾರ್ಡರ್ (Dissociative Identity Disorder) ಎಂಬುದು ಒಂದು ಮಾನಸಿಕ ಕಾಯಿಲೆಯಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಎರಡು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿತ್ವಗಳನ್ನು ಹೊಂದಿರುತ್ತಾರೆ.  ಡಿಐಡಿ ಹೊಂದಲು ಅನೇಕ ಕಾರಣಗಳಿರಬಹುದು, ಆದರೆ ಇದಕ್ಕೆ ದೊಡ್ಡ ಕಾರಣವೆಂದರೆ ಆಘಾತ. ಇದರರ್ಥ ಯಾವುದೇ ರೀತಿಯ ದೈಹಿಕ ಅಥವಾ ಮಾನಸಿಕ ಆಘಾತ. ಇದು ಸಾಮಾನ್ಯವಾಗಿ ಬಾಲ್ಯದಲ್ಲಿ ದೈಹಿಕ, ಮಾನಸಿಕ ಅಥವಾ ಲೈಂಗಿಕ ಕಿರುಕುಳದಿಂದ ಬರುತ್ತದೆ.

3 ಪ್ರಕರಣಗಳಿಂದ ಅರ್ಥಮಾಡಿಕೊಳ್ಳಿ...

ಪ್ರಕರಣ 1: ರಿಷಬ್ (ಹೆಸರು ಬದಲಾಯಿಸಲಾಗಿದೆ) ಅವರನ್ನು ಬಾಲ್ಯದಿಂದಲೂ ಅವರ ತಂದೆ ಬೈಯುತ್ತಿದ್ದರು. ಶಾಂತ ಸ್ವಭಾವವನ್ನು ಹೊಂದಿದ್ದ ರಿಷಬ್ ಎಲ್ಲವನ್ನೂ ಸದ್ದಿಲ್ಲದೆ ಸಹಿಸಿಕೊಂಡರು. ಆದರೆ 18-19 ನೇ ವಯಸ್ಸಿನಲ್ಲಿ, ಅವರಿಗೆ ಈ ಆಘಾತವನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎರಡನೆಯ ವ್ಯಕ್ತಿತ್ವ ಬೆಳೆಯಿತು. ಈ ವ್ಯಕ್ತಿತ್ವವು ತಂದೆ ಗದರಿಸಿದಾಗ ಅವರೊಂದಿಗೆ ಜಗಳವಾಡುತ್ತಿತ್ತು. ಈ ಸಮಯದಲ್ಲಿ, ರಿಷಭ್ ತನ್ನ ತಂದೆಯ ಮೇಲೆ ಕೈ ಎತ್ತುತ್ತಿದ್ದನು, ತಂದೆಯನ್ನು ನಿಂದಿಸುತ್ತಿದ್ದನು. ಇದನ್ನು ನೋಡಿ ತಂದೆಯೂ ಆಶ್ಚರ್ಯಗೊಂಡಿದ್ದರು.

Tap to resize

ಪ್ರಕರಣ 2: ಶಹನಾಜ್ (ಹೆಸರು ಬದಲಾಯಿಸಲಾಗಿದೆ) ಬಹಳ ಸಂಪ್ರದಾಯವಾದಿ ಮುಸ್ಲಿಂ ಕುಟುಂಬದ ಒಂದು ಭಾಗವಾಗಿದ್ದರು. ಅವರ ಮನೆಯಲ್ಲಿ, ಸೋದರಮಾವನ ಮಕ್ಕಳೊಂದಿಗೆ ಬಾಲ್ಯಾವಸ್ಥೆಯಲ್ಲಿ ಮದುವೆ ನಿಶ್ಚಯವಾಗುತ್ತದೆ. ಈ ಸಮಸ್ಯೆಗಳಿಂದಾಗಿ, ಶಹನಾಜ್ ನ ಎರಡನೇ ವ್ಯಕ್ತಿತ್ವವು ಸೃಷ್ಟಿಯಾಯಿತು. ಅದು ಹೊರಬಂದಾಗಲೆಲ್ಲಾ, ಶಹನಾಜ್ ಹಿಂಸಾತ್ಮಕವಾಗಿ ವರ್ತಿಸುತ್ತಿದ್ದರು. ಅವರು ಮತ್ತು ಅವರ ಕುಟುಂಬಸ್ಥರು ಅವರ ಮೈ ಮೇಲೆ ಭೂತ ಬರುತ್ತೆ ಎಂದು ನಂಬಿದರು. ಆದರೆ ವೈದ್ಯರನ್ನು ಸಂಪರ್ಕಿಸಿದಾಗ, ಅವರ ಸಮಸ್ಯೆ ಬಗ್ಗೆ ತಿಳಿದು ಬಂದಿದೆ.

ಪ್ರಕರಣ 3: ಡೇನಿಯಲ್ (ಹೆಸರು ಬದಲಾಯಿಸಲಾಗಿದೆ) ಯುಕೆಯವನು. ಶಾಲೆಯಲ್ಲಿ ಅವನನ್ನು ತುಂಬಾ ಬೆದರಿಸಲಾಯಿತು. ಅವನಿಗೆ ಎಂದಿಗೂ ಇತರ ಮಕ್ಕಳ ಮುಂದೆ ನಿಲ್ಲಲು ಸಾಧ್ಯವಿರಲಿಲ್ಲ. ಈ ಕಾರಣದಿಂದಾಗಿ, ಡೇನಿಯಲ್ 5 ವ್ಯಕ್ತಿತ್ವಗಳನ್ನು ತನ್ನಲ್ಲಿ ಅಭಿವೃದ್ಧಿಪಡಿಸಿದನು. ಒಂದು ವ್ಯಕ್ತಿತ್ವವು ಮಕ್ಕಳನ್ನು ಬೆದರಿಸುವುದರಿಂದ ಡೇನಿಯಲ್ ನನ್ನು ರಕ್ಷಿಸುತ್ತಿತ್ತು, ಆದರೆ ಇನ್ನೊಂದು ವ್ಯಕ್ತಿತ್ವವು ವಯಸ್ಸಾದ ವ್ಯಕ್ತಿಯಂತೆ ಜೀವನವನ್ನು ನಡೆಸಲು ಅವನಿಗೆ ಕಲಿಸುತ್ತಿತ್ತು.

ಡಿಐಡಿ ಗಳನ್ನು ಚಲನಚಿತ್ರಗಳಲ್ಲಿ ಸರಿಯಾಗಿ ತೋರಿಸಲಾಗುತ್ತಿದೆಯೇ?
ಚಲನಚಿತ್ರಗಳಲ್ಲಿ ಈ ಅಸ್ವಸ್ಥತೆಯನ್ನು ತುಂಬಾ ಹೆಚ್ಚಾಗಿ ತೋರಿಸಲಾಗುತ್ತೆ, ಏಕೆಂದರೆ ಈ ವಿಷಯವು ತುಂಬಾನೆ ಇಂಟರೆಸ್ಟಿಂಗ್ ಆಗಿರುತ್ತೆ. ಚಲನಚಿತ್ರಗಳಲ್ಲಿ, ಡಿಐಡಿ ರೋಗಿಯ ವ್ಯಕ್ತಿತ್ವವು ಒಳ್ಳೆಯದು ಮತ್ತು ರಾಕ್ಷಸನಂತೆ ತೋರಿಸಲಾಗುತ್ತೆ. ಆದರೆ ವಾಸ್ತವದಲ್ಲಿ, ಅದು ಹಾಗೆ ಇರೋದಿಲ್ಲ.  

ಇದರ ಜೊತೆಗೆ, ಡಿಐಡಿ ಹೊಂದಿರುವ ರೋಗಿಗಳು ತಮ್ಮ ಬದಲಾದ ವ್ಯಕ್ತಿತ್ವಗಳಲ್ಲಿ ಯಾರು ಏನು ಮಾಡಿದರು ಎಂಬುದನ್ನು ನೆನಪಿಸಿಕೊಳ್ಳುವುದಿಲ್ಲ ಎಂದು ಎಲ್ಲರೂ ನಂಬಿದ್ದಾರೆ. ಆದರೆ ಅದು ನಿಜವಾಗಿಯೂ ಸಂಭವಿಸುವುದಿಲ್ಲ. ವ್ಯಕ್ತಿತ್ವ ಬದಲಾದರೂ ರೋಗಿಗಳು ಎಲ್ಲವನ್ನೂ ನೆನಪಿಟ್ಟುಕೊಳ್ಳಬಹುದು.

ಭಾರತದಲ್ಲಿ ಡಿಐಡಿ ರೋಗಿಗಳ ಸ್ಥಿತಿ ಏನು?
ನಮ್ಮ ದೇಶದಲ್ಲಿ, ಡಿಐಡಿ ರೋಗಿಗಳನ್ನು ಹುಚ್ಚರೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಈ ರೋಗದ ಬಗ್ಗೆ ಜನರಿಗೆ ಯಾವುದೇ ಅರಿವು ಇಲ್ಲ. ಇದಲ್ಲದೆ, ಡಿಐಡಿಯ ಹೆಚ್ಚಿನ ರೋಗಿಗಳು ಗ್ರಾಮೀಣ ಪ್ರದೇಶಗಳಲ್ಲಿದ್ದಾರೆ, ಏಕೆಂದರೆ ಅವರು ಒಂದು ರೀತಿಯ ಆಘಾತವನ್ನು ಎದುರಿಸುತ್ತಿದ್ದಾರೆ. ಅರಿವಿನ ಕೊರತೆಯಿಂದಾಗಿ, ಈ ರೋಗಿಗಳು ಎಂದಿಗೂ ವೈದ್ಯರ ಮುಂದೆ ಬರುವುದಿಲ್ಲ. ಅವರಿಗೆ ಮಾನಸಿಕ ಆರೋಗ್ಯ ಸೇವೆಗಳ (mental health service) ಬಗ್ಗೆ ಅರಿವೂ ಇಲ್ಲ.
 

ಡಿಐಡಿಗೆ ಚಿಕಿತ್ಸೆ ಏನು?
ಡಿಐಡಿಗೆ ಡೀಪ್ ಮೆಂಟಲ್ ಟ್ರೀಟ್ ಮೆಂಟ್ (mental treatment) ಅಗತ್ಯವಿದೆ. ಇದು ಮಾನಸಿಕ ಚಿಕಿತ್ಸೆ, ಕುಟುಂಬ ಚಿಕಿತ್ಸೆ, ವಿಶ್ರಾಂತಿ ತಂತ್ರ ಮತ್ತು ಧ್ಯಾನದಂತಹ ವಿಷಯಗಳನ್ನು ಒಳಗೊಂಡಿದೆ. ಇದರಲ್ಲಿ ಔಷಧಿಗಳನ್ನು ಸಹ ಬಳಸಲಾಗುತ್ತೆ.  ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ರೋಗಿಯು ಚಿಕಿತ್ಸೆಗೆ ಮೊದಲು 5 ರಿಂದ 12.5 ವರ್ಷಗಳವರೆಗೆ ಡಿಐಡಿ ಸಮಸ್ಯೆಯೊಂದಿಗೆ ಹೋರಾಡುವ ಸಾಧ್ಯತೆ ಇದೆ. 

Latest Videos

click me!