ದಾಳಿಂಬೆ ಹಣ್ಣಿನಿಂದ ಹಲವಾರು ರೀತಿಯ ಪ್ರಯೋಜನಗಳು ಇರುವುದು ಇದಾಗಲೇ ಕೇಳಿರಬಹುದು. ದಾಳಿಂಬೆ ಸಿಪ್ಪೆಯನ್ನು ಬಿಡಿಸಿ ಅದರ ಬೀಜವನ್ನು ತಿನ್ನುವುದೇ ಹಲವರಿಗೆ ಸವಾಲಿನ ಕೆಲಸವೂ ಆಗಿರುತ್ತದೆ. ಆದರೆ, ಇದರ ಹಣ್ಣಷ್ಟೇ ಅಲ್ಲ, ದಾಳಿಂಬೆ ಹಣ್ಣಿನ ಸಿಪ್ಪೆಯಿಂದಲೂ ಸಿಕ್ಕಾಪಟ್ಟೆ ಪ್ರಯೋಜನಗಳಿವೆ. ಇದು ಬ್ಯೂಟಿಗೂ ಸೈ, ಆರೋಗ್ಯಕ್ಕೂ ಜೈ ಎನ್ನುತ್ತಾರೆ ಖ್ಯಾತ ಆಯುರ್ವೇದ ವೈದ್ಯರು. ದಾಳಿಂಬೆ ಹಣ್ಣಿನ ಸಿಪ್ಪೆ ಯಾವುದಕ್ಕೆಲ್ಲಾ ಬರುತ್ತೆ ಎನ್ನುವ ಬಗ್ಗೆ ಇಲ್ಲಿ ವಿವರಿಸಲಾಗಿದೆ ನೋಡಿ...
27
ಪೇಸ್ಟ್ ಪ್ರಯೋಜನ
ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿಕೊಂಡು ಅದಕ್ಕೆ ರೋಜ್ವಾಟರ್ ಮಿಕ್ಸ್ ಮಾಡಿ ಪೇಸ್ಟ್ ಮಾಡಿ ಹಚ್ಚಿಕೊಳ್ಳುತ್ತಾ ಬಂದರೆ, ಮುಖದ ಅಂದ ಹೆಚ್ಚುವುದು ಮಾತ್ರವಲ್ಲದೇ, ಮೊಡವೆಗಳಿಗೂ ಇದು ರಾಮಬಾಣವಾಗಿದೆ. ಇದನ್ನು ವಾರದಿಂದ 2-3 ಬಾರಿ ಬಳಸಬೇಕು. ದಾಳಿಂಬೆ ಸಿಪ್ಪೆಯ ಪುಡಿಯನ್ನು ಜೇನುತುಪ್ಪ ಅಥವಾ ನಿಂಬೆರಸದೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಆಗಿ ಹಚ್ಚಬಹುದು.
37
ಬಾಯಿ ದುರ್ಗಂಧಕ್ಕೆ...
ಬಾಯಿ ದುರ್ಗಂಧವಿದ್ದರೆ ಈ ಪುಡಿಗೆ ನೀರು ಸೇರಿಸಿ ಬಾಯಿಯನ್ನು ಮುಕ್ಕಳಿಸುತ್ತಾ ನೀರನ್ನು ಚೆಲ್ಲಿದರೆ ಬಾಯಿಯ ದುರ್ಗಂಧ ಇನ್ನಿಲ್ಲವಾಗುತ್ತದೆ. ಕರುಳಿನ ಉರಿಯೂತವನ್ನು ಕಡಿಮೆ ಮಾಡಿ, ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಇಷ್ಟೇ ಅಲ್ಲದೇ, ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ ಚಹಾ ರೂಪದಲ್ಲಿ ಕುಡಿಯಬಹುದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಹೃದಯ ಆರೋಗ್ಯವನ್ನು ಸುಧಾರಿಸುತ್ತದೆ. ದಾಳಿಂಬೆ ಸಿಪ್ಪೆಯ ಚಹಾವು ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
57
ಕೆಮ್ಮು ಮತ್ತು ಗಂಟಲು ನೋವು:
ಕೆಮ್ಮು ಮತ್ತು ಗಂಟಲು ನೋವನ್ನು ನಿವಾರಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ, ಇದನ್ನು ಫೇಸ್ ಪ್ಯಾಕ್ ಮತ್ತು ಸ್ಕ್ರಬ್‌ಗಳಾಗಿ ಬಳಸಬಹುದು.
67
ಕೂದಲ ಆರೋಗ್ಯಕ್ಕೆ
ದಾಳಿಂಬೆ ಸಿಪ್ಪೆಯ ಪುಡಿಯನ್ನು ಹೇರ್ ಆಯಿಲ್‌ನೊಂದಿಗೆ ಬೆರೆಸಿ ತಲೆಗೆ ಹಚ್ಚಬಹುದು. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
77
ಹೇರಳ ವಿಟಮಿನ್ ಸಿ
ದಾಳಿಂಬೆ ಸಿಪ್ಪೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.