ಮಳೆಗಾಲದಲ್ಲಿ ಸೊಳ್ಳೆಗಳ(Mosquito) ಹಾವಳಿ ಹೆಚ್ಚಾಗುತ್ತೆ. ನಿಂತ ನೀರಲ್ಲೆಲ್ಲಾ ಸೊಳ್ಳೆಗಳು ಮೊಟ್ಟೆಯಿಟ್ಟು ಮರಿ ಮಾಡಿ, ರೋಗಗಳನ್ನು ತಮ್ಮೊಂದಿಗೆ ಹೊತ್ತು ತರುತ್ತವೆ. ಸೊಳ್ಳೆಗಳು ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್ ಗುನ್ಯಾದಂತಹ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತವೆ. ಸೊಳ್ಳೆಗಳನ್ನು ತಪ್ಪಿಸಲು ಜನರು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದ್ರೆ ಸೊಳ್ಳೆ ಪದೇ ಪದೇ ನಿಮಗೆ ಹೆಚ್ಚು ಕಚ್ಚೋದಕ್ಕೆ ಕಾರಣ ಏನಿರಬಹುದು.
ಸ್ನೇಹಿತರು ಅಥವಾ ಇತರ ಜನರಿಗಿಂತ ಸೊಳ್ಳೆಗಳು ನಿಮ್ಮನ್ನು ಹೆಚ್ಚು ಕಚ್ಚುತ್ತವೆ ಎಂದು ನಿಮಗೆ ಅನೇಕ ಬಾರಿ ಅನಿಸಿರಬಹುದು. ಆಗಾಗ್ಗೆ ಇದು ಕೇವಲ ಭ್ರಮೆ ಎಂದು ನಾವು ಭಾವಿಸುತ್ತೇವೆ. ಇತ್ತೀಚಿನ ಒಂದು ಅಧ್ಯಯನವು ಕೆಲವು ಜನರು ಸೊಳ್ಳೆಗಳಿಂದ ಹೆಚ್ಚು ಕಚ್ಚಲ್ಪಡುತ್ತಾರೆ ಮತ್ತು ಚರ್ಮದ ಬಣ್ಣ, ಚರ್ಮದ ಮೇಲೆ ಇರುವ ಬ್ಯಾಕ್ಟೀರಿಯಾ(Bacteria) ಸೇರಿದಂತೆ ಇದರ ಹಿಂದೆ ಅನೇಕ ಕಾರಣಗಳಿವೆ ಎಂದು ಬಹಿರಂಗಪಡಿಸಿದೆ.
ಇಲ್ಲಿಯವರೆಗೆ, ಒಬ್ಬರಿಗೆ ಮಾತ್ರ ಹೆಚ್ಚು ಸೊಳ್ಳೆ ಕಚ್ಚುವ ಬಗ್ಗೆ ಅನೇಕ ಅಧ್ಯಯನಗಳು ನಡೆದಿವೆ. ಪ್ರತಿಯೊಂದು ಅಧ್ಯಯನಗಳಲ್ಲೂ ಕೆಲವು ವಿಶಿಷ್ಟ ವಿಷಯಗಳು ಹೊರಬಂದಿವೆ. ಹಾಗಿದ್ರೆ ಬನ್ನಿ ಅಂತಹ ಸರ್ಫ್ರೈಸಿಂಗ್ ಅಂಶಗಳ ಬಗ್ಗೆ ತಿಳಿಯೋಣ. ಇಲ್ಲಿದೆ ಅಂತಹ ಇಂಟೆರೆಸ್ಟಿಂಗ್ ಮಾಹಿತಿಗಳು.
ಸೊಳ್ಳೆಗಳು ಏಕೆ ಕಚ್ಚುತ್ತವೆ?
ಮೆಡಿಕಲ್ ನ್ಯೂಸ್ ಟುಡೇ ವರದಿಯ ಪ್ರಕಾರ, 3500 ಕ್ಕೂ ಹೆಚ್ಚು ಜಾತಿಯ ಸೊಳ್ಳೆಗಳಿವೆ, ಅವುಗಳಲ್ಲಿ ಕೆಲವು ಹೆಣ್ಣು ಜಾತಿಯ ಸೊಳ್ಳೆಗಳು ಮಾತ್ರ ಮನುಷ್ಯರನ್ನು ಕಚ್ಚುತ್ತವೆ. ಹೆಣ್ಣು ಸೊಳ್ಳೆಗಳಿಗೆ ತಮ್ಮ ಮೊಟ್ಟೆಗಳಿಗೆ ಪ್ರೋಟೀನ್ ಬೇಕು ಮತ್ತು ಸೊಳ್ಳೆಗಳು ಮಾನವನ ರಕ್ತದಿಂದ(Blood) ಪ್ರೋಟೀನ್ ಪಡೆಯುತ್ತವೆ.
ಸೊಳ್ಳೆಗಳು ಮನುಷ್ಯನ ಚರ್ಮದ ಮೇಲೆ ತನ್ನ ಸೂಜಿಯಂತಹ ಕುಟುಕುಗಳಿಂದ ಕಚ್ಚಲು ಇದು ಕಾರಣವಾಗಿದೆ. ಸೊಳ್ಳೆ ಕಚ್ಚಿದ ನಂತರ, ಚರ್ಮದ ಮೇಲೆ ತುರಿಕೆ, ಊತ ಮತ್ತು ಇತರ ಗಂಭೀರ ಸೋಂಕುಗಳು ಸಹ ಉಂಟಾಗುತ್ತವೆ. ಡೆಂಗ್ಯೂ, ಮಲೇರಿಯಾ(Maleria) ಮತ್ತು ಚಿಕೂನ್ ಗುನ್ಯಾ ಸೊಳ್ಳೆಗಳಿಂದ ಹರಡುವ ರೋಗಗಳಾಗಿದ್ದು, ಅವು ಜನರನ್ನು ಗಂಭೀರವಾಗಿ ಬಾಧಿಸುತ್ತವೆ. ಕೆಲವು ಆಫ್ರಿಕನ್ ದೇಶಗಳಲ್ಲಿ, ಹಳದಿ ಜ್ವರವು ಸೊಳ್ಳೆಗಳಿಂದಾಗಿ ಹರಡುತ್ತದೆ.
ಸೊಳ್ಳೆಗಳು ಕೆಲವು ಜನರನ್ನು ಹೆಚ್ಚು ಕಚ್ಚುತ್ತವೆ ಯಾಕೆ?
ಅಮೆರಿಕದ ನ್ಯೂ ಮೆಕ್ಸಿಕೋ ಸ್ಟೇಟ್ ಯೂನಿವರ್ಸಿಟಿಯ ಸಾರ್ವಜನಿಕ ಆರೋಗ್ಯ ಪ್ರಾಧ್ಯಾಪಕ ಡಾ.ಜಗದೀಶ್ ಖುಬ್ಚಂದಾನಿ ಅವರು, ಸೊಳ್ಳೆಗಳು ಮನುಷ್ಯರತ್ತ ಏಕೆ ಆಕರ್ಷಿತವಾಗುತ್ತವೆ ಎಂಬುದಕ್ಕೆ ಕಾರಣಗಳನ್ನು ಕೆಲವು ಅಧ್ಯಯನಗಳು ಚರ್ಚಿಸಿವೆ ಎಂದು ಹೇಳಿದರು. ದೇಹದ ವಾಸನೆ, ಚರ್ಮದ ಬಣ್ಣ, ಚರ್ಮದ ತಾಪಮಾನ ಮತ್ತು ರಚನೆ, ಚರ್ಮದ ಮೇಲೆ ವಾಸಿಸುವ ರೋಗಾಣುಗಳು, ಗರ್ಭಧಾರಣೆ, ಮಾನವರು ಬಿಡುಗಡೆ ಮಾಡುವ ಇಂಗಾಲದ ಡೈಆಕ್ಸೈಡ್, ಆಲ್ಕೋಹಾಲ್(Alcohol) ಮತ್ತು ಆಹಾರದಿಂದಾಗಿ, ಸೊಳ್ಳೆಗಳು ಕೆಲವು ಜನರನ್ನು ಹೆಚ್ಚು ಮತ್ತು ಕೆಲವು ಜನರನ್ನು ಕಡಿಮೆ ಕಚ್ಚುತ್ತವೆ ಎಂದು ಕಂಡುಬಂದಿದೆ.
ಯಾವೆಲ್ಲಾ ಜನರು ಹೆಚ್ಚು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಾರೆ ಗೊತ್ತಾ? ಗರ್ಭಿಣಿಯರು(Pregnant women), ಅಧಿಕ ತಾಪಮಾನ ಮತ್ತು ಅತಿಯಾದ ಬೆವರು ಮತ್ತು ಕಪ್ಪು ಚರ್ಮದ ಜನರು ಸೊಳ್ಳೆಗಳಿಂದ ಹೆಚ್ಚು ಕಚ್ಚಲ್ಪಡುತ್ತಾರೆ ಎಂದು ಅಧ್ಯಯನಗಳು ತೋರಿಸುತ್ತವೆ. ನೀವು ಇವರಲ್ಲಿ ಒಬ್ಬರಾಗಿದ್ರೆ ಸೊಳ್ಳೆಗಳು ಕಚ್ಚುತ್ತವೆ ಎಚ್ಚರವಿರಲಿ.
ರಕ್ತದ ಗುಂಪು(Blood group) O ಮತ್ತು ಬಿಯರ್ ಕುಡಿಯುವವರು ಸಹ ಹೆಚ್ಚಿನ ಅಪಾಯದಲ್ಲಿದ್ದಾರೆ
ಕೆಲವು ಅಧ್ಯಯನಗಳಲ್ಲಿ, ಎ ರಕ್ತದ ಗುಂಪನ್ನು ಹೊಂದಿರುವವರು ಕಡಿಮೆ ಸೊಳ್ಳೆಗಳಿಂದ ಕಚ್ಚಲ್ಪಡುತ್ತಾರೆ ಮತ್ತು O ರಕ್ತದ ಗುಂಪನ್ನು ಹೊಂದಿರುವವರು ಹೆಚ್ಚಿನ ಸೊಳ್ಳೆಗಳಿಂದ ಕಚ್ಚಲ್ಪಡುತ್ತಾರೆ ಎಂದು ತಿಳಿದುಬಂದಿದೆ.
ಇದಲ್ಲದೆ, ಬಿಯರ್(Beer) ಕುಡಿಯುವ ಜನರತ್ತ ಸೊಳ್ಳೆಗಳು ಹೆಚ್ಚು ಆಕರ್ಷಿಸುತ್ತವೆ. ಸೊಳ್ಳೆಗಳನ್ನು ತಪ್ಪಿಸಲು ಒಂದು ಮಾರ್ಗವೆಂದರೆ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು. ಕೆಲವು ಅಧ್ಯಯನಗಳು ತೋರಿಸುವಂತೆ, ಸೊಳ್ಳೆಗಳು ಗಾಢ ಬಣ್ಣಗಳಿಗೆ ಆಕರ್ಷಿತವಾಗುತ್ತವೆ. ನೀವು ತಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಸೊಳ್ಳೆ ಕಡಿತದ ಅಪಾಯವು ಕಡಿಮೆಯಾಗುತ್ತದೆ.