ಪ್ರೋಟೀನ್ ಪೌಡರ್ ಖರೀದಿಸುವ ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕಾದವುಗಳು:
1. ಎಲ್ಲರಿಗೂ ಪ್ರೋಟೀನ್ ಪೌಡರ್ ಅಗತ್ಯವಿಲ್ಲ
ಹೌದು, ನೀವು ಓದಿದ್ದು ಸರಿ. ಆರೋಗ್ಯಕರ ಆಹಾರ ಸೇವಿಸುವ ಎಲ್ಲರಿಗೂ ಪ್ರೋಟೀನ್ ಪೌಡರ್ ಅಗತ್ಯವಿಲ್ಲ. ಇದು ಹೆಚ್ಚಾಗಿ ಆಹಾರದಲ್ಲಿ ಹೆಚ್ಚಿನ ಪ್ರೋಟೀನ್ ಮೂಲಗಳಿಲ್ಲದವರಿಗೆ ಮಾತ್ರ. ನೀವು ಮಾಂಸ, ಮೀನು, ಮೊಟ್ಟೆ ಮತ್ತು ಹಾಲು ಇತ್ಯಾದಿಗಳನ್ನು ನಿಯಮಿತವಾಗಿ ಸೇವಿಸಿದರೆ, ಪ್ರೋಟೀನ್ ಪೌಡರ್ ಅನ್ನು ತಪ್ಪಿಸುವುದು ಒಳ್ಳೆಯದು.
2. ಸರಿಯಾದ ಬ್ರ್ಯಾಂಡ್
ಪ್ರಸ್ತುತ, ಪ್ರೋಟೀನ್ ಪೌಡರ್ ಅನೇಕ ಬ್ರ್ಯಾಂಡ್‌ಗಳಲ್ಲಿ ಲಭ್ಯವಿದೆ. ಇದರಿಂದಾಗಿ ಸರಿಯಾದ ಬ್ರ್ಯಾಂಡ್ ಅನ್ನು ಕಂಡುಹಿಡಿಯುವುದು ನಿಮಗೆ ಕಷ್ಟವಾಗಬಹುದು. ಇದಕ್ಕಾಗಿ ನೀವು ನಿಮ್ಮ ವೈದ್ಯರು ಅಥವಾ ಫಿಟ್ನೆಸ್ ತಜ್ಞರನ್ನು ಸಂಪರ್ಕಿಸಬಹುದು.ಅದರಂತೆ ನೀವು ಯಾವಾಗಲೂ ಜನಪ್ರಿಯ ಬ್ರ್ಯಾಂಡ್ ಅನ್ನು ಆರಿಸಿ. ಪ್ರೋಟೀನ್ ಪೌಡರ್ ಖರೀದಿಸುವ ಮೊದಲು, ಅದರ ಲೇಬಲ್‌ನಲ್ಲಿ ಸಕ್ಕರೆ ಮತ್ತು ಕೃತಕ ಪದಾರ್ಥಗಳು ಕಡಿಮೆ ಇವೆಯೇ ಎಂಬುದನ್ನು ಪರಿಶೀಲಿಸಿ.