ಬಾಳೆಹಣ್ಣು ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿದೆ ಮತ್ತು ವರ್ಷವಿಡೀ ದೊರೆಯುತ್ತೆ. ಇದು ಪ್ರತಿಯೊಬ್ಬರ ಆರೋಗ್ಯಕ್ಕೆ ಬಹಳ ಮುಖ್ಯ. ಇದು ಮೆಗ್ನೀಸಿಯಮ್, ಪೊಟ್ಯಾಷಿಯಮ್, ಮ್ಯಾಂಗನೀಸ್, ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಬಿ 6 ಮತ್ತು ಸಿಯಂತಹ ಪೋಷಕಾಂಶಗಳನ್ನು ಹೊಂದಿರುತ್ತೆ. ವಿಶೇಷವಾಗಿ ಬಾಳೆಹಣ್ಣಿನಲ್ಲಿ ಪೊಟ್ಯಾಷಿಯಮ್ ತುಂಬಿರುತ್ತೆ. ನಮ್ಮ ಹೃದಯದ ಪ್ರತಿಯೊಂದೂ ಬಡಿತವು ಪೊಟ್ಯಾಸಿಯಮ್ ಅನ್ನು ಅವಲಂಬಿಸಿರುತ್ತೆ. ಬಾಳೆಹಣ್ಣು ತಿನ್ನೋದ್ರಿಂದ ರಕ್ತದೊತ್ತಡ ಕಡಿಮೆಯಾಗುತ್ತೆ, ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ ಮತ್ತು ಹೃದಯಾಘಾತದ ಅಪಾಯವನ್ನು ಸಹ ಕಡಿಮೆ ಮಾಡುತ್ತೆ.
ಬಾಳೆಹಣ್ಣು ಹೃದಯಾಘಾತದ(Heart Attack) ಅಪಾಯ ಕಡಿಮೆ ಮಾಡುತ್ತೆ
ಪ್ರತಿದಿನ ಬಾಳೆಹಣ್ಣು ತಿನ್ನೋದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡಬಹುದು ಎಂದು ಹೊಸ ಸಂಶೋಧನೆಯೊಂದು ಸೂಚಿಸುತ್ತೆ. ಬಾಳೆಹಣ್ಣು ಮತ್ತು ಪೊಟ್ಯಾಷಿಯಮ್ ಹೆಚ್ಚಿರುವ ಇತರ ಆಹಾರ ಮಾರಣಾಂತಿಕ ಸಮಸ್ಯೆಗಳನ್ನು ತಡೆಗಟ್ಟಬಹುದು, ಇದು ಅಪಧಮನಿ ಗಟ್ಟಿಯಾಗೋದನ್ನು ಮತ್ತು ಕುಗ್ಗೋದನ್ನು ತಡೆಯುತ್ತೆ.
210
ಅಧ್ಯಯನದ ಪ್ರಕಾರ, ಆಹಾರದ ಮೂಲಕ ಕಡಿಮೆ ಪ್ರಮಾಣದ ಪೊಟ್ಯಾಷಿಯಮ್(Potassium) ಪಡೆಯುವ ಜನರಿಗೆ ಪಾರ್ಶ್ವವಾಯುವಿನ ಅಪಾಯವು ಶೇಕಡಾ 50 ರಷ್ಟು ಹೆಚ್ಚಾಗುತ್ತೆ. ಹೆಚ್ಚು ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡ ಹೆಚ್ಚಾಗುತ್ತೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ಹೆಚ್ಚಿಸುತ್ತೆ.
310
ಬಾಳೆಹಣ್ಣು (Banana) ವ್ಯಕ್ತಿಯ ದೇಹದಲ್ಲಿ ಉಪ್ಪಿನಿಂದ ಉಂಟಾಗುವ ಹಾನಿಯನ್ನು ಸಹ ಕಡಿಮೆ ಮಾಡುತ್ತೆ. ಸಂಶೋಧನೆಯು ಖನಿಜವು ಹೃದಯದ ಕಾರ್ಯವನ್ನು ನಿರ್ವಹಿಸಲು ಸಹಾಯ ಮಾಡುತ್ತೆ ಎಂದು ತೋರಿಸುತ್ತೆ, ಆದರೆ ಪುರುಷರಿಗಿಂತ ಮಹಿಳೆಯರು ಅದರಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ.
410
ಬಾಳೆಹಣ್ಣು ತಿನ್ನುವುದರ ಇತರ ಪ್ರಯೋಜನಗಳು
ಹೃದಯಕ್ಕೆ(Heart) ಸಂಬಂಧಿಸಿದ ಅಪಾಯ ಕಡಿಮೆ ಮಾಡುವುದರ ಜೊತೆಗೆ, ಬಾಳೆಹಣ್ಣು ಇತರ ಅನೇಕ ಪ್ರಯೋಜನಗಳನ್ನು ಹೊಂದಿವೆ. ಆದ್ದರಿಂದ ಬಾಳೆಹಣ್ಣು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.
510
ಮೆಮೊರಿಯನ್ನು(Memory) ಬಲಪಡಿಸುತ್ತೆ
ಮನಸ್ಥಿತಿಯನ್ನು ಸುಧಾರಿಸುತ್ತೆ. ಬಾಳೆಹಣ್ಣಿನಲ್ಲಿ ಟ್ರಿಪ್ಟೋಫಾನ್ ಎಂಬ ಅಮೈನೋ ಆಮ್ಲವಿದೆ, ಇದು ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತೆ, ಜೊತೆಗೆ ಜ್ಞಾಪಕಶಕ್ತಿಯನ್ನು ಬಲವಾಗಿಡುವುದರ ಜೊತೆಗೆ ಕಲಿಯುವ ಮತ್ತು ನೆನಪಿಟ್ಟುಕೊಳ್ಳುವ ಸಾಮರ್ಥ್ಯವನ್ನು ಸುಧಾರಿಸುತ್ತೆ.
610
ಜೀರ್ಣಕ್ರಿಯೆಯನ್ನು(Digestion) ಸುಧಾರಿಸುತ್ತೆ
ಬಾಳೆಹಣ್ಣಿನಲ್ಲಿ ಸಾಕಷ್ಟು ಫೈಬರ್ ಮತ್ತು ನೀರಿನ ಅಂಶವಿದೆ, ಇವೆರಡೂ ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತವೆ. ಒಂದು ಬಾಳೆಹಣ್ಣನ್ನು ತಿನ್ನುವ ಮೂಲಕ, ಒಬ್ಬ ವ್ಯಕ್ತಿಯು 10% ಫೈಬರ್ ಪಡೆಯುತ್ತಾನೆ.
710
ಒಂದು ಅಧ್ಯಯನದ ಪ್ರಕಾರ, ಫೈಬರ್ ಸಮೃದ್ಧವಾಗಿರುವ ಆಹಾರ ಸೇವಿಸೋದ್ರಿಂದ, ಉರಿಯೂತದ ಕರುಳಿನ ಕಾಯಿಲೆ ಹೊಂದಿರುವ ವ್ಯಕ್ತಿಯು ಗ್ಯಾಸ್(Gas), ಹೊಟ್ಟೆಯ ಸೆಳೆತ ಮತ್ತು ಹೊಟ್ಟೆಯುಬ್ಬರಿಕೆಯನ್ನು ನಿವಾರಿಸಬಹುದು. ಹಾಗಾಗಿ , ಬಾಳೆಹಣ್ಣು ತಿನ್ನೋದು ಈ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.
810
ಮಧುಮೇಹದಿಂದ(Diabetes) ರಕ್ಷಿಸುತ್ತೆ
ನಾರಿನಂಶವನ್ನು ಹೊಂದಿರುವ ಬಾಳೆಹಣ್ಣು ಮತ್ತು ಇತರ ಹಣ್ಣುಗಳನ್ನು ತಿನ್ನೋದು ರಕ್ತದ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತೆ. ಹೆಚ್ಚಿನ ಫೈಬರ್ ಆಹಾರವು ಟೈಪ್ -2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತೆ. ಆದರೆ, ಮಧುಮೇಹ ಹೊಂದಿರುವ ಜನರು ಬಾಳೆಹಣ್ಣನ್ನು ಕಡಿಮೆ ತಿನ್ನಬೇಕು.
910
ರಕ್ತದೊತ್ತಡವನ್ನು(Blood pressure) ನಿರ್ವಹಿಸುತ್ತೆ
ಪೊಟ್ಯಾಷಿಯಮ್ ಭರಿತ ಆಹಾರವನ್ನು ಸೇವಿಸಲು ಮತ್ತು ಉಪ್ಪಿನ ಸೇವನೆ ಕಡಿಮೆ ಮಾಡಲು ತಜ್ಞರು ಜನರಿಗೆ ಸಲಹೆ ನೀಡುತ್ತಾರೆ. ಪೊಟ್ಯಾಷಿಯಮ್ ಹೃದಯರಕ್ತನಾಳದ ಒತ್ತಡವನ್ನು ಕಡಿಮೆ ಮಾಡುತ್ತೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.
1010
ಕ್ಯಾನ್ಸರ್(Cancer) ಅಪಾಯವನ್ನು ಕಡಿಮೆ ಮಾಡುತ್ತೆ
ಲೆಕ್ಟಿನ್ ಎಂಬ ಪ್ರೋಟೀನ್ ಇರುವ ಕಾರಣ ಬಾಳೆಹಣ್ಣು ಲ್ಯುಕೇಮಿಯಾ ಸೆಲ್ಸ್ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಇದು ಉತ್ಕರ್ಷಣ ನಿರೋಧಕದಂತೆ ಕೆಲಸ ಮಾಡುತ್ತೆ. ಈ ಉತ್ಕರ್ಷಣ ನಿರೋಧಕಗಳು ರಾಡಿಕnಲ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತೆ. ಅನೇಕ ಫ್ರೀ ರ್ಯಾಡಿಕಲ್‌ಗಳ ರಚನೆಯು ಜೀವಕೋಶ ಹಾನಿಗೆ ಕಾರಣವಾಗಬಹುದು, ಇದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತೆ.