ರಾತ್ರಿ ಲೇಟಾಗಿ ಊಟ ಮಾಡೋದೇ ತಪ್ಪು, ಅದ್ರಲ್ಲೂ ಇವನ್ನಂತೂ ತಿನ್ಲೇ ಬಾರದು!

Published : Jul 27, 2022, 01:26 PM IST

ದಿನವಿಡಿಯ ಬ್ಯುಸಿ ಶೆಡ್ಯೂಲ್‌ನಿಂದಾಗಿ ನಾವು ಸರಿಯಾದ ಸಮಯದಲ್ಲಿ, ಸರಿಯಾದ ಪೌಷ್ಟಿಕ ಆಹಾರ ತಿನ್ನೋದನ್ನೇ ಮರೆತು ಬಿಡುತ್ತೇವೆ. ಇದು ನಮ್ಮ ಆರೋಗ್ಯಕ್ಕೆ ಸಾಕಷ್ಟು ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ನಾವು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಯಾವಾಗ ಏನು ತಿನ್ನಬೇಕು ಅನ್ನೋದನ್ನು ನೀವು ತಿಳಿದುಕೊಂಡಿರಬೇಕು. ಇಲ್ಲಿ ಸಂಜೆ 7 ಗಂಟೆಯ ನಂತರ ತಪ್ಪಿಸಬೇಕಾದ 8 ಆಹಾರಗಳ ಬಗ್ಗೆ ತಿಳಿಸಲಾಗಿದೆ. ಅವುಗಳ ಬಗ್ಗೆ ತಿಳಿದುಕೊಳ್ಳೋದು ಮುಖ್ಯ.   

PREV
19
ರಾತ್ರಿ ಲೇಟಾಗಿ ಊಟ ಮಾಡೋದೇ ತಪ್ಪು, ಅದ್ರಲ್ಲೂ ಇವನ್ನಂತೂ ತಿನ್ಲೇ ಬಾರದು!
ಸಂಜೆ 7 ಗಂಟೆಯ ನಂತರ ಇವುಗಳನ್ನು ತಿನ್ನಲೇಬೇಡಿ :

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಡಯಟ್ ಮಂತ್ರವನ್ನು ಎಲ್ಲರೂ ಪಾಲಿಸುತ್ತಾರೆ. ಆದರೆ ನಿಮಗೆ ಗೊತ್ತಾ ಕೆಲವು ಆಹಾರಗಳನ್ನು ನಾವು ರಾತ್ರಿ ಹೊತ್ತು ಸೇವಿಸಲೇಬಾರದು. ಇದರಿಂದ ಆರೋಗ್ಯದ ಮೇಲೆ ಹೆಚ್ಚಿನ ಹಾನಿ ಉಂಟಾಗುತ್ತೆ. ಇಲ್ಲಿ ನಾವು ಸಂಜೆ ಏಳರ ನಂತರ ಯಾವ ಆಹಾರ ಸೇವಿಸಬಾರದು ಅನ್ನೋದರ ಬಗ್ಗೆ ತಿಳಿಯೋಣ. 

29
ಪಾಸ್ತಾ

ಕಾರ್ಬೋಹೈಡ್ರೇಟ್ಸ್ (carbohydrate) ನಮ್ಮ ಆರೋಗ್ಯಕ್ಕೆ ಅತ್ಯಗತ್ಯ, ಆದರೆ ರಾತ್ರಿಯಲ್ಲಿ ಅದನ್ನು ತಪ್ಪಿಸಬೇಕು. ಪಾಸ್ತಾ ಗ್ಲೈಸೆಮಿಕ್ ಸೂಚ್ಯಂಕದಲ್ಲಿ ಅಧಿಕವಾಗಿದೆ, ಇದರ ಅರ್ಥ ಅದು ರಕ್ತದಲ್ಲಿ ವೇಗವಾಗಿ ಹೀರಲ್ಪಡುತ್ತದೆ. ಆದ್ದರಿಂದ ನೀವು ಪ್ರತಿದಿನ ವ್ಯಾಯಾಮ ಮಾಡದಿದ್ದರೆ, ಈ ಸಕ್ಕರೆ ನಿಮ್ಮ ದೇಹದಲ್ಲಿ ಕೊಬ್ಬು ಆಗುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತೆ.

39
ಚೀಸ್

ಚೀಸ್ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಉತ್ಪಾದಿಸುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಸಂಜೆಯ ನಂತರ ಅದರ ಸೇವನೆಯು ಅರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ. ಇದು ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಉಳಿಯುತ್ತದೆ. ಇದರಿಂದ ತೂಕ ಹೆಚ್ಚಾಗುತ್ತೆ.

49
ಐಸ್ ಕ್ರೀಮ್

ಹಾಲಿನಿಂದ ತಯಾರಿಸಿದ ವಸ್ತುಗಳು ನಿಮ್ಮ ಹೊಟ್ಟೆಯನ್ನು ಅಸಮಾಧಾನಗೊಳಿಸಬಹುದು. ವಿಶೇಷವಾಗಿ ರಾತ್ರಿಯಲ್ಲಿ ಇದನ್ನು ಅವಾಯ್ಡ್ ಮಾಡಿ, ನಿಮಗೆ ಡೈರಿ ಉತ್ಪನ್ನಗಳಲ್ಲಿ (icecream) ತೊಂದರೆ ಇಲ್ಲದಿದ್ದರೂ, ರಾತ್ರಿಯಲ್ಲಿ ಐಸ್ ಕ್ರೀಮ್ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿ ಹೆಚ್ಚು ಕೊಬ್ಬು ಇದ್ದು, ಆರೋಗ್ಯಕ್ಕೆ ಒಳ್ಳೇದಲ್ಲ. 

59
ಬರ್ಗರ್

ಬರ್ಗರ್ ತಿನ್ನುವುದು ನಿಮ್ಮ ನಾಲಿಗೆಗೆ ಇಷ್ಟವಾಗಿರಬಹುದು, ಆದರೆ ತುಂಬಾ ಸಮಯದವರೆಗೆ ಅದನ್ನು ಸೇವಿಸೋದ್ರಿಂದ ಆರೋಗ್ಯಕ್ಕೆ ಹಾನಿಯಾಗೋದು ಖಚಿತ. ವಿಶೇಷವಾಗಿ ನೀವು ಇದನ್ನು ರಾತ್ರಿಯಲ್ಲಿ ಸೇವಿಸಿದರೆ, ಅದು ನಿಮ್ಮ ಜಠರಗರುಳಿನ ನಾಳವನ್ನು ಹಾನಿಗೊಳಿಸುತ್ತೆ.

69
ಆಲ್ಕೋಹಾಲ್

ಆಲ್ಕೋಹಾಲ್ ಒಂದು ವಿಷ ಅನ್ನೋದು ನಿಮಗೆ ಗೊತ್ತಿದೆ ಅಲ್ವಾ? ಇದು ನಿಮ್ಮ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಪ್ರತಿದಿನ ಸಂಜೆ ಅಥವಾ ರಾತ್ರಿ ಆಲ್ಕೋಹಾಲ್ ಕುಡಿಯುವುದರಿಂದ ಕಾರ್ಟಿಸೋಲ್ ಬಿಡುಗಡೆಯಾಗುತ್ತೆ, ಇದು ಒತ್ತಡದ ಹಾರ್ಮೋನ್ ಆಗಿದೆ. ಇದು ನಿಮ್ಮನ್ನು ದುರ್ಬಲಗೊಳಿಸುತ್ತೆ, ಅಲ್ಲದೇ ಆತಂಕವನ್ನು ಹೆಚ್ಚಿಸಬಹುದು.

79
ಚಾಕೊಲೇಟ್

ಚಾಕಲೇಟ್ ಅತ್ಯುತ್ತಮ ರುಚಿಯಿಂದಾಗಿ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಇದು ಇಷ್ಟವಾಗುತ್ತೆ. ಆದಾಗ್ಯೂ, ರಾತ್ರಿಯಲ್ಲಿ ತಿನ್ನುವುದು ನಿಮ್ಮ ನಿದ್ರೆಯನ್ನು ಹಾಳುಮಾಡಬಹುದು, ಏಕೆಂದರೆ ಇದು ಉತ್ತಮ ಪ್ರಮಾಣದ ಕೆಫೀನ್ ಅನ್ನು ಹೊಂದಿರುತ್ತದೆ. ಆದುದರಿಂದ ಇದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

89
ಎಲೆಕೋಸು

ಎಲೆಕೋಸು ಮತ್ತು ಬ್ರೊಕೋಲಿಯಂತಹ ಕ್ರೂಸಿಫೆರಸ್ ತರಕಾರಿಗಳನ್ನು ಸಂಜೆ ತಿಂದರೆ, ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಇದು ದೊಡ್ಡ ಕರುಳು ಪ್ರವೇಶಿಸಿದಾಗ, ಅಲ್ಲಿ ಇರುವ ಬ್ಯಾಕ್ಟೀರಿಯಾಗಳು (bacteria) ಪ್ರಕ್ರಿಯೆಯನ್ನು ಪ್ರಾರಂಭಿಸುತ್ತವೆ, ಇದು ಹೊಟ್ಟೆ ಉಬ್ಬರ ಮತ್ತು ಗ್ಯಾಸ್ ಸಮಸ್ಯೆಗಳನ್ನು ಉಂಟುಮಾಡುತ್ತದೆ.

99
ಬ್ರೆಡ್

ಸಂಜೆ 6 ಗಂಟೆ ನಂತರ ಬ್ರೆಡ್ ತಿನ್ನಬಾರದು. ಏಕೆಂದರೆ ಇದು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆ ಮಾತ್ರ ಹೊಂದಿರುತ್ತದೆ. ಇದರಿಂದ ಆರೋಗ್ಯಕ್ಕೆ ಹೆಚ್ಚು ಮಾರಕವಾಗುವ ಸಾಧ್ಯತೆ ಇದೆ. ಆದುದರಿಂದ ಇದನ್ನು ಸಂಜೆಯ ನಂತರ ಸೇವಿಸದೇ ಇದ್ದರೇನೆ ಉತ್ತಮ. 

Read more Photos on
click me!

Recommended Stories