ಮಂಕಿಪಾಕ್ಸ್ ಚಿಕನ್ ಪಾಕ್ಸ್ ಗಿಂತ ಹೇಗೆ ಭಿನ್ನ? ಗುಣಲಕ್ಷಣಗಳೇನು?
First Published | Jul 26, 2022, 4:23 PM ISTಕರೋನಾ ಪ್ರಕರಣಗಳು ಸಂಪೂರ್ಣವಾಗಿ ಮುಗಿದಿಲ್ಲ, ಈ ನಡುವೆ ಮತ್ತೊಂದು ಅಪರೂಪದ ರೋಗ ಕಾಣಿಸಿಕೊಂಡು ಜನರಲ್ಲಿ ಭೀತಿ ಹುಟ್ಟಿಸಿದೆ. ಈ ರೋಗಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. ಈ ರೋಗ ಇಲ್ಲಿಯವರೆಗೆ ಸುಮಾರು 70 ದೇಶಗಳಿಗೆ ಹರಡಿದೆ. ಮಂಕಿಪಾಕ್ಸ್ ಒಂದು ವೈರಲ್ ಕಾಯಿಲೆಯಾಗಿದ್ದು, ಇದು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ತುಂಬಾನೆ ಇದೆ. ಈ ಮಂಕಿ ಪಾಕ್ಸ್ ನೋಡಿದಾಗ, ಚಿಕನ್ ಪಾಕ್ಸ್ ರೀತಿಯೇ ಇರುತ್ತದೆ, ಇವೆರಡೂ ತುಂಬಾನೆ ಎಚ್ಚರಿಕೆ ವಹಿಸಬೇಕಾದ ರೋಗವಾಗಿದೆ. ಆದಾಗ್ಯೂ, ಎರಡರ ನಡುವೆ ಅನೇಕ ವ್ಯತ್ಯಾಸಗಳಿವೆ. ಮಂಕಿಪಾಕ್ಸ್ ಮತ್ತು ಚಿಕನ್ ಪಾಕ್ಸ್ ನಡುವಿನ ವ್ಯತ್ಯಾಸದ ಬಗ್ಗೆ ಇಲ್ಲಿ ತಿಳಿಯಿರಿ.