ಗರ್ಭಾವಸ್ಥೆಯಲ್ಲಿ ಕೆಮ್ಮು: ಏನೇನೋ ಔಷಧಿ ಬಳಸೋ ಬದಲಿ ಈ ಮನೆ ಮದ್ದು ಟ್ರೈ ಮಾಡಿ

First Published Mar 20, 2023, 4:34 PM IST

ಗರ್ಭಧಾರಣೆಯು ನಿಮ್ಮ ಇಮ್ಮ್ಯೂನ್ ಸಿಸ್ಟಮ್ ಮೇಲೆ ಪರಿಣಾಮ ಬೀರಬಹುದು, ಮತ್ತು ಇದರ ಪರಿಣಾಮವಾಗಿ, ಶೀತ ಅಥವಾ ಕೆಮ್ಮಿಗೆ ತುತ್ತಾಗುವ ಹೆಚ್ಚಿನ ಅಪಾಯವನ್ನುಂಟು ಮಾಡುತ್ತೆ. ಶೀತ ಅಥವಾ ಕೆಮ್ಮು ಬರದಂತೆ ತಡೆಯಲು ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಗರ್ಭಿಣಿ ಮಹಿಳೆ ಹೆಚ್ಚು ಜಾಗರೂಕರಾಗಿರಬೇಕು ಅಥವಾ ಅವಳು ಸೋಂಕಿಗೆ ಒಳಗಾದರೆ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳಬೇಕು. 

ಗರ್ಭಿಣಿ (Pregnant) ಮಹಿಳೆ ತನ್ನ ಮೇಲೆ ಮತ್ತು ತನ್ನ ಮಗುವಿನ ಮೇಲೆ ಅದರ ಪರಿಣಾಮಗಳ ಬಗ್ಗೆ ಚಿಂತಿಸದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಗರ್ಭಾವಸ್ಥೆಯಲ್ಲಿ ಕೆಮ್ಮಿಗೆ ಚಿಕಿತ್ಸೆ ನೀಡಲು ಅನೇಕ ಜನರು ಗಿಡಮೂಲಿಕೆ ಆಧಾರಿತ ನೈಸರ್ಗಿಕ ಮನೆಮದ್ದುಗಳನ್ನು ಬಳಸುತ್ತಾರೆ.

ಗರ್ಭಿಣಿ ಮಹಿಳೆಯರಲ್ಲಿ ಕೆಮ್ಮಿಗೆ (Cough) ನೈಸರ್ಗಿಕವಾಗಿ ಚಿಕಿತ್ಸೆ ನೀಡಲು ಕೆಲವು ಅತ್ಯಂತ ಪರಿಣಾಮಕಾರಿ ಮತ್ತು ಜನಪ್ರಿಯ ಮನೆಮದ್ದುಗಳು ಇಲ್ಲಿವೆ. ಇವುಗಳನ್ನು ನೀವು ಒಮ್ಮೆ ಟ್ರೈ ಮಾಡಿ ನೋಡಿ.  
ಗರ್ಭಾವಸ್ಥೆಯಲ್ಲಿ ಕೆಮ್ಮು ಮತ್ತು ಶೀತ ಇದ್ದರೆ, ನಿದ್ರೆ ಪೂರ್ಣವಾಗೋದಿಲ್ಲ ಅಥವಾ ಶಾಂತಿ ಇರೋದಿಲ್ಲ. ಆದ್ದರಿಂದ, ಈ ನ್ಯಾಚುರಲ್ ರೆಮೆಡಿಸ್ ನಿಮಗೆ ಉಪಯುಕ್ತವಾಗಬಹುದು.

ಉಪ್ಪು ನೀರು
ಉಪ್ಪು ನೀರು ಸೂಕ್ಷ್ಮಜೀವಿ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ, ಇದು ಉರಿಯೂತವನ್ನು ಕಡಿಮೆ ಮಾಡುತ್ತೆ ಮತ್ತು ಗಂಟಲು ನೋವಿಗೆ ಪರಿಹಾರವನ್ನು ನೀಡುತ್ತೆ. ಆದ್ದರಿಂದ ಆಗಾಗೆ ಉಪ್ಪು ನೀರಲ್ಲಿ ಗಾರ್ಗಲ್(Gargle) ಮಾಡಿದರೆ, ಕೆಮ್ಮು ಕಮ್ಮಿಯಾಗುತ್ತೆ .   
 

ಚಿಕನ್ ಸೂಪ್(Chicken soup)
ನೀವು ನಾನ್ ವೆಜ್ ತಿನ್ನುವವರಾದರೆ , ಚಿಕನ್ ಸೂಪ್ ಕುಡಿಯಿರಿ. ಇದು ಉರಿಯೂತ ಶಮನಕಾರಿ ಗುಣಗಳನ್ನು ಹೊಂದಿದೆ, ಇದು ಗಂಟಲಿನ ಉರಿಯೂತವನ್ನು ಕಡಿಮೆ ಮಾಡುತ್ತೆ. ಹಾಗಾಗಿ ಬಿಸಿ ಬಿಸಿ ಚಿಕನ್ ಸೂಪ್ ಗರ್ಭಿಣಿಯರಿಗೆ ಬೆಸ್ಟ್.  

ವಿಟಮಿನ್-ಸಿ (VItamin C)
ವಿಟಮಿನ್-ಸಿ ಸಮೃದ್ಧವಾಗಿರುವ ಹಣ್ಣುಗಳನ್ನು ತಿನ್ನುವ ಮೂಲಕ ಅಥವಾ ಪೂರಕಗಳನ್ನು ತೆಗೆದುಕೊಳ್ಳುವ ಮೂಲಕ ಗರ್ಭಾವಸ್ಥೆಯಲ್ಲಿ ಕೆಮ್ಮನ್ನು ತಪ್ಪಿಸಬಹುದು. ಆದ್ದರಿಂದ ಸಾಧ್ಯವಾದಷ್ಟು ಸಿಟ್ರಸ್ ಫ್ರೂಟ್ಸ್ ತಿನ್ನಿ ಯಾಕಂದ್ರೆ ಅದರಲ್ಲಿ ವಿಟಮಿನ್-ಸಿ ಯಥೇಚ್ಛವಾಗಿರುತ್ತೆ.     

ಶುಂಠಿ ಚಹಾ(Ginger tea)
ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿರುವ ಶುಂಠಿ ಕೆಮ್ಮನ್ನು ತೊಡೆದುಹಾಕಲು ಸಹಾಯ ಮಾಡುತ್ತೆ.ಹಾಗಾಗಿ ಗರ್ಭಿಣಿ ಮಹಿಳೆಯರು ಬಿಸಿ ಬಿಸಿ ಶುಂಠಿ ಚಹಾವನ್ನು ದಿನಕ್ಕೆ 2 ಬಾರಿ ಕುಡಿಯಿರಿ.ನಿಮ್ಮ ಕೆಮ್ಮು ಹೇಗೆ ಕಮ್ಮಿಯಾಗುತ್ತೆ ನೀವೇ ನೋಡಿ. 

ಜೇನುತುಪ್ಪ(Honey)
ಉಗುರು ಬೆಚ್ಚಗಿನ ನೀರು ಅಥವಾ ಚಹಾದೊಂದಿಗೆ 1 ಟೀಸ್ಪೂನ್ ಜೇನುತುಪ್ಪವನ್ನು ಬೆರೆಸಿ ಕುಡಿಯೋದರಿಂದ ಗಂಟಲು ನೋವು ಮತ್ತು ಕೆಮ್ಮು ಕಡಿಮೆಯಾಗುತ್ತೆ. ಆದ್ದರಿಂದ ಪ್ರತಿದಿನ ಬೆಳಗ್ಗೆ ಉಗುರುಬೆಚ್ಚಗಿನ ನೀರಿಗೆ 1 ಟೀಸ್ಪೂನ್ ಜೇನುತುಪ್ಪವನ್ನು ಹಾಕಿ ಕುಡಿಯಿರಿ. ಇದು ಎಲ್ಲಾ ರೀತಿಯಲ್ಲೂ ದೇಹಕ್ಕೆ ಒಳ್ಳೇದು.   

ಸ್ಟೀಮ್ (Steam) ತೆಗೆದುಕೊಳ್ಳಿ
ಕೆಮ್ಮಿಂದಾಗಿ ಗಂಟಲಿನಲ್ಲಿ ಲೋಳೆ ಸಂಗ್ರಹವಾಗಿದ್ದರೆ, ನೀಲಗಿರಿ ಎಣ್ಣೆಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸ್ಟೀಮ್ ತೆಗೆದುಕೊಳ್ಳಿ. ಇದು ನಿಮಗೆ ಸಾಕಷ್ಟು ಪರಿಹಾರವನ್ನು ನೀಡುತ್ತೆ. ನೀರಾಳವಾಗಿ ಉಸಿರಾಡಲು ಸಹಾಯ ಮಾಡುತ್ತೆ. ನೀವು ಟ್ರೈ ಮಾಡಿ ನೋಡಿ.  

ತುಳಸಿ ಎಲೆಗಳು(Tulasi leaves)
ಪ್ರತಿದಿನ ಬೆಳಿಗ್ಗೆ 8-10 ತುಳಸಿ ಎಲೆಗಳನ್ನು ಜಗಿಯಿರಿ ಅಥವಾ ತುಳಸಿ ಚಹಾ ಮಾಡಿ ಕುಡಿಯಿರಿ. ಇದು ನಿಮಗೆ ಶೀಘ್ರದಲ್ಲೇ ಪರಿಹಾರವನ್ನು ನೀಡುತ್ತೆ. ಹಾಗಾಗಿ ಗರ್ಭಿಣಿಗೆ ಕೆಮ್ಮು ಆದ್ರೆ ತುಳಸಿ ಎಲೆ ಈ ರೀತಿ ಯೂಸ್ ಮಾಡೋದನ್ನು ಮರಿಯಲೇಬೇಡಿ. ಇದು ಆಯುರ್ವೇದದ ಅತ್ಯುತ್ತಮ ಔಷಧಿಯಾಗಿದೆ. 

ವೈದ್ಯರನ್ನು ಸಂಪರ್ಕಿಸಿ (Consult doctor)
ಕೆಮ್ಮಿಗೆ ನ್ಯಾಚುರಲ್ ರೆಮೆಡಿಸ್ ತೆಗೆಯೋದ್ರಿಂದ ಯಾವುದೇ ಸೈಡ್ ಎಫೆಕ್ಟ್ಸ್ ಇರೋಲ್ಲ ಆದರೂ ಗರ್ಭಾವಸ್ಥೆಯಲ್ಲಿ ನೈಸರ್ಗಿಕ ವಸ್ತುಗಳನ್ನು ಸೇವಿಸೋದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾದರೆ, ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸಿದ ನಂತರವೇ ಅದನ್ನು ತೆಗೆದುಕೊಳ್ಳಿ.

click me!