ಮಗು ಬಾಯಿ ತೆರೆದು ಮಲಗ್ತಿದ್ಯಾ, ನಗ್ಬೇಡಿ, ಇದು ದೊಡ್ಡ ಸಮಸ್ಯೆ !

First Published | Mar 17, 2023, 3:36 PM IST

ನಿಮ್ಮ ಮಗು ಬಾಯಿಯನ್ನು ತೆರೆದಿಟ್ಟು ಮಲಗ್ತಿದ್ಯಾ, ಇದನ್ನು ನೀವು ಕಡೆಗಣಿಸ್ತೀರಾ?  ಹಾಗಿದ್ರೆ ಉಸಿರಾಟದ ತೊಂದರೆ ಇದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಹೌದು ಇದರ ಬಗ್ಗೆ ಹೆಚ್ಚು ತಿಳಿಯಲು ಮುಂದೆ ಓದಿ. 

ಕೆಲವರು ಮಲಗುವಾಗ ಬಾಯಿ(Mouth) ತೆರೆದಿಟ್ಟು ಮಲಗುತ್ತಾರೆ. ಇದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತೆ, ಆದರೆ ಕೆಲವು ಶಿಶುಗಳು ಮಲಗುವಾಗ ಬಾಯಿಯನ್ನು ತೆರೆದಿಡುತ್ತಾರೆ. ಆ ಸಮಯದಲ್ಲಿ ಮಗು ಬಾಯಿಯ ಮೂಲಕ ಉಸಿರಾಡುತ್ತಿದೆ ಎಂದರ್ಥ. ಮಲಗುವಾಗ ಬಾಯಿಯ ಮೂಲಕ ಉಸಿರಾಡೋದು ಮೇಲ್ಭಾಗದ ಶ್ವಾಸನಾಳದ ಸಮಸ್ಯೆ ಸಂಕೇತವಾಗಿರಬಹುದು. ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಅದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಮಗು ಬಾಯಿ ತೆರೆದು ಮಲಗುವುದು ಯಾಕೆ ಎಂದು ತಿಳಿಯೋಣ?

ಮೂಗಿನ ಮೂಲಕ ಉಸಿರಾಡುತ್ತೆ (Breath)
ನವಜಾತ ಶಿಶು ಮೂಗಿನ ಮೂಲಕ ಉಸಿರಾಡುತ್ತೆ, ಯಾವಾಗಿನವರೆಗೆ ಅಂದ್ರೆ ಅದರ ಮೂಗಿನ ಹಾದಿಯಲ್ಲಿ ತಡೆ ಉಂಟಾಗೋವರೆಗು. 3 ರಿಂದ 4 ತಿಂಗಳ ಮಗುವಿಗೆ  ಬಾಯಿಯಿಂದ ಉಸಿರಾಡಲಿಕ್ಕೆ ರಿಫ್ಲೆಕ್ಸ್ ಡೆವೆಲೊಪ್ ಆಗಿರೋದಿಲ್ಲ. 

Tap to resize

ಶಿಶುಗಳು ತಮ್ಮ ಬಾಯಿಯ ಮೂಲಕ ಏಕೆ ಉಸಿರಾಡುತ್ತವೆ?
ವೆಬ್ಎಂಡಿ ಪ್ರಕಾರ, ಸ್ಲೀಪ್ ಅಪ್ನಿಯಾ, ಲೋಳೆ, 3 ತಿಂಗಳ ವಯಸ್ಸಿಗೆ ಮುಂಚಿತವಾಗಿ ಸ್ತನ್ಯಪಾನ (Breast feed) ಮಾಡೋದನ್ನು ನಿಲ್ಲಿಸೋದು, ದೀರ್ಘಕಾಲದವರೆಗೆ ಪ್ಯಾಸಿಫೈಯರ್ ಬಳಸೋದು ಅಥವಾ ಹೆಬ್ಬೆರಳನ್ನು ಚೀಪೋದು, ಟಾನ್ಸಿಲ್ಸ್ ಮತ್ತು ಅಲರ್ಜಿ ಸಂದರ್ಭದಲ್ಲಿ ಮಲಗುವಾಗ ಮಗು ಬಾಯಿಯ ಮೂಲಕ ಉಸಿರಾಡಬಹುದು.

ಸಮಸ್ಯೆ ಏನಾಗಿರಬಹುದು?
ಲಾಲಾರಸವು ವೇಗವಾಗಿ ಒಣಗುತ್ತೆ ಮತ್ತು ಮಗು ಬಾಯಿ ಮೂಲಕ ಉಸಿರಾಡುವಾಗ ತುಟಿ ಮತ್ತು ಬಾಯಿ ಒಣಗುತ್ತೆ. ಈ ಕಾರಣದಿಂದಾಗಿ, ಅಸ್ತಮಾ (Asthama) ಕೂಡ ಗಂಭೀರ ರೂಪವನ್ನು ತೆಗೆದುಕೊಳ್ಳಬಹುದು. 

ಬಾಯಿಯ ಮೂಲಕ ನಿರಂತರವಾಗಿ ಉಸಿರಾಡುವ ಮಕ್ಕಳು ನಾಲಿಗೆ ಮುಂಭಾಗದ ಹಲ್ಲುಗಳ ಕಡೆಗೆ ತಳ್ಳುತ್ತಾರೆ. ಇದನ್ನು ಟ್ಯಾಂಗ್ ಥ್ರಸ್ಟಿಂಗ್ ಎಂದು ಕರೆಯಲಾಗುತ್ತೆ. ಬಾಯಿ ಮೂಲಕ ಪದೇ ಪದೇ ಉಸಿರಾಡೋದು ನಾಲಿಗೆ ಮತ್ತು ಬಾಯಿಯ ಸ್ನಾಯುಗಳನ್ನು ದುರ್ಬಲಗೊಳಿಸುತ್ತೆ, ಇದು ಆಹಾರವನ್ನು Food) ಅಗಿಯಲು ಅಸಮರ್ಥತೆ, ಮಾತನಾಡಲು ಕಷ್ಟ ಮತ್ತು ವಕ್ರ ಹಲ್ಲುಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಈ ಅಭ್ಯಾಸ ತೊಡೆದುಹಾಕೋದು ಹೇಗೆ?
ನಿಮ್ಮ ಮಗು ಬಾಯಿ ತೆರೆದು ಮಲಗಿದ್ರೆ ಮತ್ತು ನೀವು ಈ ಅಭ್ಯಾಸ ತೊಡೆದು ಹಾಕಲು ಬಯಸೋದಾದ್ರೆ, ಅವನ ಕೋಣೆಯಲ್ಲಿ ಹ್ಯೂಮಿಡಿಫೈಯರ್ (Humidifier) ಇಡಿ. ಇದು ಮೂಗಿನ ಹಾದಿಗಳಲ್ಲಿ ತಡೆಯನ್ನು ತಡೆಯಲು ಸಹಾಯ ಮಾಡುತ್ತೆ.

ಉಗುರು ಬೆಚ್ಚಗಿನ ನೀರಿನಿಂದ ಸ್ನಾನ (Bath) ಮಾಡೋದು ಸಹ ಸಹಾಯ ಮಾಡುತ್ತೆ. ಸ್ಟೀಮ್ ಮುಚ್ಚಿದ ಮೂಗನ್ನು ತೆರೆಯಬಹುದು. ಮಗುವಿಗೆ ಸಾಕಷ್ಟು ಪ್ರಮಾಣದಲ್ಲಿ ಎದೆ ಹಾಲು ಅಥವಾ ಫಾರ್ಮುಲಾ ಹಾಲನ್ನು ನೀಡಿ. ಹೈಡ್ರೇಟ್ ಆಗಿರೋದು ಬಹಳ ಮುಖ್ಯ ಮತ್ತು ಇದು ಮೂಗಿನ ಮಾರ್ಗಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತೆ.

ಮೂಗು ಮುಚ್ಚಿದರೆ, ಹೆಚ್ಚಿನ ಸಮಯ ಮಕ್ಕಳು ಬಾಯಿ ಮೂಲಕ ಉಸಿರಾಡುತ್ತಾರೆ. ಮೇಲಿನ ಕ್ರಮಗಳು ಉಸಿರಾಟದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತೆ. ಮಗುವಿಗೆ ಉಸಿರಾಟದ ತೊಂದರೆ ಅಥವಾ ಸ್ತನ್ಯಪಾನದ ಮಾದರಿಗಳಲ್ಲಿ ಬದಲಾವಣೆಯಂತಹ ಸ್ಪಷ್ಟವಾದ ಸಮಸ್ಯೆ ಇದ್ದರೆ, ನೀವು ಪೆಡಿಯಾ ಟ್ರೈಸಿಷನ್ ಅನ್ನು(Pediatrician) ಸಂಪರ್ಕಿಸಬಹುದು.

 ನಿಮ್ಮ 6 ತಿಂಗಳ ಮಗು ಬಾಯಿ ತೆರೆದು ಮಲಗಿದ್ರೆ ಮತ್ತು ನಿಮ್ಮ ಮಗು ಸ್ಲೀಪ್ ಅಪ್ನಿಯಾ, ಡೈವರ್ಟೆಡ್ ಸೆಪ್ಟಮ್ ಅಥವಾ ಇನ್ನಾವುದೇ ಸ್ಥಿತಿಯಿಂದ ಬಳಲುತ್ತಿದೆ ಎಂದು ನಿಮಗೆ ಅನಿಸಿದ್ರೆ, ವೈದ್ಯರನ್ನು ಭೇಟಿ ಮಾಡಿ. ನಿಮ್ಮ ಮಗುವನ್ನು ಮಾನಿಟರ್(Monitor) ಮಾಡಿ ಮತ್ತು ಅದರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
 

Latest Videos

click me!