ಟೊಮೆಟೊ ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಗ್ರಿಗಳು: 1 ಟೊಮೆಟೊ, 1 ಟೀ ಚಮಚ ಜೇನುತುಪ್ಪ, 1 ಚಿಟಿಕೆ ಅರಿಶಿನ, 1 ಟೀ ಚಮಚ ನಿಂಬೆ ರಸ. ಫೇಸ್ ಪ್ಯಾಕ್ ತಯಾರಿಸುವ ವಿಧಾನ: ಮೊದಲು ಫ್ರೆಶ್ ಟೊಮೆಟೊವನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ತಿರುಳನ್ನು ತೆಗೆದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಒಂದು ಟೀ ಚಮಚ ಜೇನುತುಪ್ಪ, ಚಿಟಿಕೆ ಅರಿಶಿನ ಸೇರಿಸಿ. ಜೇನುತುಪ್ಪ ಚರ್ಮಕ್ಕೆ ತೇವಾಂಶ, ಹೊಳಪು ನೀಡುತ್ತದೆ, ಅರಿಶಿನ ನೈಸರ್ಗಿಕ ಆಂಟಿ ಬ್ಯಾಕ್ಟೀರಿಯಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ.