ಮೂತ್ರದ ಸೋಂಕು ಕಾಡುತ್ತಿದೆಯೇ? ಮಾನಸಿಕ ಸಮಸ್ಯೆಯೇ ಇದಕ್ಕೆ ಕಾರಣ….

First Published | May 4, 2022, 11:39 AM IST

ಮೂತ್ರದ ಸೋಂಕು ನಿಮ್ಮನ್ನು ಪದೇ ಪದೇ ಕಾಡುತ್ತಿದೆಯಾ, ನೀವು ನೈರ್ಮಲ್ಯದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಿರುವಾಗ, ಮೂತ್ರದ ಸೋಂಕು ಕಾಣಿಸಲು ಕಾರಣ ಏನು? ಇದಕ್ಕೆ ಶುಚಿತ್ವದ ಕೊರತೆಯಿಂದಾಗಿ ಅಲ್ಲ, ಮಾನಸಿಕ ಸಮಸ್ಯೆ ಇದಕ್ಕೆ ಕಾರಣ ಇರಬಹುದು. ಆತಂಕ, ಖಿನ್ನತೆಯಂತಹ ಮಾನಸಿಕ ರೋಗಗಳಿಂದ ಸುತ್ತುವರೆದಿರುವ ಜನರು ಮೂತ್ರಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು, ಆಗಾಗ್ಗೆ ಮೂತ್ರವಿಸರ್ಜನೆ ಮತ್ತು ಆಗಾಗ್ಗೆ ಮೂತ್ರವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುತ್ತಾರೆ ಎಂದು ಅನೇಕ ಸಂಶೋಧನೆಗಳಲ್ಲಿ ತಿಳಿದುಬಂದಿದೆ.

ಒಂದಲ್ಲ, ಎರಡಲ್ಲ, 26 ಅಧ್ಯಯನಗಳು 

ಆರೋಗ್ಯ ತಜ್ಞರು, ಯಾವುದೇ ಒಂದು ಅಥವಾ ಎರಡು ವರದಿಗಳ ಆಧಾರದ ಮೇಲೆ ಅಲ್ಲ, ವಿಶ್ವದಾದ್ಯಂತ ನಡೆಸಿದ 26 ವಿಭಿನ್ನ ಅಧ್ಯಯನಗಳಲ್ಲಿ, ಅತಿಯಾದ ಸಕ್ರಿಯ ಮೂತ್ರಕೋಶ(Bladder) ಮತ್ತು ಖಿನ್ನತೆಯ ನಡುವೆ ಸಂಬಂಧವಿದೆ ಎಂದು ತಿಳಿಸಿದ್ದಾರೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ… 

ಈ ವಿಷಯಗಳು ಸಂಶೋಧನೆಯಲ್ಲಿಯೂ ಕಂಡು ಬಂದಿದೆ…

ವಿವಿಧ ಸಂಶೋಧನೆಗಳಲ್ಲಿ, ಭಯ, ಖಿನ್ನತೆ(Depression) ಮತ್ತು ಅತಿಯಾದ ಮಾನಸಿಕ ಆತಂಕದ ಸ್ಥಿತಿಯು ಮೂತ್ರಕೋಶದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ. ಈ ಕಾರಣಕ್ಕಾಗಿಯೇ ಮೂತ್ರಶಾಸ್ತ್ರಜ್ಞರು ಮಾನಸಿಕ ಸಮಸ್ಯೆಗಳು ಮೂತ್ರದ ಸೋಂಕುಗಳು, ಮೂತ್ರಕೋಶಗಳು ಮತ್ತು ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಒಪ್ಪುತ್ತಾರೆ.
 

Tap to resize

ಮೂತ್ರದ ಸೋಂಕುಗಳನ್ನು(Urine infection) ತಪ್ಪಿಸಲು ಮಾರ್ಗಗಳು 
ನೀವು ಆಗಾಗ್ಗೆ ಮೂತ್ರದ ಸೋಂಕಿನ ಸಮಸ್ಯೆಯನ್ನು ಹೊಂದಿದ್ದರೆ ಮತ್ತು ಔಷಧಿಗಳನ್ನು ತೆಗೆದುಕೊಂಡರೆ, ಅದು ಸ್ವಲ್ಪ ಕಡಿಮೆ ಆದರೆ ಮತ್ತೆ ಬರುತ್ತದೆ. ಆದ್ದರಿಂದ ನೀವು ಆಗೊಮ್ಮೆ ಈಗೊಮ್ಮೆ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ನೀವು ಹೆಚ್ಚು ಒತ್ತಡದಲ್ಲಿ ಬದುಕುತ್ತಿದ್ದರೆ, ನೀವು ಈ ವಿಷಯಗಳನ್ನು ನಿಮ್ಮ ವೈದ್ಯರಿಗೆ ಹೇಳಬೇಕು.

ಹೆಚ್ಚು ನೀರನ್ನು(Water) ಸೇವಿಸಿ. ದೇಹವು ಹೈಡ್ರೇಟ್ ಆಗಿದ್ದರೆ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ. ನೀವು ಚಹಾ ಮತ್ತು ಕಾಫಿಯಿಂದ ಸಾಧ್ಯವಾದಷ್ಟು ದೂರವಿರಿ. ಇದು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. 

ಡ್ರೈ ಫ್ರೂಟ್ ಗಳ(Dry fruits) ಸೇವನೆಯು ಒತ್ತಡವನ್ನು ಕಡಿಮೆ ಮಾಡಲು ಮತ್ತು ಮಾನಸಿಕವಾಗಿ ಬಲಗೊಳ್ಳಲು ತುಂಬಾ ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಮುಷ್ಟಿ ವಿವಿಧ ರೀತಿಯ ಡ್ರೈ ಫ್ರುಟ್ಸ್ ಗಳಾದ ಬಾದಾಮಿ, ಪಿಸ್ತಾ, ವಾಲ್ನಟ್ ಮೊದಲಾದ ಡ್ರೈ ಫ್ರುಟ್ಸ್ ಸೇವಿಸಿ. 

ಸಾಧ್ಯವಾದಷ್ಟು ಹೆಚ್ಚು ನೀರು ಕುಡಿಯಿರಿ. ಇದನ್ನು ಮಾಡುವುದರಿಂದ, ಸೋಂಕು(Infection) ಹೆಚ್ಚಾಗುವುದಿಲ್ಲ. ಪ್ರತಿದಿನ ಕನಿಷ್ಟ ಎಂಟು ಲೋಟ ನೀರು ಕುಡಿಯಬೇಕು. ಇದರಿಂದ ಉತ್ತಮ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ. 

ವೈದ್ಯರ ಮೇಲ್ವಿಚಾರಣೆಯಲ್ಲಿ ಪ್ರತಿಜೀವಕ ಔಷಧಿಗಳನ್ನು(Medicine) ತೆಗೆದುಕೊಳ್ಳಿ. ಹೌದು, ಸಮಸ್ಯೆ ಏನೆ ಇರಲಿ ನೀವು ಔಷಧಿಗಳನ್ನು ತೆಗೆದುಕೊಳ್ಳುವಾಗ ಅದನ್ನು ವೈದ್ಯರಿಂದ ಪರೀಕ್ಷಿಸಿಕೊಂಡು ಸೇವಿಸಿ. ಇಲ್ಲವಾದರೆ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುತ್ತದೆ. 

ಏಕಾಂತದಲ್ಲಿ ಸಮಯ ಕಳೆಯುವುದು ಮತ್ತು ಧ್ಯಾನ (Meditation)ಮಾಡುವುದು ಉತ್ತಮ ಮಾರ್ಗವಾಗಿದೆ. ಅಂದರೆ ಧ್ಯಾನವು ಮಾನಸಿಕವಾಗಿ ಬಲಗೊಳ್ಳಲು ನಿಮಗೆ ತುಂಬಾ ಸಹಾಯ ಮಾಡುತ್ತದೆ. ಇದಕ್ಕಾಗಿ ಧ್ಯಾನವನ್ನು ಅಭ್ಯಸಿಸಬೇಕು. 

Latest Videos

click me!