ಮಧುಮೇಹಿಗಳಿಗೆ ಸೂಪರ್ ಫುಡ್ ಈ ಎಲೆಯ ಚಹಾ..

First Published May 1, 2022, 12:55 PM IST

ಭೂಮಿಯ ಮೇಲೆ ವಿವಿಧ ರೀತಿಯ ಸಸ್ಯಗಳಿವೆ, ಅವುಗಳನ್ನು ಆಹಾರ ಮತ್ತು ಪಾನೀಯಗಳಲ್ಲಿ ಮಾತ್ರವಲ್ಲದೆ, ಅನೇಕ ಔಷಧಿಗಳಲ್ಲಿ ಸಹ ಬಳಸಲಾಗುತ್ತದೆ. ಅನೇಕ ಸಸ್ಯಗಳು ವಿವಿಧ ರೀತಿಯ ಔಷಧೀಯ ಗುಣಗಳನ್ನು ಹೊಂದಿವೆ, ಇದರಿಂದಾಗಿ ಅವುಗಳನ್ನು ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅಂತಹ ಒಂದು ಔಷಧೀಯ ಸಸ್ಯವೆಂದರೆ ನುಗ್ಗೆ ಸೊಪ್ಪು.  ಇದು ಮಧುಮೇಹ ರೋಗಿಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ವಿವಿಧ ಗುಣಗಳನ್ನು ಹೊಂದಿದೆ.

ಕಳೆದ ಕೆಲವು ವರ್ಷಗಳಲ್ಲಿ, ನುಗ್ಗೆಕಾಯಿ(Drumstick) ಪ್ರಸಿದ್ಧ ಸೂಪರ್ ಫುಡ್ ಆಗಿ ಮಾರ್ಪಟ್ಟಿದೆ. ಹೆಚ್ಚಿನ ಜನರು ಇದನ್ನು ತರಕಾರಿಯಾಗಿ ಬಳಸುತ್ತಾರೆ. ಆದಾಗ್ಯೂ, ಇದನ್ನು ಅನೇಕ ರೀತಿಯ ಭಕ್ಷ್ಯಗಳಲ್ಲಿ ಸಹ ಬಳಸಲಾಗುತ್ತದೆ. ಇದು ಕೇವಲ ತರಕಾರಿ ಮಾತ್ರವಲ್ಲ, ಇದು ಒಂದು ಔಷಧಿಯೂ ಹೌದು. 

ಪ್ರಾಚೀನ ಕಾಲದಲ್ಲಿ ನುಗ್ಗೆಕಾಯಿ ಅನ್ನು ಚರ್ಮ ರೋಗಗಳು ಮತ್ತು ಸೋಂಕುಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತಿತ್ತು ಅನ್ನೋದು ಗೊತ್ತಾ? ಇದಕ್ಕೆ ಕಾರಣವೆಂದರೆ ಅದರ ಹಸಿರು ಎಲೆಗಳು ಶಿಲೀಂಧ್ರ ವಿರೋಧಿ, ಆಂಟಿವೈರಲ್(Anti viral), ಖಿನ್ನತೆ-ಶಮನಕಾರಿ ಮತ್ತು ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿವೆ.

ನುಗ್ಗೆಕಾಯಿ ಮರಗಳು(Drumstick leaves) ಮತ್ತು ಸಸ್ಯಗಳನ್ನು ಎಲ್ಲಿ ಬೇಕಾದರೂ ಕಾಣಬಹುದು. ಅದರ ಎಲೆಗಳಿಂದ ತಯಾರಿಸಿದ ಪುಡಿಯು ಯಾವುದೇ ಅಂಗಡಿಯಲ್ಲಿ ಅಥವಾ ಆನ್ ಲೈನ್ ನಲ್ಲಿ  ಸುಲಭವಾಗಿ ಲಭ್ಯವಾಗಬಹುದು. ಮಾರುಕಟ್ಟೆಯಲ್ಲಿ ಕಂಡುಬರುವ ಒಣ ಪುಡಿಯನ್ನು ನೀವು ನಂಬದಿದ್ದರೆ,  ಅದರ ಸಣ್ಣ ಹಸಿರು ಎಲೆಗಳನ್ನು ಬಳಸುವುದು ಉತ್ತಮ. ಇದರಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ... 

ಮಧುಮೇಹಿ (Diabetic)ರೋಗಿಗಳಿಗೆ ನುಗ್ಗೆಕಾಯಿ ಎಲೆ ದಿವ್ಯಔಷಧ  
ನುಗ್ಗೆ ಎಲೆಗಳ ಅದ್ಭುತ ಗುಣಲಕ್ಷಣಗಳಿಂದಾಗಿ, ಮಧುಮೇಹ ರೋಗಿಗಳಲ್ಲಿ ತೂಕ ಇಳಿಸಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಇದನ್ನು ಬಳಸಲಾಗುತ್ತದೆ. ಅದರ ಎಲೆಗಳನ್ನು ಅಗಿಯುವುದು ಅಥವಾ ಅದರ ಎಲೆಗಳ ಚಹಾವನ್ನು ಕುಡಿಯುವುದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಮತ್ತು ಅನೇಕ ಗಂಭೀರ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ಹೇಳಿವೆ.

ರಕ್ತದ ಸಕ್ಕರೆ ನಿಯಂತ್ರಣಕ್ಕಾಗಿ ನುಗ್ಗೆ ಸೊಪ್ಪಿನ ಚಹಾ (Tea)
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು  ಹೆಚ್ಚಿನದನ್ನು ಮಾಡಬೇಕಾಗಿಲ್ಲ.  ಮಾಡಬೇಕಾಗಿರುವುದು ಇಷ್ಟೇ, ನುಗ್ಗೆಯ ಕೆಲವು ತಾಜಾ ಎಲೆಗಳನ್ನು ತೊಳೆದು ಬಿಸಿಲಿನಲ್ಲಿ  ಒಣಗಿಸಿ, ನಂತರ ಅವುಗಳನ್ನು ಪುಡಿ ಮಾಡಿ. ಇದನ್ನು ಚಹಾ ಎಲೆಯಾಗಿ ಬಳಸಬೇಕು. ಉದಾಹರಣೆಗೆ, ಬೆಳಿಗ್ಗೆ ಚಹಾವನ್ನು ತಯಾರಿಸುವಾಗ,  ಚಹಾ ಎಲೆಯ ಬದಲು ಈ ಪುಡಿಯನ್ನು ಬಳಸಬೇಕು. ಈ ಪುಡಿಯ ಚಹಾವನ್ನು ಪ್ರತಿದಿನ ಕುಡಿಯುವ ಮೂಲಕ,  ರಕ್ತದ ಸಕ್ಕರೆ ನಿಯಂತ್ರಣದಲ್ಲಿರಬಹುದು.

ರಕ್ತದಲ್ಲಿನ ಸಕ್ಕರೆಯನ್ನು(Blood Sugar) ಕಡಿಮೆ ಮಾಡುವುದು ಹೇಗೆ?
ಒಂದು ಅಧ್ಯಯನದ ಪ್ರಕಾರ, ನುಗ್ಗೆ ಎಲೆಗಳು ಉತ್ಕರ್ಷಣ ನಿರೋಧಕ ಕ್ಲೋರೋಜೆನಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ನೀವು ಸಕ್ಕರೆಯ ರೋಗಿಯಾಗಿದ್ದರೆ,  ಸಾಮಾನ್ಯ ಚಹಾದ ಬದಲು ನುಗ್ಗೆ ಎಲೆಗಳಿಂದ ಮಾಡಿದ ಚಹಾವನ್ನು ಕುಡಿಯಲು ಪ್ರಾರಂಭಿಸಬೇಕು.

ನುಗ್ಗೆ ಎಲೆಗಳು ರಕ್ತದೊತ್ತಡವನ್ನು(Blood pressure) ಸಹ ಕಡಿಮೆ ಮಾಡುತ್ತವೆ
ನುಗ್ಗೆಯ ಹಸಿರು ಎಲೆಗಳ ಸಾರಗಳು ಐಸೋಥಿಯೋಸಯನೇಟ್ ಮತ್ತು ನಿಯಾಜೈಮಿನಿನ್ ಅನ್ನು ಹೊಂದಿರುತ್ತವೆ. ಇವು ಅಪಧಮನಿಗಳು ದಪ್ಪವಾಗುವುದನ್ನು ತಡೆಯಲು ಸಹಾಯ ಮಾಡುವ ಸಂಯುಕ್ತಗಳಾಗಿವೆ, ಇದು ರಕ್ತದೊತ್ತಡವನ್ನು ಕಂಟ್ರೋಲ್ ನಲ್ಲಿಡುತ್ತದೆ.

ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತೆ 
ನುಗ್ಗೆ  ಎಲೆಗಳು ವಿಟಮಿನ್ ಸಿ ಅನ್ನು(Vitamin C) ಹೊಂದಿರುತ್ತವೆ, ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಕಾರಣವಾಗಿದೆ. ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ,  ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುವ ಮೂಲಕ  ಚರ್ಮ ಮತ್ತು ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

click me!