ಈ ಎಲೆಯ ರಸ ಶ್ವಾಸಕೋಶ ಸಮಸ್ಯೆ ಸೇರಿ ಹಲವಾರು ರೋಗಗಳಿಗೆ ರಾಮಬಾಣ

First Published | Nov 9, 2022, 2:18 PM IST

ಆಯುರ್ವೇದದಲ್ಲಿ ಅನೇಕ ಮರಗಳು, ಸಸ್ಯಗಳು ಮತ್ತು ಗಿಡಮೂಲಿಕೆಗಳನ್ನು ಸಾಕಷ್ಟು ಬಳಸಲಾಗುತ್ತದೆ ಮತ್ತು ಇವುಗಳಲ್ಲಿ ಒಂದು ಅರಳಿ ಎಲೆಗಳು ಸಹ ಒಂದು. ಅರಳಿ ಮರಕ್ಕೆ ಹಿಂದೂ ಧರ್ಮದಲ್ಲಿ ಮಹತ್ವವಾದ ಸ್ಥಾನವಿದೆ. ಇದನ್ನು ಪೂಜ್ಯನೀಯ ಮರವಾಗಿ ಕಾಣಲಾಗುತ್ತದೆ. ಇದು ಆಯುರ್ವೇದದಲ್ಲಿ ರಾಮಬಾಣದಂತೆ ಶ್ರೇಷ್ಟವಾಗಿದೆ. ಅದರ ಪ್ರಯೋಜನಗಳ ಬಗ್ಗೆ ಇಂದು ತಿಳಿಯೋಣ. 

ಹಿಂದೂ ಧರ್ಮದಲ್ಲಿ, ಅರಳಿ ಮರವನ್ನು (peepal tree) ದೇವ ವೃಕ್ಷ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ಪೂಜಿಸಲಾಗುತ್ತದೆ. ಈ ಮರದಲ್ಲಿ ಮುಕ್ಕೋಟಿ ದೇವರುಗಳು ನೆಲೆಸಿದ್ದಾರೆ ಎಂದು ಸಹ ಹೇಳಲಾಗುತ್ತೆ. ಇಷ್ಟೇ ಅಲ್ಲ, ಇದರಲ್ಲಿ ಅನೇಕ ಔಷಧೀಯ ಗುಣಗಳು ಸಹ ಕಂಡುಬರುತ್ತವೆ. ಈ ಕಾರಣದಿಂದಾಗಿ ಅದರ ಎಲೆಗಳನ್ನು ಸೇವಿಸುವುದು ಒಳ್ಳೆಯದು. 
 

ಅರಳಿ ಎಲೆಗಳಲ್ಲಿ (peepal leaves) ಯಾವ ಯಾವ ಪೋಷಕಾಂಶಗಳಿವೆ ಎಂದು ನಾವು ತಿಳಿದುಕೊಳ್ಳೋಣ, ಅವು ನಮ್ಮ ಇಡೀ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ನೀವು ಅರಳಿ ಎಲೆಗಳನ್ನು ಹೇಗೆ ಸೇವಿಸಬೇಕು ಮತ್ತು ಅದರ ಪ್ರಯೋಜನಗಳು ಯಾವುವು ಅನ್ನೋ ಕುರಿತಾಗಿ ಸಂಪೂರ್ಣ ಮಾಹಿತಿ ಇಲ್ಲಿದೆ.

Tap to resize

ಅರಳಿ ಎಲೆಗಳಲ್ಲಿರುವ ಪೋಷಕಾಂಶಗಳ ಬಗ್ಗೆ ಹೇಳುವುದಾದರೆ, ಇದು ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಪ್ರೋಟೀನ್ ಫೈಬರ್ ನಂತಹ ಅನೇಕ ಗುಣಲಕ್ಷಣಗಳನ್ನು ಹೊಂದಿದೆ. ಇಷ್ಟೇ ಅಲ್ಲ, ಅರಳಿ ಎಲೆಗಳು ಆಂಟಿ ಆಕ್ಸಿಡೆಂಟ್ (antioxidants), ಆಂಟಿ ಇಂಪ್ಲಿಮೆಂಟರಿ ಮತ್ತು ಬ್ಯಾಕ್ಟೀರಿಯಾ ವಿರೋಧಿ (anti bacterial) ಮತ್ತು ಆಂಟಿ ಬಯೋಟಿಕ್ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ, ಇದು ಅನೇಕ ರೋಗಗಳನ್ನು ತಪ್ಪಿಸಲು ನಮಗೆ ಸಹಾಯ ಮಾಡುತ್ತದೆ. ಅರಳಿ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ.

1. ನೀವು ಪ್ರತಿದಿನ ಬೆಳಿಗ್ಗೆ ಅರಳಿ ಎಲೆಗಳ ರಸವನ್ನು ಕುಡಿದರೆ, ಅದು ನಿಮ್ಮ ಶ್ವಾಸಕೋಶವನ್ನು ನಿರ್ವಿಷಗೊಳಿಸುತ್ತದೆ ಮತ್ತು ಶ್ವಾಸಕೋಶದಲ್ಲಿ ಊತದ ಸಮಸ್ಯೆಗಳು ಮತ್ತು ಉಸಿರಾಟದ ತೊಂದರೆ (breathing issues) ಇರುವವರಿಗೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಶ್ವಾಸಕೋಶದ ಸಮಸ್ಯೆಗೆ ಇದು ರಾಮಬಾಣವಾಗಿದೆ.

2. ಅರಳಿ ಎಲೆಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ, ಇದರಿಂದಾಗಿ ಋತುಮಾನದ ಕಾಯಿಲೆಗಳಿಂದ ಬಳಲುತ್ತಿರುವ ಜನರು ಅದರ ರಸ ಸೇವಿಸಬೇಕು. ವಿಶೇಷವಾಗಿ ಶೀತ, ಕೆಮ್ಮಿನಿಂದ ತೊಂದರೆಗೀಡಾದವರು ಪ್ರತಿದಿನ ಅರಳಿ ಎಲೆಯ ರಸ ಕುಡಿಯಬೇಕು.

3. ಅರಳಿ ಎಲೆಗಳ ರಸವನ್ನು ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆ (digestion problem) ನಿವಾರಣೆಯಾಗುತ್ತೆ. ನೀವು ಅತಿಸಾರದಿಂದ ಬಳಲುತ್ತಿದ್ದರೆ, ಅದರ ರಸವನ್ನು ಕುಡಿಯುವುದರಿಂದ ನಿಮ್ಮ ಸಮಸ್ಯೆಯನ್ನು ನಿವಾರಿಸಬಹುದು. ಇಷ್ಟೇ ಅಲ್ಲ, ಇದು ಗ್ಯಾಸ್, ಅಜೀರ್ಣ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯನ್ನು ಸಹ ನಿವಾರಿಸುತ್ತೆ.

4. ಅರಳಿ ಎಲೆಯು ನೈಸರ್ಗಿಕ ರಕ್ತ ಶುದ್ಧೀಕರಣ (blood purifier) ಮಾಡುತ್ತೆ, ಇದನ್ನು ಕುಡಿಯುವ ಮೂಲಕ ರಕ್ತವನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಅರಳಿ ಎಲೆಯ ರಸವನ್ನು ಸೇವಿಸುವ ಜನರಿಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಸಹ ಬರೋದಿಲ್ಲ.. ಅಲ್ಲದೆ, ಮೊಡವೆಗಳು ಮತ್ತು ಕಲೆಗಳನ್ನು ಮುಖದಿಂದ ತೆಗೆದು ಹಾಕಲು ಸಹಾಯ ಮಾಡುತ್ತೆ. 

5. ಅರಳಿ ಎಲೆಗಳನ್ನು ಸೇವಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು (blood sugar level) ಸಹ ನಿಯಂತ್ರಿಸಬಹುದು. ಅರಳಿ ಎಲೆಗಳು ಸಕ್ಕರೆ ಸ್ಪೈಕ್ ಗಳನ್ನು ನಿಯಂತ್ರಿಸುವ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ.

Latest Videos

click me!