Health Tips: ಓದುವ ಅಭ್ಯಾಸ ಮಾನಸಿಕ ಆರೋಗ್ಯಕ್ಕೆ ಬೆಸ್ಟ್ ಮೆಡಿಸಿನ್!

Published : Nov 08, 2022, 03:43 PM IST

ಪ್ರತಿಯೊಬ್ಬ ವ್ಯಕ್ತಿ ಓದುವ ಅಭ್ಯಾಸ ಹೊಂದಿರಬೇಕು ಎಂದು ಹೇಳಲಾಗುತ್ತೆ. ಪೋಷಕರು ಸಹ ಬಾಲ್ಯದಿಂದಲೇ ಮಕ್ಕಳಿಗೆ ಕಥೆಗಳನ್ನು ಓದಿಸುತ್ತಾರೆ ಮತ್ತು ಅವರಿಗೆ ಪುಸ್ತಕಗಳೊಂದಿಗೆ ಸ್ನೇಹಿತರನ್ನಾಗಿ ಮಾಡಿಸುತ್ತಾರೆ. ಆದರೆ ಓದೋದರಿಂದ ಮಕ್ಕಳಿಗೆ ಮಾತ್ರವಲ್ಲ, ವಯಸ್ಕರಿಗೂ ಪ್ರಯೋಜನವಾಗುತ್ತೆ. ಪುಸ್ತಕಗಳನ್ನು ಓದುವ ಅಭ್ಯಾಸವು ವ್ಯಕ್ತಿಯ ಜ್ಞಾನ ಹೆಚ್ಚಿಸುತ್ತೆ ಎಂದು ನಮಗೆಲ್ಲರಿಗೂ ತಿಳಿದಿದೆ. ಹಾಗೆ, ಇದು ವ್ಯಕ್ತಿಯ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ.

PREV
110
Health Tips: ಓದುವ ಅಭ್ಯಾಸ ಮಾನಸಿಕ ಆರೋಗ್ಯಕ್ಕೆ ಬೆಸ್ಟ್ ಮೆಡಿಸಿನ್!

ನೀವು ಒತ್ತಡಕ್ಕೆ ಒಳಗಾಗಿರಲಿ ಅಥವಾ ನಿಮ್ಮನ್ನು ಹೆಚ್ಚು ಆಶಾವಾದಿಯನ್ನಾಗಿ ಮಾಡಲು ಬಯಸಿದ್ರೆ, ನೀವು ಪುಸ್ತಕ ಓದುವ ಅಭ್ಯಾಸ(Reading habit) ಬೆಳೆಸುಕೊಳ್ಳಬೇಕು. ಓದುವುದು ಮಕ್ಕಳಿಗೆ ಮಾತ್ರವಲ್ಲ, ಹಿರಿಯರಿಗೂ ಸಹ ಉತ್ತಮ ಮಾನಸಿಕ ಆರೋಗ್ಯ ನೀಡಲು ಸಹಾಯ ಮಾಡುತ್ತೆ. ಓದುವಿಕೆಯು ನಿಮ್ಮ ಮೆದುಳಿನ ಮೇಲೆ ಯಾವ ಪರಿಣಾಮ ಬೀರುತ್ತೆ ಎಂಬುದನ್ನು ಇಲ್ಲಿ ತಿಳಿಯಿರಿ -

210

ಒತ್ತಡ(Stress) ದೂರವಾಗುತ್ತೆ 
ನಿಯಮಿತವಾಗಿ ಓದುವ ಜನರು ಕಡಿಮೆ ಒತ್ತಡದ ಮಟ್ಟಗಳನ್ನು ಹೊಂದಿರುತ್ತಾರೆ. ನೀವು ಪುಸ್ತಕ ಅಥವಾ ಕಥೆಯನ್ನು ಓದುವಾಗ, ನೀವು ಅದೇ ಕಥೆಯಲ್ಲಿ ಕಳೆದುಹೋಗುತ್ತೀರಿ ಮತ್ತು ಎಲ್ಲೋ ಒಂದು ಕಡೆ ನೀವು ಆ ಕಥೆಯೊಂದಿಗೆ ಸಂಪರ್ಕ ಹೊಂದುತ್ತೀರಿ. ಕಥೆಯಲ್ಲಿಯೇ ನೀವೂ ಜೀವಿಸಲು ಪ್ರಾರಂಭಿಸುವಿರಿ.

310

ಈ ಕಾರಣದಿಂದಾಗಿ ನೀವು ನಿಮ್ಮ ಸಮಸ್ಯೆಗಳನ್ನು ಸ್ವಲ್ಪ ಸಮಯದವರೆಗೆ ಮರೆತುಬಿಡುತ್ತೀರಿ. ಹಾಗಾಗಿ, ನಿಮ್ಮ ಒತ್ತಡವು ಕಡಿಮೆಯಾಗುತ್ತೆ. ಇಷ್ಟೇ ಅಲ್ಲ, ಓದಿದ ನಂತರ, ವ್ಯಕ್ತಿಯು ತನ್ನ ಕಲ್ಪನೆಗಳಲ್ಲಿ ಆ ಕಥೆ(Story) ಅಥವಾ ಕಥೆಯಲ್ಲಿ ಎಲ್ಲೋ ಅಲೆದಾಡುತ್ತಾನೆ, ಇದು ಅವನ ಒತ್ತಡದ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತೆ.

410

ಜೀವನವನ್ನು ನೋಡುವ ವಿಧಾನ ಬದಲಾಗುತ್ತೆ
ಓದುವ ಅಭ್ಯಾಸದ ಒಂದು ಉತ್ತಮ ಪ್ರಯೋಜನವೆಂದರೆ ಇದು ನೀವು ಜೀವನವನ್ನು ನೋಡುವ ವಿಧಾನವನ್ನು ಬದಲಾಯಿಸುತ್ತೆ. ಓದುವುದರಿಂದ ನಿಮ್ಮ ಜ್ಞಾನ ಭಂಡಾರ ಹೆಚ್ಚಾಗುತ್ತದೆ. ಇದರಿಂದ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಗುತ್ತೆ ಮತ್ತು ಇದು ನಿಮ್ಮ ಮಾನಸಿಕ ಆರೋಗ್ಯದ(mental helath) ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ. 

510

ಹೆಚ್ಚಿನ ಜನರ ದುಃಖ ಮತ್ತು ಒತ್ತಡಕ್ಕೆ ಮುಖ್ಯ ಕಾರಣವೆಂದರೆ ಅವರ ಆಲೋಚನೆ. ತಮ್ಮ ಜೀವನದಲ್ಲಿ ಯಾವಾಗಲೂ ನಕಾರಾತ್ಮಕತೆ(Negativity) ನೋಡುವ ಜನರು ಮಾನಸಿಕವಾಗಿ ವಿಚಲಿತರಾಗುತ್ತಾರೆ. ಆಗ ನೀವು ಸ್ಪೂರ್ತಿದಾಯಕ ಕಥೆಗಳನ್ನು ಓದಿದರೆ, ಪ್ರತಿ ಕತ್ತಲೆಯ ನಂತರ ಖಂಡಿತವಾಗಿಯೂ ಒಂದು ಬೆಳಕು ಇದೆ ಎಂದು ಅರ್ಥಮಾಡಿಕೊಳ್ಳುತ್ತೀರಿ. ಈ ರೀತಿಯಾಗಿ, ಓದುವ ಅಭ್ಯಾಸವು ವ್ಯಕ್ತಿಯ ಮನೋಭಾವವನ್ನು ಹೆಚ್ಚು ಆಶಾವಾದಿಯನ್ನಾಗಿ ಮಾಡುತ್ತೆ, ಇದರಿಂದಾಗಿ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತೆ.

610

ಆಲೋಚನಾ ವ್ಯಾಪ್ತಿಯನ್ನು ಹೆಚ್ಚಿಸುತ್ತೆ 
ಓದುವ ಅಭ್ಯಾಸವು ನಿಮ್ಮ ಆಲೋಚನೆಯ ವ್ಯಾಪ್ತಿಯನ್ನು ಹೆಚ್ಚಿಸುತ್ತೆ. ಸಾಮಾನ್ಯವಾಗಿ, ಜನರು ತಮ್ಮ ಜೀವನದಲ್ಲಿ ಪರಿಸ್ಥಿತಿ ಅಥವಾ ಸಮಸ್ಯೆ ಬಂದಾಗ ವಿಚಲಿತರಾಗುತ್ತಾರೆ ಮತ್ತು ಮಾನಸಿಕವಾಗಿ ತೊಂದರೆಗೊಳಗಾಗಲು ಪ್ರಾರಂಭಿಸುತ್ತಾರೆ. ಆದರೆ ಓದುವ ಅಭ್ಯಾಸ ಹೊಂದಿರುವ ಜನರು ಮಾನಸಿಕವಾಗಿ ಹೆಚ್ಚು ಸ್ಥಿರರಾಗಿರುತ್ತಾರೆ.

710

ಓದುವಿಕೆಯ ಕಾರಣದಿಂದಾಗಿ ಜನರ ಜ್ಞಾನ(Knowledge) ಸಾಕಷ್ಟು ಹೆಚ್ಚಾಗಿರುತ್ತೆ. ಹಾಗಾಗಿ, ಪರಿಸ್ಥಿತಿಯನ್ನು ಉತ್ತಮವಾಗಿ ಮೌಲ್ಯಮಾಪನ ಮಾಡಲು ಸಮರ್ಥನಾಗುತ್ತಾನೆ, ಏಕೆಂದರೆ ಓದುವ ಅಭ್ಯಾಸದಿಂದಾಗಿ, ಅವನ ಆಲೋಚನೆಯ ವ್ಯಾಪ್ತಿ ಹೆಚ್ಚಾಗುತ್ತೆ. ಅವನು ತನ್ನ ಪರಿಸ್ಥಿತಿಯ ಬಗ್ಗೆ ಮತ್ತು ಅದರಿಂದ ಹೊರಬರುವ ಪರಿಹಾರದ ಬಗ್ಗೆ ಎಲ್ಲೋ ಓದಿರುತ್ತಾನೆ. ಇದರಿಂದಾಗಿ ಒತ್ತಡಕ್ಕೆ ಒಳಗಾಗುವ ಬದಲು ಆ ಸಮಸ್ಯೆಯಿಂದ ಹೇಗೆ ಹೊರ ಬರೋದು ಅನ್ನೋದನ್ನು ತಿಳಿದಿರುತ್ತಾನೆ.

810

ವಿಶ್ರಾಂತಿ(Rest) ಸಿಗುತ್ತೆ
ಉತ್ತಮ ಮಾನಸಿಕ ಆರೋಗ್ಯಕ್ಕಾಗಿ, ಪ್ರತಿದಿನ ಸ್ವಲ್ಪ ಸಮಯ ವಿಶ್ರಾಂತಿ ಪಡೆಯೋದು ಅತ್ಯಗತ್ಯ. ಸಾಮಾನ್ಯವಾಗಿ ಜನರು ಮೊಬೈಲ್ ಅಥವಾ ಟಿವಿಯನ್ನು ವಿಶ್ರಾಂತಿಗಾಗಿ ಬಳಸ್ತಾರೆ, ಆದರೆ ಹೆಚ್ಚು ಸ್ಕ್ರೀನ್ ಟೈಮ್ ಕಣ್ಣು ಮತ್ತು ಮಾನಸಿಕ ಆರೋಗ್ಯವನ್ನು ಹಾನಿಗೊಳಿಸಬಹುದು. ಹಾಗಾಗಿ, ಪ್ರತಿದಿನ ಓದುವ ಅಭ್ಯಾಸ ಬೆಳೆಸಿಕೊಂಡರೆ, ಅದು ಖಂಡಿತವಾಗಿಯೂ ಉತ್ತಮ ವಿಶ್ರಾಂತಿ ತಂತ್ರ. ತನ್ನ ನೆಚ್ಚಿನ ಪುಸ್ತಕವನ್ನು ಓದುವಾಗ, ವ್ಯಕ್ತಿಯು ತುಂಬಾ ಒಳ್ಳೆಯ ಮತ್ತು ನಿರಾಳತೆಯನ್ನು ಅನುಭವಿಸುತ್ತಾನೆ.

910

ನಿದ್ರೆಯ(Sleep) ಮೇಲೆ ಧನಾತ್ಮಕ ಪರಿಣಾಮ
ಇದು ಓದುವ ಅಭ್ಯಾಸದ ಪ್ರಯೋಜನವೂ ಆಗಿದೆ. ಒಬ್ಬ ವ್ಯಕ್ತಿ ಮಲಗುವ ಮೊದಲು ಏನನ್ನಾದರೂ ಓದಬೇಕು ಎಂದು ಹೇಳಲಾಗುತ್ತೆ. ಇದನ್ನು ಮಾಡೋದರಿಂದ, ವ್ಯಕ್ತಿ ತುಂಬಾ ಒಳ್ಳೆಯ ಮತ್ತು ಆಳವಾದ ನಿದ್ರೆ ಪಡೆಯುತ್ತಾನೆ. ಉತ್ತಮ ಮಾನಸಿಕ ಆರೋಗ್ಯಕ್ಕೆ ಉತ್ತಮ ನಿದ್ರೆ ಪಡೆಯೋದು ಬಹಳ ಮುಖ್ಯ.

1010

ಪುಸ್ತಕ ಓದುವುದೆಂದರೆ ಒಂದೇ ಸಲಕ್ಕೆ ಇಡೀ ಪುಸ್ತಕ ಓದಿ ಮುಗಿಸುವುದಲ್ಲ, ಬದಲಾಗಿ ಕೆಲವು ಪುಟಗಳನ್ನು ಓದಿದರೆ ಸಾಕು, ಮನಸು ನಿರಾಳವಾಗುತ್ತೆ. ಆದುದರಿಂದ ನೀವು ಪ್ರತಿದಿನ ಓದಲು ಸ್ವಲ್ಪ ಸಮಯ ಮೀಸಲಿಡಿ ಮತ್ತು ನಿಮ್ಮ ಮಾನಸಿಕ ಆರೋಗ್ಯವನ್ನು ಇನ್ನೂ ಉತ್ತಮವಾಗಿ ಸುಧಾರಿಸಿಕೊಳ್ಳಿ. ಉತ್ತಮ ಮೆಂಟಲ್ ಹೆಲ್ತ್ ನಿಮ್ಮದಾಗಿಸಿಕೊಳ್ಳಿ.  

Read more Photos on
click me!

Recommended Stories