ರಾತ್ರಿಯಲ್ಲಿ ಜಿಮ್ ಮಾಡ್ತೀರಾ? ಮಾಡೋ ಮುನ್ನ ಇದನ್ನೊಮ್ಮೆ ಓದಿ

First Published | Nov 7, 2022, 5:39 PM IST

ನಿಮಗೂ ಕೂಡ ಫಿಟ್ ಆಗಿರೋದ್ರಂತೆ ತುಂಬಾನೆ ಇಷ್ಟಾನಾ? ಅದಕ್ಕಾಗಿ ನೀವು ಏನು ಮಾಡ್ತೀರ? ಜಿಮ್, ಎಕ್ಸರ್ ಸೈಜ್, ವರ್ಕೌಟ್ ಎಲ್ಲಾನೂ ಮಾಡ್ತೀರಾ? ಇದೆಲ್ಲವೂ ಒಳ್ಳೆಯದೇ… ಆದರೆ ನೀವು ಯಾವ ಸಮಯದಲ್ಲಿ ಇದನ್ನ ಮಾಡ್ತೀರಿ? ಬೆಳಗ್ಗೆ ಮಾಡಿದ್ರೆ ಓಕೆ… ಆದ್ರೆ ಒಂದು ವೇಳೆ ನೀವು ರಾತ್ರಿ ಜಿಮ್ ಮಾಡುತ್ತಿದ್ದರೆ, ಅಲರ್ಟ್ ಆಗಿರಿ. ಯಾಕೆಂದರೆ ಇದು ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಹೌದು, ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯಿರಿ….
 

ಫಿಟ್ ಆಗಿರಲು ವರ್ಕೌಟ್ (workout) ಮಾಡುವುದು ಬಹಳ ಮುಖ್ಯ. ಆದರೆ ಇಂದಿನ ವೇಗದ ಜೀವನದಲ್ಲಿ, ಹೆಚ್ಚಿನ ಜನರಿಗೆ ವ್ಯಾಯಾಮ ಮಾಡಲು ಅಥವಾ ಜಿಮ್ ಗೆ ಹೋಗಲು ಸಮಯವಿರೋದಿಲ್ಲ. ಆದಾಗ್ಯೂ, ಫಿಟ್ನೆಸ್ ಫ್ರೀಕ್ ಆಗಿರುವ ಜನರು ಹೇಗೋ ತಮಗಾಗಿ ಸಮಯ ಮಾಡಿಕೊಳ್ಳುತ್ತಾರೆ. ಬೆಳಿಗ್ಗೆ ಜಿಮ್ ಗೆ ಹೋಗಲು ಸಾಧ್ಯವಾಗದಿದ್ದರೆ, ಅವರು ರಾತ್ರಿಯಲ್ಲಿ ವ್ಯಾಯಾಮ ಮಾಡುತ್ತಾರೆ.

ಆದರೆ ನಿಮಗೆ ಗೊತ್ತಾ? ರಾತ್ರಿ ಹೊತ್ತು ಜಿಮ್  (gym at night) ಮಾಡುವುದು ನಿಮಗೆ ಸಮಸ್ಯೆಯಾಗಿ ಕಂಡುಬರದಿರಬಹುದು, ಆದರೆ ವಾಸ್ತವವಾಗಿ, ರಾತ್ರಿಯಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡೋದು ನೀವು ಯೋಚಿಸುವಷ್ಟು ಉತ್ತಮ ಆಯ್ಕೆಯಲ್ಲ. ರಾತ್ರಿಯಲ್ಲಿ ಜಿಮ್ಮಿಂಗ್ ಮಾಡುವುದರಿಂದ ಅನೇಕ ಅನಾನುಕೂಲತೆಗಳಿವೆ, ಅದರ ಬಗ್ಗೆ ಈ ಲೇಖನದಲ್ಲಿ ನಿಮಗೆ ಹೇಳುತ್ತಿದ್ದೇವೆ-

Tap to resize

ನಿದ್ರೆಯ ಮೇಲೆ ಪರಿಣಾಮ ಬೀರಬಹುದು
ರಾತ್ರಿ ಜಿಮ್ ಗೆ ಹೋದರೆ, ಖಂಡಿತವಾಗಿಯೂ ತಡರಾತ್ರಿಯವರೆಗೆ ನಿದ್ರಾಹೀನತೆಯ ಸಮಸ್ಯೆಯನ್ನು ಹೊಂದಿರುತ್ತೀರಿ. ನೀವು ಜಿಮ್ ನಲ್ಲಿ ವರ್ಕೌಟ್ ಮಾಡಿದಾಗ, ಅದು ಹೃದಯ ಬಡಿತದ ದರವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಸ್ನಾಯುಗಳಲ್ಲಿನ ಆಮ್ಲಜನಕದ ಮಟ್ಟ (oxygen level) ಮತ್ತು ದೇಹದಲ್ಲಿ ರಕ್ತ ಪರಿಚಲನೆ ವೇಗಗೊಳ್ಳುತ್ತದೆ. 

ದೇಹದಲ್ಲಿ ಆಮ್ಲಜನಕ, ರಕ್ತ ಪರಿಚಲನೆ (blood circulation) ವೇಗವಾದಾಗ, ವ್ಯಕ್ತಿಯು ಹೆಚ್ಚು ಆಕ್ಟೀವ್ ಆಗಿರುತ್ತಾನೆ.. ಇದು ಅವನ ನಿದ್ರೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ, ಏಕೆಂದರೆ ಅವನು ಬೇಗನೆ ನಿದ್ರೆ ಮಾಡುವುದಿಲ್ಲ.ಇದರಿಂದಾಗಿ ನಿದ್ರೆಯ ಕೊರತೆ ಉಂಟಾಗುತ್ತೆ. ಸರಿಯಾಗಿ ನಿದ್ರೆ ಮಾಡದೇ ಇದ್ದರೆ, ವ್ಯಕ್ತಿಯು ಇತರ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ವ್ಯಾಯಾಮ ಸರಿಯಾಗಿ ಮಾಡಲಾಗೋದಿಲ್ಲ
ರಾತ್ರಿಯಲ್ಲಿ ನಿಮಗೆ ಎಲ್ಲಿಗೂ ಹೋಗಲು ಇಲ್ಲದೇ ಇರಬಹುದು, ಅಲ್ಲದೇ ವ್ಯಾಯಾಮ ಮಾಡಲು ಸಹ ನಿಮ್ಮ ಬಳಿ ಸಾಕಷ್ಟು ಸಮಯವಿರುತ್ತೆ. ಆದರೆ ರಾತ್ರಿಯಲ್ಲಿ ಜಿಮ್ ಗೆ ಹೋಗುವ ಜನರ ವರ್ಕೌಟ್ ರೂಟಿನ್ (workout routine) ಸರಿಯಾಗಿರೋದಿಲ್ಲ. ಇದಕ್ಕೆ ಅನೇಕ ಕಾರಣಗಳಿರಬಹುದು. 

ಮೊದಲನೆಯದಾಗಿ, ವ್ಯಕ್ತಿಯು ಇಡೀ ದಿನದ ಕೆಲಸದ ನಂತರ ತುಂಬಾ ದಣಿದಿರುತ್ತಾನೆ, ಆದ್ದರಿಂದ ಅವನು ಜಿಮ್ ಬಿಟ್ಟುಬಿಡುತ್ತಾನೆ ಅಥವಾ ಸರಿಯಾಗಿ ವರ್ಕೌಟ್ ಮಾಡೋದಿಲ್ಲ. ಅಲ್ಲದೆ, ಕಚೇರಿಯಿಂದ ಹಿಂದಿರುಗಿದ ನಂತರ, ನಿಮಗೆ ತುಂಬಾ ಹಸಿವಾಗಿರುತ್ತೆ, ಹಾಗಾಗಿ ನೀವು ತುಂಬಾನೆ ತಿನ್ನುತ್ತೀರಿ. ಹೆವಿ ಆಹಾರ ಸೇವಿಸಿದ ನಂತರವೂ, ಜಿಮ್ಮಿಂಗ್ (gymming) ಮಾಡೋದು ಆರೋಗ್ಯಕ್ಕೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ.  

ಸ್ನಾಯುಗಳ ಮೇಲೆ ವ್ಯತಿರಿಕ್ತ ಪರಿಣಾಮ 
ಸಾಮಾನ್ಯವಾಗಿ, ಜನರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಾರೆ, ಇದರಿಂದ ಅವರ ಮಸಲ್ಸ್ ಬಿಲ್ಡ್ ಆಗುತ್ತೆ ಮತ್ತು ದೇಹವು ಹೆಚ್ಚು ಟೋನ್ ಆಗಿ ಕಾಣುತ್ತದೆ. ಆದರೆ ನೀವು ರಾತ್ರಿ ಜಿಮ್ ನಲ್ಲಿ ಹೆವಿ ವ್ಯಾಯಾಮ ಮಾಡುವ ಅಭ್ಯಾಸ ಹೊಂದಿದ್ದರೆ,  ಇದರಿಂದ ಸ್ನಾಯುಗಳಿಗೆ ಹಾನಿ ಮಾಡುತ್ತಿದ್ದೀರಿ. 

ಹೆವಿ ವರ್ಕೌಟ್ ಮಾಡಿದ ನಂತರ ಸ್ನಾಯುಗಳು ಒಡೆಯುತ್ತವೆ ಮತ್ತು ಅವುಗಳನ್ನು ಸರಿಪಡಿಸಲು ವಿಶ್ರಾಂತಿಯ ಅಗತ್ಯವಿದೆ. ಆದರೆ ರಾತ್ರಿಯಲ್ಲಿ ಜಿಮ್ಮಿಂಗ್ ನಿದ್ರೆಯ ಮೇಲೆ ಪರಿಣಾಮ (effect on sleep) ಬೀರುತ್ತದೆ, ಇದು ವ್ಯಕ್ತಿಗೆ ಸಾಕಷ್ಟು ವಿಶ್ರಾಂತಿಯನ್ನು ನೀಡುವುದಿಲ್ಲ. ಇದು ಸ್ನಾಯುಗಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗುತ್ತೆ.

ದೇಹದ ನೋವಿನ ಸಮಸ್ಯೆ 
ವ್ಯಾಯಾಮದ ನಂತರ ಅಥವಾ ಸಾಮಾನ್ಯವಾಗಿ ನೀವು ಆಗಾಗ್ಗೆ ದೇಹದ ನೋವಿನ ಸಮಸ್ಯೆ ಹೊಂದಿದ್ದರೆ, ಅದು ರಾತ್ರಿಯಲ್ಲಿ ನಿಮ್ಮ ವ್ಯಾಯಾಮದ ಕಾರಣವಾಗಿರಬಹುದು. ರಾತ್ರಿಯಲ್ಲಿ ಜಿಮ್ನಲ್ಲಿ ಹೆವಿ ವರ್ಕೌಟ್ ಮಾಡುವ ಜನರ ನರವ್ಯೂಹವು ಸಾಕಷ್ಟು ಪ್ರಚೋದಿಸಲ್ಪಡುತ್ತದೆ. ಈ ಕಾರಣದಿಂದಾಗಿ ನರವ್ಯೂಹವು ಸಾಮಾನ್ಯವಾಗಿರಲು ಸಾಕಷ್ಟು ಸಮಯ ಬೇಕಾಗುತ್ತದೆ. ಇದು ವ್ಯಕ್ತಿಯ ನಿದ್ರೆಯ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲದೆ, ವ್ಯಕ್ತಿಯು ಸ್ನಾಯುಗಳು ಮತ್ತು ದೇಹದ ನೋವಿನ ಸಮಸ್ಯೆ ಸಹ ಎದುರಿಸಬೇಕಾಗಬಹುದು. ಆದ್ದರಿಂದ, ನೀವು ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದರೂ, ಲಘು ವ್ಯಾಯಾಮ ಮಾಡಿ

ಇನ್ನೂ ಕೂಡ ನೀವು ಸಹ ರಾತ್ರಿ ಜಿಮ್ ನಲ್ಲಿ ವರ್ಕೌಟ್ ಮಾಡಲು ಬಯಸಿದರೆ, ಇದನ್ನು ಊಟ ಮಾಡಿದ ತಕ್ಷಣ ಅಥವಾ ಮಲಗುವ ಮೊದಲು ಮಾಡಬೇಡಿ. ವರ್ಕೌಟ್ ಸಮಯವನ್ನು ಖಚಿತಪಡಿಸಿಕೊಳ್ಳುವ ಮೊದಲು ನೀವು ಈ ಬಗ್ಗೆ ನಿಮ್ಮ ತರಬೇತುದಾರರೊಂದಿಗೆ ಮಾತನಾಡಬೇಕು.

Latest Videos

click me!