Health Tips: ಕಿಡ್ನಿ ಸ್ಟೋನ್ ನಿವಾರಿಸಲು ಡಯಟ್ ನಲ್ಲಿ ಈ ಆಹಾರ ಸೇವಿಸಿ

First Published | Mar 10, 2023, 7:00 AM IST

ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದು, ರಕ್ತ ಮತ್ತು ದೇಹದಲ್ಲಿ ತುಂಬಿದ ವಿಷಕಾರಿ ವಸ್ತುಗಳನ್ನು ತೆಗೆದುಹಾಕೋದು ಇದರ ಕೆಲಸ. ಪ್ರತಿದಿನ ಸೇವಿಸುವ ಕೆಲವು ಆಹಾರಗಳು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಕೆಲಸ ಮಾಡುತ್ತವೆ. ಅವುಗಳ ಬಗ್ಗೆ ಇಲ್ಲಿ ತಿಳಿಯೋಣ.  

ವಿಶ್ವ ಮೂತ್ರಪಿಂಡ ದಿನವನ್ನು(World Kidney Day) ಮಾರ್ಚ್ 9ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ, ಅಂದರೆ ಮಾರ್ಚ್ 9 ರಂದು. ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಅವುಗಳನ್ನು ಆರೋಗ್ಯಕರವಾಗಿಡುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತೆ. ಕಿಡ್ನಿ ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಈ ಸಣ್ಣ ಅಂಗವು ಪ್ರತಿದಿನ ಕಾಲು ಭಾಗದಷ್ಟು ರಕ್ತವನ್ನು ಫಿಲ್ಟರ್ ಮಾಡುತ್ತೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ...

ಮೂತ್ರಪಿಂಡದ(Kidney) ಕೆಲಸವು ದೇಹದಿಂದ ತ್ಯಾಜ್ಯ ನೀರು, ದ್ರವಗಳನ್ನು ತೆಗೆದುಹಾಕೋದು, ವಿಷಕಾರಿ ಮತ್ತು ಕೊಳಕು ವಸ್ತುಗಳನ್ನು ತೆಗೆದುಹಾಕೋದು. ತಿನ್ನೋದು ಮತ್ತು ಕುಡಿಯುವ ಮೂಲಕ, ಅನೇಕ ರೀತಿಯ ಕೊಳಕು ವಸ್ತುಗಳು ದೇಹಕ್ಕೆ ಹೋಗುತ್ತವೆ, ಇದು ಮೂತ್ರಪಿಂಡಗಳನ್ನು ಹಾನಿಗೊಳಿಸುತ್ತೆ, ಮೂತ್ರಪಿಂಡದ ಕಲ್ಲುಗಳನ್ನು ಉಂಟುಮಾಡುತ್ತೆ, ಮೂತ್ರಪಿಂಡದ ಕಲ್ಲುಗಳಲ್ಲಿ ರೂಪುಗೊಳ್ಳುವ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತೆ.

Tap to resize

ಕಿಡ್ನಿ ಸ್ವಚ್ಛಗೊಳಿಸೋದು(Clean) ಏಕೆ ಮುಖ್ಯ?
ಮೂತ್ರಪಿಂಡಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಲು, ಅವುಗಳನ್ನು ಸ್ವಚ್ಛಗೊಳಿಸೋದು ಅವಶ್ಯಕ. ದೇಹದಲ್ಲಿ ಸಂಗ್ರಹವಾಗೋ ಕೊಳಕು ಮತ್ತು ವಿಷಕಾರಿ ವಸ್ತುಗಳು ರಕ್ತವನ್ನು ಕೊಳಕಾಗಿಸುತ್ತೆ ಮತ್ತು ಮೂತ್ರಪಿಂಡಗಳ ಕೆಲಸದ ಮೇಲೆ ಪರಿಣಾಮ ಬೀರುತ್ತೆ. ಇದು ಉರಿಯೂತ, ಕಲ್ಲು, ಯೂರಿಕ್ ಆಮ್ಲಕ್ಕೂ ಕಾರಣವಾಗುತ್ತೆ. ಇದು ಕಿಡ್ನಿ ಇನ್ಫೆಕ್ಷನ್ ಅಥವಾ ಯುಟಿಐ ತಪ್ಪಿಸಲು ನಿಮಗೆ ಸಹಾಯ ಮಾಡುತ್ತೆ. ಹಾಗಾಗಿ ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸೋದು ಹಾರ್ಮೋನುಗಳ ಅಸಮತೋಲನವನ್ನು ಸರಿಪಡಿಸುತ್ತೆ ಮತ್ತು ಮೊಡವೆ, ಎಸ್ಜಿಮಾ ಮತ್ತು ದದ್ದುಗಳಂತಹ ಚರ್ಮದ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತೆ.
 

ಈ ಮನೆಮದ್ದು ಉಪಯೋಗಿಸಿ ಕಿಡ್ನಿ ಕ್ಲೀನ್ ಆಗಿರುವಂತೆ ಕಾಪಾಡಿ
  
ಆಪಲ್ ಸೈಡರ್ ವಿನೆಗರ್(Apple Vinegar)
ಅಮೆರಿಕದ ಅಡ್ವಾನ್ಸ್ಡ್ ಯುರಾಲಜಿ ಇನ್ಸ್ಟಿಟ್ಯೂಟ್ ಪ್ರಕಾರ, ಆಪಲ್ ಸೈಡರ್ ವಿನೆಗರ್ ಮೂತ್ರಪಿಂಡಗಳ ಆಕ್ಸಿಡೇಟಿವ್ ಒತ್ತಡ ತಡೆಗಟ್ಟುವಲ್ಲಿ ಪರಿಣಾಮಕಾರಿ. ಇದು ದೇಹದಲ್ಲಿ ಉತ್ಕರ್ಷಣ ನಿರೋಧಕಗಳ ಮಟ್ಟವನ್ನು ಹೆಚ್ಚಿಸುತ್ತೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತೆ, ಇದು ಮೂತ್ರಪಿಂಡದ ಆರೋಗ್ಯವನ್ನು ಉತ್ತಮವಾಗಿರಿಸುತ್ತೆ. ಆಪಲ್ ಸೈಡರ್ ವಿನೆಗರ್ ಸಿಟ್ರಿಕ್ ಆಮ್ಲವನ್ನು ಹೊಂದಿರುತ್ತೆ, ಇದು ಮೂತ್ರಪಿಂಡದ ಕಲ್ಲುಗಳನ್ನು ಕರಗಿಸುತ್ತೆ. 

ರಾಜ್ಮಾ(Rajma)
ಮೂತ್ರಪಿಂಡಗಳಂತೆ ಕಾಣುವ ರಾಜ್ಮಾ, ಕಿಡ್ನಿಗಳಿಂದ ತ್ಯಾಜ್ಯ ಮತ್ತು ಜೀವಾಣುಗಳನ್ನು ತೆಗೆದುಹಾಕುವ ಕೆಲಸ ಮಾಡುತ್ತೆ. ಕಲ್ಲುಗಳಿಗೆ ಚಿಕಿತ್ಸೆ ನೀಡಲು ಸಹ ಸಹಾಯ ಮಾಡುತ್ತೆ. ರಾಜ್ಮಾ ವಿಟಮಿನ್ ಬಿ, ಫೈಬರ್ ಮತ್ತು ಅನೇಕ ಖನಿಜಗಳಿಂದ ತುಂಬಿದೆ, ಇದು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಮತ್ತು ಮೂತ್ರನಾಳದ ಕೆಲಸವನ್ನು ಉತ್ತೇಜಿಸಲು ಸಹಾಯ ಮಾಡುತ್ತೆ.  
 

ನಿಂಬೆ ರಸ(Lemon juice)
ನಿಂಬೆ ರಸವು ಆಮ್ಲೀಯವಾಗಿದೆ ಮತ್ತು ಮೂತ್ರದಲ್ಲಿ ಸಿಟ್ರೇಟ್ ಮಟ್ಟ ಹೆಚ್ಚಿಸುತ್ತೆ. ಮೂತ್ರಪಿಂಡದ ಕಲ್ಲುಗಳು ರೂಪುಗೊಳ್ಳದಂತೆ ತಡೆಯಲು ಇದು ಕಾರಣ. ನಿಂಬೆ ರಸವು ರಕ್ತವನ್ನು ಫಿಲ್ಟರ್ ಮಾಡುತ್ತೆ ಮತ್ತು ಇತರ ಜೀವಾಣುಗಳನ್ನು ಹೊರಹಾಕುತ್ತೆ. ಇದು ಕ್ಯಾಲ್ಸಿಯಂ ಆಕ್ಸಲೇಟ್ ಕ್ರಿಸ್ಟಲ್‌ಗಳನ್ನೂ ಕರಗಿಸುತ್ತೆ, ಇದು ಕಿಡ್ನಿ ಸ್ಟೋನ್ ಗೆ ದೊಡ್ಡ ಕಾರಣ.

ಕಲ್ಲಂಗಡಿ(Watermelon)
ಕಲ್ಲಂಗಡಿಯನ್ನು ಸೌಮ್ಯ ಮೂತ್ರವರ್ಧಕ ಹಣ್ಣು ಎಂದು ಪರಿಗಣಿಸಲಾಗುತ್ತೆ. ಇದು ಮೂತ್ರಪಿಂಡಗಳನ್ನು ಹೈಡ್ರೇಟ್ ಮಾಡುತ್ತೆ ಮತ್ತು ಶುದ್ಧೀಕರಿಸುತ್ತೆ. ಇದು ಲೈಕೋಪೀನ್‌ನಿಂದ ತುಂಬಿದೆ ಮತ್ತು ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸುತ್ತೆ. ಪೊಟ್ಯಾಷಿಯಮ್ ಕಲ್ಲಂಗಡಿಯಲ್ಲಿಯೂ ಕಂಡುಬರುತ್ತೆ, ಇದು ಮೂತ್ರದ ಆಮ್ಲೀಯತೆಯನ್ನು ನಿಯಂತ್ರಿಸಿ, ಕಲ್ಲುಗಳ ರಚನೆಯನ್ನು ತಡೆಯುತ್ತೆ.

ಡಿ.

ದಾಳಿಂಬೆ(Pomegranate)
ದಾಳಿಂಬೆ ರಸ ಮತ್ತು ಬೀಜಗಳೆರಡೂ ಹೆಚ್ಚಿನ ಪ್ರಮಾಣದ ಪೊಟ್ಯಾಷಿಯಮ್ ಹೊಂದಿದೆ, ಆದ್ದರಿಂದ ಇದು ಕಲ್ಲುಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿ. ಪೊಟ್ಯಾಷಿಯಮ್ ಮೂತ್ರದ ಆಮ್ಲೀಯತೆಯನ್ನು ಕಡಿಮೆ ಮಾಡುತ್ತೆ, ಅದರ ಆಸ್ಟ್ರಿಜೆಂಟ್ ಗುಣಲಕ್ಷಣಗಳಿಂದಾಗಿ ಕಲ್ಲುಗಳ ರಚನೆಯನ್ನು ತಡೆಯುತ್ತೆ , ಖನಿಜಗಳ ಕ್ರಿಸ್ಟಲೀಕರಣವನ್ನು ಕಡಿಮೆ ಮಾಡಿ,  ಮೂತ್ರಪಿಂಡಗಳಿಂದ ವಿಷವನ್ನು ಹೊರಹಾಕುತ್ತೆ.

tulsi

ತುಳಸಿ ಎಲೆ(Tulasi leaves)
ತುಳಸಿ ಮೂತ್ರವರ್ಧಕ ಗಿಡಮೂಲಿಕೆಯಾಗಿದೆ. ಇದು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿ, ಮೂತ್ರಪಿಂಡದ ಕಾರ್ಯನಿರ್ವಹಣೆಯನ್ನು ಸುಧಾರಿಸುತ್ತೆ. ತುಳಸಿ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತೆ ಮತ್ತು ಅದರ ಆರೋಗ್ಯವನ್ನು ಸುಧಾರಿಸುತ್ತೆ. ಇದರ ಸಾರಭೂತ ತೈಲ ಮತ್ತು ಅಸಿಟಿಕ್ ಆಮ್ಲವು ಕಲ್ಲುಗಳನ್ನು ಒಡೆಯುತ್ತೆ  ಮತ್ತು ಸುಲಭವಾಗಿ ತೆಗೆದುಹಾಕುತ್ತೆ.

ಖರ್ಜೂರ (Dates)
ಖರ್ಜೂರವನ್ನು ಇಡೀ ದಿನ ನೀರಿನಲ್ಲಿ ನೆನೆಸಿ ಸೇವಿಸೋದು ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತೆ. ಖರ್ಜೂರದಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಕಲ್ಲುಗಳ ಅಪಾಯ ಕಡಿಮೆ ಮಾಡಲು ಸಹಾಯ ಮಾಡುತ್ತೆ. ಖರ್ಜೂರದಲ್ಲಿರುವ ಮೆಗ್ನೀಷಿಯಮ್ ಅಂಶವು ಮೂತ್ರಪಿಂಡಗಳನ್ನು ಕ್ಲೀನ್ ಮಾಡುತ್ತೆ.

ಡಾಂಡೇಲಿಯನ್
ಡಾಂಡೇಲಿಯನ್ ಬೇರಿನಿಂದ ತಯಾರಿಸಿದ ಚಹಾದ(Tea) ಸೇವನೆಯು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತೆ. ಡಾಂಡೇಲಿಯನ್ ಕಿಡ್ನಿಗಳಿಗೆ ಟಾನಿಕ್ ಆಗಿ ಕೆಲಸ ಮಾಡುತ್ತೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ಮೂತ್ರಪಿಂಡಗಳನ್ನು ತಲುಪುವ ತ್ಯಾಜ್ಯವನ್ನು ಕಡಿಮೆ ಮಾಡಲು ಇದು ಪಿತ್ತರಸ ಉತ್ಪಾದನೆಯನ್ನು ಉತ್ತೇಜಿಸುತ್ತೆ. ಇದಲ್ಲದೆ, ಕ್ರಾನ್ಬೆರಿ ಮತ್ತು ಬೀಟ್ರೂಟ್ ರಸವು ಸಹ ಪ್ರಯೋಜನಕಾರಿಯಾಗಿದ್ದು, ಮೂತ್ರಪಿಂಡಗಳ ಕೊಳೆಯನ್ನು ತೆಗೆದುಹಾಕುತ್ತೆ ಮತ್ತು ಕಿಡ್ನಿ ಸ್ಟೋನ್ ರಚನೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತೆ .

Latest Videos

click me!