ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದಲ್ಲಿ ಅಡೆನೊವೈರಸ್ (adevnovirus) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಹಿಂದೆ, ಅನೇಕ ಮಕ್ಕಳು ಈ ರೋಗಕ್ಕೆ ಬಲಿಯಾಗಿದ್ದಾರೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಕೆಲ ದಿನಗಳ ಹಿಂದೆ ಇಲ್ಲಿ ಒಂದೇ ದಿನದಲ್ಲಿ 5 ಮಕ್ಕಳು ಸಾವನ್ನಪ್ಪಿದ್ದಾರೆ, ಅದರಲ್ಲಿ ಕೇವಲ 2 ಮಕ್ಕಳಿಗೆ ಮಾತ್ರ ಈ ಕಾಯಿಲೆ ಇರುವುದು ದೃಢಪಟ್ಟಿದೆ. ಈ ಘಟನೆಯ ನಂತರ, ಆರೋಗ್ಯ ಇಲಾಖೆ (health department) ಚಿಂತೆಗೀಡಾಗಿದೆ. ವಿಶೇಷವೆಂದರೆ, ಈ ಎಲ್ಲಾ ಮಕ್ಕಳು ಉಸಿರಾಟದ ತೊಂದರೆಗಳನ್ನು ಹೊಂದಿದ್ದರು ಮತ್ತು ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದರು. ಮಕ್ಕಳ ಸಾವಿಗೆ ಕಾರಣವಾಗುತ್ತಿರುವ ಈ ಅಡೆನೊವೈರಸ್ ಎಂದರೇನು, ಅದು ಹೇಗೆ ಸಂಭವಿಸುತ್ತದೆ ಮತ್ತು ಅದರ ರೋಗಲಕ್ಷಣಗಳು ಯಾವುವು ಅನ್ನೋದನ್ನು ತಿಳಿಯೋಣ.