World Kidney Day : ಯಾರಿಗೆ ಕಿಡ್ನಿ ಕಸಿ ಮಾಡುವ ಅಗತ್ಯವಿರುತ್ತೆ?

First Published | Mar 9, 2023, 1:19 PM IST

ಮೂತ್ರಪಿಂಡ ವೈಫಲ್ಯದಿಂದಾಗಿ, ಕಸಿಯ ಅಗತ್ಯವು ವೇಗವಾಗಿ ಹೆಚ್ಚುತ್ತಿದೆ. ದೇಹದ ಈ ಪ್ರಮುಖ ಅಂಗದ ಮಹತ್ವವನ್ನು ಎತ್ತಿ ತೋರಿಸಲು ಪ್ರತಿವರ್ಷ ಮಾರ್ಚ್ ಎರಡನೇ ಗುರುವಾರದಂದು ವಿಶ್ವ ಮೂತ್ರಪಿಂಡ ದಿನವನ್ನು ಆಚರಿಸಲಾಗುತ್ತದೆ. ಮೂತ್ರ ಪಿಂಡದ ಕಸಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

ನಮ್ಮ ಮೂತ್ರಪಿಂಡಗಳು (kidney) ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಫಿಲ್ಟರ್ ಮಾಡಿ ಮೂತ್ರದ ಮೂಲಕ ದೇಹದಿಂದ ತೆಗೆದು ಹಾಕುತ್ತವೆ. ಮೂತ್ರಪಿಂಡಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ, ಇದು ಎಲೆಕ್ಟ್ರೋಲೈಟ್ ಅನ್ನು ಸಮತೋಲನದಲ್ಲಿಡುವುದು ಮಾತ್ರವಲ್ಲದೆ ಸದೃಢ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡುತ್ತೆ. ದೇಹದಲ್ಲಿರುವ ಎರಡೂ ಮೂತ್ರಪಿಂಡಗಳು ತಮ್ಮ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದಾಗ, ವ್ಯಕ್ತಿಗೆ ಕಸಿ ಅಗತ್ಯವಾಗುತ್ತೆ.

ಮೂತ್ರಪಿಂಡ ಕಸಿ (kidney implant) ಏಕೆ ಮಾಡಲಾಗುತ್ತೆ?
ಮೂತ್ರಪಿಂಡ ವೈಫಲ್ಯ ಹೊಂದಿರುವ ಜನರು ಸಾಮಾನ್ಯವಾಗಿ ಡಯಾಲಿಸಿಸ್ ಗೆ ಒಳಗಾಗಬೇಕಾಗುತ್ತದೆ, ಇದು ಒಂದು ರೀತಿಯ ಚಿಕಿತ್ಸೆ. ಡಯಾಲಿಸಿಸ್ ಸಹ ರೋಗಿಗೆ ಸಹಾಯ ಮಾಡಲು ಸಾಧ್ಯವಾಗದಿದ್ದಾಗ, ಅವನಿಗೆ ಕಸಿ ಅಗತ್ಯವಿದೆ. ಕಸಿಯಲ್ಲಿ, ರೋಗಿಯ ಒಂದು ಅಥವಾ ಎರಡೂ ಮೂತ್ರಪಿಂಡಗಳನ್ನು ತೆಗೆದು ಹಾಕಲಾಗುತ್ತದೆ ಮತ್ತು ದಾನಿಯಿಂದ ಪಡೆದ ಮೂತ್ರಪಿಂಡವನ್ನು ಕಸಿ‌ ಮಾಡಲಾಗುತ್ತೆ.

Tap to resize

ಮೂತ್ರಪಿಂಡ ಕಸಿಯಿಂದ ಏನಾಗುತ್ತೆ?
ಕಿಡ್ನಿ ಇಂಪ್ಲಾಂಟ್ ಮಾಡೋದ್ರಿಂದ ರೋಗಿಗೆ ಡಯಾಲಿಸಿಸ್ ಅಥವಾ ಔಷಧಿಗಳು ಮತ್ತು ಅನೇಕ ರೀತಿಯ ಸೋಂಕುಗಳ (kidney infection) ಅಪಾಯ ತಪ್ಪಿಸಲು ಸಹಾಯ ಮಾಡುತ್ತದೆ. ಕಸಿಯ ನಂತರ, ವ್ಯಕ್ತಿಯು ಉತ್ತಮ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ, ಆದರೂ ಅದು ಎಲ್ಲರಿಗೂ ಸರಿಹೊಂದುವುದಿಲ್ಲ. ಇವು ಸಾಮಾನ್ಯವಾಗಿ ಸೋಂಕಿನಿಂದ ಹೋರಾಡುತ್ತಿರುವ ಅಥವಾ ಅಧಿಕ ತೂಕ ಹೊಂದಿರುವ ಜನರಲ್ಲಿ ಸಮಸ್ಯೆ ಉಂಟು ಮಾಡುತ್ತೆ.

ಕಸಿ ಕಾರ್ಯವಿಧಾನದ ನಂತರ, ಅನೇಕ ಜನರು ರಕ್ತಸ್ರಾವ, ಸೋಂಕು ಮತ್ತು ನೋವು ಅನುಭವಿಸುತ್ತಾರೆ, ಆದರೆ ಈ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸಬಹುದು. 5 ಪ್ರತಿಶತದಷ್ಟು ರೋಗಿಗಳಿಗೆ ಕಿಡ್ನಿ ಟ್ರಾನ್ಸ್ ಪ್ಲಾಂಟ್ ಮಾಡಿದರೂ ಪ್ರಯೋಜನ ಇರೋದಿಲ್ಲ.  ಹೆಚ್ಚಿನ ಸಂದರ್ಭಗಳಲ್ಲಿ, ಇದನ್ನು ಔಷಧಿಗಳೊಂದಿಗೆ ನಿರ್ವಹಿಸಲಾಗುತ್ತದೆ. ಅದೇ ಸಮಯದಲ್ಲಿ, ಕಿಡ್ನಿ ದಾನಿಗೆ  (kidney donor) ಕಸಿಯ ನಂತರ ಯಾವುದೇ ರೀತಿಯ ಔಷಧಿಗಳ ಅಗತ್ಯವಿಲ್ಲ ಮತ್ತು ಅವರು ಆರೋಗ್ಯಕರ ಜೀವನ ನಡೆಸಬಹುದು.

ಮೂತ್ರಪಿಂಡ ಕಸಿಯ ಸಹಾಯದಿಂದ,  ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಅಥವಾ ಮೂತ್ರಪಿಂಡದ ಕಾಯಿಲೆಯ ಕೊನೆಯ ಹಂತಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಇದು ರೋಗಿಗೆ ಉತ್ತಮ ಆರೋಗ್ಯ ಹೊಂದಿರುವ ಭಾವನೆ ನೀಡುತ್ತೆ ಮತ್ತು ಹೆಚ್ಚು ಕಾಲ ಬದುಕಲು ಸಹಾಯ ಮಾಡುತ್ತೆ. 

ಡಯಾಲಿಸಿಸ್ ಗೆ (dialysis) ಹೋಲಿಸಿದರೆ, ಮೂತ್ರಪಿಂಡ ಕಸಿಯ ಪ್ರಯೋಜನಗಳು ಯಾವುವು ಅನ್ನೋದನ್ನು ತಿಳಿಯೋಣ :
ಉತ್ತಮವಾಗಿ ಜೀವನ ನಡೆಸಲು ಸಾಧ್ಯವಾಗುತ್ತೆ.
ಸಾವಿನ ಅಪಾಯ ತುಂಬಾ ಕಡಿಮೆ ಇರುತ್ತೆ
ತಿನ್ನಲು ಮತ್ತು ಕುಡಿಯಲು ಹೆಚ್ಚಿನ ನಿರ್ಬಂಧ ಇರೋದಿಲ್ಲ 
ಚಿಕಿತ್ಸೆಯ ವೆಚ್ಚವೂ ಸಹ ಕಡಿಮೆಯಾಗುತ್ತದೆ.

ಕಸಿ ಮಾಡುವುದರಿಂದ ದಾನಿಗೆ ಯಾವೆಲ್ಲ ಅಪಾಯ ಉಂಟಾಗುತ್ತೆ?
ಮೂತ್ರಪಿಂಡಗಳನ್ನು ದಾನ ಮಾಡಲು ಯೋಚಿಸುತ್ತಿರುವವರು ಅದಕ್ಕೆ ಸಂಬಂಧಿಸಿದ ಕೆಲವು ಅಪಾಯಗಳು ಮತ್ತು ಪ್ರಯೋಜನಗಳ ಬಗ್ಗೆಯೂ ತಿಳಿದಿರಬೇಕು. ಅಂದಹಾಗೆ, ಯಾವುದೇ ರೀತಿಯ ಶಸ್ತ್ರಚಿಕಿತ್ಸೆಯು ದೊಡ್ಡ ಅಪಾಯವಾಗಿದೆ. ಇದರಿಂದ ವೈದ್ಯಕೀಯ ಸಮಸ್ಯೆ, ದೇಹದ ಮೇಲೆ ದೊಡ್ಡ ಗುರುತುಗಳು ಮತ್ತು ಅನೇಕ ರೀತಿಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಗಳಿವೆ. 

ಕಿಡ್ನಿ ದಾನದ ಬಳಿಕ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ? 
ಶಸ್ತ್ರಚಿಕಿತ್ಸೆಯ ನಂತರ ನೋವು
ಸ್ಟಿಚ್ ಮಾಡಿದ ಸ್ಥಳದಲ್ಲಿ ನ್ಯುಮೋನಿಯಾ ಅಥವಾ ಸೋಂಕು
ರಕ್ತ ಹೆಪ್ಪುಗಟ್ಟುವಿಕೆ
ಅರಿವಳಿಕೆಗೆ ಪ್ರತಿಕ್ರಿಯೆ
ಮತ್ತೆ ಶಸ್ತ್ರಚಿಕಿತ್ಸೆಯ ಅಗತ್ಯ
ಹರ್ನಿಯಾ
ಕರುಳಿನಲ್ಲಿ ತಡೆ
ಮೂತ್ರನಾಳದಿಂದ ಸೋರಿಕೆ
ದಾನ ಮಾಡಿದ ಮೂತ್ರಪಿಂಡಗಳ ಅಸ್ವಿಕಾರ
ದಾನ ಮಾಡಿದ ಮೂತ್ರಪಿಂಡದ ವೈಫಲ್ಯ
ಹೃದಯಾಘಾತ (heart attack)
ಮರಣ

ಕಿಡ್ನಿ ದಾನದಿಂದ (kidney donate) ಜೀವನದುದ್ದಕ್ಕೂ ಅನೇಕ ಅಪಾಯಗಳಿವೆ. ಆರೋಗ್ಯ ತಜ್ಞರ ಪ್ರಕಾರ, ದಾನ ಮಾಡುವ ಜನರಲ್ಲಿ ಮೂತ್ರಪಿಂಡದ ಕಾರ್ಯದಲ್ಲಿ 20-30 ಪ್ರತಿಶತದಷ್ಟು ಕುಸಿತ ಕಂಡು ಬರುತ್ತೆ. ಏಕೆಂದರೆ ಒಂದೇ ಮೂತ್ರಪಿಂಡವು ಎರಡೂ ಮೂತ್ರಪಿಂಡಗಳಿಗೆ ಕೆಲಸ ಮಾಡುತ್ತದೆ. ಇದಲ್ಲದೆ, ದಾನಿಯು ಅಧಿಕ ರಕ್ತದೊತ್ತ, ಕೊಬ್ಬು, ದೀರ್ಘಕಾಲದ ನೋವು, ಮಧುಮೇಹ ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು:

Latest Videos

click me!