ಪುರುಷರು ಆರೋಗ್ಯವಾಗಿರಲು ರೂಡಿಸಿಕೊಳ್ಳಲೇಬೇಕಾದ ಅಭ್ಯಾಸಗಳಿವು!

First Published May 9, 2024, 7:36 PM IST

ಜೀವನಶೈಲಿ ನಮ್ಮ  ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಮೇಲೆ  ಸಹ ತೀವ್ರ ಪ್ರಭಾವ ಬೀರುತ್ತದೆ. ಮಹಿಳೆಯರೇ ಇರಲಿ ಪುರುಷರೇ ಇರಲಿ  ಪ್ರತಿಯೊಬ್ಬರೂ ಆರೋಗ್ಯಕರ ಲೈಫ್‌ಸ್ಟೈಲ್‌ ಆಳವಡಿಸಿಕೊಳ್ಳುವುದು ಇಂದಿನ ಅಗತ್ಯ. ಆರೋಗ್ಯ ಜೀವನಶೈಲಿಗಾಗಿ ಪುರುಷರು ಅಳವಡಿಸಿಕೊಳ್ಳಬೇಕಾದ  ಅತಿ ಮುಖ್ಯ ದೈನಂದಿನ ಅಭ್ಯಾಸಗಳಿವು .

ಒಂದು ಲೋಟ ನೀರಿನಿಂದ ದಿನ ಪ್ರಾರಂಭಿಸಿದರೆ, ಅದು ದೇಹದ ವ್ಯವಸ್ಥೆಯನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೆಚ್ಚು ಚಯಾಪಚಯವನ್ನು ಚಲಿಸುವಂತೆ ಮಾಡುತ್ತದೆ.

ದೈನಂದಿನ ವ್ಯಾಯಾಮ:
ಆಕ್ಟೀವ್‌ ಆಗಿ ಇರಿ. ಪ್ರತಿದಿನ  ಕನಿಷ್ಠ 30 ನಿಮಿಷಗಳ ವ್ಯಾಯಾಮದ ಗುರಿಯಿಟ್ಟುಕೊಳ್ಳಿ, ಇದು ಕ್ವಿಕ್‌ ಜಾಗಿಂಗ್, ಜಿಮ್ ಸೆಷನ್ (Gym Session) ಅಥವಾ ತ್ವರಿತ ನಡಿಗೆ (Fast Walking) ಯಾವುದೇ ಅಗಿರಲಿ, ಚಲಿಸುತ್ತಿರಿ.

ದಯವಿಟ್ಟು ಉಪಹಾರವನ್ನು ಎಂದಿಗೂ ಮಿಸ್‌ ಮಾಡಬೇಡಿ. ಇದು ದಿನದ ಪ್ರಮುಖ ಅಗತ್ಯಗಳಲ್ಲಿ ಒಂದು. ದಿನವನ್ನು ಚೈತನ್ಯಗೊಳಿಸಲು ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದಂತೆ ಇರಲು ಪ್ರೋಟೀನ್‌ಗಳು, ಧಾನ್ಯಗಳು ಮತ್ತು ಹಣ್ಣುಗಳನ್ನು ಸೇವಿಸಿ.

ಹೈಡ್ರೇಟೆಡ್ ಆಗಿರಿ:
ದಿನವಿಡೀ ನೀರಿನ ಬಾಟಲಿಯನ್ನು ಕೈಯಲ್ಲಿ ಇಟ್ಟುಕೊಳ್ಳುವುದು ಉತ್ತಮ ಅಭ್ಯಾಸ. ದೇಹವು ಹೈಡ್ರೇಟೆಡ್ ಆಗಿರುವುದರಿಂದ  ಮೆದುಳು (Brain) ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
 

ಮೈಂಡ್‌ಫುಲ್‌ ಇಟಿಂಗ್ (Mindful Eating):
ನೀವು ಏನು ತಿನ್ನುತ್ತೀರಿ ಎಂಬುದರ ಬಗ್ಗೆ ಗಮನ ಕೊಡಿ. ಹೆಚ್ಚು ಹಸಿರು ತರಕಾರಿ, ಕೊಬ್ಬರಹಿತ ಮಾಂಸ ಮತ್ತು ಸಂಪೂರ್ಣ ಆಹಾರಗಳನ್ನು ಆರಿಸಿಕೊಳ್ಳಿ. ಕಡಿಮೆ ಜಂಕ್ ಮತ್ತು ಹೆಚ್ಚು ಪೋಷಕಾಂಶಗಳನ್ನು ಸೇವಿಸಿ.

meditation

ಕೆಲಸ ಅಥವಾ ಅಧ್ಯಯನದ ಸಮಯದಲ್ಲಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಇದು ನಿಮ್ಮ ಮನಸ್ಸನ್ನು ನಿರಾಳವಾಗಿಸಲು  ಸಹಾಯ ಮಾಡುತ್ತದೆ ಮತ್ತು ಕೆಲಸದ ಮೇಲಿನ ಗಮನವನ್ನು ಸುಧಾರಿಸುತ್ತದೆ.

ಸಾಮಾಜಿಕ ಸಂಪರ್ಕ:
ಸ್ನೇಹಿತರೊಂದಿಗೆ ಹ್ಯಾಂಗ್ಔಟ್ ಮಾಡುವುದು ಅಥವಾ ಕುಟುಂಬದೊಂದಿಗೆ ಮಾತನಾಡುವ ಅಭ್ಯಾಸ ಬೆಳೆಸಿಕೊಳ್ಳಿ. ಬಲವಾದ ಸಾಮಾಜಿಕ ಸಂಬಂಧಗಳು ಮನಸ್ಥಿತಿ ಮತ್ತು ಮಾನಸಿಕ ಆರೋಗ್ಯವನ್ನು (Mental Health) ಹೆಚ್ಚಿಸಬಹುದು.

ಗುಣಮಟ್ಟದ ನಿದ್ರೆ:
7ರಿಂದ 8 ಗಂಟೆಗಳ ಕಾಲ ಉತ್ತಮ ನಿದ್ರೆಯ ಗುರಿಯನ್ನು ಹೊಂದಿರಿ, ಮಲಗುವ ಒಂದು ಗಂಟೆ ಮೊದಲು ಡಿಜಿಟಲ್‌ ಸ್ಕ್ರೀನ್‌ಗಳಿಂದ ದೂರವಿರಿ ಇದು ದಿನವನ್ನು ಉತ್ತಮವಾಗಿ ಮುಗಿಸಲು ಸಹಾಯ ಮಾಡುತ್ತದೆ.
 

ನಾಳೆಯನ್ನು ಪ್ಲಾನ್‌ ಮಾಡುವ  ಮೂಲಕ ಮತ್ತು ಇಂದು ನೀವು ಸಾಧಿಸಿದ್ದನ್ನು  ಮನನ ಮಾಡಿಕೊಳ್ಳುವ ಮೂಲಕ ನಿಮ್ಮ ದಿನವನ್ನು ಕೊನೆಗೊಳಿಸಿ. ಇದು ಮುಂದಿನ ದಿನಕ್ಕೆ ಪಾಸಿಟಿವ್‌ ನೋಟ್‌ (Positive Note) ಅನ್ನು ನೀಡುತ್ತದೆ.

click me!