ನಿಮ್ಮ ದೇಹ ನೀಡುವ ಈ 7 ಸೂಚನೆ ಕಡೆಗಣಿಸಬೇಡಿ, ಇದು ಕಿಡ್ನಿ ಕ್ಯಾನ್ಸರ್ ಅಲರ್ಟ್

Published : Jan 25, 2026, 10:17 PM IST

ನಿಮ್ಮ ದೇಹ ನೀಡುವ ಈ 7 ಸೂಚನೆ ಕಡೆಗಣಿಸಬೇಡಿ, ಕಿಡ್ನಿ ಕ್ಯಾನ್ಸರ್ ಅಪಾಯದ ಅಲರ್ಟ್ ಆರಂಭದಿಂದಲೇ ಸಿಗಲಿದೆ. ಹೀಗಾಗಿ ತಕ್ಷಣ ಎಚ್ಚೆತ್ತುಕೊಂಡರೆ ಅಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚಿದೆ.

PREV
16
ಕಿಡ್ನಿ ಕ್ಯಾನ್ಸರ್; ದೇಹವು ತೋರಿಸುವ ಏಳು ಲಕ್ಷಣಗಳು

ಕಿಡ್ನಿ ಕ್ಯಾನ್ಸರ್ ಅತ್ಯಂತ ಅಪಾಯಕಾರಿ. 2050ರ ವೇಳೆಗೆ ಪ್ರಕರಣಗಳು ದ್ವಿಗುಣಗೊಳ್ಳಲಿವೆ. ಬೊಜ್ಜು, ಧೂಮಪಾನ, ವ್ಯಾಯಾಮದ ಕೊರತೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಪ್ರಮುಖ ಕಾರಣಗಳಾಗಿವೆ. ದೇಹ ನೀಡುವ ಪ್ರತಿಯೊಂದು ಸೂಚನೆಗಳು, ಆರೋಗ್ಯದ ಏರುಪೇರುಗಳು ಮುಂದಾಗುವ ಬಹುದೊಡ್ಡ ಅಪಾಯದ ಮುನ್ಸೂಚನೆಯಾಗಿರುತ್ತದೆ. 

26
ಮಹಿಳೆಯರಿಗಿಂತ ಪುರುಷರಲ್ಲಿ ಕಿಡ್ನಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು

ಮಹಿಳೆಯರಿಗಿಂತ ಪುರುಷರಲ್ಲಿ ಕಿಡ್ನಿ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಫಾಕ್ಸ್ ಚೇಸ್ ಕ್ಯಾನ್ಸರ್ ಸೆಂಟರ್‌ನ ಸಂಶೋಧನೆಯಲ್ಲಿ ಪ್ರಕರಣಗಳ ತೀವ್ರ ಏರಿಕೆ ಕಂಡುಬಂದಿದೆ. ಇದು ಯುರೋಪಿಯನ್ ಯುರಾಲಜಿಯಲ್ಲಿ ಪ್ರಕಟವಾಗಿದೆ. ಹೀಗಾಗಿ ಮುನ್ನಚ್ಚೆರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು

36
ಮುಂದಿನ 25 ವರ್ಷಗಳಲ್ಲಿ ವಿಶ್ವಾದ್ಯಂತ ಕಿಡ್ನಿ ಕ್ಯಾನ್ಸರ್ ಪ್ರಕರಣ ಡಬಲ್

ಮುಂದಿನ 25 ವರ್ಷಗಳಲ್ಲಿ ವಿಶ್ವಾದ್ಯಂತ ಕಿಡ್ನಿ ಕ್ಯಾನ್ಸರ್ ಪ್ರಕರಣಗಳು ದ್ವಿಗುಣಗೊಳ್ಳಲಿವೆ. 2022 ರಲ್ಲಿ, ಸುಮಾರು 435,000 ಹೊಸ ಪ್ರಕರಣಗಳು ಮತ್ತು 156,000 ಸಾವುಗಳು ವರದಿಯಾಗಿವೆ. 

46
ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ದೀರ್ಘಕಾಲದ ಮೂತ್ರಪಿಂಡ ಕಾಯಿಲೆ, ಧೂಮಪಾನ

ಸುಮಾರು 5-8% ಕಿಡ್ನಿ ಕ್ಯಾನ್ಸರ್‌ಗಳು ಆನುವಂಶಿಕ. ಆದರೆ, ಅರ್ಧಕ್ಕಿಂತ ಹೆಚ್ಚು ಪ್ರಕರಣಗಳು ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಧೂಮಪಾನ ಮತ್ತು ವ್ಯಾಯಾಮದ ಕೊರತೆಯಂತಹ ತಡೆಗಟ್ಟಬಹುದಾದ ಕಾರಣಗಳಿಂದ ಉಂಟಾಗುತ್ತವೆ.

56
ಜೀವನಶೈಲಿಯ ಬದಲಾವಣೆ

 ತೂಕ, ರಕ್ತದೊತ್ತಡ, ಸಕ್ಕರೆ ಮಟ್ಟ ನಿಯಂತ್ರಣ ಮತ್ತು ಧೂಮಪಾನ ತ್ಯಜಿಸುವಂತಹ ಜೀವನಶೈಲಿ ಬದಲಾವಣೆಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.

66
ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್‌ನ ಒಂದು ಪ್ರಮುಖ ಲಕ್ಷಣ

ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್‌ನ ಪ್ರಮುಖ ಲಕ್ಷಣವಾಗಿದೆ. ಹಾಗೆಯೇ, ಹೊಟ್ಟೆಯಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು ಕಿಡ್ನಿ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣವಾಗಿದೆ. ಗುಲಾಬಿ/ಕೆಂಪು ಮೂತ್ರ, ಕಿಡ್ನಿಯಲ್ಲಿ ಗಡ್ಡೆ, ನಿರಂತರ ಬೆನ್ನುನೋವು, ಹಸಿವಿಲ್ಲದಿರುವುದು, ತೂಕ ಇಳಿಕೆ ಇವು ಲಕ್ಷಣಗಳಾಗಿರಬಹುದು. ಅಧಿಕ ರಕ್ತದೊತ್ತಡ, ರಕ್ತಹೀನತೆ, ಮೂಳೆ ನೋವು ಕೂಡ ಉಂಟಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories