ಚಳಿಗಾಲದಲ್ಲಿ ನಾವು ನೀರು ಕುಡಿಯುವುದು ತುಂಬಾ ಕಡಿಮೆ. ಬಾಯಾರಿಕೆ ಆಗದ ಕಾರಣ, ನೀರು ಕುಡಿಯುವ ಅಗತ್ಯವಿಲ್ಲ ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ನೀರಿನ ಕೊರತೆಯು ದೇಹದಲ್ಲಿ ಹಲವು ರೋಗಗಳಿಗೆ ಕಾರಣವಾಗುತ್ತದೆ. ಅವು ಯಾವುವು ಎಂದು ತಿಳಿಯೋಣ.
ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಮೆದುಳಿಗೆ ಬೇಕಾದ ಆಮ್ಲಜನಕ ಮತ್ತು ಪೋಷಣೆ ಸಿಗುವುದಿಲ್ಲ. ಇದು ಆಗಾಗ್ಗೆ ತಲೆನೋವು ಮತ್ತು ಮೈಗ್ರೇನ್‌ಗೆ ಕಾರಣವಾಗಬಹುದು. ದಿನಕ್ಕೆ ಕನಿಷ್ಠ 6 ಗ್ಲಾಸ್ ನೀರು ಕುಡಿಯಿರಿ.
26
ಜೀರ್ಣಕ್ರಿಯೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ
ನೀರು ಕಡಿಮೆ ಕುಡಿಯುವುದರಿಂದ ಕರುಳಿನ ಕಾರ್ಯಚಟುವಟಿಕೆ ನಿಧಾನವಾಗುತ್ತದೆ. ಇದು ಮಲಬದ್ಧತೆ, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ. ನಿರ್ಜಲೀಕರಣವು ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾದ ಸಮತೋಲನವನ್ನು ಹಾಳುಮಾಡುತ್ತದೆ.
36
ಮೂತ್ರಪಿಂಡದ ಕಾಯಿಲೆಗಳು
ನೀರು ಕುಡಿಯುವುದು ಕಡಿಮೆಯಾದಾಗ, ಮೂತ್ರದ ಪ್ರಮಾಣ ಕಡಿಮೆಯಾಗಿ ಮೂತ್ರಪಿಂಡಗಳಲ್ಲಿ ವಿಷಕಾರಿ ಅಂಶಗಳು ಸಂಗ್ರಹವಾಗುತ್ತವೆ. ಇದು ಕಿಡ್ನಿ ಸ್ಟೋನ್ ಮತ್ತು ಮೂತ್ರದ ಸೋಂಕಿಗೆ ಕಾರಣವಾಗಬಹುದು.
ಸಾಕಷ್ಟು ನೀರು ಕುಡಿಯದಿದ್ದರೆ ಚರ್ಮದ ತೇವಾಂಶ ಕಡಿಮೆಯಾಗುತ್ತದೆ. ಇದು ಒಣ ಚರ್ಮ, ತುರಿಕೆ, ಅಕಾಲಿಕ ವಯಸ್ಸಾಗುವಿಕೆ ಮತ್ತು ಚರ್ಮದ ಬಿರುಕುಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
56
ಮಧುಮೇಹದ ಅಪಾಯ
ನಿರ್ಜಲೀಕರಣವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇನ್ಸುಲಿನ್ ಕಾರ್ಯವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ.
66
ನಿರ್ಜಲೀಕರಣದ ಸಾಮಾನ್ಯ ಲಕ್ಷಣಗಳು
ಗಾಢ ಹಳದಿ ಮೂತ್ರ, ಒಣಗಿದ ಬಾಯಿ ಮತ್ತು ತುಟಿಗಳು, ಆಯಾಸ, ತಲೆತಿರುಗುವಿಕೆ, ತಲೆನೋವು, ಗಮನಹರಿಸಲು ಕಷ್ಟ ಮತ್ತು ಹೆಚ್ಚಿದ ಹೃದಯ ಬಡಿತ ಇದರ ಲಕ್ಷಣಗಳಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.