High blood pressure ನೀವು ನೆನಪಿಟ್ಟುಕೊಳ್ಳಬೇಕಾದ ವಿಷ್ಯಗಳಿವು…

First Published Sep 14, 2022, 4:21 PM IST

ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ (Silent Killer) ಎಂದೂ ಕರೆಯಲಾಗುತ್ತೆ. ಅತಿಯಾದ ಸ್ಟ್ರೆಸ್ (Stress), ಒಬೆಸಿಟಿ (Obesity), ಅತಿಯಾದ ಮದ್ಯಪಾನ, ಧೂಮಪಾನ (Smoking), ಕಡಿಮೆ ನಿದ್ರೆ, ಕಳಪೆ ಲೈಫ್ ಸ್ಟೈಲ್ (Lifestyle), ತಪ್ಪು ಆಹಾರ ಸೇವನೆ ಮತ್ತು ವ್ಯಾಯಾಮ ಮಾಡದಿರೋದು ಈ ಕಾಯಿಲೆಗೆ ಕಾರಣ. ಈ ಸ್ಥಿತಿಯಲ್ಲಿ, ವ್ಯಕ್ತಿಯು ತಲೆನೋವು, ಎದೆ ನೋವು, ಚಡಪಡಿಕೆ, ಉಸಿರಾಟದ ತೊಂದರೆ (Breathing Problem), ಆಯಾಸ, ಗೊಂದಲ, ಮೂಗು ಮತ್ತು ಮೂತ್ರದಿಂದ ರಕ್ತಸ್ರಾವದ ಸಮಸ್ಯೆಗಳನ್ನು ಹೊಂದುತ್ತಾನೆ. ಹಾಗಿದ್ರೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದು ಹೇಗೆ? ನೀವೂ ಸಹ ಈ ಸಮಸ್ಯೆ ಹೊಂದಿದ್ದರೆ, ಇಲ್ಲಿದೆ ನೀವು ಪಾಲಿಸಬೇಕಾದ ಕೆಲವೊಂದು ಟಿಪ್ಸ್ ಗಳು ಅವುಗಳನ್ನು ಅನುಸರಿಸುವ ಮೂಲಕ ನೀವು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.

ದೀರ್ಘಕಾಲದವರೆಗೆ ಅಧಿಕ ರಕ್ತದೊತ್ತಡದಿಂದ (High Blood Pressure) ಬಳಲುತ್ತಿದ್ದರೆ, ಇತರ ಅನೇಕ ರೋಗಗಳ ಅಪಾಯ ಹೆಚ್ಚಿಸುತ್ತೆ. ಇದು ಹೃದಯರಕ್ತನಾಳದ ಕಾಯಿಲೆಗೆ ಕಾರಣವಾಗಬಹುದು. ಅಲ್ಲದೆ, ಕಣ್ಣು (Eyes), ಮೂತ್ರಪಿಂಡ ಮತ್ತು ದೇಹದ ಇತರ ಅನೇಕ ಭಾಗಗಳ ಮೇಲೆ ಪರಿಣಾಮ ಬೀರಬಹುದು. ಹಾಗಾದ್ರೆ ಸಮಸ್ಯೆ ದೂರ ಮಾಡೋದು ಹೇಗೆ? ನೋಡೋಣ. 

ಉತ್ತಮ ಆರೋಗ್ಯಕ್ಕಾಗಿ, ಅಧಿಕ ರಕ್ತದೊತ್ತಡವನ್ನು (High Blood Pressure) ನಿಯಂತ್ರಿಸೋದು ಅತಿ ಮುಖ್ಯ. ಅಧಿಕ ರಕ್ತದೊತ್ತಡ ನಿಯಂತ್ರಿಸಲು ವೈದ್ಯರನ್ನು ಸಂಪರ್ಕಿಸಿ (Consult doctor). ಅಲ್ಲದೆ, ಪ್ರತಿದಿನ ಸಮತೋಲಿತ ಆಹಾರ (Balanced Food) ತೆಗೆದುಕೊಳ್ಳಿ ಮತ್ತು ವ್ಯಾಯಾಮ ಮಾಡಿ. ಅದೇ ಸಮಯದಲ್ಲಿ, ಅಧಿಕ ರಕ್ತದೊತ್ತಡ ನಿಯಂತ್ರಿಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ. ಅದು ಯಾವುದೆಂದು ತಿಳಿದುಕೊಳ್ಳೋಣ -

ಆಹಾರದಲ್ಲಿ ಉಪ್ಪನ್ನು(Salt) ಅತಿಯಾಗಿ ಸೇವಿಸೋದರಿಂದ ರಕ್ತದೊತ್ತಡ ಹೆಚ್ಚಾಗುತ್ತೆ. ಇದಕ್ಕಾಗಿ, ಸೀಮಿತ ಪ್ರಮಾಣದ ಉಪ್ಪು ಸೇವಿಸೋದು ಅಗತ್ಯ. ವಿಶೇಷವಾಗಿ, ಹೆಚ್ಚುವರಿ ಉಪ್ಪು ಮಿಶ್ರಿತ ಆಹಾರ ಸೇವಿಸಬೇಡಿ. ಇದರಿಂದ ರಕ್ತದೊತ್ತಡ ವೇಗವಾಗಿ ಹೆಚ್ಚುವ ಸಾಧ್ಯತೆ ಇದೆ. ಆದುದರಿಂದ ಇದನ್ನು ಸಾಧ್ಯವಾದಷ್ಟು ಅವೈಯ್ಡ್ ಮಾಡಿ. 

ಅಧಿಕ ರಕ್ತದೊತ್ತಡದ ರೋಗಿಗಳಿಗೆ ಮೆಡಿಟರೇನಿಯನ್ ಆಹಾರ ಉತ್ತಮ. ಹಣ್ಣುಗಳು (Fruits), ತರಕಾರಿಗಳು, ಡ್ರೈ ಫ್ರೂಟ್ ಮತ್ತು ನಟ್ಷ್ ತಿನ್ನಲು ವೈದ್ಯರು ಸಲಹೆ ನೀಡುತ್ತಾರೆ. ಹಾಗೆಯೇ, ಆಲಿವ್ ಎಣ್ಣೆಯಿಂದ(Olive oil) ಆಹಾರವನ್ನು ಬೇಯಿಸೋದು ಹೆಚ್ಚು ಪ್ರಯೋಜನಕಾರಿ. ಇದು ಉತ್ತಮ ಆರೋಗ್ಯ ಕಾಪಾಡಲು, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತೆ.

ಪ್ರತಿದಿನ ವ್ಯಾಯಾಮ(Exercise) ಮತ್ತು ಯೋಗ ಮಾಡಿ. ಎಲ್ಲಾ ವ್ಯಕ್ತಿಗಳಿಗೆ ವ್ಯಾಯಾಮ ಕಡ್ಡಾಯ. ಪ್ರತಿದಿನ ವ್ಯಾಯಾಮ ಮಾಡೋದರಿಂದ ರಕ್ತದ ಹರಿವು ಸುಧಾರಿಸುತ್ತೆ. ಅಲ್ಲದೆ, ದೇಹದಲ್ಲಿ ರಕ್ತ ಪರಿಚಲನೆಯನ್ನು ಸರಿಯಾಗಿ ಮಾಡಲಾಗುತ್ತೆ. ಇದು ಅಧಿಕ ರಕ್ತದೊತ್ತಡ ನಿಯಂತ್ರಿಸಲು ಸಹಾಯ ಮಾಡುತ್ತೆ. ಇದಲ್ಲದೆ, ಸರ್ವಾಂಗಾಸನ, ಸುಖಾಸನ, ಪಶ್ಚಿಮೋತ್ತಾನಾಸನ, ಮೊದಲಾದ ಯೋಗವನ್ನು ಪ್ರತಿದಿನ ಮಾಡಿ.

ಅಧಿಕ ರಕ್ತದೊತ್ತಡದ ರೋಗಿಗಳು ತಮ್ಮ ತೂಕದ ಬಗ್ಗೆ ವಿಶೇಷ ಗಮನ ಹರಿಸಬೇಕು. ಸ್ಥೂಲಕಾಯದಿಂದ (Obesity) ಬಳಲುತ್ತಿರುವ ಜನರು ಅಧಿಕ ರಕ್ತದೊತ್ತಡದ ಸಮಸ್ಯೆಗಳ ಹೆಚ್ಚಿನ ಅಪಾಯದಲ್ಲಿದ್ದಾರೆ. ಇದಕ್ಕಾಗಿ ನಿಮ್ಮ ತೂಕದ ಬಗ್ಗೆ ವಿಶೇಷ ಗಮನ ಹರಿಸಿ. ಅದಕ್ಕಾಗಿ ಸರಿಯಾದ ಡಯಟ್ ಪಾಲಿಸಬೇಕು. 

ಯಾವೆಲ್ಲಾ ಆಹಾರಗಳನ್ನು ಅವೈಡ್ ಮಾಡಬೇಕು?

ಫ್ರೋಜನ್ ಫುಡ್ (Frozen food), ತುಂಬಾ ಉಪ್ಪನ್ನು ಹೊಂದಿರುವ ಆಹಾರಗಳು, ಬ್ರೆಡ್ (Bread(, ಸೂಪ್ (Soup), ಟೊಮ್ಯಟೋ ಜ್ಯೂಸ್ (Tomato Juice) ಮತ್ತು ಸಾಸ್, ಸಂಸ್ಕರಿಸಿದ ಮಾಂಸ, ಪಿಜ್ಜಾ, ಆಲ್ಕೋಹಾಲ್, ಚೀಸ್ (Cheese). ಈ ಎಲ್ಲಾ ಆಹಾರಗಳು ಅಧಿಕ ರಕ್ತದೊತ್ತಡ ಉಂಟು ಮಾಡುವ ಸಾಧ್ಯತೆ ಇದೆ, ಆದುದರಿಂದ ಸಾಧ್ಯವಾದಷ್ಟು ಈ ಆಹಾರಗಳನ್ನು ಅವಾಯ್ಡ್ ಮಾಡಿದ್ರೆ ಆರೋಗ್ಯ ಉತ್ತಮವಾಗಿರುತ್ತೆ. 

click me!