ಒಂದೇ ಒಂದು ವಡೆ ತಾನೇ ಅಂತ ಪ್ರತಿ ದಿನವೂ ತಿಂತೀರಾ? ದೇಹದಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ?

Published : Sep 01, 2026, 08:12 AM IST

ಉದ್ದಿನ ವಡೆಯು ಪ್ರೋಟೀನ್ ಯುಕ್ತವಾದರೂ, ಅದನ್ನು ಎಣ್ಣೆಯಲ್ಲಿ ಕರಿಯುವುದರಿಂದ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಹೆಚ್ಚಾಗುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಮತ್ತು ತೂಕ ಹೆಚ್ಚಳದಂತಹ ತೊಂದರೆಗಳು ಉಂಟಾಗಬಹುದು.

PREV
16
ಬಿಸಿ ಬಿಸಿ ಉದ್ದಿನ ವಡೆ

ಸಂಜೆ ಚಹಾದ ಜೊತೆ ಬಿಸಿ ಬಿಸಿ ಉದ್ದಿನ ವಡೆ, ತಿಂಡಿ ಜೊತೆಯಲ್ಲಿ ಮತ್ತೊಂದು, ಸಾಂಬಾರ್ ಜೊತೆ ಒಂದು ವಡೆ, ಕಾಯಿ ಚಟ್ನಿ ಜೊತೆ ಗರಿಗರಿ ವಡೆ. ಹೀಗೆ ಉದ್ದಿನ ವಡೆ ಹಲವರಿಗೆ ಇಷ್ಟದ ತಿಂಡಿ. ಆದರೆ ಇದನ್ನು ಪದೇ ಪದೇ, ಹೆಚ್ಚು ತಿಂದರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತವೆ? ಉದ್ದಿನ ವಡೆ ನಿಜಕ್ಕೂ ಆರೋಗ್ಯಕರವೇ, ಅಲ್ವಾ? ಅನ್ನೋದನ್ನು ತಿಳಿದುಕೊಳ್ಳುವುದು ಮುಖ್ಯ.

26
ಉದ್ದಿನ ವಡೆ ಒಳ್ಳೆಯದೇ?

ಉದ್ದು ಪ್ರೋಟೀನ್, ಫೈಬರ್, ಕೆಲವು ಖನಿಜಾಂಶಗಳನ್ನು ಹೊಂದಿರುವ ಬೇಳೆ. ಹಾಗಾಗಿ ಉದ್ದಿನಿಂದ ಮಾಡಿದ ವಡೆಯಲ್ಲಿ ಕೆಲವು ಪೌಷ್ಟಿಕಾಂಶದ ಲಾಭಗಳಿರಬಹುದು. ಆದರೆ ಇಲ್ಲಿ ಮುಖ್ಯವಾದ ವಿಷಯ 'ವಡೆಯನ್ನು ಹೇಗೆ ತಯಾರಿಸಲಾಗುತ್ತದೆ? ಎನ್ನುವುದು ಮುಖ್ಯವಾಗುತ್ತದೆ. ಉದ್ದನ್ನು ರುಬ್ಬಿ, ಉಪ್ಪು ಸೇರಿಸಿ, ನಂತರ ಎಣ್ಣೆಯಲ್ಲಿ ಕರಿಯುವುದರಿಂದ ಅದರ ಕ್ಯಾಲೋರಿ ಮತ್ತು ಕೊಬ್ಬಿನಾಂಶ ಹೆಚ್ಚಾಗುತ್ತದೆ. ಆದ್ದರಿಂದ, ಉದ್ದಿನಲ್ಲಿ ಒಳ್ಳೆಯ ಗುಣಗಳಿವೆ ಎಂದ ಮಾತ್ರಕ್ಕೆ ವಡೆ ಸಂಪೂರ್ಣ ಆರೋಗ್ಯಕರ ಆಹಾರವಾಗುವುದಿಲ್ಲ.

36
ಜೀರ್ಣಕ್ರಿಯೆ

ಉದ್ದಿನ ಬೇಳೆ ಕೆಲವರಿಗೆ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟುಮಾಡಬಹುದು. ವಿಶೇಷವಾಗಿ ಹೆಚ್ಚು ತಿಂದಾಗ ಹೊಟ್ಟೆ ಉಬ್ಬರ, ಗ್ಯಾಸ್, ಹೊಟ್ಟೆ ಭಾರವಾದಂತೆ ಭಾಸವಾಗುವ ಸಮಸ್ಯೆಗಳು ಎದುರಾಗಬಹುದು. ಈಗಾಗಲೇ ಜೀರ್ಣಕ್ರಿಯೆ ಸಮಸ್ಯೆ ಇರುವವರು ಅಳತೆ ಮೀರಿ ತಿನ್ನದಿರುವುದು ಒಳ್ಳೆಯದು.

46
ಎಣ್ಣೆಯಲ್ಲಿ ಕರಿಯುವುದೇ ಮುಖ್ಯ ಸಮಸ್ಯೆ!

ಉದ್ದಿನ ವಡೆಯಲ್ಲಿರುವ ಪ್ರಮುಖ ಸಮಸ್ಯೆಯೇ ಅದನ್ನು ಎಣ್ಣೆಯಲ್ಲಿ ಕರಿಯುವ ವಿಧಾನ. ಎಣ್ಣೆಯಲ್ಲಿ ಕರಿದ ಆಹಾರಗಳನ್ನು ಪದೇ ಪದೇ ತಿನ್ನುವುದು ಅನಗತ್ಯ ಕ್ಯಾಲೋರಿಗಳನ್ನು ಹೆಚ್ಚಿಸುತ್ತದೆ. ಅದರಲ್ಲೂ ಒಂದೇ ಬಾರಿಗೆ 2–3 ವಡೆ ತಿಂದು, ಜೊತೆಗೆ ಸಿಹಿ ಚಹಾ ಅಥವಾ ಕಾಫಿ ಕುಡಿದರೆ ಒಟ್ಟು ಕ್ಯಾಲೋರಿ ಸೇವನೆ ಮತ್ತಷ್ಟು ಹೆಚ್ಚಾಗುತ್ತದೆ. ಒಂದೇ ಒಂದು ವಡೆ ತಾನೇ ಎಂದು ದಿನವೂ ತಿನ್ನುವುದು ಕೂಡ, ಕಾಲಕ್ರಮೇಣ ಒಟ್ಟು ಆಹಾರ ಪದ್ಧತಿಯ ಮೇಲೆ ಪರಿಣಾಮ ಬೀರಬಹುದು.

56
ಹೆಚ್ಚು ಎಣ್ಣೆಯಲ್ಲಿ ಕರಿದ ವಡೆ

ದೇಹದ ತೂಕ ಕೇವಲ ಒಂದೇ ಆಹಾರದಿಂದ ನಿರ್ಧಾರವಾಗುವುದಿಲ್ಲ. ಒಂದು ದಿನದಲ್ಲಿ ನೀವು ತೆಗೆದುಕೊಳ್ಳುವ ಒಟ್ಟು ಕ್ಯಾಲೋರಿ, ದೈಹಿಕ ಶ್ರಮ, ನಿದ್ರೆ ಮತ್ತು ಇತರ ಆಹಾರ ಪದ್ಧತಿಗಳು ಮುಖ್ಯವಾಗುತ್ತವೆ. ಆದರೂ, ಹೆಚ್ಚು ಎಣ್ಣೆಯಲ್ಲಿ ಕರಿದ ವಡೆಗಳನ್ನು ಪದೇ ಪದೇ ಹೆಚ್ಚು ತಿಂದರೆ, ಅದು ಕ್ಯಾಲೋರಿ ಹೆಚ್ಚಳಕ್ಕೆ ಕಾರಣವಾಗಬಹುದು. ದೈಹಿಕ ಶ್ರಮ ಕಡಿಮೆ ಇದ್ದರೆ, ಇದು ತೂಕ ನಿರ್ವಹಣೆಗೆ ಅಡ್ಡಿಯಾಗಬಹುದು.

66
ಎಣ್ಣೆಯನ್ನು ಮತ್ತೆ ಬಳಸಲಾಗಿದೆಯೇ?

ಹೊರಗೆ ವಡೆ ಖರೀದಿಸುವಾಗ ಇನ್ನೊಂದು ವಿಷಯವನ್ನು ಗಮನಿಸಬೇಕು. ಒಂದೇ ಎಣ್ಣೆಯನ್ನು ಪದೇ ಪದೇ ಹೆಚ್ಚಿನ ಉರಿಯಲ್ಲಿ ಬಳಸುವುದು ಆಹಾರದ ಗುಣಮಟ್ಟವನ್ನು ಹಾಳುಮಾಡುತ್ತದೆ. ಆದ್ದರಿಂದ, ಸ್ವಚ್ಛವಾದ ಜಾಗದಲ್ಲಿ ತಯಾರಿಸಿದ, ತಾಜಾ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಆಯ್ಕೆ ಮಾಡುವುದು ಮುಖ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories