ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ 83 ವರ್ಷ. ಅವರು ಈಗ ಅನ್ನ ತಿನ್ನುವುದನ್ನೇ ಸಂಪೂರ್ಣವಾಗಿ ಬಿಟ್ಟಿದ್ದಾರಂತೆ. ಹಾಗಿದ್ದರೆ ವಯಸ್ಸಾದ ಮೇಲೆ ಅನ್ನ ತಿನ್ನೋದು ಬಿಡೋದು ಒಳ್ಳೆಯದಾ? ತಜ್ಞರ ಉತ್ತರ ಇಲ್ಲಿದೆ.
ಬಾಲಿವುಡ್‌ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರಿಗೆ 83 ವರ್ಷ. ಈ ವಯಸ್ಸಿನಲ್ಲೂ ಅವರು ಅಷ್ಟೇ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಇತ್ತೀಚೆಗೆ 'ಕೌನ್ ಬನೇಗಾ ಕರೋಡ್‌ಪತಿ' (KBC) ಕಾರ್ಯಕ್ರಮದಲ್ಲಿ ತಮ್ಮ ಆಹಾರ ಪದ್ಧತಿಯ ಬಗ್ಗೆ ಆಸಕ್ತಿದಾಯಕ ವಿಷಯ ಹಂಚಿಕೊಂಡಿದ್ದಾರೆ.ತಾವೀಗ ಅನ್ನ ತಿನ್ನುವುದನ್ನು ಸಂಪೂರ್ಣವಾಗಿ ಬಿಟ್ಟಿದ್ದೇನೆ ಹಾಗೂ ಸಿಹಿಯಾದ ಖೀರು (ಪಾಯಸ) ಸೇವನೆಯನ್ನೂ ನಿಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಅಮಿತಾಬ್ ಅವರ ಈ ನಿರ್ಧಾರ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ವಯಸ್ಸಾದ ಮೇಲೆ ಅನ್ನ ಬಿಡುವುದು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಾ? ಅಥವಾ ಇದು ಕೇವಲ ವೈಯಕ್ತಿಕ ಆಯ್ಕೆಯೇ? ಎಂಬ ಪ್ರಶ್ನೆಗೆ ತಜ್ಞರ ಉತ್ತರ ಹೀಗಿದೆ..
26
ಅನ್ನ ಬಿಡುವುದು ಅನಿವಾರ್ಯವೇ?
ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥರಾದ ಡಾ.ನಿಶಾಂತ್ ರೈಜಾದಾ ಪ್ರಕಾರ, ವಯಸ್ಸಾದ ತಕ್ಷಣ ಅನ್ನವನ್ನು ಬಿಡಲೇಬೇಕು ಎಂಬ ನಿಯಮವೇನೂ ಇಲ್ಲ. ಜನರು ಆರೋಗ್ಯವಾಗಿರಲು ಮೊದಲು ಅನ್ನವನ್ನೇ ಬಿಡುತ್ತಾರೆ. ಮುಖ್ಯವಾದ ಪ್ರಶ್ನೆ ಅನ್ನ ಬಿಡುವುದಲ್ಲ, ಅದರ ಬದಲಿಗೆ ನೀವು ಏನನ್ನು ತಿನ್ನುತ್ತೀರಿ ಎಂಬುದು. ಅಮಿತಾಬ್ ಬಚ್ಚನ್ ತಮ್ಮ ವೈಯಕ್ತಿಕ ಇಚ್ಛೆಯಂತೆ ಅನ್ನ ಬಿಟ್ಟಿರಬಹುದು, ಆದರೆ ಇದು ಎಲ್ಲರಿಗೂ ಅನ್ವಯಿಸುವುದಿಲ್ಲ.
36
ಅನ್ನ ಮತ್ತು ಸಕ್ಕರೆ ಪ್ರಮಾಣ
ಬಿಳಿ ಅನ್ನವು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಆಗಿದ್ದು ಇದು ಬೇಗನೆ ಜೀರ್ಣವಾಗುತ್ತದೆ. ಹೆಚ್ಚು ಅನ್ನವನ್ನು ತರಕಾರಿ ಅಥವಾ ಪ್ರೋಟೀನ್ ಇಲ್ಲದೆ ತಿಂದರೆ ರಕ್ತದಲ್ಲಿ ಸಕ್ಕರೆ ಮಟ್ಟ ತಕ್ಷಣ ಏರಿಕೆಯಾಗಬಹುದು. ಇದರಿಂದ ಟೈಪ್ 2 ಮಧುಮೇಹದ ಅಪಾಯವಿರುತ್ತದೆ. ಮಿತವಾದ ಪ್ರಮಾಣದಲ್ಲಿ ಸೇವಿಸಿದರೆ ಯಾವುದೇ ತೊಂದರೆಯಿಲ್ಲ.
ವಯಸ್ಸಾದಂತೆ ದೇಹದಲ್ಲಿ ಸ್ನಾಯುಗಳ ದ್ರವ್ಯರಾಶಿ (Muscle Mass) ಕಡಿಮೆಯಾಗುತ್ತದೆ. ಒಂದು ವೇಳೆ ನೀವು ಅನ್ನವನ್ನು ಬಿಟ್ಟು, ಅದಕ್ಕೆ ಪರ್ಯಾಯವಾಗಿ ಸರಿಯಾದ ಕ್ಯಾಲೋರಿ ಮತ್ತು ಪ್ರೋಟೀನ್ ಸೇವಿಸದಿದ್ದರೆ 'ಸಾರ್ಕೊಪೀನಿಯಾ' ಎಂಬ ಸ್ಥಿತಿ ಉಂಟಾಗಬಹುದು. ಅಂದರೆ ಸ್ನಾಯುಗಳು ಅತಿಯಾಗಿ ನಷ್ಟವಾಗಿ ದೇಹದ ಶಕ್ತಿ ಕುಂದುತ್ತದೆ. ಇದು ವಯಸ್ಸಾದವರಲ್ಲಿ ಬ್ಯಾಲೆನ್ಸ್ ತಪ್ಪುವುದು ಮತ್ತು ದೈಹಿಕ ದೌರ್ಬಲ್ಯಕ್ಕೆ ಕಾರಣವಾಗಬಹುದು.
56
ಮಧುಮೇಹವಿದ್ದವರು ಅನ್ನ ತಿನ್ನಬಹುದೇ?
ಮಧುಮೇಹ ಅಥವಾ ಬೊಜ್ಜು ಇರುವವರು ಬಿಳಿ ಅನ್ನದ ಪ್ರಮಾಣವನ್ನು ಕಡಿಮೆ ಮಾಡುವುದು ಉತ್ತಮ. ಕಾರ್ಬೋಹೈಡ್ರೇಟ್‌ಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಿಲ್ಲ. ಬಿಳಿ ಅನ್ನದ ಬದಲು ಈ ಕೆಳಗಿನವುಗಳನ್ನು ಬಳಸಬಹುದು..
ಬ್ರೌನ್ ರೈಸ್ (Brown Rice)
ಸಿರಿಧಾನ್ಯಗಳು (Millets)
ಓಟ್ಸ್ (Oats)
ಬೇಳೆಕಾಳುಗಳು
ಅನ್ನವನ್ನು ಕೇವಲ ಅನ್ನವಾಗಿ ತಿನ್ನದೆ ಅದರ ಜೊತೆಗೆ ಬೇಳೆ ತೋಗರಿ, ಸಾಕಷ್ಟು ತರಕಾರಿ, ಮೊಸರು ಮತ್ತು ಪ್ರೋಟೀನ್ ಯುಕ್ತ ಆಹಾರ ಸೇರಿಸಿಕೊಂಡರೆ ಅದು ಸಮತೋಲಿತ ಆಹಾರವಾಗುತ್ತದೆ.
66
ಆರೋಗ್ಯಕರ ಆಹಾರ ಸೇವಿಸಿ
ಅಮಿತಾಬ್ ಬಚ್ಚನ್ ಅವರಿಗೆ ಸರಿಹೊಂದುವ ಆಹಾರ ಪದ್ಧತಿ 70 ಅಥವಾ 80 ದಾಟಿದ ಪ್ರತಿಯೊಬ್ಬರಿಗೂ ಸರಿಹೊಂದುತ್ತದೆ ಎಂದು ಹೇಳಲಾಗದು. ವಯಸ್ಸಾದ ಮೇಲೆ ಕಡಿಮೆ ತಿನ್ನುವುದಕ್ಕಿಂತ ಹೆಚ್ಚಾಗಿ ಆರೋಗ್ಯಕರವಾಗಿ ತಿನ್ನುವುದು ಮುಖ್ಯ. ಸ್ನಾಯುಗಳ ಬಲ ಮತ್ತು ಮೆಟಬಾಲಿಕ್ ಆರೋಗ್ಯವನ್ನು ಕಾಪಾಡಿಕೊಳ್ಳುವ ಆಹಾರ ಕ್ರಮವೇ ಅತ್ಯುತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.