ಆರು ತಿಂಗಳ ನಂತರ ಮಗುವಿಗೆ ಹೊರಗಿನ ಹಾಲು ನೀಡುವಾಗ ಎಚ್ಚರಿಕೆಯಿಂದಿಬೇಕಾಗುತ್ತದೆ. ಆರು ತಿಂಗಳ ನಂತರ ಮೊದಲ ಬಾರಿ ಮಗುವಿಗೆ ಯಾವ ಹಾಲು ನೀಡಬೇಕು ಅನ್ನೋದರಿಗೆ ಬಹುತೇಕರಿಗೆ ಗೊಂದಲ ಇರುತ್ತೆ. ಕೆಲವೊಮ್ಮೆ ತಪ್ಪು ಆಯ್ಕೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹುಟ್ಟಿದ ಆರು ತಿಂಗಳು ಮಗುವಿಗೆ ಎದೆಹಾಲು ನೀಡಬೇಕು. ಆರು ತಿಂಗಳ ನಂತರ ಹೊರಗಿನ ಹಾಲನ್ನು ಮಕ್ಕಳಿಗೆ ನೀಡಬಹುದಾಗಿದೆ. ಒಂದು ವೇಳೆ ಎದೆಹಾಲು ಕೊರತೆಯಾದ್ರೆ ವೈದ್ಯರ ಸಲಹೆ ಮೇರೆಗೆ ಪರ್ಯಾಯ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆರು ತಿಂಗಳ ನಂತರ ಮೊದಲ ಬಾರಿ ಮಗುವಿಗೆ ಯಾವ ಹಾಲು ನೀಡಬೇಕು ಅನ್ನೋದರಿಗೆ ಬಹುತೇಕರಿಗೆ ಗೊಂದಲ ಇರುತ್ತೆ.
26
ಹಸುವಿನ ಹಾಲು ಏಕೆ ಉತ್ತಮ?
ಆರೋಗ್ಯ ತಜ್ಞರ ಪ್ರಕಾರ, ಮಕ್ಕಳಿಗೆ ಹಸುವಿನ ಹಾಲು ಉತ್ತಮ. ಎಮ್ಮೆ ಹಾಲಿಗಿಂತ ಹಸುವಿನ ಹಾಲು ಕಡಿಮೆ ಕೊಬ್ಬಿನಾಂಶ ಹೊಂದಿರುತ್ತದೆ. ಹಸುವಿನ ಹಾಲು ಬೇಗ ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ಹಾಗೆಯೇ ಮಗುವಿನ ಬೆಳವಣಿಗೆಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಹಸು ಹಾಲು ನೀಡುತ್ತದೆ.
36
ಎಮ್ಮೆ ಹಾಲು ಯಾವಾಗ ಕೊಡಬೇಕು?
ಎಮ್ಮೆ ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಾಗಿರುವ ಕಾರಣ ಜೀರ್ಣಕ್ರಿಯೆ ನಿಧಾನವಾಗಿರುತ್ತದೆ. ಮಕ್ಕಳಿಗೆ ಹಸುವಿನ ಹಾಲು ಜೀರ್ಣಿಸಿಕೊಳ್ಳಲು ಸಹಾಯವಾಗುತ್ತದೆ. ಸಾಮಾನ್ಯವಾಗಿ ವೈದ್ಯರು ಮಕ್ಕಳಿಗೆ ಹಸುವಿನ ಹಾಲು ಶಿಫಾರಸ್ಸು ಮಾಡುತ್ತಾರೆ. ಆದರೆ ಪ್ರತಿ ಮಗುವಿನ ಅಗತ್ಯತೆ ಭಿನ್ನವಾಗಿರುವ ಕಾರಣ ಹಾಲು ಆಯ್ಕೆ ಮಾಡಿಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ.
ಮೊದಲ ಬಾರಿ ಪಶುವಿನ ಹಾಲು ನೀಡುತ್ತಿದ್ರೆ, ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ನೀಡಬಾರದು. ಹಂತ ಹಂತವಾಗಿ ಹಾಲಿನ ಪ್ರಮಾಣವನ್ನು ಹೆಚ್ಚಿಸಬೇಕು. ಕೆಲವೊಮ್ಮೆ ಬಾಹ್ಯ ಹಾಲು ಕುಡಿದ ಬಳಿಕ ಮಕ್ಕಳಲ್ಲಿ ವಾಂತಿ, ಹೊಟ್ಟೆ ನೋವು, ಅತಿಸಾರ ಅಥವಾ ಅಲರ್ಜಿ ಕಾಣಿಸಿಕೊಳ್ಳಬಹುದು. ಇಂತಹ ಲಕ್ಷಣ ಕಾಣಿಸಿಕೊಂಡ್ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
56
ಮಕ್ಕಳ ಆರೋಗ್ಯಕ್ಕೆ ಏನು ಮುಖ್ಯ?
ಹಾಲು ಮಾತ್ರವಲ್ಲ, ಮಕ್ಕಳಿಗೆ ಸಮತೋಲಿತ ಆಹಾರವೂ ಮುಖ್ಯವಾಗುತ್ತದೆ. ಮಗು ಬೆಳದಂತೆ ಹಣ್ಣು, ತರಕಾರಿ, ಧಾನ್ಯ ಸೇರಿದಂತೆ ಪೌಷ್ಟಿಕ ಆಹಾರವನ್ನು ಕೊಡುತ್ತಾ ಹೋಗಬೇಕಾಗುತ್ತದೆ. ಈ ರೀತಿಯ ಆಹಾರ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯ ಮಾಡುತ್ತದೆ.
66
ವೈದ್ಯರ ಸಲಹೆ ಪ್ರಮುಖ
ಮಗು ಒಂದು ವರ್ಷದೊಳಗಿನದಾಗಿದ್ರೆ ಹಾಲು ಆಯ್ಕೆ ಮಾಡಿಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಪ್ರಮುಖವಾಗುತ್ತದೆ.ಒಂದು ವರ್ಷದ ನಂತರವೂ, ನಿಮ್ಮ ಮಗುವಿನ ವಯಸ್ಸು, ಆರೋಗ್ಯ ಮತ್ತು ಅಗತ್ಯಗಳ ಆಧಾರದ ಮೇಲೆ ಹಾಲು ನೀಡಬೇಕು. ನಿಮಗೆ ಗೊಂದಲಗಳಿದ್ರೆ ವೈದ್ಯರ ಸಲಹೆ ಪಡೆದುಕೊಳ್ಳಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.