Tea: ಚಹಾ ಮಾಡೋದು ಅಂದ್ರೆ ಪಾಯಸ ಮಾಡೋದಲ್ಲ.. 'ಬ್ರೂ' ಮಾಡ್ಬೇಕು, ಇದು ಹೆಚ್ಚಿನವರಿಗೆ ಗೊತ್ತೇ ಇಲ್ಲ!

Published : Jul 22, 2026, 06:49 PM IST

ಚಹಾದಲ್ಲಿ 'ಟ್ಯಾನಿನ್' ಎಂಬ ಅಂಶವಿರುತ್ತದೆ. ಈ ಟ್ಯಾನಿನ್‌ಗಳು ಅತಿಯಾಗಿ ಕುದಿಸಿದಾಗ ಚಹಾದ ರುಚಿಯನ್ನು ಕಹಿ ಮಾಡುವುದು ಮಾತ್ರವಲ್ಲದೆ, ನಮ್ಮ ದೇಹಕ್ಕೆ ಅಗತ್ಯವಿರುವ ಕಬ್ಬಿಣದಂಶವನ್ನು (Iron) ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ.

PREV
17

ಚಹಾವನ್ನ ಪಾಯಸದಂತೆ ಕುದಿಸೋ ಮುನ್ನ ಈ ಶಾಕಿಂಗ್ ಸ್ಟೋರಿ ಓದಿ!

ಬೆಳ್ಳಂಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿ ಬಿಸಿ ಚಹಾ (Tea) ಸಿಕ್ಕರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಅಂದವರೇ ಹೆಚ್ಚು. ಈ ಮಳೆಗಾಲದ ಚಳಿಯಲ್ಲಿ ಶುಂಠಿ-ಏಲಕ್ಕಿ ಹಾಕಿದ ಮಸಾಲಾ ಚಹಾದ ಘಮ ಮೂಗಿಗೆ ಬಡಿದರೆ ಸಾಕು, ಅರ್ಧ ತಲೆನೋವು ಹಾರಿಹೋಗುತ್ತದೆ. ಆದರೆ, ಇಲ್ಲೊಂದು ಸಣ್ಣ ಟ್ವಿಸ್ಟ್ ಇದೆ! ಚಹಾ ಮಾಡೋದು ಅಂದ್ರೆ ಅದೇನು ರಾಕೆಟ್ ಸೈನ್ಸ್ ಅಲ್ಲ ಅನ್ನೋದು ಎಷ್ಟು ಸತ್ಯವೋ, ಹೆಚ್ಚಿನವರು ಅದನ್ನು ಮಾಡೋ ರೀತಿನೇ ತಪ್ಪು ಅನ್ನೋದು ಅಷ್ಟೇ ಕಹಿ ಸತ್ಯ!

27

ಹೌದು, ನಮ್ಮಲ್ಲಿ ಬಹಳಷ್ಟು ಮಂದಿಗೆ ಚಹಾವನ್ನ 'ಪಾಯಸ'ದಂತೆ ಕುದಿಸಿ ಕುದಿಸಿ ಕುಡಿಯೋ ಅಭ್ಯಾಸವಿದೆ. ಇನ್ನೂ ಕೆಲವರಂತೂ ಬೆಳಗ್ಗೆ ಮಾಡಿದ ಚಹಾವನ್ನೇ ಸಂಜೆಯವರೆಗೂ ಹತ್ತು ಬಾರಿ ಬಿಸಿ ಮಾಡಿ ಕುಡಿಯುತ್ತಾರೆ. ನೀವು ಕೂಡ ಇವರಲ್ಲಿ ಒಬ್ಬರಾಗಿದ್ದರೆ, ಈಗಲೇ ಹುಷಾರಾಗಿ! ಯಾಕಂದ್ರೆ ನೀವು ಕುಡಿಯುತ್ತಿರೋದು ಅಮೃತವಲ್ಲ, ಆಸಿಡಿಟಿಯ ಪ್ಯಾಕೆಟ್!

37

ಯಾಕೆ ಇಷ್ಟೊಂದು ಕುದಿಸಬಾರದು?

ಚಹಾದಲ್ಲಿ 'ಟ್ಯಾನಿನ್' ಎಂಬ ಅಂಶವಿರುತ್ತದೆ. ಈ ಟ್ಯಾನಿನ್‌ಗಳು ಅತಿಯಾಗಿ ಕುದಿಸಿದಾಗ ಚಹಾದ ರುಚಿಯನ್ನು ಕಹಿ ಮಾಡುವುದು ಮಾತ್ರವಲ್ಲದೆ, ನಮ್ಮ ದೇಹಕ್ಕೆ ಅಗತ್ಯವಿರುವ ಕಬ್ಬಿಣದಂಶವನ್ನು (Iron) ಹೀರಿಕೊಳ್ಳಲು ಅಡ್ಡಿಪಡಿಸುತ್ತವೆ. ಅಂದ್ರೆ, ನೀವು ಎಷ್ಟೇ ಒಳ್ಳೆ ಊಟ ಮಾಡಿದ್ರೂ, ಅತಿಯಾಗಿ ಕುದಿಸಿದ ಚಹಾ ಕುಡಿದರೆ ಆ ಪೌಷ್ಟಿಕಾಂಶಗಳು ನಿಮ್ಮ ಮೈಗೆ ಹತ್ತೋದಿಲ್ಲ!

47

ಪಾಯಸದಂತೆ ಕುದಿಸಿದರೆ ಏನಾಗುತ್ತೆ ಗೊತ್ತಾ?

ಸತ್ವಗಳ ಸರ್ವನಾಶ: ಹಾಲಿನಲ್ಲಿ ವಿಟಮಿನ್ ಸಿ, ಬಿ12 ಮತ್ತು ಕ್ಯಾಲ್ಶಿಯಂ ಇರುತ್ತದೆ. ಚಹಾ ಪುಡಿಯ ಜೊತೆ ಹಾಲನ್ನ ಹಾಕಿ ಹತ್ತಾರು ನಿಮಿಷ ಕುದಿಸಿದರೆ, ಆ ಹಾಲಿನಲ್ಲಿರುವ ಎಲ್ಲಾ ಪೌಷ್ಟಿಕಾಂಶಗಳು ಬೆಂಕಿಯಲ್ಲಿ ಸುಟ್ಟು ಬೂದಿಯಾಗಿ ಹೋಗುತ್ತವೆ. ಕೊನೆಗೆ ಉಳಿಯೋದು ಬರೀ

ರುಚಿಯಿಲ್ಲದ ಬಣ್ಣದ ನೀರು!

ಎದೆಯುರಿ ಗ್ಯಾರಂಟಿ: ಚಹಾವನ್ನು ಅತಿಯಾಗಿ ಕುದಿಸುವುದರಿಂದ ಅದರ ಪಿಎಚ್ (pH) ಮಟ್ಟ ಏರುತ್ತದೆ. ಇದು ನೇರವಾಗಿ ನಿಮ್ಮ ಹೊಟ್ಟೆಯಲ್ಲಿ ಆಸಿಡಿಟಿ ಸೃಷ್ಟಿಸುತ್ತದೆ. ಹೊಟ್ಟೆ ಉಬ್ಬರ, ಅಜೀರ್ಣ ಅಥವಾ ದಿನವಿಡೀ ಎದೆಯುರಿ ಕಾಣಿಸಿಕೊಳ್ಳಲು ನಿಮ್ಮ ಈ ಚಹಾ ಮಾಡುವ ಕ್ರಮವೇ ಕಾರಣವಿರಬಹುದು.

57

ರುಚಿ ಗೆಡುತ್ತದೆ: ಚಹಾವನ್ನು ಒಂದು ಹಂತಕ್ಕಿಂತ ಹೆಚ್ಚು ಕುದಿಸಿದರೆ ಅದರ ನೈಸರ್ಗಿಕ ಘಮ ಮಾಯವಾಗಿ, ಒಂದು ರೀತಿಯ ಒಗರು ಮತ್ತು ಕಹಿ ರುಚಿ ಆವರಿಸಿಕೊಳ್ಳುತ್ತದೆ. ಆ ಚಹಾ ಕುಡಿದ ಮೇಲೆ ನಾಲಿಗೆಯ ಮೇಲೆ ಒಂದು ಪದರ ಕುಳಿತಂತ ಅನುಭವವಾಗುತ್ತದೆ.

ಹಾಗಾದರೆ ಚಹಾ ಮಾಡುವ 'ಪರ್ಫೆಕ್ಟ್' ಸ್ಟೈಲ್ ಯಾವುದು?

ಚಹಾ ಮಾಡೋದು ಕೂಡ ಒಂದು ಕಲೆ! ತಜ್ಞರ ಪ್ರಕಾರ, ಚಹಾವನ್ನು 'ಕುದಿಸುವುದಕ್ಕಿಂತ' ಅದನ್ನು 'ಬ್ರೂ' (Brew) ಮಾಡುವುದು ಅತ್ಯುತ್ತಮ ವಿಧಾನ. ಅದೆಲ್ಲೋ ಲಂಡನ್‌ನಲ್ಲಿ ಮಾಡೋ ರೀತಿ ಅಂತ ಅಂದುಕೊಳ್ಳಬೇಡಿ, ಇದು ಸುಲಭ!

67

ಮೊದಲು ನೀರನ್ನು ಚೆನ್ನಾಗಿ ಕುದಿಸಿ. ನೀರು ಕುದಿಯುತ್ತಿರುವಾಗಲೇ ಚಹಾ ಪುಡಿಯನ್ನು ಹಾಕಿ ಕೂಡಲೇ ಉರಿಯನ್ನು ಆರಿಸಿ (Switch off). ಅದರ ಮೇಲೆ ಒಂದು ತಟ್ಟೆ ಮುಚ್ಚಿ 3-4 ನಿಮಿಷ ಬಿಡಿ. ಈ ಸಮಯದಲ್ಲಿ ಚಹಾ ಪುಡಿಯ ಪೂರ್ಣ ಸತ್ವ ನೀರಿನಲ್ಲಿ ಇಳಿಯುತ್ತದೆ. ನಂತರ ನಿಮಗೆ ಬೇಕಾದಷ್ಟು ಸಕ್ಕರೆ ಮತ್ತು ಮೊದಲೇ ಬಿಸಿ ಮಾಡಿಟ್ಟುಕೊಂಡ ಹಾಲನ್ನು ಪ್ರತ್ಯೇಕವಾಗಿ ಸೇರಿಸಿಕೊಳ್ಳಿ. ಹೀಗೆ ಮಾಡಿದರೆ ಚಹಾದ ಘಮವೂ ಅದ್ಭುತವಾಗಿರುತ್ತದೆ ಮತ್ತು ಆರೋಗ್ಯಕ್ಕೂ ಯಾವುದೇ ತೊಂದರೆ ಇರುವುದಿಲ್ಲ.

77

ಕೊನೆಯ ಮಾತು:

ಚಹಾ ಅನ್ನೋದು ಮನಸ್ಸಿಗೆ ನೆಮ್ಮದಿ ನೀಡೋ ಪಾನೀಯವಾಗಿರಲಿ ಹೊರತು ಹೊಟ್ಟೆಗೆ ಕುತ್ತು ತರೋ ಕೆಮಿಕಲ್ ಆಗದಿರಲಿ. ನಾಳೆಯಿಂದ ಚಹಾ ಮಾಡುವಾಗ ಗಡಿಯಾರ ನೋಡಿ, 4-5 ನಿಮಿಷಕ್ಕಿಂತ ಹೆಚ್ಚು ಕುದಿಸಬೇಡಿ. ನೆನಪಿರಲಿ, ಚಹಾ ಮಾಡೋದು ಅಂದ್ರೆ ಪಾಯಸ ಮಾಡೋದಲ್ಲ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories