Japanese Lifestyle: ಪ್ರಪಂಚದಲ್ಲಿ ಹೆಚ್ಚು ದೀರ್ಘಾಯುಷಿಗಳು ಇರುವ ದೇಶ ಅಂದ್ರೆ ಅದು ಜಪಾನ್. ಅಲ್ಲಿನ ಜನರ ದೀರ್ಘ ಜೀವನದ ಗುಟ್ಟು ಅವರ ಜೀವನಶೈಲಿ. ಅವರ ಆಹಾರ, ದಿನಚರಿ ಎಲ್ಲವೂ ಅವರನ್ನು ದೀರ್ಘಾಯುಷಿಗಳನ್ನಾಗಿ ಮಾಡಿದೆ. ಅವರು ಅನುಸರಿಸುವ ಸರಳ ಸೂತ್ರಗಳನ್ನು ತಿಳಿಯೋಣ.
ಜಪಾನ್ ದೀರ್ಘಕಾಲ ಬದುಕುವ ನಿಯಮವನ್ನು ಭೇದಿಸಿದೆ, ಇದು ಜೀನ್ಸ್ ನಿಂದ ಬಂದಂತದ್ದು ಅಲ್ಲ. "ಅಮರರ ದ್ವೀಪ" ಎಂದು ಕರೆಯಲ್ಪಡುವ ಓಕಿನಾವಾದಲ್ಲಿ, ಭೂಮಿಯ ಮೇಲಿನ ಹೆಚ್ಚು ಶತಾಯುಷಿಗಳು ಜೀವಿಸುತ್ತಿದ್ದಾರೆ. ಆದರೆ 90 ಅಥವಾ 100 ವರ್ಷ ಆದ್ರೂ ಅವರ ಹೆಲ್ತಿಯಾಗಿರಲು ಕಾರಣ ಏನು ಗೊತ್ತಾ ಅವರ ಜೀವನ ಶೈಲಿ.
210
ಜಪಾನೀಯರ ಜೀವನ ಶೈಲಿ
ಹೌದು ಜಪಾನೀಯರ ಜೀವನಶೈಲಿ ಅದ್ಭುತವಾಗಿದೆ. ಅವರು ಸರಳವಾದ ಜೀವನವನ್ನು ಅಭ್ಯಸಿಸುತ್ತಾರೆ. ಇದರಿಂದ ಅವರು ದೀರ್ಘಕಾಲ ಬದುಕುವಂತಾಗುತ್ತದೆ. ಇಲ್ಲಿದೆ ನೋಡಿ ಯಾರೂ ಬೇಕಾದರೂ ಅಳವಡಿಸಿಕೊಳ್ಳಬಹುದಾದ ಸರಳ, ದೈನಂದಿನ ಅಭ್ಯಾಸಗಳು.
310
ಮಧ್ಯಂತರ ಉಪವಾಸ
ಹೌದು, ಇದು ಅವರ ಜೀವನದ ಮುಖ್ಯವಾದ ಭಾಗ. ಅವರು ಸಂಜೆಯೇ ತಮ್ಮ ಊಟ ಮಾಡಿ ಮುಗಿಸುತ್ತಾರೆ. ಸುಮಾರು 12 ರಿಂದ 14 ಗಂಟೆಗಳ ಕಾಲ ಅವರು ಯಾವುದೇ ಆಹಾರ ಸೇವಿಸುವುದಿಲ್ಲ. ಇದರಿಂದ ಡ್ಯಾಮೇಜ್ ಸೆಲ್ಸ್ ಕ್ಲಿಯರ್ ಆಗುತ್ತದೆ. ಮೆಟಬಾಲಿಸಂ ಬೂಸ್ಟ್ ಆಗುತ್ತದೆ. ಇಮ್ಯೂನಿಟಿ ಪವರ್ ಹೆಚ್ಚುತ್ತದೆ. ವಯಸ್ಸಾಗೋದು ನಿಧಾನವಾಗುತ್ತದೆ.
ಹೊಟ್ಟೆ 80% ತುಂಬುವವರೆಗೆ ಮಾತ್ರ ತಿನ್ನುವುದು (ಹರಾ ಹಚಿ ಬು)
ಇದನ್ನು ಓಕಿನಾವಾದ ಜನರು ನೂರಾರು ವರ್ಷಗಳಿಂದ ಫಾಲೋ ಮಾಡಿಕೊಂಡು ಬರುತ್ತಿದ್ದಾರೆ. ಹೊಟ್ಟೆ ಫುಲ್ ಆಗುವವರೆಗೂ ಅಲ್ಲ, 80% ಆಗುವವರೆಗೆ ಮಾತ್ರ ಅವರು ಊಟ ಮಾಡುತ್ತಾರೆ. ಇದರಿಂದ ಏನಾಗುತ್ತೆ ಅಂದ್ರೆ ಜೀರ್ಣಕ್ರಿಯೆ ಸುಧಾರಿಸುತ್ತದೆ. ಮೆಟಾಬಾಲಿಕ್ ಸ್ಟ್ರೆಸ್ ಇರೋದಿಲ್ಲ. ತೂಕ ಸರಿಯಾಗಿರುತ್ತದೆ. ಅವರು ಊಟ ಕಡಿಮೆ ಮಾಡುವುದಿಲ್ಲ, ಆದರೆ ಲೈಟ್ ಆಗಿ ಸೇವನೆ ಮಾಡುತ್ತಾರೆ.
510
ಜಪಾನೀಯರ ಆಹಾರ ಕ್ರಮ ಹೀಗಿದೆ
ಸಣ್ಣ ಪ್ರಮಾಣದಲ್ಲಿ ಊಟ ಮಾಡುತ್ತಾರೆ
ಸಕ್ಕರೆ ಕಡಿಮೆ ಬಳಕೆ ಮಾಡುತ್ತಾರೆ
ಬೇಗನೆ ಊಟ ಮುಗಿಸುತ್ತಾರೆ
ಸ್ನಾಕ್ಸ್ ತಿನ್ನೋದೆ ತುಂಬಾ ಕಡಿಮೆ.
610
ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ
ಹೌದು ಜಪಾನಿನ ಹಿರಿಯರು ವರ್ಕ್ ಔಟ್ ಮಾಡುವುದಿಲ್ಲ, ಆದರೆ ದಿನವಿಡೀ ಆಕ್ಟೀವ್ ಆಗಿರುತ್ತಾರೆ.
ಹೆಚ್ಚಾಗಿ ನಡೆಯುತ್ತಲೇ ಇರುತ್ತಾರೆ.
ಮೆಟ್ಟಿಲುಗಳನ್ನು ಹತ್ತಿ ಇಳಿಯುತ್ತಿರುತ್ತಾರೆ.
ಸೈಕ್ಲಿಂಗ್, ಗಾರ್ಡನಿಂಗ್ ಮಾಡುತ್ತಾರೆ.
ಎಲ್ಲಾ ಕೆಲಸಗಳನ್ನು ತಾವೇ ಖುದ್ದಾಗಿ ಮಾಡುತ್ತಾರೆ.
710
ದಿನಚರಿ ಚೆನ್ನಾಗಿದೆ
ಟೀ
ಹಣ್ಣು ಹಂಪಲು
ವೆಜ್ ಜ್ಯೂಸ್
ಉಪಾಹಾರ ನಂತರ
ಇದರಿಂದ ದೇಹದಲ್ಲಿ ಇನ್ಸುಲಿನ್ ಕಡಿಮೆಯಾಗುತ್ತದೆ. ದೀರ್ಘಕಾಲ ಬದುಕಲು ಸಹಾಯವಾಗುತ್ತದೆ.
810
ಮಾನಸಿಕ ಆರೋಗ್ಯದ ಕಡೆಗೆ ಗಮನ
ಸರಳ ಜೀವನ ವಿಧಾನ
ಪ್ರಕೃತಿ ಜೊತೆ ಹೆಚ್ಚು ಸಮಯ
ಉತ್ತಮ ಅಭ್ಯಾಸ, ಹವ್ಯಾಸಗಳು
ಜೀವನಪೂರ್ತಿ ಕಲಿಯುವಿಕೆ
ಸಮುದಾಯ ಬಲವಾಗಿದೆ
ಸಂತೋಷ ಮತ್ತು ಇಮೋಷನಲ್ ಬ್ಯಾಲೆನ್ಸ್
ದೀರ್ಘಾಯುಷಿಗಳಾಗಲು ದೈಹಿಕ ಆರೋಗ್ಯದ ಜೊತೆ ಮಾನಸಿಕ ಆರೋಗ್ಯವೂ ಮುಖ್ಯ ಎಂದು ಇವರು ನಂಬುತ್ತಾರೆ.
910
ದೀರ್ಘಾಯುಷಿ ಜಪಾನೀಯರು ಏನು ತಿನ್ನುತ್ತಾರೆ?
ಸಸ್ಯಹಾರಗಳು
ಸೀ ವೀಡ್
ಹಣ್ಣು ಹಂಪಲು
ಟೋಫು, ನ್ಯಾಟೋ, ಮಿಸೊ
ಬ್ರೌನ್ ರೈಸ್ ಮತ್ತು ಬಾರ್ಲಿ
ಈ ಆಹಾರಗಳು ಕರುಳಿನ ಆರೋಗ್ಯಕ್ಕೆ ಉತ್ತಮ, ಉರಿಯೂತವನ್ನು ಕಡಿಮೆ ಮಾಡುತ್ತದೆ ಹಾಗೂ ಚಯಾಪಚಯದ ಒತ್ತಡವನ್ನು ಕಡಿಮೆ ಮಾಡುತ್ತದೆ.