'ಇದು ನಾಚಿಕೆ..' ಐವಿಎಫ್ ಮೂಲಕ ಅವಳಿ ಮಕ್ಕಳ ಹೊಂದಿದ ಬಗ್ಗೆ ಇಶಾ ಅಂಬಾನಿ

First Published | Jun 29, 2024, 11:43 AM IST

ಇಶಾ ಅಂಬಾನಿ ಪಿರಮಾಲ್ ಐವಿಎಫ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಗ್ಗೆ ತೆರೆದುಕೊಂಡಿದ್ದಾರೆ.

ಭಾರತೀಯ ಬಿಲಿಯನೇರ್ ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರಿ ಮತ್ತು ಸ್ವತಃ ಉದ್ಯಮಿಯಾದ ಇಶಾ ಅಂಬಾನಿ ತನ್ನ ಮಕ್ಕಳನ್ನು ಗರ್ಭಧರಿಸಲು IVF ಆಯ್ಕೆ ಮಾಡಿದ ಬಗ್ಗೆ ತೆರೆದುಕೊಂಡಿದ್ದಾರೆ.

ವೋಗ್ ಇಂಡಿಯಾದೊಂದಿಗಿನ ಹೊಸ ಸಂದರ್ಶನದಲ್ಲಿ, ಇಶಾ ತನ್ನ ಐವಿಎಫ್ ಅನುಭವವನ್ನು ಅದರ ಕಾರ್ಯ ವಿಧಾನದೊಂದಿಗೆ ಹಂಚಿಕೊಂಡಿದ್ದಾರೆ.

Tap to resize

'ನನ್ನ ಅವಳಿಗಳನ್ನು ಐವಿಎಫ್ ಮೂಲಕ ಗರ್ಭಧರಿಸಲಾಗಿದೆ ಎಂದು ನಾನು ಆರಾಮಾಗಿ ಹೇಳುತ್ತೇನೆ. ಇಲ್ಲದಿದ್ದರೆ ನಾವದನ್ನು ಸಾಮಾನ್ಯಗೊಳಿಸೋದು ಹೇಗೆ' ಎಂದು ಇಶಾ ಪ್ರಶ್ನಿಸಿದ್ದಾರೆ. 

'ಐವಿಎಫ್ ಬಗ್ಗೆ ಯಾರೂ ನಾಚಿಕೆ ಪಡಬಾರದು. ಅದೊಂದು ಕಷ್ಟದ ಪ್ರಕ್ರಿಯೆ. ನೀವು ಅದರ ಮೂಲಕ ಹೋಗುತ್ತಿರುವಾಗ, ದೈಹಿಕವಾಗಿ ದಣಿದಿರುತ್ತೀರಿ' ಎಂದು ಇಶಾ ಹೇಳಿದ್ದಾರೆ.  

'ಇಂದು ಜಗತ್ತಿನಲ್ಲಿ ಆಧುನಿಕ ತಂತ್ರಜ್ಞಾನವಿದ್ದರೆ, ಅದನ್ನು ಮಕ್ಕಳನ್ನು ಹೊಂದಲು ಏಕೆ ಬಳಸಬಾರದು? ಇದು ನೀವು ಉತ್ಸುಕರಾಗಿರುವ ವಿಷಯವಾಗಿರಬೇಕು, ನೀವು ಮರೆಮಾಡಬೇಕಾದ ವಿಷಯವಲ್ಲ' ಎಂದು ರಿಲಯನ್ಸ್ ರಿಟೇಲ್ ಮಾಲಕಿ ವಿವರಿಸಿದ್ದಾರೆ. 

ಬೆಂಬಲ ಗುಂಪುಗಳು ಅಥವಾ ಇತರ ಮಹಿಳೆಯರೊಂದಿಗೆ ನೀವಿದರ ಬಗ್ಗೆ ಮಾತಾಡಿದರೆ ಪ್ರಕ್ರಿಯೆಯು ಸುಲಭವೆನಿಸುತ್ತದೆ ಎಂದಿರುವ ಇಶಾ ಮಕ್ಕಳಾದ ಕೃಷ್ಣಾ ಮತ್ತು ಆದಿಯಾರನ್ನು ಐವಿಎಫ್ ಮೂಲಕ ಪಡೆದಿದ್ದಾರೆ. Isha Ambani shares her IVF journey: 

ಇನ್ನು ತಮ್ಮ ಅವಳಿ ಮಕ್ಕಳಾದ ಆಕಾಶ್ ಮತ್ತು ಇಶಾರನ್ನು ನೀತಾ ಅಂಬಾನಿ ಕೂಡಾ ಐವಿಎಫ್ ತಂತ್ರಜ್ಞಾನದ ಮೂಲಕವೇ ಪಡೆದಿದ್ದು ಈ ಬಗ್ಗೆ ಅವರು ಹಿಂದೊಮ್ಮೆ ಮಾತನಾಡಿದ್ದರು. 

ವೈದ್ಯರು 23 ವರ್ಷದ ತನಗೆ ಎಂದಿಗೂ ಗರ್ಭಿಣಿಯಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದಾಗ ತುಂಬಾ ನೋವಿನಲ್ಲಿದ್ದೆ. ಆದರೆ ಐವಿಎಪ್ ಸಹಾಯದಿಂದ ಅವಳಿ ಮಕ್ಕಳು ಜನಿಸಿದರು ಎಂದು ನೀತಾ ತಿಳಿಸಿದ್ದರು. 

Latest Videos

click me!