Alcohol heart health myth Kannada: ಅಲ್ಪ ಪ್ರಮಾಣದಲ್ಲಿ ಮದ್ಯ ಸೇವಿಸುವುದು ಆರೋಗ್ಯಕ್ಕೆ, ವಿಶೇಷವಾಗಿ ಹೃದಯಕ್ಕೆ ಒಳ್ಳೆಯದು ಎಂಬ ನಂಬಿಕೆ ಬಹಳಷ್ಟು ಜನರಲ್ಲಿದೆ. ಒತ್ತಡ ಕಡಿಮೆ ಮಾಡಿಕೊಳ್ಳುವ ನೆಪದಲ್ಲಿ ದಿನಕ್ಕೊಂದು ಗ್ಲಾಸ್ ಆಲ್ಕೋಹಾಲ್ ತೆಗೆದುಕೊಳ್ಳುವವರ ಸಂಖ್ಯೆ ಕಡಿಮೆಯೇನಿಲ್ಲ.
ಸಂಶೋಧಕರಿಂದ ಎಚ್ಚರ ಸ್ವಲ್ಪ ಮದ್ಯಪಾನ ಹೃದಯದ ಆರೋಗ್ಯಕ್ಕೆ ಹಿತಕಾರಿ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯವಿಲ್ಲ ಎಂದು ಇತ್ತೀಚಿನ ಅಧ್ಯಯನವೊಂದು ಸ್ಪಷ್ಟಪಡಿಸಿದೆ. ದಿನಕ್ಕೆ ಕೇವಲ ಒಂದು ಸಣ್ಣ ಪೆಗ್ ಮದ್ಯ ಸೇವಿಸಿದರೂ ಸಹ ರಕ್ತದೊತ್ತಡ (BP) ಹೆಚ್ಚಾಗುವ ಅಪಾಯವಿದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ದೀರ್ಘಕಾಲದ ಈ ಅಭ್ಯಾಸವು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ನಂತಹ ಪ್ರಾಣಾಪಾಯದ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.
25
'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟ
'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟ ಈ ಸಂಶೋಧನೆಯ ವಿವರಗಳನ್ನು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ 'ಹೈಪರ್‌ಟೆನ್ಷನ್ ಜರ್ನಲ್'ನಲ್ಲಿ ಪ್ರಕಟಿಸಲಾಗಿದೆ. ಅಮೆರಿಕ, ಜಪಾನ್ ಮತ್ತು ದಕ್ಷಿಣ ಕೊರಿಯಾದ ಸುಮಾರು 19,548 ವ್ಯಕ್ತಿಗಳ ಆರೋಗ್ಯ ಮಾಹಿತಿಯನ್ನು ಹಲವು ವರ್ಷಗಳ ಕಾಲ ವಿಶ್ಲೇಷಿಸಿ ಈ ತೀರ್ಮಾನಕ್ಕೆ ಬರಲಾಗಿದೆ.
35
ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು
ಅಧ್ಯಯನದಲ್ಲಿ ತಿಳಿದುಬಂದ ಪ್ರಮುಖ ಅಂಶಗಳು ಮದ್ಯದ ಪ್ರಮಾಣ ಹೆಚ್ಚಾದಂತೆ ಬಿಪಿ ಹೆಚ್ಚಳ: ಮದ್ಯ ಸೇವನೆಯ ಪ್ರಮಾಣ ಹೆಚ್ಚಾದಂತೆ 'ಸಿಸ್ಟೋಲಿಕ್' ರಕ್ತದೊತ್ತಡವೂ (BP ಯ ಮೇಲಿನ ಸಂಖ್ಯೆ) ಕ್ರಮೇಣ ಹೆಚ್ಚಾಗುತ್ತದೆ ಎಂದು ಸಂಶೋಧಕರು ಗುರುತಿಸಿದ್ದಾರೆ.
ಕಡಿಮೆ ತೆಗೆದುಕೊಂಡರೂ ಡೇಂಜರ್: ದಿನಕ್ಕೆ ಕೇವಲ ಒಂದು ಸಣ್ಣ ಡ್ರಿಂಕ್ ಸೇವಿಸುವವರಲ್ಲೂ ರಕ್ತದೊತ್ತಡ ಹೆಚ್ಚಾಗುತ್ತದೆ. ಈ ಏರಿಕೆ ಆರಂಭದಲ್ಲಿ ಸಣ್ಣದಾಗಿ ಕಂಡರೂ, ವರ್ಷಗಳ ಕಾಲ ಈ ಅಭ್ಯಾಸ ಮುಂದುವರಿದರೆ ರಕ್ತನಾಳಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಲಿಂಗ ವ್ಯತ್ಯಾಸ: ಪುರುಷರಲ್ಲಿ ಸಿಸ್ಟೋಲಿಕ್ ಮತ್ತು ಡಯಾಸ್ಟೋಲಿಕ್ ಎರಡೂ ಬಿಪಿ ಹೆಚ್ಚಾಗುವುದು ಕಂಡುಬಂದಿದೆ. ಮಹಿಳೆಯರಲ್ಲಿ ಡಯಾಸ್ಟೋಲಿಕ್ ಬಿಪಿ ಹೆಚ್ಚಳ ಅಷ್ಟಾಗಿ ಸ್ಪಷ್ಟವಾಗಿಲ್ಲದಿದ್ದರೂ, ಒಟ್ಟಾರೆ ರಕ್ತದೊತ್ತಡದ ಅಪಾಯ ಮಾತ್ರ ಇರುತ್ತದೆ. "ಸ್ವಲ್ಪ ಕುಡಿದರೆ ಲಾಭ" ಎಂಬುದು ಕೇವಲ ಭ್ರಮೆ!
ಕಿಡ್ನಿ ಸಮಸ್ಯೆಯೂ ಬರುತ್ತೆ ಈ ಸಂಶೋಧನೆಯ ನೇತೃತ್ವ ವಹಿಸಿದ್ದ ಪ್ರೊಫೆಸರ್ ಮಾರ್ಕೊ ವಿನ್ಸೆಟಿ ಅವರ ಪ್ರಕಾರ, "ಮದ್ಯ ಸೇವಿಸದವರಿಗಿಂತ ಸ್ವಲ್ಪ ಕುಡಿಯುವವರಲ್ಲಿ ಯಾವುದೇ ವಿಶೇಷ ಆರೋಗ್ಯ ಪ್ರಯೋಜನಗಳು ಕಂಡುಬಂದಿಲ್ಲ. ಹೃದಯದ ಆರೋಗ್ಯ ಕಾಪಾಡಿಕೊಳ್ಳಬೇಕೆಂದರೆ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದೇ ಉತ್ತಮ ಮಾರ್ಗ."
ಬ್ರಿಟನ್‌ನ ನ್ಯಾಷನಲ್ ಹೆಲ್ತ್ ಸರ್ವೀಸ್ (NHS) ಪ್ರಕಾರ, ಸಾಮಾನ್ಯವಾಗಿ 140/90 mmHg ಗಿಂತ ಹೆಚ್ಚಿನ ರಕ್ತದೊತ್ತಡವಿದ್ದರೆ ಅದನ್ನು ಅಧಿಕ ರಕ್ತದೊತ್ತಡ (High BP) ಎಂದು ಪರಿಗಣಿಸಲಾಗುತ್ತದೆ. ಇದು ಕಿಡ್ನಿ ಸಮಸ್ಯೆಗಳಿಗೂ ಕಾರಣವಾಗಬಹುದು.
55
ಹೃದಯದ ಆರೋಗ್ಯಕ್ಕಾಗಿ ಹೀಗೆ ಮಾಡಿ
ಹೃದಯದ ಆರೋಗ್ಯಕ್ಕಾಗಿ ಹೀಗೆ ಮಾಡಿ *ಮದ್ಯಪಾನವನ್ನು ಸಾಧ್ಯವಾದಷ್ಟು ಸಂಪೂರ್ಣವಾಗಿ ಬಿಡಿ. *ಧೂಮಪಾನದಿಂದ ದೂರವಿರಿ. *ದಿನಕ್ಕೆ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ. *ಹಣ್ಣು, ತರಕಾರಿ ಮತ್ತು ಕಡಿಮೆ ಉಪ್ಪು ಇರುವ ಸಮತೋಲಿತ ಆಹಾರ ಸೇವಿಸಿ. *ತೂಕ, ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ. *ಮಧುಮೇಹ ಅಥವಾ ಬಿಪಿ ಇರುವವರು ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಿ. *ಆರೋಗ್ಯಕರ ಜೀವನಶೈಲಿ ಮತ್ತು ದುಶ್ಚಟಗಳಿಂದ ದೂರವಿರುವುದು ಹೃದಯದ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ಹೃದ್ರೋಗ ತಜ್ಞರು ಸಲಹೆ ನೀಡುತ್ತಾರೆ.
ಗಮನಿಸಿ: ಈ ಲೇಖನವು ಅಂತರಾಷ್ಟ್ರೀಯ ಅಧ್ಯಯನದ ಆಧಾರದ ಮೇಲೆ ಕೇವಲ ಸಾಮಾನ್ಯ ಮಾಹಿತಿಗಾಗಿ ನೀಡಲಾಗಿದೆ. ಇದು ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಆರೋಗ್ಯ ಸಮಸ್ಯೆಗಳಿದ್ದಲ್ಲಿ ತಜ್ಞ ವೈದ್ಯರನ್ನು ಸಂಪರ್ಕಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.