ಉಪವಾಸ ಮಾಡೋದ್ರಿಂದ ನಿಜವಾಗ್ಲೂ ದೇಹದ ವಿಷ ಕಡಿಮೆಯಾಗುತ್ತಾ?

Published : Nov 08, 2023, 02:07 PM IST

ಇತ್ತೀಚಿನ ದಿನಗಳಲ್ಲಿ, ಉಪವಾಸದ ಮೂಲಕ ದೇಹವನ್ನು ನಿರ್ವಿಷಗೊಳಿಸುವ ಟ್ರೆಂಡ್ ಹೆಚ್ಚು ಜನಪ್ರಿಯವಾಗುತ್ತಿದೆ. ಉಪವಾಸವು ದೇಹವನ್ನು ನಿರ್ವಿಷಗೊಳಿಸುತ್ತದೆ ಎಂದು ನೀವು ಭಾವಿಸುತ್ತೀರಾ? ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ ನೋಡೊಣ.   

PREV
17
ಉಪವಾಸ ಮಾಡೋದ್ರಿಂದ ನಿಜವಾಗ್ಲೂ ದೇಹದ ವಿಷ ಕಡಿಮೆಯಾಗುತ್ತಾ?

ಉಪವಾಸ (fasting) ನಮಗೆ ಹೊಸ ಪರಿಕಲ್ಪನೆಯಲ್ಲ. ಇದು ಬಹಳ ಹಿಂದಿನಿಂದಲೂ ವಿಭಿನ್ನ ಸಂಸ್ಕೃತಿಗಳ ಭಾಗವಾಗಿದೆ. ನಮ್ಮ ಮನೆಯ ಹಿರಿಯರು ಯಾವಾಗಲೂ ಉಪವಾಸದ ಆರೋಗ್ಯ ಪ್ರಯೋಜನಗಳ ಬಗ್ಗೆ ಹೇಳುತ್ತಾರೆ. ವಿಜ್ಞಾನ ಕೂಡ ಇದನ್ನು ಬೆಂಬಲಿಸುತ್ತದೆ. ಏಕೆಂದರೆ ಉಪವಾಸವು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಚಯಾಪಚಯವನ್ನು ಹೆಚ್ಚಿಸುತ್ತದೆ, ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ, ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆಗಳಲ್ಲಿಯೂ ಪರಿಣಾಮಕಾರಿಯಾಗಿದೆ.
 

27

ಅದೇ ಸಮಯದಲ್ಲಿ, ಉಪವಾಸವು ನಿಜವಾಗಿಯೂ ದೇಹದಿಂದ ವಿಷವನ್ನು (body detox) ತೆಗೆದು ಹಾಕುತ್ತದೆಯೇ ಎಂಬ ಪ್ರಶ್ನೆ ಕೆಲವರಲ್ಲಿದೆ. ಈ ಬಗ್ಗೆ ವಿಭಿನ್ನ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಉಪವಾಸವು ನಿಜವಾಗಿಯೂ ದೇಹವನ್ನು ನಿರ್ವಿಷಗೊಳಿಸುತ್ತದೆಯೇ ಎಂದು ತಜ್ಞರಿಂದ ತಿಳಿದುಕೊಳ್ಳೋಣ? 
 

37

ಉಪವಾಸವು ನಿಜವಾಗಿಯೂ ದೇಹವನ್ನು ನಿರ್ವಿಷಗೊಳಿಸುತ್ತದೆಯೇ?
ಉಪವಾಸ ಮಾಡಿದಾಗ, ಯಕೃತ್ತಿನ ಆರೋಗ್ಯವನ್ನು ಉತ್ತೇಜಿಸುವ ಕೆಲವು ಕಿಣ್ವಗಳು ಉತ್ಪತ್ತಿಯಾಗುತ್ತವೆ ಮತ್ತು ಯಕೃತ್ತು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂಗ ಎಂದು ತಜ್ಞರು ಹೇಳುತ್ತಾರೆ. 
 

47

ಉಪವಾಸ ಮತ್ತು ಕ್ಯಾಲೊರಿ ನಿರ್ಬಂಧವು ಆರೋಗ್ಯಕರ ನಿರ್ವಿಷೀಕರಣವನ್ನು ಉತ್ತೇಜಿಸುತ್ತದೆ ನಿಜ,  ಆದರೆ ನಮ್ಮ ದೇಹವು ಈಗಾಗಲೇ ದೇಹದಿಂದ ತ್ಯಾಜ್ಯ ಮತ್ತು ವಿಷ ತೆಗೆದುಹಾಕಲು ನಿರಂತರವಾಗಿ ಕೆಲಸ ಮಾಡುವ ಯಕೃತ್ತು ಮತ್ತು ಮೂತ್ರಪಿಂಡಗಳಂತಹ (liver and kidney) ನಿರ್ವಿಷಗೊಳಿಸುವ ವ್ಯವಸ್ಥೆಗಳನ್ನು ಹೊಂದಿದೆ.
 

57

ನಿರ್ವಿಷಗೊಳಿಸಲು ಏನು ಮಾಡಬೇಕು?
ಇತ್ತೀಚಿನ ದಿನಗಳಲ್ಲಿ ಉಪವಾಸದ ಮೂಲಕ ದೇಹವನ್ನು ನಿರ್ವಿಷಗೊಳಿಸುವ ಟ್ರೆಂಡ್ ಬಹಳ ಜನಪ್ರಿಯವಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ, ಆದರೆ ಪ್ರಾಮಾಣಿಕವಾಗಿ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಕೇವಲ ಒಂದು ಸಿದ್ಧಾಂತ. ತಿಳಿಯದೆ ದೇಹವನ್ನು ನಿರ್ವಿಷಗೊಳಿಸಲು ನೀವು ಉಪವಾಸ ಮಾಡಿದರೆ ಅದು ನಿಮಗೆ ಅಪಾಯ ತಂದೊಡ್ಡಬಹುದು.

67

ನೀವು ನಿರ್ವಿಷೀಕರಣವನ್ನು ಉತ್ತೇಜಿಸಲು ಬಯಸಿದರೆ, ಪೋಷಕಾಂಶ ಭರಿತ ಆಹಾರವನ್ನು ಸೇವಿಸುವುದು, ಸರಿಯಾಗಿ ಹೈಡ್ರೇಟ್ (hydrate) ಆಗಿರುವುದು, ಸಾಕಷ್ಟು ವಿಶ್ರಾಂತಿ (Rest) ಪಡೆಯುವುದು ಮತ್ತು ಧೂಮಪಾನವನ್ನು (Smoking) ತಪ್ಪಿಸುವುದು ಮುಖ್ಯ. ಇದರಿಂದ ದೇಹವು ಸುಲಭವಾಗಿ ನಿರ್ವಿಷವಾಗುತ್ತೆ. 

77

ನೀವು ತುಂಬಾ ಆರೋಗ್ಯ ಪ್ರಜ್ಞೆ ಹೊಂದಿದ್ದರೆ, ಆರೋಗ್ಯಕರವಾಗಿ ತಿನ್ನಲು ಪ್ರಾರಂಭಿಸಿ. ಸಾಕಷ್ಟು ನೀರು ಕುಡಿಯಿರಿ, ಅದು ನಿಮ್ಮ ದೇಹಕ್ಕೆ ಸಾಕು. ಉಳಿದದ್ದನ್ನು ನಿಮ್ಮ ಮೂತ್ರಪಿಂಡಗಳು ಮತ್ತು ಯಕೃತ್ತಿಗೆ ಬಿಡಿ. ಇದರ ಹೊರತಾಗಿಯೂ, ನೀವು ಉಪವಾಸ ಮಾಡಲು ಬಯಸಿದರೆ, ತಜ್ಞರ ಸಲಹೆಯಿಲ್ಲದೆ ಅದನ್ನು ಮಾಡಬೇಡಿ.

Read more Photos on
click me!

Recommended Stories