Asianet Suvarna News Asianet Suvarna News

ಶುಗರ್, ಬಿಪಿ ಇದ್ದೂ ಉಪವಾಸ, ವ್ರತ ಮಾಡ್ತೀರಾ? ಮಾತ್ರೆ ತಗೋಳ್ಳೋದು ಸೇಫಾ?

ಹಬ್ಬದ ಹೆಸರಿನಲ್ಲಿ ನಡೆಯುವ ಉಪವಾಸಗಳು ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ. ಅದ್ರಿಂದ ಅನೇಕ ಲಾಭವಿದೆ. ಆದ್ರೆ ಯಾವುದೇ ಆಹಾರ ಸೇವನೆ ಮಾಡದೆ ಇರುವ ಸಂದರ್ಭದಲ್ಲಿ ಮಾತ್ರೆ ಮಾತ್ರ ತಿಂದ್ರೆ ಏನಾಗ್ಬಹುದು. ಉತ್ತರ ಇಲ್ಲಿದೆ. 
 

Is It Safe To Eat Medicines While Fasting Know From Doctors roo
Author
First Published Sep 6, 2023, 3:57 PM IST

ಭಾರತ ಮಾತ್ರವಲ್ಲ ಪ್ರಪಂಚದ ಅನೇಕ ಕಡೆ ಉಪವಾಸ, ವ್ರತದ ಪದ್ಧತಿ ಇದೆ. ನಾನಾ ಕಾರಣಕ್ಕೆ ಜನರು ಉಪವಾಸ, ವ್ರತ ಮಾಡ್ತಾರೆ. ಕೆಲವರು ಘನ ಆಹಾರ ಸೇವನೆ ಬದಲು ಕೇವಲ ದ್ರವ ಆಹಾರ ಸೇವನೆ ಮಾಡಿ ಉಪವಾಸ ಮಾಡ್ತಾರೆ. ಇನ್ನು ಕೆಲವರು ಸಂಪೂರ್ಣ ಉಪವಾಸವಿರುತ್ತಾರೆ. ಅಂದ್ರೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಆಹಾರ, ಜ್ಯೂಸ್, ನೀರು ಏನನ್ನೂ ಸೇವನೆ ಮಾಡೋದಿಲ್ಲ. ತಿಂಗಳಲ್ಲಿ ಒಂದು ಉಪವಾಸ ಮಾಡೋದು ಯೋಗ್ಯವೆಂದು ತಜ್ಞರು ಹೇಳ್ತಾರೆ. ಉಪವಾಸ ಮಾಡುವುದ್ರಿಂದ ದೇಹ ಸರಿಯಾಗಿ ಕಾರ್ಯನಿರ್ವಹಿಸುತ್ತದೆ. ಮೆದುಳು ಸರಿಯಾಗಿ ಕೆಲಸ ಮಾಡಲು ಸಹಾಯವಾಗುತ್ತದೆ. 

ಭಾರತ (India) ದ ಕೆಲ ಹಬ್ಬ, ಪೂಜೆಗಳಲ್ಲಿ ಎಲ್ಲರೂ ಉಪವಾಸ (Fasting) ಮಾಡಬೇಕೆಂಬ ನಿಯಮವಿದ್ದರೂ ವೃದ್ಧರು, ಗರ್ಭಿಣಿಯರು, ಮಕ್ಕಳನ್ನು ಇದರಿಂದ ಹೊರಗಿಡುತ್ತಾರೆ. ಹಾಗೆಯೇ ಈಗಾಗಲೇ ಅನಾರೋಗ್ಯದಿಂದ ಬಳಲುತ್ತಿರುವವರು ಉಪವಾಸ ಮಾಡಬೇಕಾಗಿಲ್ಲ ಎನ್ನುತ್ತಾರೆ. ಹಾಗಿದ್ದೂ ಅನಾರೋಗ್ಯ (Illness) ಕ್ಕೆ ಒಳಗಾದ ಕೆಲವರು ಉಪವಾಸ ಮಾಡುವ ನಿರ್ಧಾರ ಕೈಗೊಂಡಿರುತ್ತಾರೆ. ಮೊದಲಿನಿಂದಲೂ ಖಾಯಿಲೆಯಿಂದ ಬಳಲುತ್ತಿರುವ ಜನರಿಗೆ ಪ್ರತಿ ದಿನ ಮಾತ್ರೆ ಸೇವನೆ ಮಾಡಬೇಕಾಗುತ್ತದೆ. ಒಂದು ಹೊತ್ತಿನ ಮಾತ್ರೆ ಬಿಟ್ಟರೂ ಸಮಸ್ಯೆಯಾಗುತ್ತೆ ಎನ್ನುವವರಿದ್ದಾರೆ. ಹಾಗಿರುವಾಗ ಉಪವಾಸ ಸಮಯದಲ್ಲಿ ಅವರು ಮಾತ್ರೆ ಸೇವನೆ ಮಾಡಬಹುದೇ ಎಂಬ ಪ್ರಶ್ನೆ ಬರುತ್ತದೆ. ಇದ್ರ ಬಗ್ಗೆ ಸಾಕಷ್ಟು ಭಿನ್ನ ಅಭಿಪ್ರಾಯಗಳಿದ್ದರೂ ಅಪೋಲೋ ತಜ್ಞರು ಏನು ಹೇಳ್ತಾರೆ ಎಂಬುದನ್ನು ನಾವು ಹೇಳ್ತೇವೆ.

ಬೆಂಗ್ಳೂರಲ್ಲಿ ಒಂದೇ ತಿಂಗಳಲ್ಲಿ 2 ಸಾವಿರ ಡೆಂಘೀ ಕೇಸ್‌: ಬಿಬಿಎಂಪಿ ಆಯುಕ್ತ ಹೇಳಿದ್ದೇನು?

ಉಪವಾಸ ಮಾಡುವಾಗ ಔಷಧಿ ತೆಗೆದುಕೊಳ್ಳಬಹುದೇ? : ಪ್ರತಿ ದಿನ ಆಹಾರ ಸೇವನೆ ಮಾಡುವುದಕ್ಕೂ ಉಪವಾಸ ಮಾಡುವುದಕ್ಕೂ ವ್ಯತ್ಯಾಸವಿದೆ. ಉಪವಾಸದ ಸಮಯದಲ್ಲಿ ನಮ್ಮ ದೇಹದಲ್ಲಿ ಅನೇಕ ಬದಲಾವಣೆ ಆಗುತ್ತದೆ. ಹಾರ್ಮೋನ್, ಚಯಾಪಚಯ ಹಾಗೂ ಪೋಷಕಾಂಶಗಳಲ್ಲಿ ಬದಲಾವಣೆ ಆಗುತ್ತದೆ. ಹಾಗಾಗಿ ಉಪವಾಸದ ಸಮಯದಲ್ಲಿ ಮಾತ್ರೆ ಸೇವನೆ ಮಾಡದಿರುವುದು ಒಳ್ಳೆಯದು.
ಅನೇಕ ಮಾತ್ರೆಗಳನ್ನು ವೈದ್ಯರು ನೀಡುವ ಸಮಯದಲ್ಲೇ ಊಟದ ನಂತ್ರ ಎಂಬ ಸೂಚನೆ ನೀಡಿರುತ್ತಾರೆ. ಅಂದ್ರೆ ನೀವು ಸೇವನೆ ಮಾಡುವ ಮಾತ್ರೆಗಳಿಗೆ ಆಹಾರದ ಅಗತ್ಯವಿರುತ್ತದೆ. ನೀವು ಆಹಾರ ಸೇವನೆ ಮಾಡದೆ ಮಾತ್ರೆಗಳನ್ನು ಸೇವಿಸಿದಾಗ ಅವುಗಳು ನಿಮ್ಮ ದೇಹದ ಮೇಲೆ ಬೀರುವ ಪರಿಣಾಮ ಕಡಿಮೆಯಾಗುತ್ತದೆ.

ಮನೆಯಲ್ಲಿ ಅಸ್ತಮಾ ರೋಗಿಗಳಿದ್ದರೆ ಮೇಣದಬತ್ತಿ ಹಚ್ಚೋಕೆ ಹೋಗ್ಬೇಡಿ

ಉಪವಾಸ  ಸಾಮಾನ್ಯವಾಗಿ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರುಪೇರುಗಳನ್ನು ಉಂಟುಮಾಡುತ್ತದೆ. ಮಧುಮೇಹ ಅಥವಾ ಇತರ ಚಯಾಪಚಯ ಅಸ್ವಸ್ಥತೆಗಳಿರುವ ವ್ಯಕ್ತಿಗಳಿಗೆ, ಹೈಪೊಗ್ಲಿಸಿಮಿಯಾ ಅಥವಾ ಹೈಪರ್ಗ್ಲೈಸೀಮಿಯಾವನ್ನು ತಡೆಗಟ್ಟಲು ಎಚ್ಚರಿಕೆಯಿಂದ ಔಷಧಿಗಳನ್ನು ತೆಗೆದುಕೊಳ್ಳುವುದು ಮುಖ್ಯ. ಉಪವಾಸದ ಸಮಯದಲ್ಲಿ ಆಹಾರವನ್ನು ಸೇವಿಸದೆ ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ತಲೆತಿರುಗುವಿಕೆ,   ವಾಂತಿಯಂತಹ ಇತರ ಲಕ್ಷಣಗಳನ್ನು ಉಂಟಾಗಬಹುದು. 

ಉಪವಾಸದಲ್ಲಿ ಔಷಧಿ ಸೇವನೆ ಮಾಡುವವರಿದ್ದರೆ ಈ ಸಲಹೆ ಪಾಲಿಸಿ : ನಿಮಗೆ ಉಪವಾಸವೂ ಅನಿವಾರ್ಯ, ಮಾತ್ರೆ ಸೇವನೆಯೂ ಅಗತ್ಯ ಎಂದಾದ್ರೆ ನೀವು ಕೆಲ ನಿಯಮಗಳನ್ನು ತಪ್ಪದೆ ಪಾಲನೆ ಮಾಡಬೇಕು. ಮೊದಲನೇಯದಾಗಿ ನೀವು ವೈದ್ಯರನ್ನು ಭೇಟಿಯಾಗಬೇಕು. ನಿಮ್ಮ ಉಪವಾಸ ಕ್ರಮ, ಔಷದಿ ಪ್ರಮಾಣ ಎಲ್ಲವನ್ನೂ ಪರಿಶೀಲಿಸಿ ವೈದ್ಯರು ಸಲಹೆ ನೀಡುತ್ತಾರೆ. ಅದನ್ನು ನೀವು ತಪ್ಪದೆ ಪಾಲಿಸಬೇಕು. 

ಸಮಯಕ್ಕೆ ಸರಿಯಾಗಿ ಮಾತ್ರೆ ಸೇವನೆ ಮಾಡಿ : ಉಪವಾಸದ ಸಮಯದಲ್ಲಿ ಮಾತ್ರೆ ತೆಗೆದುಕೊಳ್ಳುವವರು ನೀವಾಗಿದ್ದರೆ ಸಮಯಕ್ಕೆ ಮಹತ್ವ ನೀಡಿ. ಸಾಮಾನ್ಯ ದಿನದಲ್ಲಿ ಮಾತ್ರೆ ಸೇವನೆ ಮಾಡುವ ಸಮಯದಲ್ಲೇ ನೀವು ಮಾತ್ರೆ ಸೇವನೆ ಮಾಡಿ. ದಿನದ ಮೂರೂ ಸಮಯ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಉಪವಾಸದ ದಿನ ಒಂದು ಮಾತ್ರೆಯನ್ನಾದ್ರೂ ಸೇವನೆ ಮಾಡಿ.

ನೀರಿನ ಸೇವನೆ (Have Water) : ನೀವು ಪ್ರತಿ ನಿತ್ಯ ಮಾತ್ರೆ ಸೇವನೆ ಮಾಡ್ತಿದ್ದರೆ ಅದಕ್ಕೆ ತಕ್ಕಂತೆ ನೀರನ್ನು ಕುಡಿಯಬೇಕು. ನೀವು ನೀರು ಕುಡಿಯುವ ಪ್ರಮಾಣ ಕಡಿಮೆ ಮಾಡಿದ್ರೆ ನಿರ್ಜಲೀಕರಣ ಸಮಸ್ಯೆಯ ನಿಮ್ಮನ್ನು ಕಾಡುತ್ತದೆ.

ಹಣ್ಣಿನ ಸೇವನೆ (Eat Frutis) : ನಿಮಗೆ ಖಾಯಿಲೆಯಿದ್ದು, ಉಪವಾಸ ಮಾಡ್ತಿದ್ದರೆ ಹಣ್ಣುಗಳ ಸೇವನೆ ಮಡೆಯಬೇಡಿ. ನೀವು ಆಲೂಗಡ್ಡೆಯನ್ನು ಬೇಯಿಸಿ  ತಿನ್ನಬಹುದು. ಆದರೆ ಕೆಲ ಮಾತ್ರೆಗಳನ್ನು ಸಿಟ್ರಿಕ್ ಹಣ್ಣುಗಳ ಜೊತೆ ಸೇವನೆ ಮಾಡಬಾರದು ಎಂಬುದು ನೆನಪಿರಲಿ. 
 

Follow Us:
Download App:
  • android
  • ios