ಉಳಿದ ಅನ್ನ ತಿಂತೀರಾ? ಅನುಕೂಲದಷ್ಟೇ ಅನಾನುಕೂಲವೂ ಇದೆ

Published : Oct 15, 2025, 01:43 PM IST

Leftover Rice Health Benefits: ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದರೆ ಮಾತ್ರ ಪ್ರಯೋಜನಕಾರಿಯಾಗಬಹುದು. ಹಾಗೆ ಮಾಡದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. 

PREV
15
ಉಳಿದ ಅನ್ನವನ್ನು ತಿನ್ನುವುದು ಸುರಕ್ಷಿತವೇ?

ಕೆಲವೊಮ್ಮೆ ಮನೆಯಲ್ಲಿ ಅನ್ನ ಹೆಚ್ಚು ಉಳಿದು ಬಿಡುತ್ತದೆ. ಬಹುತೇಕರು ಈ ಅನ್ನವನ್ನ ಎಸೆಯಲ್ಲ. ಮರುದಿನ ತಿನ್ನುತ್ತೇವೆ. ಆದರೆ ಇಲ್ಲೊಂದು ಪ್ರಶ್ನೆಯಿದೆ. ಉಳಿದ ಅನ್ನವನ್ನು ತಿನ್ನುವುದು ಸುರಕ್ಷಿತವೇ?. ಇದಕ್ಕೆ ಉತ್ತರ ಹೌದು ಮತ್ತು ಇಲ್ಲ ಎರಡೂ. ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದರೆ ಮಾತ್ರ ಪ್ರಯೋಜನಕಾರಿಯಾಗಬಹುದು. ಹಾಗೆ ಮಾಡದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಬನ್ನಿ ಈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

25
ಉಳಿದ ಅನ್ನ ತಿನ್ನುವುದು ಪ್ರಯೋಜನಕಾರಿಯೇ?

ಪೋಷಕಾಂಶಗಳ ಲಭ್ಯತೆ: ಉಳಿದ ಅನ್ನವನ್ನು ಸರಿಯಾಗಿ ಸಂಗ್ರಹಿಸಿದಾಗ ಅದರಲ್ಲಿರುವ ಕಾರ್ಬೋಹೈಡ್ರೇಟ್ಸ್‌, ಬಿ ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳನ್ನು ಉಳಿಸಿಕೊಳ್ಳುತ್ತದೆ. ಇದು ಶಕ್ತಿಯ ಉತ್ತಮ ಮೂಲವಾಗಿದೆ.

ನಿರೋಧಕ ಪಿಷ್ಟ: ಉಳಿದ ಅನ್ನ ತಿನ್ನೋದ್ರಿಂದ ಆರೋಗ್ಯಕ್ಕೆ ಒಂದೆರೆಡಲ್ಲ, ಅನೇಕ ಪ್ರಯೋಜನಗಳಿವೆ. ಆಗಷ್ಟೇ ಬೇಯಿಸಿದ ಅನ್ನವನ್ನು ತಣ್ಣಗಾಗಲು ಬಿಟ್ಟಾಗ, ಅದು "ನಿರೋಧಕ ಪಿಷ್ಟ" ಎಂಬ ವಿಶೇಷ ರೀತಿಯ ಪಿಷ್ಟವನ್ನು ರೂಪಿಸುತ್ತದೆ. ಈ ಪಿಷ್ಟವು ನಮ್ಮ ದೇಹದಲ್ಲಿ ಜೀರ್ಣವಾಗುವುದಿಲ್ಲ. ಆದರೆ ಕರುಳಿನಲ್ಲಿ ನಾರಿನಂತೆ ಕಾರ್ಯನಿರ್ವಹಿಸುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ: ಇದು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳಿಗೆ ಆಹಾರವನ್ನು ಒದಗಿಸುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.

35
ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ

ರಕ್ತದಲ್ಲಿನ ಸಕ್ಕರೆ ನಿಯಂತ್ರಣ: ಉಳಿದ ಅನ್ನದಲ್ಲಿರುವ ನಿರೋಧಕ ಪಿಷ್ಟವು ರಕ್ತದಲ್ಲಿನ ಸಕ್ಕರೆ ಮಟ್ಟವು ಹಠಾತ್ತನೆ ಏರುವುದನ್ನು ತಡೆಯುತ್ತದೆ. ಇದು ಟೈಪ್ 2 ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ತೂಕ ನಿರ್ವಹಣೆ: ಇದು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದು ಅತಿಯಾಗಿ ತಿನ್ನುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

45
ಉಳಿದ ಅನ್ನ ತಿನ್ನುವುದರಿಂದಾಗುವ ಅನಾನುಕೂಲಗಳು

ಫುಡ್‌ ಪಾಯಿಸನ್
ಉಳಿದ ಅನ್ನದಿಂದ ಉಂಟಾಗುವ ದೊಡ್ಡ ಅಪಾಯವೆಂದರೆ ಫುಡ್‌ ಪಾಯಿಸನ್. ಈ ಅಪಾಯವು ಅನ್ನವನ್ನು ಸರಿಯಾಗಿ ಸಂಗ್ರಹಿಸದ ಕಾರಣ ಉಂಟಾಗುತ್ತದೆ.

ಬ್ಯಾಕ್ಟೀರಿಯಾದ ಸೋಂಕುಗಳು
ಬೇಯಿಸದ ಅಕ್ಕಿಯಲ್ಲಿ ಹೆಚ್ಚಾಗಿ ಬ್ಯಾಸಿಲಸ್ ಸೀರಿಯಸ್ ಬ್ಯಾಕ್ಟೀರಿಯಾದ ಬೀಜಕಗಳು ಇರುತ್ತವೆ. ಅಡುಗೆ ಮಾಡುವುದರಿಂದ ಈ ಬೀಜಕಗಳು ನಾಶವಾಗುವುದಿಲ್ಲ. ಬೇಯಿಸಿದ ನಂತರ ಕೋಣೆಯ ಉಷ್ಣಾಂಶದಲ್ಲಿ ಅನ್ನವನ್ನ ತಣ್ಣಗಾಗಲು ಬಿಟ್ಟಾಗ, ಬ್ಯಾಕ್ಟೀರಿಯಾಗಳು ಡಬ್ಬಲ್ ಆಗಿ ಟಾಕ್ಸಿನ್ ಉತ್ಪಾದಿಸುತ್ತವೆ. ನೆನಪಿಡಿ, ಈ ಟಾಕ್ಸಿನ್ ಮತ್ತೆ ಬಿಸಿ ಮಾಡುವುದರಿಂದ ನಾಶವಾಗುವುದಿಲ್ಲ.

55
ಮತ್ತೆ ಬಿಸಿ ಮಾಡ್ತೀರಾ?

ಹೊಟ್ಟೆ ಸೆಳೆತ
ಈ ಬ್ಯಾಕ್ಟೀರಿಯಾದಿಂದ ಕಲುಷಿತಗೊಂಡ ಅನ್ನವನ್ನು ತಿನ್ನುವುದರಿಂದ ಅತಿಸಾರ, ವಾಂತಿ ಮತ್ತು ಹೊಟ್ಟೆ ಸೆಳೆತ ಸೇರಿದಂತೆ ಗಂಭೀರ ಸಮಸ್ಯೆಗಳು ಉಂಟಾಗಬಹುದು. ಈ ಲಕ್ಷಣಗಳು ಸಾಮಾನ್ಯವಾಗಿ 1 ರಿಂದ 5 ಗಂಟೆಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಪೋಷಕಾಂಶಗಳ ನಷ್ಟ
ಉಳಿದ ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿರುವ ನೀರಿನಲ್ಲಿ ಕರಗುವ ಕೆಲವು ಜೀವಸತ್ವಗಳ ಪ್ರಮಾಣ ಕಡಿಮೆಯಾಗಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories