gastric
ಹೊರಗಡೆ ಏನಾದರೂ ತಿಂದಾಗ ಗ್ಯಾಸ್ಟ್ರಿಕ್(Gastric) ಸಮಸ್ಯೆ ಕಾಣಿಸಿಕೊಂಡರೆ, ಆ ಸಮಯದಲ್ಲಿ ನೀವು ಮನೆಯಿಂದ ದೂರವಿದ್ದರೆ, ತೊಂದರೆಯು ಅನೇಕ ಪಟ್ಟು ಹೆಚ್ಚಾಗುತ್ತದೆ. ನಿಮ್ಮ ಸುತ್ತಲಿನ ಯಾವ ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ನಿಮಗೆ ಅರ್ಥವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಇವು ನಿಮಗೆ ಸಹಾಯ ಮಾಡುವ ಕೆಲವು ಸರಳ ಕ್ರಮಗಳು.
gastric
ಶುಂಠಿ(Ginger) ಅಥವಾ ಪೆಪ್ಪರ್ ಮಿಂಟ್ ಚಹಾ ನಿಮಗೆ ಪ್ರಯೋಜನಕಾರಿ ಇದು ಗ್ಯಾಸ್ ಮತ್ತು ನೋವು ಎರಡನ್ನೂ ನಿವಾರಿಸುತ್ತದೆ. ಒಂದು ಗ್ಲಾಸ್ ನೀರಿಗೆ ಶುಂಠಿಯನ್ನು ಜಜ್ಜಿ ಹಾಕಿ. ಅದಕ್ಕೆ ಪುದಿನ ಎಲೆಗಳನ್ನು ಗುದ್ದಿ ಹಾಕಬೇಕು. ಇದು ಚೆನ್ನಾಗಿ ಕುದಿ ಬಂದ ಬಳಿಕ ಇಳಿಸಿ, ಸೋಸಿ ಸೇವಿಸಿ.
gastric
ಗ್ಯಾಸ್ ನಿಂದಾಗಿ ಹೊಟ್ಟೆಯಲ್ಲಿ ಹೆಚ್ಚು ನೋವು ಕಾಣಿಸಿಕೊಂಡರೆ ಆಗ ನೀವು ಬಿಸಿ ನೀರನ್ನು(Hot water) ಬಾಟಲಿಯಲ್ಲಿ ತುಂಬಿ ಹೊಟ್ಟೆಯ ಮೇಲೆ ಸ್ವಲ್ಪ ಸಮಯ ಇಡಬಹುದು. ನೀವು ನಿರಾಳರಾಗುತ್ತೀರಿ. ಇದು ಆರಾಮದಾಯಕ ಅನುಭವ ನೀಡುತ್ತದೆ. ಹೊರಗಡೆ ನೀವು ಒಬ್ಬರೇ ಇದ್ದ ಸಂದರ್ಭದಲ್ಲಿ ಈ ಟ್ರಿಕ್ಸ್ ನಿಮ್ಮ ನೆರವಿಗೆ ಬರುತ್ತದೆ.
gastric
ಮೊಸರು(Curd) ತಿನ್ನುವುದು ಅಥವಾ ಲಸ್ಸಿ ಕುಡಿಯುವುದು ನಿಮ್ಮ ಹೊಟ್ಟೆಯನ್ನು ವಿಶ್ರಾಂತಿಗೊಳಿಸುತ್ತದೆ. ಮೊಸರಿನಲ್ಲಿರುವ ಅಂತಿ ಬ್ಯಾಕ್ಟ್ರೀರಿಯಲ್ ಗುಣ ಹೊಟ್ಟೆಯಲ್ಲಿನ ಗ್ಯಾಸ್ ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಆದುದರಿಂದ ಹೊಟ್ಟೆ ನೋವಿನ ಸಂದರ್ಭದಲ್ಲಿ ಇದನ್ನು ಸೇವಿಸಿ.
gastric
ನಿಮ್ಮ ಹೊಟ್ಟೆನೋವು ಪ್ರತಿದಿನ ಹೆಚ್ಚಾದರೆ ಅಥವಾ ಅನಿಲವು ಹೆಚ್ಚಾದರೆ, ಆಗ ನೀವು ಹಾಲು(Milk), ಕ್ರೀಮ್ ಅಥವಾ ಚೀಸ್ ಇತ್ಯಾದಿಗಳ ಸೇವನೆಯನ್ನು ಕಡಿಮೆ ಮಾಡಬೇಕು. ಇವುಗಳನ್ನು ಸೇವಿಸುವುದರಿಂದ ಗ್ಯಾಸ್ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಇದು ಆರೋಗ್ಯಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.
gastric
ಕರಿದ ಆಹಾರಗಳನ್ನು ತಪ್ಪಿಸಿ ಮತ್ತು ಕಡಿಮೆ ಮಸಾಲೆ(Masala) ಇರುವ ಆಹಾರಗಳನ್ನು ಮಾತ್ರ ಸೇವಿಸಿ. ಕರಿದ ಆಹಾರಗಳನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಹೊಟ್ಟೆ ಉಬ್ಬರ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚುತ್ತದೆ. ಆದುದರಿಂದ ಇದರ ಸೇವನೆಯನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಬೇಕು.
gastric
ಕೊಬ್ಬಿನ ಅಂಶ ಹೆಚ್ಚಿರುವ ಆಹಾರಗಳನ್ನು ತಿನ್ನುವುದರಿಂದ ಹೊಟ್ಟೆಯಲ್ಲಿ ಅನಿಲ ಸೃಷ್ಟಿಯಾಗುತ್ತದೆ. ಆದುದರಿಂದ ಅವುಗಳಿಂದ ದೂರವಿರಿ. ಸಾಧ್ಯವಾದಷ್ಟು ಆರೋಗ್ಯಯುತ ಆಹಾರವನ್ನು(Healthy food) ಸೇವಿಸಿ. ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿಯಾಗಿದೆ.
gastric
ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಸ್ವಲ್ಪ ಸಮಯ ವಾಯುವಿಹಾರ(Walking) ಮಾಡಿ . ವಾಯುವಿಹಾರ ಮಾಡಿದರೆ ನಿಮಗೆ ನಿರಾಳವಾಗುತ್ತದೆ. ನಡೆದಾಗ ಹೊಟ್ಟೆ ಸಡಿಲವಾಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯೂ ನಿವಾರಣೆಯಾಗಿ ಹೊಟ್ಟೆ ಹಗುರಾಗುತ್ತದೆ.
gastric
ಪುದೀನಾ(Mint) ರಸವು ಹೊಟ್ಟೆಯಲ್ಲಿನ ನೋವನ್ನು ತಕ್ಷಣ ನಿವಾರಿಸಬಹುದು. ಇದಲ್ಲದೆ ನಿಂಬೆ ಪಾನಕ ಅಥವಾ ನಿಂಬೆಯಿಂದ ಮಾಡಿದ ಯಾವುದೇ ಪಾನೀಯವನ್ನು ಸೇವಿಸಿ. ಇದು ನಿಮಗೆ ವಿಶ್ರಾಂತಿ ನೀಡುತ್ತದೆ. ಹಾಗೂ ಸೆಲರಿ ನೀರು ಕುಡಿಯುವುದರಿಂದ ಹೊಟ್ಟೆ ನೋವು ಕೂಡ ನಿವಾರಣೆ.