ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಪ್ರತಿಯೊಂದು ವಿಷಯವನ್ನೂ ಕಣ್ಣು ಮುಚ್ಚಿ ನಂಬಿದರೆ ಏನಾಗುತ್ತದೆ ಎಂಬುದಕ್ಕೆ ಚೀನಾದಲ್ಲಿ ನಡೆಯುತ್ತಿರುವ ಈ ಘಟನೆಗಳೇ ಸಾಕ್ಷಿ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಸುಳ್ಳು ಭರವಸೆಗೆ ಮರುಳಾಗಿ ಜನರು ಈಗ ಆಸ್ಪತ್ರೆ ಪಾಲಾಗುತ್ತಿದ್ದಾರೆ!
ಕೊರೊನಾ ಎಂಬ ಮಹಾಮಾರಿಯನ್ನು ಹಬ್ಬಿಸಿ ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂಡಿದ್ದ ಅದೇ ಚೀನಾದಿಂದ ಈಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಂದಿದೆ. ಯಾವುದೋ ವೈರಸ್ ರೂಪದಲ್ಲಲ್ಲ, ಬದಲಾಗಿ ವಿಚಿತ್ರ ಮತ್ತು ಪ್ರಾಣಾಪಾಯಕಾರಿ 'ಡಯಟ್' ಟ್ರೆಂಡ್ ಮೂಲಕ ಚೀನಿಯರು ಈಗ ಸುದ್ದಿಯಲ್ಲಿದ್ದಾರೆ. ತೂಕ ಇಳಿಸಿಕೊಳ್ಳುವ ಭರದಲ್ಲಿ ಅಲ್ಲಿನ ಜನರು ಮಾಡುತ್ತಿರುವ ಈ ಕೆಲಸ ಕೇಳಿದರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!
ಏನಿದು ಆಘಾತಕಾರಿ ಟ್ರೆಂಡ್?
ಚೀನಾದ ಸೋಶಿಯಲ್ ಮೀಡಿಯಾದಲ್ಲಿ ಈಗ ಒಂದು ವಿಲಕ್ಷಣ ಟ್ರೆಂಡ್ ವೈರಲ್ ಆಗಿದೆ. ಕೇವಲ ಎರಡೇ ದಿನಗಳಲ್ಲಿ 4 ಕೆಜಿ ತೂಕ ಇಳಿಸಬಹುದು ಎಂಬ ಆಸೆಗೆ ಬಿದ್ದು ಜನರು ಶುಗರ್-ಫ್ರೀ ಟೀ ಮತ್ತು ಗ್ಲಿಸರಿನ್ ಎನಿಮಾ (Glycerin Enema) ದ್ರವವನ್ನು ಮಿಶ್ರಣ ಮಾಡಿ ಕುಡಿಯುತ್ತಿದ್ದಾರೆ. ಹೌದು, ಮಲಬದ್ಧತೆ ಸಮಸ್ಯೆಗೆ ಕೇವಲ ಶೌಚದ ದ್ವಾರದ ಮೂಲಕ ಬಾಹ್ಯವಾಗಿ ಬಳಸಬೇಕಾದ 'ಎನಿಮಾ' ಔಷಧವನ್ನು ಜನರು ಚಹಾದಲ್ಲಿ ಬೆರೆಸಿ ಕುಡಿಯುತ್ತಿದ್ದಾರೆ!
25
ಸಂಕಷ್ಟಕ್ಕೆ ಸಿಲುಕಿದ ಇನ್ಫ್ಲುಯೆನ್ಸರ್‌ಗಳು
ಚೀನಾದ ಇನ್ಫ್ಲುಯೆನ್ಸರ್‌ಗಳು ಗ್ಲಿಸರಿನ್ ಎನಿಮಾ ಬಾಟಲಿಯನ್ನು ಟೀ ಒಳಗೆ ಸುರಿದು ಕುಡಿಯುವ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದನ್ನು ಕುಡಿದರೆ ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ, ಇದರಿಂದ ದೇಹದ ತೂಕ ತಕ್ಷಣ ಇಳಿಯುತ್ತದೆ ಎಂಬುದು ಇವರ ವಾದ. ಈ ಹುಚ್ಚಾಟ ಈಗ ಅನೇಕರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕ (ICU) ತಲುಪುವಂತೆ ಮಾಡಿದೆ.
35
ಬೆಚ್ಚಿಬೀಳಿಸುವ ಮಹಿಳೆಯ ಅನುಭವ
ಸೋಶಿಯಲ್ ಮೀಡಿಯಾ ನೋಡಿ ಈ ಪ್ರಯೋಗ ಮಾಡಿದ 'ಮಾ' ಎಂಬ ಮಹಿಳೆಯ ಕಥೆ ಈಗ ಭೀತಿ ಹುಟ್ಟಿಸಿದೆ. ಇದನ್ನು ಕುಡಿದ 30 ನಿಮಿಷದಲ್ಲೇ ನನ್ನ ಸ್ಥಿತಿ ಹದಗೆಟ್ಟಿತು. ವಾಂತಿ ಮತ್ತು ಭೇದಿ ಶುರುವಾಯಿತು. ರಾತ್ರಿಯಿಡೀ ಪ್ರತಿ ಗಂಟೆಗೊಮ್ಮೆ ಶೌಚಾಲಯಕ್ಕೆ ಓಡಬೇಕಾಯಿತು. ಸ್ವಲ್ಪವೂ ನಿದ್ದೆ ಮಾಡಲು ಸಾಧ್ಯವಾಗಲಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ. ಇಂತಹ ಹತ್ತಾರು ಪ್ರಕರಣಗಳು ಚೀನಾದ ಆಸ್ಪತ್ರೆಗಳಲ್ಲಿ ದಾಖಲಾಗುತ್ತಿವೆ.
ಈ ವಿಲಕ್ಷಣ ಟ್ರೆಂಡ್‌ನಿಂದಾಗಿ ಚೀನಾದ ಹೆನಾನ್ ಪ್ರಾಂತ್ಯದ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗಾಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ವೈದ್ಯರ ಪ್ರಕಾರ ಈ ಕೆಳಗಿನ ಅಪಾಯಗಳು ಸಂಭವಿಸಬಹುದು.
ನಿರ್ಜಲೀಕರಣ (Dehydration): ಇದು ದೇಹದ ಕೊಬ್ಬನ್ನು ಕರಗಿಸುವುದಿಲ್ಲ, ಬದಲಾಗಿ ದೇಹದಲ್ಲಿರುವ ನೀರನ್ನು ಹೊರಹಾಕುತ್ತದೆ. ಇದರಿಂದ ತೂಕ ಇಳಿದಂತೆ ಭಾಸವಾದರೂ, ನೀರು ಕುಡಿದ ತಕ್ಷಣ ತೂಕ ಮತ್ತೆ ಮೊದಲಿನಂತಾಗುತ್ತದೆ.
ಜೀರ್ಣಾಂಗಕ್ಕೆ ಹಾನಿ: ಗ್ಲಿಸರಿನ್ ಎನಿಮಾವನ್ನು ಕುಡಿಯುವುದರಿಂದ ಕರುಳಿನ ಪದರಕ್ಕೆ ಹಾನಿಯಾಗುತ್ತದೆ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ತಪ್ಪುತ್ತದೆ.
ತೀವ್ರ ಅಡ್ಡಪರಿಣಾಮ: ಸಕ್ಕರೆ ರಹಿತ ಚಹಾದಲ್ಲಿರುವ 'ಥಿಯೋಫಿಲಿನ್' ಮತ್ತು 'ಟ್ಯಾನಿಕ್ ಆಸಿಡ್' ಜೊತೆಗೆ ಎನಿಮಾ ಸೇರಿದಾಗ ಜೀರ್ಣಾಂಗ ವ್ಯವಸ್ಥೆಯ ಮೇಲೆ ವಿಪರೀತ ಒತ್ತಡ ಬೀಳುತ್ತದೆ.
55
ಹಿಂದೆಯೂ ಚೀನಾ ಇಂತದ್ದೇ ಕೆಲಸ ಮಾಡಿತ್ತು!
ಚೀನಾದಲ್ಲಿ ಇಂತಹ ವಿಚಿತ್ರ ಡಯಟ್ ಟ್ರೆಂಡ್ ಹೊಸದೇನಲ್ಲ. ಈ ಹಿಂದೆ 25 ವರ್ಷದ ಯುವತಿಯೊಬ್ಬಳು ವಾರಕ್ಕೆ ಒಂದು ದಿನ ಬೇಕಾಬಿಟ್ಟಿ ತಿಂದು, ಉಳಿದ 6 ದಿನ ಉಪವಾಸ ಮಾಡುವ 'ಡಯಟ್' ಪಾಲಿಸಿ ಅಕ್ಯೂಟ್ ಪ್ಯಾಂಕ್ರಿಯಾಟೈಟಿಸ್ (Pancreatitis) ಎಂಬ ಗಂಭೀರ ಕಾಯಿಲೆಗೆ ತುತ್ತಾಗಿದ್ದಳು.
ವಿಶ್ವಕ್ಕೆ ಮಾರಕ ವೈರಸ್‌ಗಳನ್ನು ನೀಡಿದ ಇತಿಹಾಸವಿರುವ ಚೀನಾದಲ್ಲಿ ಈಗ ಇಂತಹ ಹುಚ್ಚು ಸಾಹಸಗಳು ಸಂಚಲನ ಮೂಡಿಸುತ್ತಿವೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಶಾರ್ಟ್‌ಕಟ್ ವಿಧಾನಗಳನ್ನು ನಂಬಿ ನಿಮ್ಮ ಪ್ರಾಣವನ್ನು ನೀವೇ ಸಂಕಷ್ಟಕ್ಕೆ ದೂಡಬೇಡಿ. ತೂಕ ಇಳಿಸಲು ವೈದ್ಯರ ಸಲಹೆ ಮತ್ತು ಆರೋಗ್ಯಕರ ಜೀವನಶೈಲಿ ಮಾತ್ರ ಏಕೈಕ ದಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.