ಯೂರಿಕ್ ಹೆಚ್ಚಳ: ಯುವ ಜನರನ್ನೂ ಬಿಡದ ಅನಾರೋಗ್ಯ ಸಮಸ್ಯೆ

Published : Sep 30, 2022, 01:30 PM IST

ಯೂರಿಕ್ ಆಸಿಡ್ ಬಗ್ಗೆ ನೀವು ಈಗಾಗಲೇ ಕೇಳಿರುತ್ತೀರಿ. ಆದರೆ ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ಅನ್ನೋದು ನಿಮಗೆ ಗೊತ್ತಾ? ನಮ್ಮ ದೇಹದಲ್ಲಿ ಯೂರಿಕ್ ಆಮ್ಲವು ಹೆಚ್ಚಾದರೆ, ಅದು ಮೂತ್ರಪಿಂಡದ (Kidney) ವೈಫಲ್ಯದ ಅಪಾಯ ಹೆಚ್ಚಿಸುತ್ತದೆ. ಇದರಿಂದ ನೀವು ಅನೇಕ ತೊಂದರೆ ಅನುಭವಿಸಬೇಕಾಗಿ ಬರುತ್ತೆ. ಆದ್ರೆ ನಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಯಾಕೆ ಹೆಚ್ಚುತ್ತೇ? ಕೆಲವು ತಪ್ಪು ಆಹಾರ ಪದ್ಧತಿಗಳು ಸಹ ಈ ಸಮಸ್ಯೆಯನ್ನು ಹೆಚ್ಚಿಸುತ್ತವೆ. ಇದನ್ನು ನೈಸರ್ಗಿಕ ರೀತಿಯಲ್ಲಿ ನಿಯಂತ್ರಿಸಬಹುದು. ಅವುಗಳ ಬಗ್ಗೆ ತಿಳಿಯೋಣ.   

PREV
18
ಯೂರಿಕ್ ಹೆಚ್ಚಳ: ಯುವ ಜನರನ್ನೂ ಬಿಡದ ಅನಾರೋಗ್ಯ ಸಮಸ್ಯೆ

ಯೂರಿಕ್ ಆಸಿಡ್ ಹೊಂದಿರುವ ರೋಗಿಗಳ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಯುವಜನರೂ ಈ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಆದರೆ ಹೆಚ್ಚಿನವರಿಗೆ ಈ ಸಮಸ್ಯೆ ಬಗ್ಗೆ ತಿಳಿದಿಲ್ಲ, ಇದರಿಂದಾಗಿ ಸಮಸ್ಯೆ ಹೆಚ್ಚಾಗುತ್ತದೆ. ಯೂರಿಕ್ ಆಮ್ಲ ನಮ್ಮ ಪಿತ್ತಜನಕಾಂಗದಲ್ಲಿ ತಯಾರಿಸಿದ ತ್ಯಾಜ್ಯ ಉತ್ಪನ್ನ. ಇದು ರಕ್ತದ ಮೂಲಕ ಮೂತ್ರಪಿಂಡಗಳನ್ನು (kidney)ತಲುಪುತ್ತದೆ ಮತ್ತು ಮೂತ್ರದ ಮೂಲಕ ದೇಹದಿಂದ ಹೊರ ಹೋಗುತ್ತದೆ. 

28

ತಜ್ಞರ ಪ್ರಕಾರ, ಪುರುಷರಲ್ಲಿ ಯೂರಿಕ್ ಆಮ್ಲವು 4 ರಿಂದ 6.5 ಮಟ್ಟಗಳವರೆಗೆ ಸಾಮಾನ್ಯ. ಮಹಿಳೆಯರಲ್ಲಿ, ಅದರ ಮಟ್ಟವನ್ನು 3.5 ರಿಂದ 6 ರವರೆಗೆ ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಅದರ ಮಟ್ಟವು ಸಾಮಾನ್ಯಕ್ಕಿಂತ ಹೆಚ್ಚಾದಾಗ, ಅದು ದೇಹದ ವಿವಿಧ ಭಾಗಗಳಲ್ಲಿ ಸಂಗ್ರಹವಾಗುತ್ತದೆ. ಯೂರಿಕ್ ಆಮ್ಲವು (uric acid) ಹೆಚ್ಚಾದಾಗ, ಕೈಗಳು ಮತ್ತು ಪಾದಗಳ ಕೀಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಈ ಸಮಸ್ಯೆಯು ದೀರ್ಘಕಾಲದವರೆಗೆ ಸಂಭವಿಸಿದರೆ, ಕಿಡ್ನಿ ಸಮಸ್ಯೆ ಉಂಟಾಗುತ್ತದೆ. ಅಷ್ಟಕ್ಕೂ, ಅದು ಹೆಚ್ಚಾಗಲು ಕಾರಣವೇನು? ಈ ಬಗ್ಗೆ ತಿಳಿದುಕೊಳ್ಳಿ.

38
ಆಮ್ಲ ಹೆಚ್ಚಳಕ್ಕೇನು ಕಾರಣ?

ತಜ್ಞರ ಪ್ರಕಾರ ಯೂರಿಕ್ ಆಸಿಡ್ ಹೆಚ್ಚಳಕ್ಕೆ ಮೂರು ಪ್ರಮುಖ ಕಾರಣಗಳಿವೆ. ವ್ಯಕ್ತಿಯ ದೇಹದಲ್ಲಿ ಯೂರಿಕ್ ಆಮ್ಲವನ್ನು ತಯಾರಿಸುವ ಕಿಣ್ವವು ದೋಷಯುಕ್ತವಾದಾಗ, ಅದರ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ಯೂರಿಕ್ ಆಸಿಡ್ ನಮ್ಮ ದೇಹದಲ್ಲಿ ಸಂಗ್ರಹವಾಗಲು ಪ್ರಾರಂಭಿಸುತ್ತದೆ. 

48

ಯೂರಿಕ್ ಆಮ್ಲದ ಹೆಚ್ಚಳಕ್ಕೆ ಎರಡನೆಯ ದೊಡ್ಡ ಕಾರಣವೆಂದರೆ ಲಿವರ್ ಮತ್ತು ಕಿಡ್ನಿ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆ. ಮೂರನೆಯ ಕಾರಣವೆಂದರೆ ನಾನ್-ವೆಜ್ ನ (eating non vegetarian) ಅತಿಯಾದ ಸೇವನೆ. ನಾನ್ ವೆಜ್ ಅನ್ನು ಹೆಚ್ಚು ತಿನ್ನುವ ಜನರಲ್ಲಿ ಯೂರಿಕ್ ಆಮ್ಲವು ಹೆಚ್ಚಾಗುತ್ತದೆ. ಇದಲ್ಲದೆ, ಇತರ ಕೆಲವು ಆರೋಗ್ಯ ಪರಿಸ್ಥಿತಿಗಳು ಸಹ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತವೆ.
 

58
ಆಗೋ ಸಮಸ್ಯೆ ಏನು?

ಯೂರಿಕ್ ಆಮ್ಲ ಹೆಚ್ಚಾದಾಗ, ಕೈಗಳು ಮತ್ತು ಪಾದಗಳ ಕೀಲುಗಳಲ್ಲಿ ಸಮಸ್ಯೆ ಉಂಟಾಗುತ್ತದೆ. ಸಂಧಿವಾತದಂತಹ (arthritis) ಸಮಸ್ಯೆ ಕಾಣಿಸಿಕೊಳ್ಳುತ್ತೆ, ಇದು ದೇಹದ ಸಣ್ಣ ಕೀಲುಗಳಲ್ಲಿ ನೋವನ್ನು ಉಂಟುಮಾಡುತ್ತದೆ. ಇದರಿಂದ ದೇಹಪೂರ್ತಿ ದಣಿದಂತಹ, ನೋವಾದಂತಹ ಅನುಭವ ಆಗುತ್ತೆ. 

68

ಯೂರಿಕ್ ಆಮ್ಲದ ಮಟ್ಟವು ದೀರ್ಘಕಾಲದವರೆಗೆ ಹೆಚ್ಚಿದ್ದರೆ, ಆಗ ಮೂತ್ರಪಿಂಡದ ವೈಫಲ್ಯ, ಮೂತ್ರಪಿಂಡದ ಕಲ್ಲುಗಳು ಮತ್ತು ಹೆಚ್ಚಿದ ರಕ್ತದೊತ್ತಡದ ಸಮಸ್ಯೆಗಳು ಉಂಟಾಗಬಹುದು. ಯೂರಿಕ್ ಆಸಿಡ್ ಹೆಚ್ಚಾದರೆ ಹೃದಯದ ಮೇಲಿನ ಒತ್ತಡ ಹೆಚ್ಚುತ್ತೆ ಮತ್ತು ಹೃದ್ರೋಗಕ್ಕೆ (heart problem) ಕಾರಣವಾಗಬಹುದು. ಆದರೆ ಯೂರಿಕ್ ಆಮ್ಲವು ಮಧುಮೇಹಕ್ಕೆ ಸಂಬಂಧಿಸಿಲ್ಲ. ರಕ್ತ ಪರೀಕ್ಷೆಗಳಲ್ಲಿ ಯೂರಿಕ್ ಆಮ್ಲವನ್ನು ಕಂಡುಹಿಡಿಯಲಾಗುತ್ತದೆ.

78
ಯೂರಿಕ್ ಆಸಿಡ್ ನಿಯಂತ್ರಿಸೋದು ಹೇಗೆ?

- ಯೂರಿಕ್ ಆಮ್ಲವನ್ನು ನಿಯಂತ್ರಿಸಲು ನಾನ್-ವೆಜ್ ತಿನ್ನುವುದನ್ನು ನಿಲ್ಲಿಸಿ.
– ದ್ವಿದಳ ಧಾನ್ಯಗಳ ಹೆಚ್ಚಿನ ಸೇವನೆಯು ಈ ಸಮಸ್ಯೆ ಹೆಚ್ಚಿಸುತ್ತದೆ. ಇದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ.
- ಆರೋಗ್ಯಕರ ಆಹಾರ ಮತ್ತು ತೂಕ ನಿಯಂತ್ರಣದಿಂದ ಇದನ್ನು ನಿಯಂತ್ರಿಸಬಹುದು.

88

– ನಿಮ್ಮನ್ನು ನೀವು ದೈಹಿಕವಾಗಿ ಸಕ್ರಿಯವಾಗಿರಿಸಿಕೊಳ್ಳುವ ಮೂಲಕ ಇದನ್ನು ನಿಯಂತ್ರಿಸಬಹುದು. ಅದಕ್ಕಾಗಿ ನಿಯಮಿತವಾಗಿ ವ್ಯಾಯಾಮ, ವಾಕಿಂಗ್, ಇತರ ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡಬಹುದು.
- ಕಾಲಕಾಲಕ್ಕೆ ನಿಮ್ಮ ರಕ್ತ ಪರೀಕ್ಷೆ (blood test)ಮಾಡಿಸಿಕೊಳ್ಳಿ ಮತ್ತು ವೈದ್ಯರನ್ನು ಸಂಪರ್ಕಿಸಿ.
- ವೈದ್ಯರನ್ನು ಸಂಪರ್ಕಿಸಿದ ನಂತರ ಯೂರಿಕ್ ಆಸಿಡ್ ನಿಯಂತ್ರಣ ಔಷಧಿಯನ್ನು ತೆಗೆದುಕೊಳ್ಳಿ.

Read more Photos on
click me!

Recommended Stories