ಶುಗರ್ ಪೇಷೆಂಟ್ಸ್ ಗಮನಕ್ಕೆ: ಖಾಲಿ ಹೊಟ್ಟೇಲಿ ಕಾಫಿ ಕುಡಿದರೆ ರೋಗ ಕಂಟ್ರೋಲಿಗೆ ಬರೋಲ್ಲ!

Published : Sep 29, 2022, 07:37 PM ISTUpdated : Sep 30, 2022, 12:32 PM IST

ಬೆಳಿಗ್ಗೆ ಎದ್ದ ತಕ್ಷಣ ಜನರು ಮೊದಲು ತಮ್ಮ ಕೈಗಳಲ್ಲಿ ಕಾಫಿಯ ಕಪ್ ತೆಗೆದುಕೊಳ್ಳುತ್ತಾರೆ. ಬೆಳಗ್ಗೆ ಮೊದಲು ಕಾಫಿ ಕುಡಿಯುವುದರಿಂದ ದಿನವಿಡೀ ನೀವು ಫ್ರೆಶ್ ಫೀಲ್ ಆಗುತ್ತೀರಿ ಎಂದು ನಿಮಗೆ ಅನಿಸಿರಬಹುದು. ಆದರೆ ಇದರಿಂದ ನಿಮ್ಮ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು ಅನ್ನೋದು ನಿಮಗೆ ತಿಳಿದಿದೆಯೇ?. ಹೌದು, ಬೆಳಗ್ಗಿನ ಸಮಯದಲ್ಲಿ, ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಹೆಚ್ಚಾಗಿರುತ್ತೆ, ಇದೇ ಟೈಮಿನಲ್ಲಿ ನೀವು ಕಾಫಿ ಕುಡಿಯುವುದರಿಂದ ಒತ್ತಡದ (Stress) ಹಾರ್ಮೋನ್ ಮಟ್ಟವನ್ನು ಹೆಚ್ಚಿಸಬಹುದು. ಅಲ್ಲದೇ ಅನೇಕ ಸಮಸ್ಯೆ ಕಾಡಬಹುದು. 

PREV
110
ಶುಗರ್ ಪೇಷೆಂಟ್ಸ್ ಗಮನಕ್ಕೆ: ಖಾಲಿ ಹೊಟ್ಟೇಲಿ ಕಾಫಿ ಕುಡಿದರೆ ರೋಗ ಕಂಟ್ರೋಲಿಗೆ ಬರೋಲ್ಲ!

ಬೆಳಗ್ಗೆ ಎದ್ದ ತಕ್ಷಣ ಕಾಫಿ ಕುಡಿಯೋ ಜನರಲ್ಲಿ ನೀವು ಒಬ್ಬರೇ? ಹಾಗಿದ್ರೆ ನೀವು ಇದನ್ನು ಓದ್ಲೇ ಬೇಕು. ಯಾಕಂದ್ರೆ ಇಲ್ಲಿ ಹಾಗೆ ಬೆಳಗ್ಗೆ ಕಾಫಿ ಕುಡೀಯೋದ್ರಿಂದ ಏನಾಗುತ್ತೆ ಅನ್ನೋದನ್ನು ಹೇಳುತ್ತೇವೆ. ಸೀಮಿತ ಪ್ರಮಾಣದ ಕಾಫಿ ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ ಮತ್ತು ಅನೇಕ ಅಧ್ಯಯನಗಳು ಇದನ್ನು ಬೆಂಬಲಿಸುತ್ತವೆ. ಇದರಿಂದ ಹೃದ್ರೋಗವನ್ನು (heart problem) ತಡೆಗಟ್ಟಬಹುದು, ಮಧುಮೇಹವನ್ನು ನಿಯಂತ್ರಿಸಬಹುದು, ಅಲ್ಝೈಮರ್ ಕಾಯಿಲೆ ಮತ್ತು ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯೋದ್ರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮೂ ಬೀರುತ್ತೆ.

210
ಕಾಫಿಯ ಅನಾನುಕೂಲಗಳು ಯಾವುವು?

ಜನರು ಬೆಳಿಗ್ಗೆ ಎದ್ದ ಕೂಡಲೇ ಮೊದಲು ತಮ್ಮ ಕೈಗಳಲ್ಲಿ ಕಾಫಿಯ ಲೋಟ ತೆಗೆದುಕೊಳ್ಳುವುದನ್ನು ಕಾಣಬಹುದು. ಬೆಳಿಗ್ಗೆ ಮೊದಲು ಕಾಫಿ ಕುಡಿಯುವುದರಿಂದ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು. ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸುವುದರಿಂದ, ಅಜೀರ್ಣ (digestive problem), ರಕ್ತದಲ್ಲಿನ ಸಕ್ಕರೆಯ ಹೆಚ್ಚಳ, ಹೆಚ್ಚಿದ ಒತ್ತಡ ಮತ್ತು ಇತರ ಸಮಸ್ಯೆಗಳು ಉಂಟಾಗಬಹುದು.
 

310

ಬೆಳಿಗ್ಗೆ ಚಹಾ ಅಥವಾ ಕಾಫಿ ಕುಡಿಯೋದು ತುಂಬಾ ಕೆಟ್ಟ ಅಭ್ಯಾಸ ಎನ್ನುತ್ತಾರೆ ತಜ್ಞರು. ಈ ಸಮಯದಲ್ಲಿ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗಿರುತ್ತೆ ಮತ್ತು ಕಾಫಿ ಕುಡಿಯುವುದರಿಂದ ಒತ್ತಡದ ಹಾರ್ಮೋನ್ ಮಟ್ಟವೂ ಹೆಚ್ಚುತ್ತೆ. ಇದು ಮೂಡ್ ಸ್ವಿಂಗ್ ಗೆ ಕಾರಣವಾಗಬಹುದು ಮತ್ತು ಆತಂಕ ಹೆಚ್ಚಿಸುತ್ತದೆ.

410
ಕಾಫಿ ಕುಡಿಯಲು ಉತ್ತಮ ಸಮಯ ಯಾವುದು?

ಅನೇಕ ಜನರಿಗೆ, ಕಾಫಿ ಅವರ ಬೆಳಗಿನ ದಿನಚರಿಯ ಅತ್ಯಗತ್ಯ ಭಾಗ. ಆದರೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವವರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಕೊಳಕು ಅಭ್ಯಾಸ ನೀವು ಬಿಟ್ಟು ಬಿಡಬೇಕು. ಏಕೆಂದರೆ ಇದು ನಿಮ್ಮ ಆರೋಗ್ಯಕ್ಕೆ ಅನೇಕ ಹಾನಿಯನ್ನುಂಟು ಮಾಡುತ್ತದೆ. ಆದ್ದರಿಂದ ನೀವು ಯಾವಾಗಲೂ ಉಪಾಹಾರದ (after breakfast) ನಂತರ ಸ್ವಲ್ಪ ಸಮಯದ ನಂತರ ಕಾಫಿ ಸೇವಿಸಬೇಕು. ಇದರಿಂದ ಏನಾಗುತ್ತೆ ನೋಡೋಣ.

510
ಉರಿಯೂತ, ವಾಕರಿಕೆ-ಅಜೀರ್ಣದ ಅಪಾಯ

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡೀಯೋದ್ರಿಂದ ಆ್ಯಸಿಡ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಜಠರದ ಆಮ್ಲ ಹೆಚ್ಚಾದರೆ, ದೇಹದ ಜೀರ್ಣಾಂಗ ವ್ಯವಸ್ಥೆ ತೀವ್ರವಾಗಿ ಅಸ್ತವ್ಯಸ್ತಗೊಳ್ಳುತ್ತದೆ, ಇದು ಅಜೀರ್ಣ, ಹೊಟ್ಟೆ ಉಬ್ಬರ, ವಾಕರಿಕೆ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

610
ಎನರ್ಜಿ ಲೆವೆಲ್ ಡೌನ್ ಆಗುತ್ತದೆ

ಇದು ಕಾರ್ಟಿಸೋಲ್ ಅನ್ನು ಹೆಚ್ಚಿಸುತ್ತದೆ, ಇದರಿಂದ ಅಂಡೋತ್ಪತ್ತಿ, ತೂಕ ಮತ್ತು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಬೆಳಗ್ಗೆ ಈ ಹಾರ್ಮೋನ್ ಹೆಚ್ಚಾದರೆ ನಿಮ್ಮ ಶಕ್ತಿಯ ಮಟ್ಟ ಕಡಿಮೆ ಮಾಡುತ್ತದೆ ಮತ್ತು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತದೆ.

710
ರಕ್ತದಲ್ಲಿನ ಸಕ್ಕರೆ ಹೆಚ್ಚಾಗಬಹುದು

ಬೆಳಗ್ಗೆ ಎದ್ದು ಮೊದಲು ಕಾಫಿ ಕುಡಿದರೆ, ಅದು ನಿಮ್ಮ ರಕ್ತದ ಸಕ್ಕರೆಯನ್ನು (blood sugar level) ಹೆಚ್ಚಿಸುತ್ತದೆ. ಮಧುಮೇಹ ರೋಗಿಯಾಗಿದ್ದರೆ, ಈ ತಪ್ಪನ್ನು ಮಾಡಲೇಬಾರದು. ಇಲ್ಲವಾದರೆ ಗಂಭೀರ ಮಧುಮೇಹ ಸಮಸ್ಯೆಗೂ ಕಾರಣವಾಗಬಹುದು. ಆದುದರಿಂದ ಇದನ್ನು ಅವೈಯ್ಡ್ ಮಾಡಿ. 

810
ಮೂಡ್ ಸ್ವಿಂಗ್ (mood swing)

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ನಿಮಗೆ ನರ್ವಸ್ ಮತ್ತು ನಡುಕವನ್ನು ಉಂಟುಮಾಡಬಹುದು. ಇದಲ್ಲದೆ, ಮೂಡ್ ಸ್ವಿಂಗ್ ಉಂಟಾಗುವ ಸಾಧ್ಯತೆ ಕೂಡ ಹೆಚ್ಚಾಗುತ್ತದೆ. ಕಾಫಿ ಕುಡಿಯುವ ಮುನ್ನ ಆ್ಯಟ್‌ಲೀಸ್ಟ್ ದೊಡ್ಡ ಲೋಟದಲ್ಲಿ ಉಗುರು ಬೆಚ್ಚಗಿನ ನೀರು ಕುಡಿದರೊಳಿತು.

910
ಹಾರ್ಮೋನುಗಳಲ್ಲಿ ಬದಲಾವಣೆ

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದರಿಂದ ಲೆವೊಥೈರಾಕ್ಸಿನ್ ಹೀರಿಕೊಳ್ಳುವಿಕೆ ಮೇಲೆ ಪರಿಣಾಮ ಬೀರುತ್ತದೆ, ಇದು ಟಿ 4 ರಿಂದ ಟಿ 3 ಹಾರ್ಮೋನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಆರೋಗ್ಯ ಸಮಸ್ಯೆ (health problem) ಉಂಟಾಗುವ ಸಾಧ್ಯತೆ ಕೂಡ ಇದೆ. 
 

1010
ಒತ್ತಡ, ಮತ್ತಿತರ ಸಮಸ್ಯೆಗಳು

ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯೋದರಿಂದ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡ (stress) ಮತ್ತು ಉರಿಯೂತ ಹೆಚ್ಚುತ್ತದೆ. ಇದಲ್ಲದೇ ಆಯಾಸ, ಚರ್ಮದ ಸಮಸ್ಯೆ, ಮಧುಮೇಹ ಮತ್ತು ಆಟೋಇಮ್ಯೂನ್ ರೋಗ ಸೇರಿ ಇತರೆ ಸಮಸ್ಯೆಗಳು ನಿಮ್ಮನ್ನು ಬೆಂಬಿಡದೇ ಕಾಡುತ್ತದೆ. 

Read more Photos on
click me!

Recommended Stories