Health Tips in Kannada: ರಾತ್ರಿ ಊಟ ಮಾಡೋದ್ರಿಂದ ತೂಕ ಹೆಚ್ಚಾಗುತ್ತಾ?

First Published | Sep 29, 2022, 5:49 PM IST

ಪೌಷ್ಠಿಕಾಂಶದ ಬಗ್ಗೆ ಭಾರತದಲ್ಲಿ ಏನೇನೋ ತಪ್ಪು ಕಲ್ಪನೆಗಳಿವೆ. ಉದಾಹರಣೆಗೆ ಹೇಳಬೇಕಂದ್ರೆ ಸಪ್ಲಿಮೆಂಟ್ಸ್ ಸೇವಿಸೋದ್ರಿಂದ ಫ್ಯಾಟ್ ಕರಗಿಸುತ್ತವೆ ಮತ್ತು ಮಸಲ್ಸ್ ಪಡೆಯಲು ಸಾಧ್ಯವಾಗುತ್ತೆ ಎಂದು ಕೆಲವರು ಹೇಳುತ್ತಾರೆ, ಇನ್ನು ಕೆಲವರು ರಾತ್ರಿ 8 ಗಂಟೆಯ ನಂತರ ಕಾರ್ಬೋಹೈಡ್ರೇಟ್ ಗಳನ್ನು ತಿನ್ನಬೇಡಿ ಅಂತಾರೆ. ಮತ್ತೆ ಕೆಲವರು ಕೊಬ್ಬನ್ನು ತಿನ್ನೋದ್ರಿಂದ ನೀವು ದಪ್ಪಗಾಗುತ್ತೀರಿ ಎಂದು ಸಹ ಹೇಳ್ತಾರೆ. ಆದರೆ ಇದರಲ್ಲಿ ಎಷ್ಟು ನಿಜಾ? ಎಷ್ಟು ಸುಳ್ಳು. 
 

ನಮ್ಮಲ್ಲಿ ಜನರಿಗೆ ಈ ತೂಕ ಏರಿಕೆ ಮತ್ತು ಇಳಿಕೆ (weight loss) ಬಗ್ಗೆ ಹೆಚ್ಚು ಸಂಶಯಗಳಿವೆ. ಯಾವ ಆಹಾರ ತಿಂದರೆ ತೂಕ ಹೆಚ್ಚುತ್ತೆ?  ಯಾವ ಆಹಾರ ತಿಂದರೆ ತೂಕ ಇಳಿಯುತ್ತೆ ಅನ್ನೋ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಾರೆ, ಅದರಲ್ಲಿ ರಾತ್ರಿ ಸಮಯದಲ್ಲಿ ತಿಂದ್ರೆ ತೂಕ ಹೆಚ್ಚುತ್ತೆ ಎಂದು ಸಹ ಹೇಳುತ್ತಾರೆ. ಅದಕ್ಕಾಗಿಯೇ ಹಲವರು ರಾತ್ರಿ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಆದರೆ ಇದರಿಂದ ತೂಕ ಇಳಿಕೆಯಾಗುತ್ತಾ?? ಇಲ್ಲ. ಖಂಡಿತಾ ಇಲ್ಲ. ಇದೊಂದು ಸುಳ್ಳು ಅಷ್ಟೇ. ನೀವು ನಿಜ ಎಂದು ನಂಬಿರುವಂತಹ ಕೆಲವು ಸುಳ್ಳುಗಳ ಬಗ್ಗೆ ತಿಳಿಯೋಣ… 

ಮಿಥ್ಯೆ 1: ರಾತ್ರಿಯಲ್ಲಿ ತಿನ್ನೋದ್ರಿಂದ ತೂಕ ಹೆಚ್ಚುತ್ತೆ 
2021 ರ ಜನವರಿಯಲ್ಲಿ ನ್ಯೂಟ್ರಿಯಂಟ್ ಅಧ್ಯಯನವು ರಾತ್ರಿ ಊಟ (dinner) ಮಾಡೋದ್ರಿಂದ ಅಲ್ಲ, ಬದಲಾಗಿ ರಾತ್ರಿ ಊಟ ಬಿಡೋದ್ರಿಂದ ತೂಕ ಹೆಚ್ಚುತ್ತೆ ಎಂದು ಕಂಡುಕೊಂಡಿದ್ದಾರೆ. ರಾತ್ರಿ ಊಟ ಮಾಡದವರಿಗೆ ಹೋಲಿಸಿದರೆ, ಕಡಿಮೆ ಊಟ ಮಾಡುವವರು ತೂಕ ಕಳೆದುಕೊಂಡಿದ್ದರು.

Tap to resize

ಇದರರ್ಥ, ಊಟವನ್ನು ಬಿಟ್ಟುಬಿಡುವುದು ತೂಕ ನಷ್ಟಕ್ಕೆ (weight loss) ಕಾರಣವಾಗುವುದಿಲ್ಲ; ಬದಲಿಗೆ ಹೆಚ್ಚಾಗಬಹುದು. ನಿಮ್ಮ ತೂಕವು ರಾತ್ರಿಯಲ್ಲಿ ತಿನ್ನುವ ಮೂಲಕ ಅಲ್ಲ, ಆದರೆ ಹೆಚ್ಚು ಕ್ಯಾಲೋರಿಗಳನ್ನು ತಿನ್ನುವ ಮೂಲಕ ಹೆಚ್ಚುತ್ತೆ ಮತ್ತು ತಪ್ಪು ಆಹಾರವನ್ನು ಸೇವಿಸುವ ಮೂಲಕ ಹೆಚ್ಚಾಗುತ್ತದೆ ಅನ್ನೋದನ್ನು ನೀವು ತಿಳಿಯಬೇಕು. 

ಆದ್ದರಿಂದ ಯಾವಾಗಲೂ ಊಟ ಮಾಡುವಾಗ ನಿಮ್ಮ ಒಟ್ಟಾರೆ ಕ್ಯಾಲೊರಿ (calories) ಸೇವನೆಯ ಬಗ್ಗೆ ಗಮನ ಹರಿಸಿ. ಏಕೆಂದರೆ ಕೆಲವರು ತಮ್ಮ ಊಟದಲ್ಲಿ 1500 ಕ್ಯಾಲೋರಿಗಳನ್ನು ತೆಗೆದುಕೊಳ್ಳುತ್ತಾರೆ, ಇದರಿಂದ ತೂಕ ಹೆಚ್ಚುವ ಸಾಧ್ಯತೆ ಇದೆ. ಆದುದರಿಂದ ರಾತ್ರಿ ಊಟ ಮಾಡುವಾಗ ಸಾಧ್ಯವಾದಷ್ಟು ಕಡಿಮೆ ಕ್ಯಾಲರಿ ಊಟ ಮಾಡಿ.

ಮಿಥ್ಯೆ 2: ಕಾರ್ಬೋಹೈಡ್ರೇಟ್ ಗಳನ್ನು ರಾತ್ರಿಯಲ್ಲಿ ತಿನ್ನಬಾರದು

ಜಿಮ್ ನ ಕೆಲವು ತರಬೇತುದಾರರು ರಾತ್ರಿಯಲ್ಲಿ ಕಾರ್ಬೋಹೈಡ್ರೇಟ್ (cabohydrates)  ತಿನ್ನದಂತೆ ಜನರಿಗೆ ಸಲಹೆ ನೀಡುತ್ತಾರೆ. ಇದು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ ಎಂದು ಅವರು ನಂಬುತ್ತಾರೆ. ಆದರೆ ಸತ್ಯವೆಂದರೆ ನೀವು ಕೆಲಸ ಮಾಡುವಾಗ, ನಿಮ್ಮ ಶಕ್ತಿಯನ್ನು ಪೂರ್ಣಗೊಳಿಸಲು ನಿಮಗೆ ಕಾರ್ಬೋಹೈಡ್ರೇಟ್ ಬೇಕಾಗುತ್ತವೆ. ಇದಕ್ಕಾಗಿ, ಬ್ರೆಡ್, ಓಟ್ಸ್, ಅಕ್ಕಿ ಇತ್ಯಾದಿಗಳನ್ನು ಸೇವಿಸಬಹುದು.
 

ಒಂದು ನಿರ್ದಿಷ್ಟ ಸಮಯದ ನಂತರ ಕಾರ್ಬೋಹೈಡ್ರೇಟ್ ಗಳನ್ನು ತಿನ್ನದಂತೆ ಸಲಹೆ ನೀಡುವುದು ತಪ್ಪು. ಬ್ರೆಡ್ ಅನ್ನು ರಾತ್ರಿಯಲ್ಲಿ ಸೇವಿಸಬಹುದು, ಆದರೆ ಬೇಗನೆ ಜೀರ್ಣವಾಗುವ ಕಾರ್ಬೋಹೈಡ್ರೇಟ್ ಗಳನ್ನು ಸೇವಿಸಿ. ಜೀರ್ಣವಾಗದಮ್ತಹ ಕಾರ್ಬೋಹೈಡ್ರೇಟ್ ಸೇವಿಸೋದರಿಂದ ಮಾತ್ರ ಆರೋಗ್ಯದ ಮೇಲೆ ಹಾನಿಯಾಗುತ್ತೆ.

ಮಿಥ್ಯೆ 3: ಬೇಗನೆ ಊಟ ಮಾಡಿ (early dinner)
ಆರೋಗ್ಯವಾಗಿರಲು, ರಾತ್ರಿ ಊಟವನ್ನು ರಾತ್ರಿ 7.00 ಗಂಟೆಯೊಳಗೆ ಮಾತ್ರ ತಿನ್ನಬೇಕು ಎಂದು ಅನೇಕ ಜನರು ನಂಬುತ್ತಾರೆ. ಆದರೆ ಇಂದು, ನಗರದ ತಡವಾದ ಜೀವನಶೈಲಿಯಿಂದಾಗಿ, ಹೆಚ್ಚಿನ ಜನರು ರಾತ್ರಿ 11.00 ಗಂಟೆಯ ಮೊದಲು ಮಲಗಲು ಹೋಗುವುದಿಲ್ಲ. ಬೇಗನೆ ಊಟ ಮಾಡಿದರೆ, ಅವರಿಗೆ ಮಲಗುವ ಮುನ್ನ ಬೇಗನೆ ಹಸಿವಾಗುತ್ತದೆ.

ತಡವಾಗಿ ಮಲಗೋದ್ರಿಂದ ರಾತ್ರಿ ಊಟ ಮತ್ತು ಮಲಗುವ ಸಮಯದ ನಡುವೆ ಅಂತಹ ದೀರ್ಘ ವಿರಾಮವನ್ನು ಇಟ್ಟುಕೊಳ್ಳುವುದು ನಿಮ್ಮ ಹಸಿವನ್ನು ಹೆಚ್ಚಿಸುತ್ತದೆ ಮತ್ತು ತಡರಾತ್ರಿಯಲ್ಲಿ ಉಪಾಹಾರವನ್ನು ಸೇವಿಸಬೇಕಾಗುತ್ತದೆ. ಇದರಿಂದಾಗಿ ತೂಕ ಹೆಚ್ಚಾಗುವ (weight gain) ಸಾಧ್ಯತೆ ಇದೆ. ಆದುದರಿಂದ ಮಲಗುವ ಎರಡು ಗಂಟೆ ಮೊದಲು ಆಹಾರ ತಿಂದು ಮಲಗೋದು ಬೆಸ್ಟ್.
 

ಮಿಥ್ಯೆ 4: ರಾತ್ರಿ ಊಟ ಹಗುರವಾಗಿರಬೇಕು
ರಾತ್ರಿಯ ಊಟ ಹಗುರವಾಗಿರಬೇಕು, ಇದರಿಂದ ತೂಕ ಇಳೀಯೋದಿಲ್ಲ, ಬದಲಾಗಿ, ಲಘು ಆಹಾರವು ಬೇಗನೆ ಜೀರ್ಣವಾಗುತ್ತದೆ ಮತ್ತು ಅದನ್ನು ಬೇಗನೆ ಜೀರ್ಣಿಸಿಕೊಂಡ ನಂತರ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಆದರೆ ಹೆಚ್ಚಿನ ಜನರು ಊಟದ ಸಮಯದಲ್ಲಿ ಸೂಪ್ ಅಥವಾ ಸಲಾಡ್ ಮಾತ್ರ ತಿನ್ನುತ್ತಾರೆ. ಹಾಗೆ ಮಾಡೋದ್ರಿಂದ ಬೇಗನೆ ಹಸಿವಾಗುತ್ತೆ. ಆದ್ದರಿಂದ ಸೂಪ್ ಮತ್ತು ಸಲಾಡ್ ಗಳೊಂದಿಗೆ ಕೆಲವು ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಆಹಾರ ಸೇವಿಸೋದನ್ನು ಮರೆಯಬೇಡಿ.
 

Latest Videos

click me!