ಹಾಲಿನೊಂದಿಗೆ ಈ ವಸ್ತು ಹಾಕಿ ಸೇವಿಸಿ: ಮೂರೇ ದಿನದಲ್ಲಿ ಆರೋಗ್ಯ ಸಮಸ್ಯೆಗಳು ದೂರ

First Published | Oct 14, 2021, 2:07 PM IST

ವಯಸ್ಸಾದಂತೆ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಅನೇಕ ಬಾರಿ, ಈ ಬದಲಾವಣೆಗಳಿಂದಾಗಿ, ದೇಹವು ಅನೇಕ ಸಮಸ್ಯೆ ಎದುರಿಸಬೇಕಾಗುತ್ತದೆ. ಆಯಾಸ, ದೌರ್ಬಲ್ಯ, ಮೂಳೆಗಳಲ್ಲಿ ನೋವಿನ ಸಮಸ್ಯೆ ಇರುತ್ತದೆ. ಇದಕ್ಕೆ ಕಾರಣವೆಂದರೆ, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಎದುರಾಗಬಹುದು.

ಇಂತಹ ಪರಿಸ್ಥಿತಿಯಲ್ಲಿ ಈ ಕೊರತೆಯನ್ನು ನೀಗಿಸಲು ಆಹಾರದಲ್ಲಿ ಕೆಲವು ಬದಲಾವಣೆಗಳನ್ನು (Changes in food) ಮಾಡಿಕೊಳ್ಳಬೇಕು. ನೀವು 3 ದಿನಗಳ ಕಾಲ ನಿರಂತರವಾಗಿ ಈ ರೀತಿಯಲ್ಲಿ ಹಾಲು (Benefits of milk) ಕುಡಿದರೆ, ಅದರ ಪರಿಣಾಮವನ್ನು ಕಾಣಬಹುದು.

ಇಲ್ಲಿ ಬಾದಾಮಿ ಮತ್ತು ಎಳ್ಳಿನ (benefits of sesame seeds) ಬಗ್ಗೆ ಹೇಳುತ್ತಿದ್ದೇವೆ. ಈ ಎರಡೂ ವಸ್ತುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಬಾದಾಮಿ (Benefits of almond) ಮತ್ತು ಎಳ್ಳಿನಲ್ಲಿ ಕ್ಯಾಲ್ಸಿಯಂ ಪ್ರಮಾಣವು ಕೂಡಾ ಅಧಿಕವಾಗಿರುತ್ತದೆ. ಹಾಗಿದ್ದರೆ ಈ ವಸ್ತುಗಳನ್ನು ಹಾಲಿನೊಂದಿಗೆ ಹೇಗೆ ಸೇವಿಸಬೇಕು ಎಂದು ತಿಳಿಯೋಣ. 

Tap to resize

ಮೊದಲಿಗೆ  4ಬಾದಾಮಿ, ಅಗತ್ಯವಿರುವಷ್ಟು ಎಳ್ಳು, ಹಾಲನ್ನು ತೆಗೆದುಕೊಳ್ಳಿ. 
-ಬಾದಾಮಿಯನ್ನು ಒಂದು ರಾತ್ರಿ ಮೊದಲು ನೆನೆಸಿಡಿ .
-ಬೆಳಿಗ್ಗೆ ಬಾದಾಮಿಯ ಸಿಪ್ಪೆಯನ್ನು ತೆಗೆಯಿರಿ.
-ಬಾಣಲೆಯಲ್ಲಿ ಎಳ್ಳನ್ನು ಹುರಿಯಿರಿ.
-ಎಳ್ಳನ್ನು ಹಾಲಿನೊಂದಿಗೆ ಕುದಿಸಿ ಸೇವಿಸಬಹುದು. ಅದರೊಂದಿಗೆ ಸಿಪ್ಪೆ ತೆಗೆದ ಬಾದಾಮಿಯನ್ನು ತಿನ್ನಿರಿ.

ಬಾದಾಮಿ ಮತ್ತು ಎಳ್ಳನ್ನು ತಿನ್ನುವುದರಿಂದಾಗುವ ಲಾಭಗಳು : ಮೂಳೆಗಳು ಬಲಿಷ್ಠವಾಗುತ್ತವೆ : ಈ ಎರಡನ್ನು ಒಟ್ಟಿಗೆ ಸೇವಿಸುವುದರಿಂದ ಮೂಳೆಗಳು ಮತ್ತು ಸ್ನಾಯುಗಳು ಬಲಗೊಳ್ಳುತ್ತವೆ. ಇದು ಕೀಲುಗಳು, ಬೆನ್ನು ಮತ್ತು ಮಂಡಿ ನೋವನ್ನು (Joint pain) ನಿವಾರಿಸುತ್ತದೆ. ಹಲ್ಲುಗಳು ಬಲಗೊಳ್ಳುತ್ತವೆ. ಇದರೊಂದಿಗೆ, ಕೊಲೊನ್ ಕ್ಯಾನ್ಸರ್ ಅಪಾಯ ಕಡಿಮೆ ಇರುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ : ಬಾದಾಮಿ ಮತ್ತು ಎಳ್ಳನ್ನು ತಿನ್ನುವುದರಿಂದ, ದೇಹದಲ್ಲಿ ಸಕ್ಕರೆ ಮಟ್ಟವು (Sugar level)  ನಿಯಂತ್ರಣದಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಧುಮೇಹ ರೋಗಿಗಳು (diabetic) ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ರಕ್ತದ ನಷ್ಟವನ್ನು ಕಡಿಮೆ ಮಾಡುತ್ತದೆ :  ಬಾದಾಮಿ ಮತ್ತು ಎಳ್ಳು ಕಬ್ಬಿಣದ ಅಂಶವನ್ನು ಹೊಂದಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಇದನ್ನು ಸೇವಿಸುವುದರಿಂದ, ದೇಹದಲ್ಲಿನ ರಕ್ತದ ಕೊರತೆಯನ್ನು ತೆಗೆದುಹಾಕಲಾಗುತ್ತದೆ.

ಕೂದಲಿಗೆ ಪೋಷಣೆ ಸಿಗುತ್ತದೆ : ಹಾಲಿನೊಂದಿಗೆ ಬಾದಾಮಿ ಮತ್ತು ಎಳ್ಳನ್ನು ಸೇವಿಸುವುದರಿಂದ ಕೂದಲಿಗೆ ಬೇರುಗಳಿಂದ ಪೋಷಣೆ ಸಿಗುತ್ತದೆ (Skin care). ಇಂತಹ ಪರಿಸ್ಥಿತಿಯಲ್ಲಿ, ಕೂದಲು ಉದ್ದ, ದಪ್ಪ, ಮೃದು ಮತ್ತು ಹೊಳೆಯುವಂತೆ ಕಾಣುತ್ತದೆ.
 

Latest Videos

click me!