ಈ ಸೂಚನೆಗಳಿದ್ದರೆ ಇಗ್ನೋರ್ ಮಾಡಬೇಡಿ, ಗಂಡಸರು ಚೆಕಪ್‌ ಮಾಡಿಸಿಕೊಳ್ಳಲೇ ಬೇಕು

ಪುರುಷರನ್ನು ಇತ್ತೀಚೆಗೆ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚು ಹೆಚ್ಚು ಕಾಡುತ್ತಿದೆ. ಸಾಮಾನ್ಯವಾಗಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರೋಗ್ಯ ಸಮಸ್ಯೆ ಈಗೀಗ ಯುವಜನರೂ ಅನುಭವಿಸುವಂತಾಗಿದೆ. ಇಂಥ ಕಳವಳಕಾರಿಯಾದ ರೋಗದ ಮುನ್ಸೂಚನೆಗಳನ್ನು ನಿರ್ಲಕ್ಷಿಸಬೇಡಿ. ಅಷ್ಟಕ್ಕೂ ಏನವು ಸೂಚನೆಗಳು. 

ಪುರುಷರನ್ನು ಇತ್ತೀಚೆಗೆ ಪ್ರಾಸ್ಟೇಟ್ ಕ್ಯಾನ್ಸರ್ ಹೆಚ್ಚು ಹೆಚ್ಚು ಕಾಡುತ್ತಿದೆ. ಸಾಮಾನ್ಯವಾಗಿ 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರಲ್ಲಿ ಕಾಣಿಸಿಕೊಳ್ಳುತ್ತಿದ್ದ ಆರೋಗ್ಯ ಸಮಸ್ಯೆ ಈಗೀಗ ಯುವಜನರೂ ಅನುಭವಿಸುವಂತಾಗಿದೆ. ಇಂಥ ಕಳವಳಕಾರಿಯಾದ ರೋಗದ ಮುನ್ಸೂಚನೆಗಳನ್ನು ನಿರ್ಲಕ್ಷಿಸಬೇಡಿ. ಅಷ್ಟಕ್ಕೂ ಏನವು ಸೂಚನೆಗಳು. 

ಪ್ರಾಸ್ಟೇಟ್ (prostate gland) ವೀರ್ಯವನ್ನು ಪೋಷಿಸುವ ಮತ್ತು ಸಾಗಿಸುವ ಸೆಮಿನಲ್ ದ್ರವ ಉತ್ಪಾದಿಸುವ ಗ್ರಂಥಿ. 50 ವರ್ಷದ ನಂತರದ ಪುರುಷರಲ್ಲಿ  ಹಲವರಿಗೆ ಇದರ ಕ್ಯಾನ್ಸರ್ (prostate cancer)ಕಾಡಿ, ಮಾರಣಾಂತಿಕವೂ ಆಗಬಹುದು. ಪ್ರಾಸ್ಟೇಟ್ ಗ್ರಂಥಿಯ ಜೀವಕೋಶಗಳು ನಿಯಂತ್ರಣ ಮೀರಿದಾಗ ಕ್ಯಾನ್ಸರ್ ಕಾಡುತ್ತದೆ. ಸಣ್ಣ ಜೀವಕೋಶದ ಕಾರ್ಸಿನೋಮಗಳು (carcinoma), ನ್ಯೂರೋಎಂಡೋಕ್ರೈನ್ ಗೆಡ್ಡೆ  (neuroendocrine), ಪರಿವರ್ತನೆಗೊಂಡ ಜೀವಕೋಶಗಳ ಕಾರ್ಸಿನೋಮಗಳು ಹಾಗೂ ಸಾರ್ಕೋಮಾಸ್ (sarcoma)ಎಂಬ ವಿವಿಧ ಬಗೆಯ ಕ್ಯಾನ್ಸರ್ ಇವೆ.


ಲಕ್ಷಣಗಳೇನು ?
ಪ್ರಾಸ್ಟೇಟ್ ಕ್ಯಾನ್ಸರ್‌ನ ಕೆಲ ಸಾಮಾನ್ಯ ಚಿಹ್ನೆಗಳನ್ನು ಬೇರೆ ಕಾಯಿಲೆಯೊಂದಿಗೆ ಹೋಲಿಸಿಕೊಳ್ಳುವ ಸಾಧ್ಯತೆ ಇರುತ್ತದೆ.  ಪ್ರಾಸ್ಟೇಟ್ ಗ್ರಂಥಿಯು ಮೂತ್ರನಾಳದ ಸಮೀಪವೇ ಇದ್ದು, ಮೂತ್ರದ ರೋಗಲಕ್ಷಣಗಳಂತೆಯೇ ಇರುತ್ತದೆ. ಮೂತ್ರ ವಿಸರ್ಜನೆಯಲ್ಲಿ ತೊಂದರೆ ಅತವಾ ಮೂತ್ರ ವಿಸರ್ಜಿಸುವಾಗ ಸುಡುವಂಥ ನೋವು ಅಥವಾ ಅಸ್ವಸ್ಥತೆ ಕಾಡುವುದು,  ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜಿಸೋದು, ಮೂತ್ರ ಅಥವಾ - ವೀರ್ಯದಲ್ಲಿ ರಕ್ತ ಕಾಣಿಸಿಕೊಳ್ಳಬಹುದು. 

ಶಿಶ್ನದ ನಿಮಿರುವಿಕೆ ಕುಸಿತ (erectle dysfunction)ಆಗುವುದಲ್ಲದೇ, ಸ್ಖಲನದ ವೇಳೆ ನೋವು ಕಾಣಿಸಿಕೊಳ್ಳಬಹುದು. ಮುಖ್ಯವಾಗಿ, ನಿಮ್ಮ ಮೂತ್ರದ ನಿಯಮಿತತೆ ಗಮನಿಸಿ. ಮೊದಲಿಗಿಂತ ಹೆಚ್ಚು ಬಚ್ಚಲಿಗೆ ಹೋಗಿ ಬರುತ್ತಿದ್ದೀರಿ ಎಂದರೆ ಎಚ್ಚರದಿಂದ ಗಮನಿಸಿಕೊಳ್ಳಿ.  (frequent urination).

ಕ್ಯಾನ್ಸರ್ ತೀವ್ರವಾದಾಗ
ಅನೇಕ ವೇಳೆ ರೋಗವನ್ನು diagnosis ಮಾಡೋದು ತಡವಾದರೆ ಹಾಗೂ ಸೂಕ್ತ ಚಿಕಿತ್ಸೆ ಇಲ್ಲದೇ ಕ್ಯಾನ್ಸರ್ ಪ್ರಾಸ್ಟೇಟ್ ಗ್ರಂಥಿಯ ಹೊರಗೆ ಮೂಳೆ ಮತ್ತು ದುಗ್ಧರಸ ಗ್ರಂಥಿಗಳು ಸೇರಿ ದೇಹದ ಇತರ ಭಾಗಗಳಿಗೆ ಹರಡಬಹುದು. ಕಾಲುಗಳು ಅಥವಾ ಸೊಂಟದಲ್ಲಿ ಊತ,  ಸೊಂಟ, ಕಾಲು ಅಥವಾ ಪಾದಗಳಲ್ಲಿ ಮರಗಟ್ಟುವಿಕೆ ಅಥವಾ ನೋವು ಹಾಗೂ  ಮೂಳೆ ನೋವು ನಿರಂತರ ಅಥವಾ ಮುರಿತಗಳಿಗೂ ಕಾರಣವಾಗಬಹುದು.

ಪ್ರಾಸ್ಟೇಟ್ ಕ್ಯಾನ್ಸರ್ ರೋಗ ಬರುವ ಸರಾಸರಿ ವಯಸ್ಸು ಮೊದಲು 68 ಎಂದು ಇತ್ತು. ಈಗ ಯುವಕರನ್ನೂ ಕಾಡುತ್ತಿದೆ. ಜಾಗತಿಕವಾಗಿ, 15 ಮತ್ತು 40ರ ನಡುವಿನ ವಯಸ್ಸಿನ ಪುರುಷರಲ್ಲಿಯೂ ಈ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ. ನಿಯಮಿತ ಪರೀಕ್ಷೆ, ರೋಗಲಕ್ಷಣಗಳನ್ನು ತಿಳಿದುಕೊಂಡು ಸೂಕ್ತ ಚಿಕಿತ್ಸೆ ಪಡೆದರೆ ಬದುಕುವ ಸಾಧ್ಯತೆ ಹೆಚ್ಚು. ವಯಸ್ಸಾದವರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ರೋಗನಿರ್ಣಯಕ್ಕಿಂತ ಯುವ ಪುರುಷರಲ್ಲಿ ಈ ರೋಗ ನಿರ್ಣಯವು ಬೇಗನೆ ಸಾಧ್ಯ. 

ಪ್ರಪಂಚದಾದ್ಯಂತ, ಪ್ರಾಸ್ಟೇಟ್ ಕ್ಯಾನ್ಸರ್ ಎರಡನೇ ಅತ್ಯಂತ ಕಾಮನ್ ಕ್ಯಾನ್ಸರ್. ಮತ್ತು ಪುರುಷರ ಸಾವಿಗೆ ಈ ಕ್ಯಾನ್ಸರ್ ಆರನೇ ಪ್ರಮುಖ ಕಾರಣ. ರಾಷ್ಟ್ರೀಯ ಜನಸಂಖ್ಯೆಯಾಧಾರಿತ ಕ್ಯಾನ್ಸರ್ ದಾಖಲಾತಿ ಪ್ರಕಾರ, ದೆಹಲಿ, ಕೋಲ್ಕತ್ತಾ, ಪುಣೆ ಮತ್ತು ತಿರುವನಂತಪುರಂಗಳಲ್ಲಿ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್‌ನ ಎರಡನೇ ಪ್ರಮುಖ ತಾಣ. ಬೆಂಗಳೂರು ಮತ್ತು ಮುಂಬೈಗಳಲ್ಲಿ ಕ್ಯಾನ್ಸರ್‌ನ ಮೂರನೇ ಪ್ರಮುಖ ತಾಣ. 

ವೃದ್ಧಾಪ್ಯದಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು. ಕುಟುಂಬದಲ್ಲಿ ಕ್ಯಾನ್ಸರ್ ಇತಿಹಾಸವಿದ್ದರೆ (genetic) ಹುಷಾರಾಗಿರಬೇಕು. ಬೊಜ್ಜು ಇದ್ದವರಂತೂ ಎಷ್ಟು ಜಾಗೃತರಾಗಿದ್ದರೂ ಸಾಲದು. ಅನಾರೋಗ್ಯಕರ ಜೀವನಶೈಲಿಯೂ ಕ್ಯಾನ್ಸರ್‌ಗೆ ಮತ್ತೊಂದು ಕಾರಣ. ಈ ಕೋದಜ ಸ್ವಯಂ ನಿರ್ಣಯ ಮಾಡಲು ಉತ್ತಮ ಮಾರ್ಗವೆಂದರೆ ಮನೆಯಲ್ಲಿ PSA ರಕ್ತ ಪರೀಕ್ಷೆ ಮಾಡಿಕೊಳ್ಳುವುದು. ಏನೋ ಸಮಸ್ಯೆಯಿದೆ ಅನಿಸಿದರೆ ಗುದನಾಳದ ಪರೀಕ್ಷೆಗಾಗಿ ವೈದ್ಯರನ್ನು ಭೇಟಿ ಮಾಡಿ. ಅಲ್ಲಿ ಅವರು ಪ್ರಾಸ್ಟೇಟ್‌ ಅನ್ನು ಪರೀಕ್ಷಿಸಾಗುತ್ತದೆ. 

ಹಣ್ಣು ಮತ್ತು ತರಕಾರಿಗಳಿಂದ ಕೂಡಿದ ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ, ದೇಹಕ್ಕೆ ತಕ್ಕ ತೂಕವನ್ನು ಕಾಪಾಡಿಕೊಳ್ಳುವುದು ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಿಮೆ ಕೊಬ್ಬಿನ ಆಹಾರ ಸೇವಿಸುವುದು, ದೈನಂದಿನ ಡೈರಿ ಸೇವನೆ ಪ್ರಮಾಣವನ್ನೂ ಕಡಿತಗೊಳಿಸಿದರೆ ಒಟ್ಟಾರೆ ಆರೋಗ್ಯಕ್ಕೆ ಒಳ್ಳೇದು. ದೈಹಿಕವಾಗಿ ಸಕ್ರಿಯವಾಗಿರುವುದೂ ಮುಖ್ಯ. ನಿಯಮಿತ ಸ್ಕ್ರೀನಿಂಗ್ ಮಾಡಿಸಿಕೊಳ್ಳುತ್ತಿದ್ದರೆ ಇನ್ನೂ ಒಳ್ಳೇದು. 

Latest Videos

tags
click me!