ಸಿಕ್ಕಾಪಟ್ಟೆ ಕೂದಲು ಉದುರುತ್ತೆ ಅನ್ಬೇಡಿ, ಹೇರ್ ಲಾಸ್‌ ನಿಯಂತ್ರಿಸಲು ಇಲ್ಲಿದೆ ಟಿಪ್ಸ್

First Published May 27, 2023, 6:54 PM IST

ಕೂದಲು ಉದುರುವುದು ಇತ್ತೀಚಿನ ವರ್ಷಗಳಲ್ಲಿ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ಕಾರಣ ಹಲವು. ಕೂದಲು ಉದುರುವ ಈ ಸಮಸ್ಯೆ ಪರಿಹಾರವಾಗಲು ಏನು ಮಾಡ್ಬೇಕು. ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್‌.

ಕೂದಲು (Hair) ಉದುರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆ (Problem)ಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬರೂ ಕೂದಲು ಉದುರುವ ಸಮಸ್ಯೆ ಎದುರಿಸುತ್ತಿದ್ದಾರೆ. ಅನೇಕರ ತಲೆ ಬೋಳಾಗಿದ್ದರೆ ಮತ್ತೆ ಕೆಲವರ ತಲೆಯಲ್ಲಿ ಬೆರಳೆಣಿಕೆಯಷ್ಟು ಕೂದಲಿದೆ. ಮಹಿಳೆ ಮತ್ತು ಪುರುಷ ಇಬ್ಬರಲ್ಲೂ ಇದು ಕಾಣಿಸಿಕೊಳ್ತದೆ. ಇದಕ್ಕೇನು ಪರಿಹಾರ.

ಕೂದಲು ಉದುರುವಿಕೆಯನ್ನು ನಿಯಂತ್ರಿಸಲು ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಿ. ಆರೋಗ್ಯಕರ ಆಹಾರವನ್ನು ಸೇವಿಸಿ. ದೀರ್ಘಕಾಲದ ಒತ್ತಡವು ಕೂದಲು ಉದುರುವಿಕೆಯನ್ನು ಉಲ್ಬಣಗೊಳಿಸಬಹುದು. ಹೀಗಾಗಿ ದೈನಂದಿನ ವೇಳಾಪಟ್ಟಿಯಲ್ಲಿ ಡೈಟೇಶನ್, ಯೋಗ ಅಥವಾ ಆಳವಾದ ಉಸಿರಾಟ ಮೊದಲಾದ ಕ್ರಮವನ್ನು ಅಳವಡಿಸಿಕೊಳ್ಳಿ. 

ಸಮತೋಲಿತ ಆಹಾರವನ್ನು ಕಾಪಾಡಿಕೊಳ್ಳಿ
ಆರೋಗ್ಯಕರ ಆಹಾರವು ಕೂದಲಿನ ಆರೋಗ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಹಣ್ಣುಗಳು, ತರಕಾರಿಗಳು, ಪ್ರೋಟೀನ್‌ಗಳು ಮತ್ತು ಧಾನ್ಯಗಳು ಸೇರಿದಂತೆ ಪೌಷ್ಟಿಕಾಂಶ-ದಟ್ಟವಾದ ಆಹಾರಗಳನ್ನು ಆರಿಸಿಕೊಳ್ಳಿ. ವಿಟಮಿನ್ ಎ, ಸಿ ಮತ್ತು ಇ, ಜೊತೆಗೆ ಬಯೋಟಿನ್, ಪ್ರೊಟೀನ್, ಸತು ಮತ್ತು ಕಬ್ಬಿಣದ ಸಮೃದ್ಧವಾಗಿರುವ ಆಹಾರಗಳನ್ನು ಸೇರಿಸಿ. ಇದು ಕೂದಲಿನ ಬೆಳವಣಿಗೆ ಮತ್ತು ಕೋಶದ ಆರೋಗ್ಯವನ್ನು ಬೆಂಬಲಿಸುತ್ತದೆ.

ತೂಕ ಇಳಿಸಿಕೊಳ್ಳಿ
ಅಧಿಕ ತೂಕ ಅಥವಾ ಬೊಜ್ಜು ಸಹ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಅದನ್ನು ನಿರ್ವಹಿಸಲು ನೀವು ತೂಕವನ್ನು ಕಳೆದುಕೊಳ್ಳಬೇಕಾಗುತ್ತದೆ. ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ, ಇದು ಕೂದಲು ಕಿರುಚೀಲಗಳಿಗೆ ಪೋಷಕಾಂಶಗಳನ್ನು ತಲುಪಿಸಲು ಮುಖ್ಯವಾಗಿದೆ. ಕನಿಷ್ಠ 30 ನಿಮಿಷಗಳ ಕಾಲ ನಿಯಮಿತವಾಗಿ ವ್ಯಾಯಾಮ ಮಾಡಿದರೆ, ವ್ಯತ್ಯಾಸವನ್ನು ಗಮನಿಸಬಹುದು.

ಒತ್ತಡವನ್ನು ನಿರ್ವಹಿಸಿ
ದೀರ್ಘಕಾಲದ ಒತ್ತಡವು ಕೂದಲು ಉದುರುವಿಕೆಯನ್ನು ಉಲ್ಬಣಗೊಳಿಸಬಹುದು. ಹೀಗಾಗಿ ದೈನಂದಿನ ವೇಳಾಪಟ್ಟಿಯಲ್ಲಿ ಡೈಟೇಶನ್, ಯೋಗ ಅಥವಾ ಆಳವಾದ ಉಸಿರಾಟ ಮೊದಲಾದ ಕ್ರಮವನ್ನು ಅಳವಡಿಸಿಕೊಳ್ಳಿ.

ಕಠಿಣ ಕೂದಲ ರಕ್ಷಣೆಯ ಅಭ್ಯಾಸ ತಪ್ಪಿಸಿ
ಬಿಗಿಯಾದ ಕೇಶವಿನ್ಯಾಸ ಮತ್ತು ಕಠಿಣ ರಾಸಾಯನಿಕ ಚಿಕಿತ್ಸೆಗಳು ಕೂದಲಿನ ಸಾಫ್ಟ್ ಅನ್ನು ಹಾನಿಗೊಳಿಸಬಹುದು ಮತ್ತು ಕೂದಲು ಉದುರುವಿಕೆಗೆ ಕಾರಣವಾಗಬಹುದು. ಆದ್ದರಿಂದ ಈ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ.

ತಲೆ ಮಸಾಜ್‌
ಕೂದಲು ಉದುರುವುದನ್ನು ನಿಲ್ಲಿಸಲು ಒಂದು ಉತ್ತಮ ತಂತ್ರವೆಂದರೆ  ನಿಯಮಿತವಾಗಿ ತಲೆ ಮಸಾಜ್ ಮಾಡಿಕೊಳ್ಳುವುದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದರ ಜೊತೆಗೆ, ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಒತ್ತಡವನ್ನು ನಿಭಾಯಿಸಲು ಸಹಾಯ ಮಾಡುತ್ತದೆ.

click me!