Top 10 tips to maintain your mental health: ಇಂದು ಎಲ್ಲರೂ ಧಾವಂತದ ಬದುಕಿನಲ್ಲಿ ಓಡುತ್ತಿದ್ದಾರೆ. ಕೆಲಸದ ಒತ್ತಡ, ಒಂಟಿತನ, ಅನಾರೋಗ್ಯ, ಶಿಸ್ತಿಲ್ಲದ ಜೀವನಶೈಲಿ ಅನೇಕರನ್ನು ಡಿಪ್ರೆಶನ್‌ಗೆ ತಳ್ಳಿ ಹಾಕುತ್ತಿವೆ. ಜೀವನವೇ ಸಾಕು, ಜೀವನದ ಮೇಲೆ ಜಿಗುಪ್ಸೆ ಬಂದಿದೆ ಎಂದು ಕೆಲವರು ಹೇಳುತ್ತಾರೆ.
ನಿಮ್ಮ ಸ್ನೇಹಿತರು ಅಥವಾ ಮನೆಯವರು, ಕುಟುಂಬದ ಸದಸ್ಯರು, ಸಹದ್ಯೋಗಿಗಳ ಜೊತೆ ಮಾತನಾಡಿ, ಎಷ್ಟು ಆಗತ್ತೋ ಅಷ್ಟು ಮುಕ್ತವಾಗಿ ಮಾತನಾಡಿ. ನೀವು ಯಾರ ಬಳಿ ಏನು ಮಾತನಾಡ್ತೀರಿ ಎನ್ನೋದು ಮುಖ್ಯವಾಗುತ್ತದೆ, ಅದನ್ನು ನೀವು ನೆನಪಿನಲ್ಲಿ ಇಡಬೇಕು. ಆಗ ನಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚುತ್ತದೆ.
25
ವ್ಯಾಯಾಮ ಮಾಡಿ
ವ್ಯಾಯಾಮ ಮಾಡುವುದರಿಂದ ಬಾಡಿ ಆಕ್ಟಿವ್ ಆಗುತ್ತದೆ, ಇದರಿಂದ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ನಿತ್ಯವೂ ವ್ಯಾಯಾಮ ಮಾಡೋದರಿಂದ ನಿಮ್ಮನ್ನು ಗಟ್ಟಿ ಮಾಡುತ್ತವೆ, ಮೂಡ್ ಸುಧಾರಿಸುತ್ತದೆ.
35
ಹೊಸ ವಿಷಯ ಕಲಿಯಿರಿ
ಜೀವನದಲ್ಲಿ ನಿತ್ಯವೂ ಒಂದಲ್ಲ ಒಂದು ವಿಷಯವನ್ನು ಕಲಿಯುತ್ತಿರಬೇಕು. ಇದರಿಂದ ನಮ್ಮ ಬೆಳವಣಿಗೆ ಆಗುತ್ತದೆ. ಅಷ್ಟೇ ಅಲ್ಲದೆ ಹೊಸ ಹೊಸ ಅವಕಾಶಗಳು ಸೃಷ್ಟಿ ಆಗುತ್ತವೆ.
ಅಗತ್ಯವಿರುವವರಿಗೆ ಸಹಾಯ ಮಾಡುವುದು ಖುಷಿ ಕೊಡುತ್ತದೆ. ಇದರಿಂದ ನಮ್ಮ ಪ್ರೀತಿಪಾತ್ರರಿಗೆ ಖುಷಿ ಸಿಗುತ್ತದೆ, ಸಂಬಂಧವೂ ಸುಧಾರಿಸುತ್ತದೆ. ಬೇರೆಯವರಿಗೆ ಸಹಾಯ ಮಾಡೋದು ಅಂತರಾತ್ಮಕ್ಕೆ ಖುಷಿ ಕೊಡುತ್ತದೆ.
55
ಒಂಟಿತನಕ್ಕೆ ಗುಡ್‌ಬೈ ಹೇಳಿ
ನಾವು ಒಂಟಿಯಾಗಿ ಹೆಚ್ಚು ಸಮಯ ಕಳೆದರೆ ನಕಾರಾತ್ಮಕ ವಿಷಯಗಳು ಬರುತ್ತವೆ. ಹೀಗಾಗಿ ಆಲೋಚನೆಗಳನ್ನು ಬದಲಾಯಿಸಬೇಕು, ಒಂದಿಷ್ಟು ಚಟುವಟಿಕೆಗಳಲ್ಲಿ ಭಾಗಿಯಾಗಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.